ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆ ಮಾಡೋ ಕೃಷ್ಣ ಕೃಪೆಮಾಡೋ ತಪ್ಪದೆ ಪ್ರಾತಃ ಸಂಜೆ ನಿನ್ನ ಸ್ತುತಿ ಮಾಡುವಂತೆ ಪ ಚಂದ್ರಹಾಸನಂತೆ ವ್ರತ ಮಾಡಲರಿಯೆ ಅಂದಿನ ಧ್ರುವನಂತೆ ತಪಗೈಯಲಾರೆ ಕಂದ ಪ್ರಹ್ಲಾದನಂತೆ ಬಿಡದೆ ನುತಿಸಲಾರೆ ಸಂದ ನಚಿಕೇತನಂತೆ ಮೃತ್ಯುಗೆಲ್ಲಲರಿಯೆ 1 ಕರಿರಾಜನಂತೆ ಕೂಗಲರಿಯೆನೋ ಗರುಡನಂತೆ ಸದಾ ಹೊತ್ತು ತಿರುಗಲಾರೆ ಮರುತಜನಂತೆ ಭಂಟನಾಗಲರಿಯೆ ಉರಗರಾಜನಂತೆ ಶಯನಕಾಗಲಾರೆ 2 ದ್ರೌಪದಿಯಂತೆ ಅತ್ತು ಮೊರೆಯಿಡಲಾರೆ ರೂಪೆ ಭಾಮೆಯಂತೆ ಬಲು ಮೋಹಿಸಲಾರೆ ಆಪಾಟಿ ಸಖನಾಗರಿಯೆನು ಮಕರಂದನೊಲು ವಿಪ್ರನಾರಾಯಣನಂತೆ ಭಕ್ತಿಯರಿಯೆನೊ ಹರಿಯೆ 3 ಜಾಜಿಪುರೀಶ ನಿನ್ನ ಚರಣ ಸೇವೆಯ ಕೊಡೊ ಸಾಜದಿ ಮಾಡುವೆ ತಿಳಿದಂತೆ ಪಾಮರನು 4
--------------
ನಾರಾಯಣಶರ್ಮರು
ಗೋಪಾಲದಾಸರು ಕರದಾಗ ಬಾರದೇ ವೈದುಗ ಬಂದು ಬೋಧಿಸಿ ಮಾರ್ಗವ ತೋರಿಸಿ ಹೃದಯದಿ ಪಾದನಿಲ್ಲಿಸಿ ಮಂದನ ಪೋಷಿಸಿ ಭಂಗವ ಬಿಡಿಸುತಾ ಮಂಗಳ ಮೂರುತಿ ನಿನ್ನ ಮಹಿಮೆಗೆಣೆಗಾಣೆ ಧವಳ ಗುಣವಂತ ತಂದೆವರದಗೋಪಾಲವಿಠಲರೇಯನ ದಾಸನೆಂದೆನಿಸದೆಯನ್ನ 1 ವೈರಿ ಬನ್ನ ಭವ ಬನ್ನ ಪಡುತಿರೆ ಕಣ್ಣು ಕಾಣದೆ ಕರುಣವ ಬೀರುತ ಪಾಣಿಯ ಪಿಡಿದು ವೀಣಾವನಿತ್ತು ಗಾನವ ಪೇಳಿ ಗುಣವಂತನೆಂದೆನಿಸಿದೇ ಎನ್ನ ಅಣ್ಣಾ ಅಣ್ಣಾ ಭಾಗಣ್ಣ ಗಜಮುಖ ರೂಪದಿ ಬಂದು ಪಾಲಿಸಿದೈನಿನ್ನಾ ಕರುಣಾರಸಕೆಣೆಯುಂಟೆ ಯೆಣೆಯುಂಟೆ ನಿನ್ನ ದೇನಿಪರೊಳಗಿಟ್ಟುಶಿರಿಯರಮಣ ತಂದೆವರದಗೋಪಾಲನ ತೋರೋ 2 ನೂರಾರು ಸಾವಿರ ನಾರಿಯರೊಡಗೂಡಿ ಬೆಡಗು ಮಾಡೆ ನಾರಿಯಾಗಿ ನಿನ್ನಡಿಗಳ ಪೂಜಿಸಿ ಗರುಡನಂತೆ ನನ್ನ ಹೆಗಲೀನ ಕೂಡಿಸಿಕೊಂಡುತಿರುಗುವೆ ನೀತಿ ಕಪಿಯಂತೆ ನಿನ್ನ ಕಪ್ಪಾದಿ ವಲಿಸುವೆ ಕಮತವ ಮಾಡಿಸಿ ಮರ್ಮವ ಘಾಡಿಸಿ ಶರ್ಮವ ಗೂಡಿಸಿ ಚರ್ಮವ ತೊಡಿಸಿ ಕರ್ಮವ ಕೆಡಿಸಿಮೃಡನೊಡೆಯ ವಂದಿತ ತಂದೆವರದಗೋಪಾಲವಿಠಲನಡಿಗಳ ಧೇನಿಸುವಂತೆ ಮಾಡೋ 3 ಅಂಬರ ಭೋಜನೆ ಕಂಬುಕಂಧರನಿಂದ ಡಿಂಗರಪಾಲಿಪ ಡಿಂಬದಿ ಪೊಳೆಯುವಅಂಬಾರಮಣಸುತ ಭೀಮಾಂತರ್ಯಾಮಿ ತಂದೆವರದಗೋಪಾಲ ವಿಠಲನ ನಿಜ ಕೊಂಡಾ 4 ನಿಗಮ ನಿಧಿ ಕೃಷ್ಣಾಂತರ್ಯಾಮಿ ಲಕುಮಿ ಅರಸತಂದೆವರದಗೋಪಾಲವಿಠಲನ ವಾರಿಜದಲ್ಲಿ ತೋರೋ 5 ಜತೆ :ಆವಾಗ ಬಂದು ನೀ ಕಾವದಿರೇ ಸೇವಕನಾಗಲ್ಯಾಕೋ ಭಾವಜಪಿತ ತಂದೆವರದಗೋಪಾಲವಿಠಲರೇಯನ ದೂತ
--------------
ತಂದೆವರದಗೋಪಾಲವಿಠಲರು
ನಿಧಾನವೆ ಕೇಳಿ ಸಜ್ಜನವೇ ಇಂದು ಜಿನ ಶಕ್ತಿಯಾನಂದದಾರಾಧನ ಪ ಒಂದು ಮನದಲಿ ವದಗಿನ್ನು ಒಂದು ಮನದಲಿ ವದಗಿನ್ನು ನೀವೆಲ್ಲಾ ವಂದದಾರುತಿಯಾ ಬೆಳಗುವಾ 1 ಒಂದು ಮಾರ್ಗವಿಡಿದು ಬಂದು ಗುರುಮುಖದಿಂದ ಒಂದನೆ ಭಕ್ತಿ ತಿಳಿದಿನ್ನು ಒಂದನೆ ಭಕ್ತಿ ತಿಳಿದು ಪರೀಕ್ಷಿತಿಯಂತೆ ವಂದನಾರುತಿಯಾ ಬೆಳಗುವಾ 2 ಎರಡಕ ಮೀರದಾ ಎರಡಕ್ಷರದಿಂದ ಎರಡನೆ ಭಕ್ತಿ ತಿಳಿದಿನ್ನು ಎರಡನೇ ಭಕ್ತಿ ತಿಳಿದು ನಾರದರಂತೆ ಎರಡನಾರತಿಯಾ ಬೆಳಗೀರೇ 3 ಮೂರು ಬಲಿಯನೆದಾಟಿ ಮೂರು ರತ್ನವಗಂಡು ಮೂರನೇ ಭಕ್ತಿ ತಿಳಿದಿನ್ನು ಮೂರನೇ ಭಕ್ತಿ ತಿಳಿದು ಪ್ರಲ್ಲಾದನಂತೆ ಮೂರನಾರತಿಯಾ ಬೆಳಗೀರೇ 4 ನಾಕುಸ್ಥಾನವ ಮುಟ್ಟಿ ನಾಕರಂತವ ನೋಡಿ ನಾಕನೇ ಭಕ್ತಿ ತಿಳಿದಿನ್ನು ನಾಕನೇ ಭಕ್ತಿ ತಿಳಿದು ಜನಕನಂತೆ ನಾಕನಾರತಿಯಾ ಬೆಳಗೀರೇ 5 ಐದುಕ್ಲೇಶಗಳ್ಹಿಂಗಿ ಐದರೊಂದನೆ ಮಾಡಿ ಐದನೇ ಭಕ್ತಿ ತಿಳಿದಿನ್ನು ಐದನೇ ಭಕ್ತಿ ತಿಳಿದು ಗರುಡನಂತೆ ಐದನಾರತೀಯ ಬೆಳಗೀರೆ 6 ಆರನೇ ಭಕ್ತಿ ಆರು ಸಂಗವ ಮೀರಿ ಆರು ಪರಿಯಾಗದೇ ಆರನೇ ಭಕ್ತಿ ತಿಳಿದಿನ್ನು ಆರನೇ ಭಕ್ತಿ ತಿಳಿದು ಪುಂಡಲೀಕನಂತೆ ಆರನಾರತಿಯಾ ಬೆಳಗೀರೆ 7 ಏಳು ವ್ಯಸನವ ಬಿಟ್ಟು ಏಳು ಧಾತುವ ಕಂಡು ಏಳನೇ ಭಕ್ತಿ ತಿಳಿದಿನ್ನು ಏಳನೇ ಭಕ್ತಿ ತಿಳಿದು ಹನುಮಂತನಂತೆ ಏಳನಾರತಿಯಾ ಬೆಳಗೀರೆ 8 ಎಂಟು ಮದಗಳ ಜರಿದು ಎಂಟು ಸಿದ್ಧಿಯ ತೊರೆದು ಎಂಟನೆ ಭಕ್ತಿ ತಿಳಿದಿನ್ನು ಎಂಟನೇ ಭಕ್ತಿ ತಿಳಿದು ಅರ್ಜುನ ನಂತೆ ಎಂಟನೇ ಭಕ್ತಿ ಯಾರತಿಯಾ ಬೆಳಗೀರೆ 9 ಒಂಭತ್ತರನೇ ಬಲಿದು ಒಂಭತ್ತರ ನೆಗೆಲಿದು ಒಂಭತ್ತರನೇ ಭಕ್ತಿ ತಿಳಿದಿನ್ನು ಒಂಭತ್ತರನೇ ಭಕ್ತಿ ತಿಳಿದು ಬಲಿಯಂದದಿ ಒಂಭತ್ತನಾರತಿಯಾ ಬೆಳಗೀರೆ 10 ಗುರು ಮಹಿಪತಿ ಸುತಬ ಹೊರವ ದೇವಿಗೆ ಧರಿಯೊಳೀಪರಿಯಲಿ ನೀವು ಧರಿಯೊಳೀಪರಿ ನೀವು ಮಾಡಲಿಕೀಗ ಪರಮ ಆನಂದಾದೋರುವದು 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಿಸೋ ರಂಗಾ ಕರುಣಿಸೋ ಪಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಅ.ಪರುಕುಮಾಂಗದನಂತೆ ವ್ರತವನಾನರಿಯೆನುಶುಕಮುನಿಯಂತೆ ಸ್ತುತಿಸಲರಿಯೆ ||ಬಕವೈರಿಯಂತೆ ಧ್ಯಾನವ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನು ರಂಗಾ 1ಗರುಡನಂತೆ ಪೊತ್ತು ತಿರುಗಲರಿಯೆ ನಾನುಕರಿರಾಜನಂತೆ ಕರೆಯಲರಿಯೆ ||ಮರಕಪಿಯಂತೆ ಸೇವೆಯ ಮಾಡಲರಿಯೆನುಸಿರಿಯಂತೆ ನಿನ್ನ ಮೆಚ್ಚಿಸಲರಿಯೆ ರಂಗಾ 2ಬಲಿಯಂತೆ ದಾನವ ಕೊಡಲರಿಯೆನು ಭಕ್ತಿಛಲವನರಿಯೆ ಪ್ರಹ್ಲಾದನಂತೆ ||ಒಲಿಸಲರಿಯೆ ಅರ್ಜುನನಂತೆ ಸಖನಾಗಿಸಲಹೋ ದೇವರದೇವಪುರಂದರವಿಠಲ3
--------------
ಪುರಂದರದಾಸರು
ಶರಣನಾದೆ ನಾನು ನಿನಗೆ | ಕರುಣ ದೇವನೇ |ತರಳನನ್ನು ಕಾಯೋ ದಯದಿ | ಪರಮಪುರುಷನೇಪಸ್ನಾನ ದಾನ ಮೌನ ಮಂತ್ರ | ನಾನು ಅರಿಯೆನೆ |ಧ್ಯಾನ ದಾನ ತಿಳಿಯೆ ಸಲಹೊ | ಶ್ರೀನಿವಾಸನೆ1ತರಳಧ್ರುವನ ತೆರದಿ ನಿನ್ನ | ಸ್ಮರಿಸಲರಿಯೆನೇ |ಗರುಡನಂತೆ ಹೊತ್ತು ಧರೆಂiÀi | ಚರಿಸಲಾರೆನೆ2ಚಂದ್ರಧರನ ಸಖನೆ ಕಾಯೋ ಇಂದಿರೇಶನೇ |ಸುಂದರ ಗೋವಿಂದ ದಂiÀುದಿ |ಕರವಮುಗಿವೆನೆ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ