ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಂದೆನಗೆ ಗತಿಯೇನೋ ಇಂದಿರೇಶಾ ತಂದೆ ನೀನೆಂದೆನುತ ತಪ್ಪನೊಪ್ಪಿಸುವೇ ಪ ಶ್ರೀಕಾಂತನೇ ನಿನಗೆ ಅಭಿಷೇಕ ಮಾಡದೆಯೆ ನಾ ಕಂಠಪರಿಯಂತ ಕುಡಿದೆನೊ ಹಾಲ ಬೇಕೆಂದು ಹರಿವಾಸರಂಗಳಾಚರಿಸದೆಯೆ ಸಾಕೆಂಬವೊಲು ಸುಖವ ಸೂರೆಗೊಂಡೇ 1 ಅತಿಶಯದಿ ನಾನಿನ್ನ ಪೂಜೆಯನು ಮಾಡದೆಯೆ ಸತಿಸುತರೆ ಸರ್ವಸ್ವವೆಂದಿರ್ದೆನೋ ಹಿತಮಿತ್ರ ಬಾಂಧವರೊಳತಿ ವಂಚನೆಯಮಾಡಿ ಮತಿವಿಕಳನಾದೆನೋ ಪತಿತಪಾವನನೇ 2 ಕಲ್ಯಾಣ ಸಮಯದಲಿ ಕಲಹಗಳ ಹೂಡುತ್ತ ಉಲ್ಲಪದಿ ನಾಕುಳಿತು ನೋಡುತಿದ್ದೆ ಸಲ್ಲಲಿತ ವಾಕ್ಯಗಳನಾಡದೆಯೆ ಸರ್ವತ್ರ ಖುಲ್ಲುಮಾತುಗಳಾಡಿ ನೋಯಿಸಿದೆ ನರರ 3 ತಾರೆಂಬುದಕೆನಾನು ತೌರುಮನೆಯಾಗಿರುವೆ ಪಾರಮಾರ್ಥಕವಾಗಿ ಕೊಡುವುದರಿಯೆ ವೀರವೈಷ್ಣವರಲ್ಲಿ ವಂದಿಸದೆ ದೂಷಿಸುತ ಘೋರಪಾತಕಿಯಾಗಿ ಇರುವೆಯೀ ಜಗದಿ 4 ನರ್ಮದಾನದಿ ಸ್ನಾನ ನಿರ್ಮಲೋದಕಪಾನ ಧರ್ಮ ಮರ್ಮಗಳರಿತು ಮಾಡುವುದು ದಾನ ಪೆರ್ಮೆಯಂಶ್ರೀಹರಿಯ ಧ್ಯಾನ ನಿದಾನ ನೆಮ್ಮದಿಯ ಮಾರ್ಗದಿಂ ಪೊರೆ ನಾನು ದೀನ 5 ನಿತ್ಯ ಜೀವಿಸುವುದನ್ನು ಕಾಡದೆಯೆ ಕಡೆಯಲ್ಲಿ ಉಸಿರುಬಿಡುವುದನು ನೋಡುತ್ತ ಗುರುತರದ ಶ್ರೀಪತಿಯ ಪದಯುಗಕೆ ಗಾಢದಿಂ ಮುಡಿಯಿಕ್ಕಿ ಪಿಡಿವಂತೆ ಮಾಡು 6 ನೀನು ಒಲಿಯುವ ಪರಿಯದಾವುದನು ಮಾಡಿಲ್ಲ ಏನು ಮಾಡಲು ಎನಗೆ ಮನಸು ಬರದು ದೀನ ಪಾಲಕ ನಮ್ಮ ಹೆಜ್ಜಾಜಿ ಕೇಶವನೆ ಸಾನುರಾಗದಿ ನಿನ್ನ ಧ್ಯಾನಿಪುದ ನೀಡೈ7
--------------
ಶಾಮಶರ್ಮರು
ಗುಮಾನ ಆರದು ಇನ್ನ್ಯಾಕೆಹರಿನಾಮದ ಬಲವೊಂದಿರಲಿಕ್ಕೆ ಪಸ್ವಾಮಿಮಾಧವನ ಪ್ರೇಮಪಡೆದು ಮಹನಾಮಮೃತದ ಸವಿಯುತಲಿರುವರ್ಗೆ ಅ.ಪರೊಚ್ಚಿಗೆದ್ದು ಮಾಡುವುದೇನೋ ಜನಸ್ವಚ್ಛದಿ ಒಡಗೂಡಿದರೇನೋಮೆಚ್ಚಿ ಕೊಡುವಫಲ ಇವರೇನೋ ಅತಿಹುಚ್ಚ ನೆಂದರಾಗುವುದೇನೋನಿಶ್ಚಲಚಿತ್ತದಿ ಅಚ್ಯುತಾನಂತನಬಚ್ಚಿಟ್ಟು ಮನದೊಳು ಉಚ್ಚರಿಸುವರಿಗೆ 1ಸತಿಸುತರಿವರಿಂದ್ಹಿತವೇನೊ ತನ್ನಪಿತಮಾತೆ ಮುನಿದರೆ ಕೊರತೇನೋಅತಿಸಂಪತ್ತಿನಿಂದ ಗತಿಯೇನೋ ಈಕ್ಷಿತಿಜನ ಮೆಚ್ಚಲು ಬಂತೇನೋರತಿಪತಿಪಿತನಂ ಅತಿ ಗೂಢತ್ವದಿಸತತದಿ ನುತಿಸುವ ಕೃತಕೃತ್ಯರಿಗೆ 2ಭೂಮಿಪ ಕೋಪಿಸಲಂಜುವರೆ ಈತಾಮಸರಿಗೆ ತಲೆ ಬಾಗುವರೇಭೂಮಿ ದೈವಗಳ ಬೇಡಿದರೆ ಮನಕಾಮಿತವನ್ನು ಪೂರೈಸುವರೇಕಾಮಿತಾರ್ಥನೀಗಿ ಮಹಾಮಹಿಮನನೇಮದಿ ಪಠಿಪ ಶ್ರೀರಾಮದಾಸರಿಗೆ 3
--------------
ರಾಮದಾಸರು
ಪಾಲಿಸೋ ವೆಂಕಟಗಿರಿ ರಾಯಾ ಲಕ್ಷ್ಮೀ |ಲೋಲನೀಲಾಂಬುದ ಸಮ ಕಾಯಾ ಪಮಾಕಮಲಾಸನವಾಸವ- ಸುರ |ನೀಶ ಕರಾಧ್ಯ ಕೇಶವ ||ಲೋಕೇಶ ಯನ್ನಲ್ಲಿ ವಾಸವ-ಮಾಡಿನೂಕು ತುಚ್ಛತರ ಕ್ಲೇಶವ 1ಹಿಂದಿನ ಜನುಮಗಳೆಣಿಕಿಲ್ಲ - ದಯಾ |ಸಿಂಧುಸಾಧನವೀಗಲಿನಿತೆಲ್ಲಾ ||ಮುಂದಿನ ಗತಿಯೇನೋ ತಿಳಿದಿಲ್ಲ - ಇದ |ರಿಂದಲಂಜುವೆ ಜಾಂಬವತೀ ನಲ್ಲ 2ಬಾಲಕನಾದೆ ಕೆಲವು ದಿನ - ಪ್ರಾಯ |ಕಾಲವೊದಗಲು ಪರಾಂಗನಾ ||ಮೇಲೆ ಅಭಕ್ಷಣೆಯಲಿ ಮನವಿಟ್ಟೆ - ಹೇ |ಳಲೊಂದೆರಡೇ ಯನ್ನವಗುಣ 3ಉದಯ ಸ್ನಾನವು ಸಂಧ್ಯಾವಂದನೆ - ಅಘ್ರ್ಯ |ವಿಧಿಗುರುಹಿರಿಯರ ವಂದನೆ |ಮೊದಲಾಗಿ ಪಿತರಾರಾಧನೆ ಬಿಟ್ಟೆ |ಮದದಿಂದ ಹೀನನೆಂಬುವ ನಾನೇ4ಅನ್ಯರ ಮನೆ ದ್ವಾರ ಕಾಯ್ವೆನೋ - ಸ್ವಾಮಿ |ನಿನ್ನ ಸ್ಮರಣೆಯ ಕ್ಷಣ ಮಾಡೆನೋ ||ಅನ್ನಕ್ಕೆ ಬಹುದೂರ ಪೋಪೆನೋ - ಸಾರೆ |ಪುಣ್ಯಕ್ಷೇತ್ರಗಳಿರೆ ನೋಡೆನೋ 5ಧನಹೀನನಾದ ಕಾರಣದಿಂದ -ಸತಿ|ಮನೆ ಹೊಂದಿಸಳೋ ಪರಮಾನಂದ ||ತನುಜರಶನ ವಸನಗಳಿಂದ ಕಾಡು |ವಣು ಮಾತ್ರ ಸುಖವಿಲ್ಲ ಇದರಿಂದ6ಏಸುಹೇಳಲಿ ಮಾತ ಲಾಲಿಸೋ - ಶ್ರೀ ಪ್ರಾ- |ಣೇಶ ವಿಠ್ಠಲ ನೀನೇ ತಾರಿಸೋ ||ಆ ಸತ್ಕರ್ಮದಿ ಮನ ಪ್ರೇರಿಸೋ - ನಿನ್ನ |ದಾಸವರ್ಗದೊಳೆನ್ನ ಕೂಡಿಸೋ 7
--------------
ಪ್ರಾಣೇಶದಾಸರು