ಒಟ್ಟು 7 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿ ಬಲಿ ಧ್ರುವ ಪ್ರಹ್ಲಾದನಲ್ಲಿ ಬಂದಂತೆ ಎನ್ನಲ್ಲಿ ಪ ನಿನ್ನಾಗಮನಕೆ ಹೃದಯ ಮನ ಬುದ್ಧಿ ಅರಳುವುದು ಸರ್ವದಾ ನಿನ್ನಾಗಮನಕೆ ಸರ್ವ ಮಾನಿಗಳೆಲ್ಲ ಕಾದು ನಿಂದಿಹರು ನಿನ್ನಾಗಮನಕೆ ಸರ್ವ ಕಾಲಾಕರ್ಮ ಅನುಕೂಲವಾಗಿಹವು ನಿನ್ನಾಗಮನಕೆನೇನೆ ಸರ್ವತ್ರ ಅನುಕೂಲ1 ಸೊಲ್ಲು ಲಾಲಿಸಬೇಕು ಶೀಲರುಕ್ತಿಬಲ್ಲಿದ ಮಹದೇವನೊಡೆಯ ಶುಕತಾತ ಹಲ್ಲಲ್ಲು ಕಿರಿದು ಕಾದು ನಿಂದಿಹರೊ2 ಕರಿಗಿರಿ ಮುದಮಯ ಗುರುತಂದೆವರದಗೋಪಾಲವಿಠಲಹೆದ್ದೈವ ಪಾಂಡುರಂಗಾ ವೆಂಕಟತಡವ್ಯಾಕೆ ಬರಲು ಯೋಚಿಪುದು ಏಕೆ ಬಾರಯ್ಯ ಭಕ್ತ ಬಂಧು ನಿನ್ನವರೆ ನಿಜ ಬಂಧೊ 3
--------------
ಗುರುತಂದೆವರದಗೋಪಾಲವಿಠಲರು
ರಾಮನಾಮವ ನುಡೀವೆ ಶ್ರೀರಾಮ ನಿನ್ನನು ಪಿಡೀವೆ ಪ ಧಾಮ ನೀ ಬಿಟ್ಟೇಳು ಸುರಧಾಮನಾ ಪಿಡಿ ಕೇಳು ಆಮ್ಯಾಲ ಪೇಳು ಕಾಮಿನೀಯಾತ್ಮಜರಗತಿ ಯಿನ್ನಾವುದೈ ಈ ಪರಿಯು ಮಾಡಲು ರಾಮರಾಮನುತಡಿಗಡಿಗೆ ನುಡಿದೀ ಮನೆಯೆ ಭವವೀಯವರಿವೆನು 1 ರಥಕೆ ಕುದುರೆಗಳೆರಡು ಭವರಥಕೆ ದಂಪತಿ ಜೋಡು ರಥ ನಡೆಸಿ ನೋಡು ಪಥವು ಗಮನಕೆ ಸುಲಭವಲ್ಲವೆ ಇತರ ಭಯವದಕೆನಿತಹುದು ಪೇಳ್ ಸತತನಿಲಸುತ ಗತಿಯ ತೋರಲು ಪತನೆಡರುಗಳ ಕಥೆಯನರಿಯಿಸು 2 ಪೆರ್ಮರವೆ ನೀ ಪುಟ್ಟಿ ಸಲೆಗಾರ್ನೆರಳು ಮಾಡಿಟ್ಟಿ ಮೂರ್ಲೋಕ ತೊಟ್ಟ ಶೇರಲದ ನರವಿರ್ಹಗಳು[?] ಹರಿಹರಿಯೆನುತ ಬಾಯ್ತೆರದು ನುಡಿಯಲು ಸುರತರು
--------------
ನರಸಿಂಹವಿಠಲರು
ಸುಮ್ಮನೇಕೆ ಪರದಾಡುವೆಯೊ ಪರ ಬೊಮ್ಮನ ಚರಣಕೆ ಶರಣು ಹೊಡಿ ನಮ್ಮನು ಸೃಜಿಸುವ ಪೊರೆಯುವ ಕೊನೆಯಲಿ ನಮ್ಮನೇ ನುಂಗುವ ಗುಮ್ಮನಿವ ನಮ್ಮ ಶರೀರದೊಳಿರುವ ಯಂತ್ರಗಳು ನಮ್ಮಧೀನವೆ ಯೋಚಿಸೆಲೊ ವಾತ ನಮ್ಮಾಕಾಂಕ್ಷೆಯೆ ಯೋಚಿಸೆಲೊ 1 ಮೂರಂತಸ್ಥಿನ ನೂರು ಸದನಗಳು ನೂರು ರೂಪಗಳು ನಿನಗಳವೆ ಚಾರು ಮನೋಹರ ಸತಿಯಳಿರಲು ಮನ ಕೋರಿಕೆಯವಳಲಿ ಶಾಶ್ವತವೆ ನೂರು ಎಕರೆ ಹೊಲ ಗದ್ದೆ ತೋಟಗಳು ಮೂರು ಲಕ್ಷಗಳು ಬೆಲೆಯಿರಲು ಮೂರು ಚಟಾಕಿನ ಅನ್ನ ಹೊರತು ಅದ ಮೀರಿ ನುಂಗುವುದು ನಿನಗಳವೇ 2 ಶೂರನು ನಾ ಬಲುಧೀರನು ನಾ ಅಧಿ ಕಾರಿಯು ನಾ ಈ ಜಗದೊಳಗೆ ಕೋರಿದ ಜನರನು ಸದೆಬಡಿಯುವೆ ಎನ ಗಾರು ಸಮರು ಈ ಧರೆಯೊಳಗೆ ಕೋರುವ ಸುಖಗಳನನುಭವಿಸುವ ಮಮ ಕಾರದ ಗತಿಯನು ಯೋಚಿಸೆಲೊ ಹೇರಳ ಗಜತುರಗಾದಿ ವಾಹನಗ ಳೇರಿದ ನೀ ಹೆಗಲೇರಿ ಹೋಗುವಿಯೊ 3 ಸಾಸಿರ ಸಾಸಿರ ಬಡ್ಡಿ ಬಾಚಿಗಳ ಬೇಸರವಿಲ್ಲದೆ ಗಳಿಸಿದೆಯೊ ಕಾಸಿನ ಲೋಭಕೆ ಮೂಸಲು ಬಾರದ ಕಾಸಕ್ಕಿ ಅನ್ನವ ನುಂಗಿದೆಯೊ ಲೇಶವು ಗಮನಕೆ ತರಲಿಲ್ಲ ಈ ಸವಿನುಡಿ ಬಲು ಹಳೆಯದೆಂದು ಆಕ್ರೋಶವ ಮಾಡದೆ ಯೋಚಿಸೆಲೊ 4 ಮಾಯವು ತಾ ಈ ಜಗತ್ತಿನ ಜೀವನ ರುಚಿ ತೋರುವುದು ಕಾಯವು ಶಾಶ್ವತವೆಂಬ ಭ್ರಾಂತಿಯಲಿ ಹೇಯ ವಿಷಯಗಳನುಣಿಸುವುದು ಪ್ರಾಯಶರೆಲ್ಲರು ಬಲ್ಲರಿದನು ಬರಿ ಬಾಯಲಿ ನುಡಿಯುವರೊ ಸತತ ಕಾಯವಚನಮನದಿಂದ ಪ್ರಸನ್ನನ ಮಾಯವನರಿತಾಚರಿಪರು ವಿರಳ 5
--------------
ವಿದ್ಯಾಪ್ರಸನ್ನತೀರ್ಥರು
ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆಪ ಪರಿಪರಿವಿಧದಲಿ ಪರಿತಪಿಸುವರನು ಕರವಿಡಿದುದ್ಧರಿಸುತ ಸಂತೈಸುವ ಉರಗಾದ್ರಿವಾಸ ವಿಠ್ಠಲ ಸಂತೈಸು ಚರಣಕಮಲಗಳಿಗೆರಗಿ ಭಿನ್ನೈಸುವೆ1 ಮಂದಮತಿಯು ನಾನೆಂದು ವಂದಿಪರ ಬಂಧನ ಕಳೆಯುತ ಮುಂದೆ ಗತಿಯು ತೋರಿ ತಂದೆ ವೆಂಕಟೇಶ ವಿಠ್ಠಲ ಭಕುತರ ಸಂದಣಿ ಪೊರೆಯುವರೆಂಬ ಬಿರುದು ದೇವ 2 ಆಶಾಪಾಶಗಳಿಗೊಳಗಾಗಿಹ ಮನ- ದಾಸೆ ಪೂರೈಸುತ ನೀ ಸಲಹೈ ಗುರು ವಾಸುದೇವ ವಿಠ್ಠಲ ಹರಿ ಭಕುತರ ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3 ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ ಒದಗಿದ ಪಾಪದಿ ಹೆದರÀುತಲಿದೆ ಮನ ಪದುಮಜಾಂಡ ಸೃಜಿಸಿದ ಪರಮಾತ್ಮನಿ- ಗದ್ಭುತವೇ ಪಾಮರರನು ಪೊರೆವುದು 4 ಮಣಿದು ಬಿನ್ನೈಸುವೆ ಪವನಮತವÀ ತೋರಿ ಬಿನಗು ಬುದ್ಧಿಗಳ ಗಮನಕೆ ತಾರದೆ ಕಮಲನಾಭ ವಿಠ್ಠಲ ತವ ಕರುಣದಿ ಮನದ ಕ್ಲೇಶಗಳ ಕಳೆದು ಉದ್ಧರಿಸುತ 5
--------------
ನಿಡಗುರುಕಿ ಜೀವೂಬಾಯಿ