ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜ ಭಜ ಮಾನಸ ಗರುಡತುರಂಗಂ ಅಜ ಸುರಸೇವಿತ ಪಾಂಡುರಂಗಂ ಪ ಗಜರಾಜಾನತ ಮೋಹನರಂಗಂ ವಿಜಯಧ್ವಜ ಶ್ರೀಪಾವನರಂಗಂ ಅ.ಪ ಗಿರಿಧರ ಮುರಹರ ಭೂವರ ರಂಗಂ ನರಕೇಸರಿ ಮುಖರಾಜಿತ ರಂಗಂ ವರಶುದ್ಧಾಚ್ಚುತ ಸುರುಚಿರ ರಂಗಂ ಪರಶಿವ ದಾನವ ವಿನಮಿತ ರಂಗಂ 1 ಸನಕ ಸನಂದನ ಮುನಿನುತ ರಂಗಂ ಹನುಮ ವಿಭೀಷಣ ಸನ್ನುತ ರಂಗಂ ಘನಮಣಿ ಮೌಕ್ತಿಕ ಶೋಭಿತ ರಂಗಂ ಜನಕ ಧರಾವಿವ ಪೂಜಿತ ರಂಗಂ 2 ಮಂಗಳದಾಯಕ ಶುಭಕರ ರಂಗಂ ಸಂಗರ ಧೀರ ಸುಧಾಕರ ರಂಗಂ ಗಂಗಾಜನಕ ಕೃಪಾಂಬುಧಿ ರಂಗಂ ಅಂಗಜ ಜನಕ ಶ್ರೀ ಮಾಂಗಿರಿ ರಂಗಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಣ್ಣಿಗೆ ಕಾಣದೆ ಏಕಿರುವೇ ರಂಗ ಕಣ್ಣಲಿ ನೋಡದೆ ಬಣ್ಣಿಸಲಳವೇ ಪ ಬಣ್ಣವು ಬಿಳುಪೋ | ಬೆಣ್ಣೆಯ ಕದಪೋ ಚಿಣ್ಣನೊ ತರುಣನೋ | ಹಣ್ಣುಮುದುಕನೋ ಅ.ಪ ನರನಾಗಿರುವೆಯೋ | ಹರಿಯಾಗಿರುವೆಯೋ ನರಹರಿಯೆಂಬರು | ದಿಟವೋ ಸಟೆಯೋ ಗಿರಿಯಂತಿರುವೆಯೋ | ಧರೆಯಂತಿರುವೆಯೋ ಗಿರಿಧರನೆಂಬರು ದಿಟವೋ ಸಟೆಯೋ 1 ಸ್ಮರನಂತಿಹೆಯೋ | ಗುರುವಂತಿಹೆಯೋ ಸ್ಮರಗುರುವೆಂಬರು ದಿಟವೋ ಸಟೆಯೋ ಕರಣನಾಗಿರುವೆಯೋ ಕಾರಣನಹೆಯೋ ಕರಣಕಾರಣ ನೀನೆಂಬುದು ದಿಟವೋ ಸಟೆಯೋ 2 ವೇದವಾಗಿರುವೆಯೋ ನಾದವಾಗಿರುವೆಯೋ ವೇದನಾದಗಳೊಂದೇ ಎಂಬುದು ಸಟೆಯೋ ಕಾದಿಹೆನಯ್ಯ ಮೋದವನೀಯೋ ಸಾದರದಿಂದ ಬಂದೆನ್ನನು ಕಾಯೋ 3 ಸಲಿಗೆಯ ತೋರು ಮಾಂಗಿರಿರಂಗ ಸಲೆ ನಲಿವೆನೋರಂಗ ಗರುಡತುರಂಗ ಛಲವ ಬಿಡೋ ರಂಗ ನಿಲು ನಗುತಲಿ ರಂಗ ಸಲೆ ಬಣ್ಣಿಪೆನಾ ಚೆಲುವನು ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಪದ್ಮಜಾರಮಣ ಜಯ ಭಕ್ತಜನಕರುಣ ಜಯ ಕೌಸ್ತುಭಾಭರಣ ಜಯ ಪದ್ಮಚರಣ ಪ ಜಯ ಭವಾಂಬುಧಿ ತರಣ ಜಯ ಪಾಪಭಯಹರಣ ಜಯತು ಸತ್ವಾವರಣ ಜಯ ದೀನಶರಣ ಅ.ಪ ಜಯತು ಗಾನವಿಲೋಲ ಜಯ ಗೋಕುಲಬಾಲ ಜಯತು ತುಳಸೀಮಾಲ ಜಯತು ಜಗಮಾಲ 1 ಜಯತು ದಾನವಕಾಲ ಜಯತು ಸತ್ವದುಕೂ¯ ಜಯತು ಸುರಮುನಿಪಾಲ ಜಯತು ಮಾಲೋಲ 2 ಜಯತು ಜಯ ರಿಪುಭಂಗ ಕಮಲಜಾ ಅಂಗ ಜಯತು ಘನನೀಲಾಂಗ ಜಯತು ಗರುಡತುರಂಗ ಜಯತು ಮಾಂಗಿರಿರಂಗ ಕರುಣಾಂತರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್