ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವದು ಎನ್ನನುದಿನಾ ರಂಗಾ| ಕಾವದು ಕಾವದು ಎನ್ನನುದಿನಾ | ಭಾವಿಕ ಜನರ ನಿಧಾನಾ ಪ ಜಲದಲಿ ಕರಿಯಾ ಪಿಡಿದ ಮಕರಿಯಾ | ಸೀಳಿದ ಯಾದವರಾಯಾ | ಇಳೆಯೊಳು ಗಿರಿಯಾ ಧರಿಸಿದೆ ಗರಿಯಾ | ಕುಲ ಅರಿನಂದನ ಪ್ರೀಯಾ 1 ರಮಣನೆ ಸಿರಿಯಾ ಲಲನೆಗೆ ಸೀರಿಯಾ | ಸಮಯಕ ನಿತ್ತ ಅನೇಕ | ಕಮನೀಯ ಕಾಯಾ ದೇವ ನೀ ಕಾಯಾ | ಜನಕನೇ ವ್ಯಾಪ್ತ ತ್ರಿಲೋಕಾ 2 ಸರಸಿಜನಯನಾ ಸಾಸಿರ ನಯನಾ | ಸೋದರ ದೇವ ದೇವೇಶಾ | ವರಸದ್ವದನಾ ಈ ರೆರಡೊದ ನಾ | ವಂದಿತ ಚರಣಾ ಶ್ರೀಯೀಶಾ3 ಭಕುತರಬಂಧು ಕೈರವ ಬಂಧು ಶೇಖರಧೇಯ ಮುಕುಂದಾ | ಸಕಲಾಧಾರಾ ದಿನೊದ್ಧಾರಾ | ದೇವಕಿ ದೇವಿಯ ಕಂದಾ4 ಸುಜನರ ಪಕ್ಷಾ ಕುಜನ ವಿಪಕ್ಷಾ | ಶ್ರೀ ವತ್ಸಾಂಕಿತ ದೇವಾ | ಗಜವರ ವರದಾ ಯದುಕುಲ ವರದಾ | ನವಮರ್ಧನ ಜಗಜೀವಾ5 ಕಾಳಿಯ ಸರ್ಪಾ ಮದಹರ ಸರ್ಪಾ| ಶನವಾಹನ ಗೋವಿಂದಾ | ಶ್ರೀ ಲಲನೀಯಾ ಸದ್ಭಾವನೀಯಾ | ಪೂರಿತ ಪರಮಾನಂದಾ6 ಸಿಂಧು ಸಿಂಧು | ವಿಗಾಗಿಹೆ ಕುಂಭಜ ನೀನು | ಹರಣ ರಂಗಾ | ಧೀರನೇ ಭಜಕರ ಧೇನು7 ನವನೀತ ಚೋರಾ ನಿಗಮದ ಚೋರಾಂ | ತಕ ಗೋಕುಲ ವಿಹಾರಾ | ಭವ ಪರಿಹಾರಾ ಕೌಸ್ತುಭಧಾರಾ | ಮಹಿಪತಿಸುತ ಮನೋಹಾರಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೊ ನೀಯನ್ನಮನಿಗೆ ಗೋಪಾಲಕೃಷ್ಣ ಪ ಅಂದದಿ ಚಂದದಿ ಆಡುತ ಪಾಡುತ ಧಿ ಮಿಧಿಮಿಯನ್ನುತ ದಿನ ದಿನ ಕುಣಿಯುತ 1 ಅಂದುಗೆ ಗೆಜ್ಜೆಗಳಿಂದ ಶೋಭಿತನಾಗಿ ಮಂದಾರ ಕೂಡಿಕೊಂಡು ಗಜಗು ಭೊಗರಿಯಾಡುತ 2 ಬಾಲಕನಾಗಿ ನೀ ಲೀಲೆಯ ತೋರುತ ಲಾಲಿಯ ನಾಡುವ ಬಾಲಕರ ಕೂಡ 3 ಕುಡಿಯಲು ನಿನಗೆ ಕೊಡುವೆನು ನೊರೆಹಾಲ ಹುಡುಗರ ಕೂಡಿಕೊಂಡು ಶಿಡಿಗುಡಿನಾಡುತ 4 ಪತಿ ಹೆನ್ನೆ ವಿಠಲ 5
--------------
ಹೆನ್ನೆರಂಗದಾಸರು
ಮರೆಯದಿರುವರೋ ನಿನ್ನ ಸ್ಮರಣೆಯಾ ನೀನು ಪ ಗರಿಯಾ ಚರಿಯಾ ಮರಿಯಾ ನೆರಿಯಾ | ಸೇರಿ ಕ್ರೂರ ಮಾರಿದಾರಿ ಜಾರಿ ದೂರಸಾರದೇ ಅ.ಪ ಕಡಲಶಯನೆಚ್ಚರಾ ಕಳೆದು ಹೊರಿಯಲುದರಾ | ಬಿಡದೋಲೈಸಿ ಘನಮದರಾ | ಕಡಿಯಾ ಕಿಡಿಯಾ ನುಡಿಯಾ ಪಡಿಯಾ | ಬೇಡಿ ಕಾಡಿ ಓಡಿ ಆಡ ಬ್ಯಾಡ ಗಾಢ ಮೂಢನೇ 1 ತರಳ ಪ್ರಾಯ ಮುಪ್ಪಿಂದೆ ತೀರಲಾಯುಷ್ಯ ಬರುದೇ | ಯರಗುವಾಯಮ ತಾ ನಿಲದೇ | ತ್ವರಿಯಾ ಧರಿಯಾ ಕುರಯಾ ಮರಿಯಾ | ವೈರಿ ಮೀರಿ ಹಾರಿ ತೂರಿ ಹೊರುವಂದದಿ 2 ಮಿನಗು ಬೆಳಗ ಘನ ಮಹಿಪತಿ ಸುತ ಪ್ರಿಯನಾ | ಅನುಭದಿಸದಿಹುದೇನಾ | ಅನುವೇ ಮನವೇ ಗುಣವೇ ದನವೇ | ಜ್ಞಾನ ಹೀನ ಮಾನ ದೀನ ಆನನದಲೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗುರುವಿನ ಮನೆಯ ಮುಂದಣ ಬಾಗಿಲ ಕಾಯ್ದಿರುವೆ ಪ ತ್ಯಾಗಿಸಿ ಸಂಸಾರಾ ಶ್ರೀ ಗುರುವಿನ ಯೋಗಾಸನವಹೆನು ಅ.ಪ. ಕೊಪ್ಪರಿಗೆಯಾಗಿಹೆ ನಾನು ಜಲಹರಿಯಾಗಿಹೆ ನಾನು ಗುರುವಿನ ಚರಣಾಲಂಕರಿಸುವ ಕೇತಕಿ ಗರಿಯಾಗಿದೆ ನಾನು ಗುರು ಮಂತ್ರವನುಚ್ಚರಿಸಿ ಜಪಿಸುವ ಸರವಾಗಿಹೆ ನಾನು 1 ಗುರುವಿನ ಕೊರಳೊಳಗಿಹ ರುದ್ರಾಕ್ಷದ ಸರವಾಗಿಹೆ ನಾನು ಭರಣಿಯಾಗಿಹೆ ನಾನು ಘಟ ಪರಿಯಾಗಿಹೆ ನಾನು ಗುರುವಿನ ಭುಂಜಿಸಿ ಮಿಕ್ಕ ಪ್ರಸಾದಕೆ ಗುರಿಯಾಗಿದೆ ನಾನು2 ನಡೆವ ಹಾವಿಗೆಯಾಗಿಹೆ ನಾನು ಮಿಗೆ ನಿರ್ಮಲದೊಳು ಪವಡಿಸುತ್ತಿಹ ಹಾಸಿಗೆಯಾಗಿಹೆ ನಾನು ಹೊರಜರುಲಿಯ ಸಾರಿಹೆ ನಾನು ಜಗದೀಶ್ವರ ವಿಮಲಾನಂದ ಗುರುವಿಗೆ ಮಗನಾಗಿಹೆ ನಾನು 3
--------------
ಭಟಕಳ ಅಪ್ಪಯ್ಯ
ಹರಿ ವಿಮುಖನಾದ ಮನುಜಶ್ವಪಚ ಶ್ರೇಷ್ಠನು | ಹರಿವಲುಮೆ ಕಂಡ ನರನು ಪರಮ ಶಿಷ್ಠನು ಪ ಹರಿಯ ಕಾಣದ ಕಣ್ಣು ನೌಲಗರಿಯಾ ಕಣ್ಣವು | ಹರಿಯ ಕಥೆ ಕೇಳದ ಶ್ರವಣಾ ಬಧಿರ ಶ್ರವಣವು | ಹರಿಯ ನಿರ್ಮಾಲ್ಯ ಕೊಳದ ಘ್ರಾಣ ಲೆತ್ತಿ ಘ್ರಾಣವು | ಹರಿಗೆರಗದಂಗ ತ್ರಾಣ ಬೆಚ್ಚಿನ ತ್ರಾಣವು 1 ಹರಿಯನ್ನದ ಮುಖವು ರಾಜ ಬಿರದ ಮುಖಗಳು | ಹರಿಸೇವೆ ಮಾಡದ ಕೈಯ್ಯಾ ಕೀಲಿ ಕೈಗಳು | ಹರಿಯಾತ್ರೆ ಇಲ್ಲದ ಕಾಲು ಹೊರಸಿನ ಕಾಲ್ಗಳು | ಹರಿ ವಿಷಯ ವಿಲ್ಲದ ವಿದ್ಯೆದೊಂಬನ ವಿದ್ಯಗಳು 2 ಹರಿಗರ್ಪಣೆ ಅಲ್ಲದಯಜ್ಞ ವೇಷಿಕ ಕರ್ಮವು | ಬರುದೇ ಮೌನ ವೃತಗಳೆಲ್ಲ ಬಕನ ಧರ್ಮವು | ಹರಿಭಕ್ತಿರಹಿತ ತಪದಿ ಬಿಡದು ಜನ್ಮವು | ಗುರು ಮಹಿಪತಿಸ್ವಾಮಿ ಭೋಧಿಸಿದನು ಮರ್ಮವು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು