ಸರಸ್ವತಿದೇವಿ
ಫಣಿ ವೇಣಿ
ನಮಿಪೆ ನಿನ್ನ ಮನಶುಕವಾಣಿ
ಸುಮನಸರೊಡೆಯನ ಗಮನದೊಳಿಡುತೆ
ಪವನ ಮತದಲಿಡು ತಾಯೆ ಕಾಯೆ ಪ.
ವಾಣಿ ಬ್ರಹ್ಮನ ರಾಣಿಯೆನೀ
ಗಾಣಿಸು ಮನದಿ ಸುವಾಣಿಯನು
ಮಾಣದೆ ಜಪಸರ ಕಲ್ಯಾಣಿಯು ನೀನು
ಸತಿ ಜಾಣೆ ಭಾರತಿಯೆ 1
ವಾರಿಜಭವ ಸತಿಮತಿ ತೋರುತ ಮನದಿ
ನೀರೆ ಎನ್ನ ಮನ ಸೂರೆಗೊಳುತಲಿ
ಸಾರುತ ಹರಿನಾಮಾಮೃತವನು ಕೊಡು
ಮಾರಮಣ ಸ್ತುತಿ ಮಾಡಿಸುತ 2
ಅಸುರ ಮರ್ದನ ಹರಿ ನಿನವಶದಲ್ಲಿಹನೆ
ಸುಸ್ವರದ ಮಧುರದಿ ಪಾಡುತಲಿರುವೆ
ವಶವಲ್ಲದಲಾನಂದದಿಂದ ಶ್ರೀ ಶ್ರೀನಿವಾಸನ
ಕುಸುಮಶರನಪಿತನ್ವಶದಲಿ ನಿಲಿಸೆ 3