ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಡಾಂತರ ಪರಿಹರಿಸು ಗರುಡಾಂಕಗಮನ ಹರಿ ಪುಂಡರೀಕಾಯತಾಕ್ಷ ಮೊಂಡತನ ತಾಳಿರುವ ಲಂಡರಸನಭಿಮತವ ಖಂಡಿಸು ಕೃಪಾಂಬುರಾಶಿ ಗ್ರಹವಾಸಿ ಪ. ನಿನ್ನ ಸೇವೆಯ ಮಾಳ್ಪ ನಿರಪರಾಧಿಯ ಮ್ಯಾಲೆ ಅನ್ಯಾಯ ಕೃತಭಾರವ ತನ್ನಂತೆ ಪೊರಿಸಬೇಕೆಂನುವರ ನೀನೆಂತು ಮನ್ನಿಸುವೆ ಮಾನ ಕಾವ ಭಿನ್ನ ಭಾವನೆ ತಾಳ್ದ ಭೂಪತಿಗೆ ಭಯದೋರಿ ಎನ್ನ ಕಾಪಾಡುವ ದೇವ ಭವನಾವ 1 ಅಡಿಗಡಿಗೆ ನಿನಗಂಜಿ ನಡೆವೆ ನಾನೆಂಬುದನು ಒಡೆಯ ನಿನಗೆಂಬುದೇನು ಕಡು ಮೂರ್ಖ ಜನರೆನ್ನ ಕಷ್ಟಗೊಳಿಪುದ ನೋಡಿ ಬಿಡಲ್ಯಾಕೆ ಭಾಗ್ಯವೇನು ಒಡೆಯ ಕಂಭದಿ ಬಂದು ಪಿಡಿದಾದಿ ದೈತ್ಯೇಯ- ನೊಡಲ ಬಗೆದಂಥ ಧೀರ ಬಲಸಾರ 2 ಪರಿಯಂತ ಪಾಲಿಸದ ಶೇಷಾದ್ರಿ ಶಿಖರವಾಸ ಬ್ಯಾಸತ್ತು ಬಹು ವಿಧದಿ ಬಳಲಿ ಬೆಂಡಾಗಿಹೆನು ದೋಷವೆಣಿಸದಿರು ಲೇಶ ನೀ ಸಲಹು ನಿಗಮಭೂಷ ಹೇ ಶ್ರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡಿದೆ ಮನದಣಿಯೆ ಶ್ರೀನಿವಾಸನ ನೋಡಿದೆ ಮನದಣಿಯೆಪ. ನೋಡಿದೆನು ಶೇಷಾದ್ರಿಯಿಂದೊಡ- ಗೂಡಿ ಭಕ್ತರ ಬೀಡಿನೊಳು ನಲಿ ದಾಡಿ ಮೆರೆವ ಸಗಾಢ ದೈತ್ಯವಿ ಭಾಡ ಶ್ರೀಹರಿ ರೂಢಿಗೊಡೆಯನ ಅ.ಪ. ಶರಣರಪೇಕ್ಷೆಯನು ಕೊಟ್ಟುಳುಹಲು ಕರುಣಾಳು ನಿಜದಿ ತಾನು ಸ್ಥಿರತೆಯೊಳು ಸ್ವಪ್ನದಲಿ ತಾ ಗೋ ಚರಿಸಿ ಭರವಸೆಯಿತ್ತು ವೆಂಕಟ ಗಿರಿಯವೋಲ್ ಸಾನ್ನಿಧ್ಯ ವದನಾಂ- ಬುರುಹದಲಿ ಮೆರೆದಿಹನ ಚರಣವ 1 ಲಲನೆ ಲಕ್ಷ್ಮಿಯು ಬಲದಿ ಶೋಭಿಪ ವಾಮ ದೊಳಗೆ ಗಣಪ ಮುದದಿ ಒಲವಿನಿಂ ಗರುಡಾಂಕ ಮೃದುಪದ ನಳಿನದಾಶ್ರಯದಿಂದ ವಾಯುಜ ಬಳಗ ಚಾತುರ್ದೇವತೆಯರಿಂ- ದೊಳಗೆ ಪೂಜೆಯಗೊಂಬ ದೇವನ 2 ಕುಂಡಿಲಕೊಳದೊಳಿಹ ಪ್ರಾಣೇಶ ಮುಂ- ಕೊಂಡು ಪಟ್ಟಣಕೆ ಬಹ ಕೆಂಡದಂದದೊಳುರಿವ ಶತಮಾ- ರ್ತಾಂಡದೀಪ್ತಾ ಮುಖಂಡ ಭೃತ್ಯನ ಕೊಂಡುಯಿದಿರಲಿ ಮಂಡಿಸಿದನಖಿ ಳಾಂಡಕೋಟಿ ಬ್ರಹ್ಮಾಂಡನಾಥನ 3 ನೀಲಮೇಘಶ್ಯಾಮಲ ಕೌಸ್ತುಭವನ ಮಾಲಕಂಧರಶೋಭನ ವಜ್ರ ಮುತ್ತಿ ಸಾಲ ಸರ ಪೂಮಾಲೆಗಳ ಸುಖ ಲೀಲೆಯಿಂದೊಪ್ಪಿರುವ ಭಕ್ತರ ಕೇಳಿಯಲಿ ನಲಿದಾಡುತಿಹನನು 4 ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ- ಕ್ಷ್ಮೀನಾರಾಯಣ ಹರಿಯ ಕಾಣಿಕೆಯ ಕಪ್ಪಗಳ ತರಿಸುತ ಮಾನಿಸುತ ಭಕ್ತಾಭಿಮತವನು ತಾನೆ ಪಾಲಿಸಿ ಮೆರೆವ ಕಾರ್ಕಳ ಶ್ರೀನಿವಾಸ ಮಹಾನುಭಾವನ 5
--------------
ತುಪಾಕಿ ವೆಂಕಟರಮಣಾಚಾರ್ಯ
ಗಂಗಾಪಿತ ವೆಂಕಟ ಪರ್ವತನಿಲಯಕೌಸಲ್ಯತನಯಾ |ಮಂಗಳವಲ್ಲಭಭವಕರಕರೆಯ ಪರಿಹರಿಪುದು ತ್ವರಿಯಾ |ಅಂಗಜಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪಸ್ವಾಮಿಲಾಲಿಸುಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರನವನೀತಚೋರ |ಸಾಮಜದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ 1ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರಶರಧಿಕೈ ಸೋತಿತೆಲೋ ಪರಾಶರ ತನಯ 2ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯಸಖರವಿದರ ಗದಾಧರ ಸುಖಪಾರಾವಾರ|ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ 4ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ 5ಶಕ್ರವರಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆಕೃತಾಂತಮಾಳ್ಪುದು ಕೆಡದಂಥ |ಸುಕೃತಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ 6ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟಕಾಲಜಾಂಬವತೀಲೋಲ|ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕಉರಗಪರ್ಯಂಕ ಸುಖಾತ್ಮ 7
--------------
ಪ್ರಾಣೇಶದಾಸರು
ನೋಡಿದೆ ಮನದಣಿಯೆ ಶ್ರೀನಿವಾಸನನೋಡಿದೆ ಮನದಣಿಯೆ ಪ.ನೋಡಿದೆನು ಶೇಷಾದ್ರಿಯಿಂದೊಡ-ಗೂಡಿ ಭಕ್ತರ ಬೀಡಿನೊಳು ನಲಿದಾಡಿ ಮೆರೆವ ಸಗಾಢ ದೈತ್ಯವಿಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.ಶರಣರಪೇಕ್ಷೆಯನು ಕೊಟ್ಟುಳುಹಲುಕರುಣಾಳು ನಿಜದಿ ತಾನುಸ್ಥಿರತೆಯೊಳು ಸ್ವಪ್ನದಲಿ ತಾ ಗೋಚರಿಸಿ ಭರವಸೆಯಿತ್ತು ವೆಂಕಟಗಿರಿಯವೋಲ್ ಸಾನ್ನಿಧ್ಯ ವದನಾಂ-ಬುರುಹದಲಿ ಮೆರೆದಿಹನ ಚರಣವ 1ಲಲನೆಲಕ್ಷ್ಮಿಯು ಬಲದಿ ಶೋಭಿಪ ವಾಮದೊಳಗೆ ಗಣಪ ಮುದದಿಒಲವಿನಿಂ ಗರುಡಾಂಕ ಮೃದುಪದನಳಿನದಾಶ್ರಯದಿಂದ ವಾಯುಜಬಳಗ ಚಾತುರ್ದೇವತೆಯರಿಂ-ದೊಳಗೆ ಪೂಜೆಯಗೊಂಬ ದೇವನ 2ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-ಕೊಂಡು ಪಟ್ಟಣಕೆ ಬಹಕೆಂಡದಂದದೊಳುರಿವ ಶತಮಾ-ರ್ತಾಂಡದೀಪ್ತಾ ಮುಖಂಡ ಭೃತ್ಯನಕೊಂಡುಯಿದಿರಲಿ ಮಂಡಿಸಿದನಖಿಳಾಂಡಕೋಟಿ ಬ್ರಹ್ಮಾಂಡನಾಥನ 3ನೀಲಮೇಘಶ್ಯಾಮಲ ಕೌಸ್ತುಭವನಮಾಲಕಂಧರಶೋಭನನೀಲಮಾಣಿಕವಜ್ರಮುತ್ತಿಸಾಲ ಸರ ಪೂಮಾಲೆಗಳ ಸುಖಲೀಲೆಯಿಂದೊಪ್ಪಿರುವ ಭಕ್ತರಕೇಳಿಯಲಿ ನಲಿದಾಡುತಿಹನನು 4ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-ಕ್ಷ್ಮೀನಾರಾಯಣ ಹರಿಯಕಾಣಿಕೆಯ ಕಪ್ಪಗಳ ತರಿಸುತಮಾನಿಸುತ ಭಕ್ತಾಭಿಮತವನುತಾನೆ ಪಾಲಿಸಿ ಮೆರೆವ ಕಾರ್ಕಳಶ್ರೀನಿವಾಸ ಮಹಾನುಭಾವನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ