ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
ಕೃಪಣ ಶ್ರೀಪಾದಾರ್ಚನೆಯನಿತ್ತು ಪ ಅಪಾರ ಜನುಮದ ಪಾಪೌಘ ಬೆನ್ನಟ್ಟಿ ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ. ಪತಿತ ನಾನಾದರೂ ಪತಿತ ಪಾವನ ನೀನು ಪಶುಪತಿ ಪಾಪಹರ ಗತಿಹೀನರಿಗೆ ನೀನೆ ಗತಿದರ್ಶಕನೆಂದು ತುತಿಸುತ್ತಿಹುದು ವೇದತತಿ ಸಮ್ಮತವಾಗಿ 1 ಭವಭವದಲಿ ಬಂದು ಬವಣೆಗಳಲಿ ಬೆಂದು ಬಳಲಿದೆ ಭಕ್ತ ಬಂಧು ಭವಹರ ನೀನೆಂಬುದನು ಭವಿಗಳಿಂ ನಿತ್ಯ ಶ್ರವಣದಿ ಕೇಳಿ ನಿನ್ನವರವನೆನಿಸಿದೆ 2 ಗೌರಿ ಮನೋಹರ ಗೌರಾಂಗ ಭಕ್ತರು ದ್ಧಾರಿಯೆ ಶೂಲಧರ ಸಾರಿದೆ ನಿನ್ನಂಘ್ರಿವಾರಿಜಯುಗಳವ ಕಾರುಣ್ಯದಲಿ ನೋಡು ಅಭಯವ ನೀಡು 3 ಮುಪ್ಪುರಹರ ಮುಕ್ಕಣ್ಣ ಗಂಗಾಧರ ಮೃತ್ಯು ಮೃತ್ಯುವೆ ಶಂಕರಾ ಸರ್ಪಭೂಷಣ ಅಪಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ಸುರೇಶ 4 ಅಜ ಸಂತನಧ್ವರ ಭಜನೆಯ ಕೆಡಿಸಿದ ವಿಜಯ ವಿಗ್ರಹ ಶರೀರ ಸುಜನರ ಹೃದಯಾಂಬುಜದಲ್ಲಿ ಮಿನುಗುವ ರಜದೂರ ಶ್ರೀಕಾಂತ ನಿಜಭಕ್ತ ಗುರುವರ 5
--------------
ಲಕ್ಷ್ಮೀನಾರಯಣರಾಯರು
ಮರೆವರೇನೊ ರಾಮ ನಿನ್ನ ಚರಣ ಸೇವಕನÀನ್ನು ಪರರಿಗೊಪ್ಪಿಸಿ ಹೀಗೆ ಪ ಪರಮ ದಯಾನಿಧಿ ಅಲ್ಲವೆ ಮುನ್ನ ಶರಣರ ಪಾಲಿಸಲಿಲ್ಲವೆ ಇದು ಸರಿಯೇನೊ ಜನ ನಗರೇನೊ ಇನ್ನು ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ. ಗತಿಹೀನರಿಗೆ ನೀ ಗತಿಯೆಂದು | ನೀನೆ ಪತಿತರ ಪತಿಕರಿಸುವನೆಂದು ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ ಗತಿದೋರೆಂದು ಸಾರಿದೆ ಚೀರಿದೆ ದೂರಿದೆ 1 ದೋಷರಾಶಿಗಳೆಲ್ಲ ಅಳಿಸಯ್ಯ ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ ದಾಸಾನುದಾಸ ದಾಸನು ಎನಿಸಿ | ಪರಿ- ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ 2 ಏನು ಸಾಧನವನ್ನು ನಾ ಕಾಣೆ | ನಿನ್ನಾ- ಧೀನದವನು ನಾ ನಿನ್ನಾಣೆ ದೀನ ಬಂಧುವೆ ದಯಾಸಿಂಧುವೆ ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ 3
--------------
ಲಕ್ಷ್ಮೀನಾರಯಣರಾಯರು