ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿರುವುದೋ ಸಿರಿವಲ್ಲಭನೆ ನಿನ ಗಲ್ಲದ ಕಾರ್ಯಗಳು ಪ ಕಲ್ಲಾಗಿದ್ದ ಅಹಲ್ಯಯೆ ನಿಮಿಷದಿ ಚಲ್ವೆಯ ಮಾಡಿದ ನಲ್ಲ ತ್ರಿಭುವನದಿ ಅ.ಪ ಶರಧಿಯೆ ವಾಸವು ಗರುಡನೆ ವಾಹನ ಉರಗಪತಿಯೆ ನಿನ್ನ ಪರಿಯಂಕ ಶರಧಿ ಕುಮಾರಿಯು ವರರಮಣಿಯು ಸುರ ವೀರರು ನಿನಗೆ ಕಿಂಕರರಾಗಿರಲು 1 ಕಂಬದಿ ಜನಿಸಿದೆ ಅಂಬಿಗರವಳನು ಸಂಭ್ರಮದಲಿ ನಿನ್ನ ಜನನಿಯೆನಿಸಿದೆ ಅಂಬುಜ ಮಿತ್ರನ ತನಯಗೆ ಮರುತನ ಬೆಂಬಲವರಿಯುತ ಉಳಿಸಿದೆ ಗೆಲಿಸಿದೆ 2 ಅಮಿತ ಕಾರ್ಯಗಳ ಕ್ರಮದಲಿ ನಡಿಸಿದೆ ವಿಮಲ ತನೋ ಸುಮನಸರೊಡೆಯನೆ ಕ್ಷಮಿಸಿ ಎನ್ನಯ ಮೋಹ ತಿಮಿರವ ತೊಲಗಿಸೊ ಸುಮನ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಪಾಹಿ ವಿನತಾತ್ಮಜ ಪತಗಾಧಿರಾಜಾ ಪ ಪಡೆದ ಗರುಡನೆ ಅ.ಪ ಶ್ಯಂದನೋತ್ತಮನೆನಿಸಿ ಜಗದೊಳು ಸಿಂಧು ತಂದಿಟ್ಟ ಧೀರನೆ 1 ಬಂಧವ ಬಿಡಿಸಿದಂಥ ಕಾಲಿಗೆರಗುವೆ 2 ಜನರಘ ತರಿದಭೀಷ್ಟಿಯ ಸೌಪರ್ಣಿ ರಮಣನೆ 3
--------------
ಕಾರ್ಪರ ನರಹರಿದಾಸರು
ಸ್ಮರಿಸಿ ಸುಖಿಸು ಮನವೆ ಗುರುರಾಜಾಚಾರ್ಯರ ಪ ಸ್ಮರಿಸು ಪರಿಮಳ ವಿರಚಿಸಿದ ಗುರು ವರರ ಕರುಣವ ಪಡೆದ ಶರಣರ ದುರಿತ ಉರಗಕೆ ಗರುಡನೆನಿಸಿದವರ ಸುಚರಿತೆಯ ಹರುಷದಿಂದಲಿ ಅ.ಪ ಇಳಿಯೋಳ್ ಶ್ರೀ ಸುರಪುರದಿ ಯಳಮೇಲಿ ಶ್ರೀ ವಿಠ್ಠಲಚಾರ್ಯ ರಿಹ ಜನ್ಮದಿ ಕುಸುಮೂರ್ತಿ ಗುರುಗಳ ಒಲಿಮೆ ಪಡೆದು ನಿತ್ಯದಿ ಗಳಿಸಿದ ಸುಪುಣ್ಯದಿ ಲಲನೆ ಜಾನಕಿ ವರ ಸುಗರ್ಭದಿ ಚಲುವ ಲಕ್ಷಣ ಗಳಲಿ ಜನಿಸಿ ಗೆಳೆಯರೊಡನಾಡುತಲೆ ಶಬ್ಧಾವಳಿ ಸುಶಾಸ್ರ್ತವ ಕಲಿತ ವರಪದ 1 ಮೆರೆವ ಘನ ವೈಭವದಿ ವೈರಾಗ್ಯಭಾಗ್ಯವೆ ಪಿರಿದೆಂಬೊ ಧೃಢಮನದಿ ವನಿತಾದಿ ವಿಷಯದಿ ತಿರುಗಿಸುತ ಮನವಿರದೆ ಸಿರಿವರ ತುರುಗವದನನ ಚರಣ ಪೂಜಿಯೊಳಿರಿಸಿ ಗುರುವರ ಮುಖದಿ ಶ್ರೀ ಮನ್ಮರುತ ಶಾಸ್ತ್ರದ ಶ್ರವಣಗೈದರ 2 ಚರಿಸಿ ಶಾಸ್ತ್ರವ ಬೋಧಿಸಿ ಪ್ರವಚನದಿ ಗುರುಗಳ ಕರುಣವ ಸಂಪಾದಿಸಿ ನೃಪಮಾನ್ಯರೆನಿಸಿ ಹರಿದಿನಾದಿ ವೃತ ಬಿಡದಾಚರಿಸಿ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ ಪರಮ ಮಹಿಮರ ಚರಣ ಯುಗಲವ 3
--------------
ಕಾರ್ಪರ ನರಹರಿದಾಸರು