ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈವಲ್ಯ ಮನದ ವೈಶಾಲ್ಯ ಧ್ರುವ ಅದ್ವೈತಾಗಮ್ಯಗೋಚರನದ್ವಿತೀಯ ಅಧ್ಯಾತ್ಮ ವಿದ್ಯದಾಗರ ಸಿದ್ಧರಪ್ರಿಯ ಸದ್ಗತಿ ಸುಖಸಾಗರ ಸದ್ಗುಣಾಲಯ ಬೋಧ ಪೂರ್ಣೋದಯ 1 ಆದಿತ್ಯಕೋಟಿ ಪ್ರಕಾಶ ಸದೋದಿತ ಸಾಧು ಹೃದಯನಿವಾಸ ಭೇದಾತೀತ ಶುದ್ಧಾತ್ಮ ಸುಖಸಂತೋಷ ಸದಾ ಸುಶಾಂತ ಸದಮಲಾನಂದಘೋಷ ಆದಿದೇವ ಸಾಕ್ಷಾತ2 ಕೈವಲ್ಯನಿಧಿ ನಿಶ್ಚಯ ದೇವಾಧಿದೇವ ಅಕ್ಷಯ ಶ್ರೀವಾಸುದೇವ ಭವಾತ್ಮ ಭಜಕಹೃದಯ ಸರ್ವರೊಳಿ ಹ್ಯ ಬಾಹ್ಯಾಂತ್ರ ಭಾಸುತಿಹ್ಯ ಮಹಿಪತಿ ಮನದೈವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜನ್ಮ ಸಫಲವಾಯಿತು ಪ. ಆದಿ ಅನಂತ ಜನಾರ್ದನನ ಕಂಡುಎನ್ನ ಜನ್ಮ ಸಫಲವಾಯಿತು ಅ.ಪ. ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ-ಗಮ್ಯಗೋಚರನೆಂದು ಸ್ತುತಿಸುತಿರೆಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳುನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ 1 ಒಡ್ಡಿ ನಿಂತದ್ದು ಕಂಡು 2 ಮಕರಕುಂಡಲ ಕೌಸ್ತುಭ ಕೊರಳವೈಜಯಂತೀ ಮಾಲಿಕೆಗಳ ಕಂಡು ಎನ್ನ 3 ನಡುವಿನ [ಬಾಗಿಲಲಿ]ನಾಭಿಕಮಲ ಕಂಡೆಉದ್ಭವಿಸಿ ಮೆರೆವ ವಿರಿಂಚಿಯ ಕಂಡೆಜಡಿವೊ ಪೀತಾಂಬರ ನಡುವಿನೊಡ್ಯಾಣವಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು 4 ಮೂರನೆ ಬಾಗಿಲಲಿ ಮುದ್ದು ಶ್ರೀಚರಣವುಶ್ರೀದೇವಿ ಭೂದೇವಿ ಸೇವೆಮಾಳ್ಪುದ ಕಂಡೆಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ 5
--------------
ವಾದಿರಾಜ
ಮಂಗಳಾರತಿ ಮಾಡಿ ಮಂಗಳ ಮಹಿಮಾನಂಗಜನಕ ಹರಿ ತುಂಗವಿಕ್ರಮಗೆ ಮಂಗಳಾರತಿಯ ಧ್ರುವ ಅಗಣಿತಗುಣ ಅಗಮ್ಯಗೋಚರ ಸುಗಮದಲಾಡುವ ನಿಗಮೋದ್ಧಾರಗೆ 1 ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ ಭಗತವತ್ಸಲ ಸ್ವಾಮಿ ನಗಧರಗೆ 2 ಜಗತಿಯ ಕದ್ದೊಯ್ದ ಸುರನ ಸೀಳಿದ ಜಗದೋತ್ತಮನಾದ ಜಗದೋದ್ಧಾರಗೆ 3 ದುರುಳದೈತ್ಯನ ಬೆರಳುಗುರಿಲಿ ಸೀಳಿದ ತರಳ ಪ್ರಹ್ಲಾದಗೊಲಿದ ನರಹರಿಗೆ 4 ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ 5 ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ ಪರಮಪುರುಷನಾಗಿಹ ತಪೋನಿಧಿಗೆ 6 ದೇವತಿಗಳ ಸೆರೆಯ ಬಿಡಿಸಿದ ದೇವನು ಪಾವನಮೂರುತಿ ಅಹಲ್ಯೋದ್ದಾರಗೆ 7 iÀುದುಕುಲತಿಲಕ ವಿದುರವಂದಿತನಾದ ಬುಧಜನಪಾಲ ಮದನಮೋಹನಗೆ 8 ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ ಹೊಳೆವದೋರಿದ ಚಲುವಿಲಿ ಮಹಾಮುನಿಗೆ 9 ಮುದ್ದು ತೇಜಯನೇರಿ ತಿದ್ದಿ ರಾವುತನಾದ ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು