ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಂದಣದಾರುತಿ ತಂದು ಬೆಳಗಿರೆ ಪ ಮಂದರ ಧರಗೆ ವಂದಿಸುವರ ಭವಬಂಧ ಬಿಡಿಸುವಗೆ 1 ವಿಜಯಸಾರಥಿಗೆ ದ್ವಿಜವರ ಗಮನಗೆ ಪಂಕಜ ಭವಪಿತಗೆ 2 ಸುರಪರಿ ಪಾಲಗೆ ಶರಧಿಜ ಲೋಲಗೆ ಶರಣರ ಪೊರಿವ “ಕಾರ್ಪರ ನರಸಿಂಹಗೆ” 3
--------------
ಕಾರ್ಪರ ನರಹರಿದಾಸರು
ಮಂಗಳ ಮಾಧವಗೆ ಮಾರಮಣಗೆ ಮಂಗಳ ಶ್ರೀಧರಗೆ ಪ ಭಂಗ ಭವಗಜ ಸಿಂಗ ಕರುಣಾಪಾಂಗ ಶ್ರೀಶಗೆ ಗಂಗಾಜನಕಗೆ ತುಂಗ ಮಹಿಮಗೆ ಭಂಗರಹಿತಗೆ ಅನಂಗಪಿತನಿಗೆ 1 ಭುವನ ಮೋಹನ ಸುಮನಸರ ಪ್ರಿಯ ಕವಿಜನರ ಹೃದ್ಗøಹ ನಿವಾಸಗೆ ನವನವ ಲೀಲೆಗಳ ತೋರ್ದಗೆ ನವರತುನದಾರತಿಯ ಬೆಳಗಿರೆ 2 ಗರುಡಗಮನಗೆ ಉರಗಶಯನಗೆ ಪರಮಪುರುಷಗೆ ಪುಣ್ಯಚರಿತಗೆ ಉರಗಗಿರಿವಾಸನಿಗೆ ದೇವಗೆ ಸುರರೊಡೆಯ ಶ್ರೀ ಶ್ರೀನಿವಾಸಗೆ3 ಸೌಮ್ಯನಾಮ ಸಂವತ್ಸರದಂದು ನೇಮದಿಂದ ಭಜಿಪ ಭಕುತರ ಕಾಮ್ಯಕರ್ಮವ ತರಿದು ಪೊರೆಯುವ ಕಮಲನಾಭ ವಿಠ್ಠಲನ ಪ್ರತಿದಿನ4
--------------
ನಿಡಗುರುಕಿ ಜೀವೂಬಾಯಿ
ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ಪ ತುಂಗವಿಕ್ರಮನಿಮಗಿ ಭೂವರದಗೆ ನರಮೃಗನಿಗೆ ಅ.ಪ ಬಾಲ ಭಾರ್ಗವ ರಾಮ ಮಾತುಳಕಾಲ ವೀತಚೈಲಗೆ | ಶೀಲ ಮೂರುತಿಯಾದ ಕಲ್ಕಿರೂಪಗೆ | ರಮೆಯರಸಗೆ 1 ಧುರದಿ ರವಿಸುತ | ಉರುಗಗಳವನು ಭರದಿ ಬಿಡೆ ಕಡು ಕರುಣದಿ ನರನರಧ ಧರೆಗೊತ್ತಿ ಸಲಹಿದ ಶೌರಿಗೆ ಮುರವೈರಿಗೆ 2 ವಟದ ವೃಕ್ಷದಿ ವಟುರೂಪಿಯಲಿ ಪವಳಿಸಿದ ಪರಮಾತ್ಮಗೆ | ತಟತಸನ್ನಿಭ ಶಾಮಸುಂದರವಿಠಲಗೆ ವಿಪಗಮನಗೆ 3
--------------
ಶಾಮಸುಂದರ ವಿಠಲ
ಹರಷದಿ ತಾ ಸಖಿ ತ್ವರದಿ ಆರುತಿಯ ದ್ವಿರದ ವರದ ಶಿರಿನರಹರಿಗೆ ಪ ನಿಗಮ ತಂದವಗೆ ನಗಧರ ಕ್ರೋಢಗೆ ಮಗುವಿನ ಸಲಹಿ ಜಗವ್ಯಾಪಿಸಿದಗೆ ಭೃಗುಜಾ, ರಘುಜಾ ವ್ರಜಜಾರ್ತಿ ಹರಣ ವಿಗತವಸನ ತುರುಗನೇರಿದಗೆ 1 ಗರುಡ ಗಮನಗೆ ಶರಧಿಶಯನಗೆ ಸುರನದಿ ಪಿತ ಭೂಸುರ ಪ್ರಿಯಗೆ ಅರುಣಾ, ಚರಣಾ ಕರುಣಾಕರಮಂ- ದರಧರ ಶರಣರ ಪೊರೆವ ಸಿರಿವರಗೆ 2 ಛಳಿಮಳೆ ಸಹಿಸುತ ಛಲದಲಿಧೇನಿಪ ಬಲುವಿಧ ಭಕ್ತಾವಳಿ ಹೃನ್ಮಧ್ಯದಿ ಪೊಳೆವಾ, ನಲಿವಾ ಕಳೆವಾಘವ ಭೂ-ವಲಯದಿ ಕಾರ್ಪರ ನಿಲಯ ನರಹರಿಗೆ 3
--------------
ಕಾರ್ಪರ ನರಹರಿದಾಸರು
ಮಂಗಳ ಜಯಜಯತೂ ಜಯತು ಜಯಮಂಗಳಶುಭಜಯತುಪವಾರಿಜೋದ್ಭವನಿಗೆ ವಾಣಿ ಶಾರದೆಗೆನಾರಾಯಣನಿಗೆ ನಾರಿ ಲಕ್ಷುಮೀಗೆಮಾರಸಂಹಾರನಿಗೆ ಪಾರ್ವತೀ ದೇವಿಗೆನಾರೀ ರನ್ನೆಯರ್ ಹೂವಿನಾರತಿ ಬೆಳಗೆ1ಸೃಷ್ಟಿಕರ್ತಗೆ ಸರ್ವ ಅಕ್ಷರದಾಯಿನಿಗೆರಕ್ಷಣ ಮೂರ್ತಿಗೆ ಅಕ್ಷಯಾಶ್ರಿತೆಗೆಶಿಕ್ಷೆ ರಕ್ಷಃ ದೇವಿ ಸೃಷ್ಟಿ ಸಂಹಾರಗೆಅಕ್ಷತೆಯಿಟ್ಟು ಸ್ತ್ರೀಯರ್ ಆರತಿ ಬೆಳಗೆ2ವರಹಂಸ ಗಮನಗೆ ಮಯೂರ ವಾಹನಗೆಗರುಡ ಗಮನಗೆ ಮದಕರಿ ಧ್ವಜಿಗೆವೃಷಭವಾಹನನಿಗೆ ವರಸಿಂಹ ವಾಹಿನಿಗೆಸರಸಿಜಾಕ್ಷಿಯರ್ ಮುತ್ತಿನಾರತಿ ಬೆಳಗೆ3ಕಮಂಡಲುಧಾರಿಗೆ ವರವೀಣಾಪಾಣಿಗೆಕೌಮೋದಕಿಧರಗೆಕಮಲಸುಮಕರಗೆಡಮರು ತ್ರಿಶೂಲಧರಗೆ ತೋಮರ ಪಾಣಿಗೆಕೋಮಲಾಂಗಿಯರ್ ಕುಂಕುಮದಾರತಿ ಬೆಳಗೆ4ಅಂಬುಜಾಸನಗೆಶುಂಭಸಂಹಾರಳಿಗೆಕುಂಭಕರ್ಣಾಂತಕಗೆ ಮಹಿಷಮರ್ದಿನಿಗೆಸಂಭ್ರಮತ್ರಿಪುರಾರಿ ಚಂಡ ಮುಂಡಾರ್ದಿನಿಗೆಅಂಬುಜಾಕ್ಷಿಯರ್ ಸಂಭ್ರಮದಾರತಿ ಬೆಳಗೆ5ಚಂದದಿ ಬ್ರಹ್ಮಗೆ ಚಂದಿರವದನೆಗೆಸುಂದರ ಮೂರ್ತಿಗೆ ಇಂದಿರೆಗೆಅಂದದ ಶಿವನಿಗೆ ಅರವಿಂದನೇತ್ರೆಗೆವಂದಿಸಿ ಗೋವಿಂದದಾಸನಾರತಿ ಬೆಳಗೆ6<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ