ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಪ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ | ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ 1 ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ 2 ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ | ಕರುಣದಿಂದಲಿ ನಿಜರೂಪ ತೋರಿ | ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ 3 ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು | ಅನಿಲ ಸುತನಿಂದ ಮಾಗಧನ ಕೊಲ್ಲಿಸಿ | ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ | ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ 4 ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ | ತರಣಿಸುತ ದುಶ್ಶಾಸ ಕೌರವೇಶಾ | ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ | ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ5 ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ | ತೋರಿದೆ ಒಬ್ಬೊಬ್ಬ ನಾರಿಯಲಿ | ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ | ವರ ಸಂತಾನವನು ಪಡದೆ ಎಲೊ ಭಾಪುರೆ 6 ವರ ಚಂದ್ರಹಾಸ ಮಿಗಿಲಾದ ಭೂಪಾಲಕರ | ಕರೆಸಿ ಪಾಂಡುವರ ಯಾಗವನೆ ಮುಗಿಸಿ | ಹರುಷದಲಿ ಯದುಕುಲವಾಸ ಮಾಡಿದೆ | ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ 7
--------------
ವಿಜಯದಾಸ
ವೆಂಕಟ ಕೃಷ್ಣವಿಠಲ | ಲೆಂಕನನ ಸಲಹೋ ಪ ಪಂಕಜೋದ್ಭವ ಪಿತನೆ | ವೆಂಕಟೇಶಾ ಅ.ಪ. ಅಬುಜ ಜಾಂಡೋದರನೆ | ಶಬರಿ ಎಂಜಲನುಂಡೆಕುಬುಜೆಗಂಧಕೆ ಒಲಿದು | ಸದ್ಗತಿಯನಿತ್ತೆಇಭವರದ ನೀನಾದೆ | ಕುಲಶೀಲನೆಣಿಸದಲೆವಿಭುವೆ ಈ ಭಕುತಂಗೆ | ವೈಭವವ ತೋರೋ 1 ಮಧ್ವಮತ ತತ್ವದಲಿ | ಶುದ್ಧ ಭಕುತಿಯ ತೋರ್ಪಶ್ರದ್ಧಾಳು ಎನಿಸಿಹನು | ಬುದ್ಧಿ ಪೂರ್ವಾಸಿದ್ಧಾಂತ ತಾತ್ಪರ್ಯ | ಬುದ್ಧಿಗೆಟಕೂವಂತೆಉದ್ಧರಿಸ ಬೇಕಿವನ | ಅಬ್ದಿಜೆಯ ರಮಣ 2 ನೀಚೋಚ್ಚ ತರತಮದ | ಸ್ವಚ್ಛ ಜ್ಞಾನವ ನೀಯೊಮತ್ಸ್ಯಕಚ್ಛಪರೂಪಿ | ಸಚ್ಚಿದಾನಂದಾನಿಚ್ಚ ನಾಮಸ್ಮರಣೆ | ಸ್ವಚ್ಛ ಪೇರ್ಮೆಲಿ ಗೈವಉತ್ಸಾಹ ಇವಗಿತ್ತು | ಉದ್ಧರಿಸೊ ಹರಿಯೇ 3 ವ್ಯಾಜ ಕರುಣೀ4 ಪಾಕ್ಕು ಕರ್ಮವ ಕಳೆದು | ಲೋಕದಲಿ ಸತ್ಕೀರ್ತಿಬೇಕಾದ ವರಗಳನೆ | ತೋಕನಿಗೆ ಈಯೋನಾಗನದಿ ಪಿತ ಗುರೂ | ಗೋವಿಂದ ವಿಠ್ಠಲನೆವಾಕು ಮನ್ನಿಸಿ ಕಾಯೋ | ಶ್ರೀ ಕರಾರ್ಜಿತನೇ 5
--------------
ಗುರುಗೋವಿಂದವಿಠಲರು
ಪುಂಡರೀಕದಳ ನಯನ ನಿಮ್ಮ ಕೊಂಡಾಡಲಳವಲ್ಲಪಾಂಡುರಂಗಯ್ಯ ಕೃಷ್ಣರಾಯ ಪ.ಭೂಮಿಯಈರಡಿಮಾಡಿ ಮ್ಯೋಮಕೊಂದು ಪಾದವನಿತ್ತೆರೋಮ ರೋಮದಲಿ ಬ್ರಹ್ಮರುದ್ರರಿರಲುಸ್ವಾಮಿ ನಿಮ್ಮ ಪ್ರೇಮವ ತಾಳಿದಳೆಂದು ನಿಮ್ಮಕೋಮಲಾಂಗಿ ಬಲ್ಲಿದಳೊ ನೀ ಬಲ್ಲಿದನೊ 1ಹದಿನಾಲ್ಕು ಲೋಕವು ತನ್ನ ಉದರದೊಳಿಂಬಿಟ್ಟುಕೊಂಡು ಸೃಜಿಸಿ ರುಕ್ಮಿಣಿ ತನ್ನ ಕುಚಗಳಲ್ಲಿಚದುರದಿಂದ ಎತ್ತಿ ಕುಣಿದಾಡುವಪದುಮಾಕ್ಷಿ ಬಲ್ಲಿದಳೊ ನೀ ಬಲ್ಲಿದನೊ 2ಶೃಂಗಾರ ತೋರುವ ನಿಮ್ಮ ಮಂಗಳದ ಶ್ರೀಪಾದವಹಿಂಗದೆ ಭಜಿಸಲು ಸಂಗತಿಯನಿತ್ತೆಯೊರಂಗ ಪ್ರಸನ್ನವೆಂಕಟಕೃಷ್ಣ ನಿಮ್ಮಸಂಗಸುಖಿ ಬಲ್ಲಿದಳೊ ನೀ ಬಲ್ಲಿದನೊ 3
--------------
ಪ್ರಸನ್ನವೆಂಕಟದಾಸರು