ಒಟ್ಟು 13 ಕಡೆಗಳಲ್ಲಿ , 11 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಪ್ರಾರ್ಥನೆ ಭುಜಗಭೂಷಣ ಕರುಣಾ ಗಜಾನನಾ ಪ ಅಂಬರಕಭಿಮಾನಿ ಶಂಭುದೇವನ ಸುತ ಇಂಬು ತೋರಿಸೊ ನೀ ವಿಶ್ವಂಭರನ ಸ್ಮರಣೆಗೆ 1 ದಾಸವರ್ಯನೆ ವೇದವ್ಯಾಸರಿಗತಿಪ್ರಿಯ ದಾಸನೆಂದೆನಿಸೆನ್ನ ಶೇಷಮೂರುತಿಯೆ 2 ಮತಿಯ ಪಾಲಿಸು ಶ್ರೀಪತಿಯ ಸ್ತುತಿಗೆ ವಿಘ್ನ ತತಿಯ ತಾರದೆ ಶುಭಮತಿ ಇತ್ತು ಸಲಹೊ 3 ತತುವರೊಳಗೆ ಅತುಳ ಮಹಿಮನೆಂದು ಪ್ರಥಮ ಕಾರ್ಯದಿ ನಿನ್ನ ನುತಿಸಿ ಬೇಡುವರೊ 4 ಶ್ರುತಿಪ್ರತಿಪಾದ್ಯ ಶ್ರೀ ವೆಂಕಟೇಶನ ದೂತ ಹಿತರೆನಗಿಲ್ಲ ನೀ ಗತಿ ಎಂದು ನಂಬಿದೆ 5
--------------
ಉರಗಾದ್ರಿವಾಸವಿಠಲದಾಸರು
(ಶ್ರೀ ವ್ಯಾಸರಾಯರ ಪ್ರಾರ್ಥನೆ) ಶ್ರೀಹರಿಗತಿಪ್ರಿಯಗುರುವ್ಯಾಸರಾಯ ಪ. ಶರ್ಕರ ಕ್ಷೀರವ ಕುಡಿಸುವಂದದಿ ಶುಭ ತರ್ಕತಾಂಡವ ನ್ಯಾಯಾಮೃತವನು ಸುರಿದ 1 ಸಾಂದ್ರ ಹೃತ್ತಾಮಸ ತಂದ್ರವೋಡಿಸುವ ಶ್ರೀ ಚಂದ್ರಿಕಾಕರ ಕರುಣಾಂಬುಧಿ ಧೀರಾ 2 ಕುಂಡಲ ಗಿರಿವರ ಪಾಂಡವಧಾರಾ ಬ್ರ ಹ್ಮಾಂಡಕೋಟೀಶನ ಮಂಡಿಸಿ ನಲಿದಂಥ ಗುರು ವ್ಯಾಸರಾಯ3
--------------
ತುಪಾಕಿ ವೆಂಕಟರಮಣಾಚಾರ್ಯ
1. ದೇವದೇವತಾ ಸ್ತುತಿ (ಅ) ಶ್ರೀ ಗಣೇಶ ಸ್ತವನ 100 ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ಭಜಕರಿಷ್ಟವÀ ಕೊಡುವೊ ಗÀಣನಾಥ ಶರಣು ಪ. ತ್ರಿಜಗ ವಂದಿತನಾದ ದೇವ ದೇವನೆ ಶರಣು ಸುಜನರಿಗೆ ವಿಘ್ನವನು ಪರಿಹರಿಪೆ ಶರಣು ಅ.ಪ ಮಂದ ಮತಿಯನು ಬಿಡಿಸಿ ಚಂದ ಜ್ಞಾನವನಿತ್ತು ಪಾದ ಹೊಂದಿಪ್ಪ ತೆರದಿ ಸುಂದರಾಂಗನೆ ನಿನ್ನ ಪದದ್ವಂದ್ವಕೆರಗುವೆನು ಇಂದು ಕರುಣಿಪುದು 1 ಹರನ ತನಯನೆ ಕರುಣಾಕರನೆ ಸುರನರ ವರದ ಮೊರೆಯ ಲಾಲಿಸಿ ಎನ್ನ ಕರಗಳನೆ ಪಿಡಿದು ಪೊರೆಯದಿದ್ದರೆ ಬಿಡೆನು ನೆರೆದೆ ನಿನ್ನಡಿಗಳನು ತ್ವರಿಯದಿಂದಲಿ ನೋಡು ಶರಣೆಂಬೆ ನಿನಗೆ 2 ಸಿದ್ಧಿದಾಯಕ ನಿನ್ನ ಹೊದ್ದಿ ಮೆರೆವೆನೊ ನಾನು ಅಬ್ಧಿಶಯನನ ಮಹಿಮೆ ಶಬ್ದದಲಿ ಪೇಳ್ವ ಶುದ್ಧಮತಿಯನು ಕೊಟ್ಟು ಉದ್ಧರಿಸಬೇಕೆನ್ನ ಮಧ್ವವಲ್ಲಭವೇಣುಕೃಷ್ಣಗತಿಪ್ರಿಯ3
--------------
ವ್ಯಾಸರಾಯರು
ಅಷ್ಟಮಠದ ಯತಿಗಳು ನೋಡಿ ದಣಿದವೆನ್ನ ಕಂಗಳು ಉಡುಪಿಯಲ್ಲಿರುವ ಅಷ್ಟಮಠದ ಶ್ರೀಪಾದಂಗಳವರ ಪ. ಸುಧಿಂದ್ರತೀರ್ಥ ಗುರುವರ್ಯರು ಬಂದ ಭಕ್ತರಿಗೆ ಕರುಣಾಮೃತ ಮಳೆಗರೆವರು ಶ್ರೀಹರಿಯ ತೋರುವರು ನೇಮದಿಂದಲಿ ಇವರ ನಾಮ ನೆನೆದರೆ ಸ್ವಾಮಿ ಶ್ರೀರಾಮನು ಪ್ರಸನ್ನನಾಗುವನು 1 ವಿಭುದಪ್ರಿಯತೀರ್ಥ ಗುರುವರ್ಯರು ಬಂದಾ ದುರ್ಜನರ ಮನವನು ಜಯಿಸುವರು ಮಹಾನುಭಾವರು ತರ್ಕನ್ಯಾಯ ವೇದಾಂತ ನಿಪುಣರು ಮಹಾಗುಣವಂತರು 2 ವಿದ್ಯಾಪುಣ್ಯತೀರ್ಥ ಶ್ರೀಪಾದಂಗಳವರು ಬಂದ ಸೇವಕರಿಗೆ ಬ್ರಹ್ಮವಿದ್ಯಾ ಪಾಲಿಸುವರು ರ್ದುಜನರ ದುರ್ಬುದ್ಧಿ ಒದ್ದಿ ಕೆಡಹುವವರು 3 ವಿಶ್ವೇಂದ್ರತೀರ್ಥರು ಈ ಗುರುವರ್ಯರು ವಾದಿರಾಜರ ಪೂಜಿಸುವರು ಜಗಕೆ ಸುಖವ ಸುರಿಸುವರು ಭೂತಪ್ರೇತಪಿಶಾಚಾದಿ ಮಾಡುವರು ಭಕ್ತರಘ ಕಡಿವರು4 ಇವರು ಭವಸಮುದ್ರವ ನೀಗಿಸುವರು ಶಿಷ್ಯರಿಗ್ಹರುಷ ಪಡಿಸುವುದು ಆನಂದದಿಂದಲ್ಲಿ ಹೃನ್ಮಂದಿರದಲಿ ಇಂದಿರೇಶನ ನೋಡುವರು 5 ರಘುಮಾನ್ವತೀರ್ಥ ಗುರುವರ್ಯರು ಲೋಕಮಾನ್ಯರು ಭಕ್ತರಿಗತಿಪ್ರಿಯರು ಮಹಾನುಭಾವರು ಅನ್ನದಾನದಲಿ ದೈನ್ಯರು ಆನಂದ ಭರಿತರು ಸುರರಿವರು 6 ಲಕ್ಷ್ಮೀಂದ್ರತೀರ್ಥ ಶ್ರೀಗಳವರು ಇವರು ತಮ್ಮ ತುಷೆಯೊಳಗಿಟ್ಟುಕೊಂಡು ರಕ್ಷಿಸುವರು ಲಕ್ಷ್ಮೀರಮಣನ್ನ ಪಾದಾ ಅಪೇಕ್ಷೆಯ ಮಾಡುಸುವರು ಹರಿಯ ಭಜಿಸುವರು 7 ವಿಶ್ವಮಾನ್ಯತೀರ್ಥ ಈ ಗುರುವರ್ಯರು ಬಂದ ಭೂಸುರರಿಂದ ಅನುವಾದ ಮಾಡುವರು ನೋಡುವರಿಗಾನಂದ ಪಡಿಸುವರು ಸುಜ್ಞಾನ ಯತಿವರ್ಯರು 8 ಅಷ್ಟಮಠದ ಯತಿಗಳ ಮಹಿಮೆಯನ್ನು ನಿಷ್ಠೆಯಿಂದಲಿ ಪೇಳುವನು ಅವನು ಸುರನು ಇವರ ದೋಷಿ ಎಂದವರನೇ ನರಕಾಧಿ ಬಾಧಿಸುವುದು ಕೃಷ್ಣನ ಪೂಜಿಸುವರು 9
--------------
ಕಳಸದ ಸುಂದರಮ್ಮ
ದಾಸರಿಗುಂಟೆ ಭಯಶೋಕ ಪ ವಾಸುದೇವನ ಸದಾ ಸ್ಮರಿಸುವ ಹರಿ ದಾಸರಿಗುಂಟೆ ಭಯಶೋಕ ಅ.ಪ. ಕಾಮಧೇನು ವರ ಕಲ್ಪವೃಕ್ಷ ಚಿಂ ತಾಮಣಿ ಕೈ ಸೇರಿದಕಿಂತ ನಾಮತ್ರಯದಿಂದಪ್ಪುದು ಸುಖವು ಸು ಧಾಮನೆ ಸಾಕ್ಷಿದಕೆಂಬ ಹರಿ 1 ರಾಮಚಂದ್ರ ಶಬರಿ ತಿಂದೆಂಜಲ ಜಾಮಿಳ ಮಾಡ್ದ ಕುಕರ್ಮಗಳ ಧೂಮಕೇತು ತಾ ಭುಂಜಿಸುವಂದದಿ ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ 2 ನೇಮ ಮಂತ್ರ ಜಪ ದೇವತಾರ್ಚನ ಸ ಕಾಮುಕವಾಗಲು ತ್ಯಜಿಸುತಲಿ ಧೀಮಂತರಾಗತಿಪ್ರಿಯವಾಗಲು ಬಹು ತಾಮಸ ಕರ್ಮವ ಮಾಳ್ಪುವೆಂಬ ಹರಿ 3 ಏನು ಮಾಡಿದಪರಾಧವ ಕ್ಷಮಿಸುವ ಏನು ಕೊಟ್ಟುದನು ಕೈಗೊಂಬ ಏನು ಬೇಡಿದಿಷ್ಟಾರ್ಥವ ಕೊಡುವ ದ ಯಾನಿಧಿ ಅನುಪಮನೆಂಬ ಹರಿ 4 ಪ್ರಹ್ಲಾದವರದ ಪ್ರಕಟನಾಗದಲೆ ಎಲ್ಲರೊಳಿಪ್ಪನು ಪ್ರತಿದಿನದಿ ಬಲ್ಲಿದವರಿಗೆ ಬಲ್ಲದ ಜಗನ್ನಾಥ ವಿಠ್ಠಲ ವಿಶ್ವವ್ಯಾಪಕನೆಂಬ ಹರಿ 5
--------------
ಜಗನ್ನಾಥದಾಸರು
ಧೀರ ಕುಮಾರ ಮಾರಾವತಾರ ಪಾಹಿ ತ್ರ್ಯಂಬಕನ ಕುಮಾರ ಪ ನಿನ್ನಲಿ ದೇವಸೈನ್ಯದ ಭಾರ ಗಿರಿಜಾದೇವಿಯ ಮೋಹದ ಕುವರ ಪೊರೆಯೊ ಎನ್ನನು ಕರುಣಾಸಾಗರ 1 ಅಮರಸೇನೆಗೆ ನೀನಗ್ರೇಸರ ಭೂಸುರ ಹತ್ಯಾ ಪಾಪಸಂಹಾರ ನಮಿಸುವರಿಗಿಷ್ಟ ಫಲವೀವ ವೀರ 2 ವಿಪ್ರಜನರಿಗತಿಪ್ರಿಯ ವಲ್ಲೀಸೇನೆಗೆ ಪ್ರಾಣಪ್ರಿಯ ಚಕ್ರಾಭಿಮಾನಿ ಮೂರುತಿಯಾಗುತಿರುವಿ 3
--------------
ವಿಶ್ವೇಂದ್ರತೀರ್ಥ
ನೆರೆನಂಬಿ ಪಡೆಯಿರೊ ಹಿತವ ನಮ್ಮಗುರು ಮಧ್ವಮುನಿಯ ಸಮ್ಮತವ ಪ. ತ್ರೇತೆಯೊಳಂಜನೆತನಯನಾಗಿಸೀತಾರಮಣ ರಘುಪತಿಗತಿಪ್ರಿಯದೂತತನದಿ ಖಳತತಿಯ ಕೊಂದುಖ್ಯಾತಿ ಪಡೆದ ಹನುಮಂತನಾದ ಯತಿಯ1 ದ್ವಾಪರದಲಿ ಭೀಮನೆನಿಸಿ ಪಾಂಡು-ಭೂಪನರಸಿ ಕುಂತಿ ಉದರದಿ ಜನಿಸಿಶ್ರೀಪತಿಗರ್ಥಿಯ ಸಲಿಸಿ ದೈತ್ಯ-ರೂಪ ನೃಪನ ಕೊಂದ ಮುನಿಪನ ಭಜಿಸಿ2 ಕಲಿಯುಗದಲಿ ಯತಿಯಾಗಿ ಈಇಳೆಯ ದುಶ್ಶಾಸ್ತ್ರವ ಜರಿದವರಾಗಿಕುಲಗುರು ಮಧ್ವಪತಿಮುನಿಯೋಗಿ ನಮ್ಮಬಲು ಹಯವದನನ ಬಂಟನೆಂದು ಬಾಗಿ3
--------------
ವಾದಿರಾಜ
ನೋಡಿರಯ್ಯ ಶ್ರೀರಾಮನ ಮೂರ್ತಿಯ ಪಾಡಿರೊ ಮಹಿಮೆಯನು ಪ ಅಗಣಿತ ಮಹಿಮನು ತ್ರಿಗುಣ ವರ್ಜಿತನು ಸುಗುಣೇಂದ್ರತೀರ್ಥರಿಂದ ಬಗೆಬಗೆ ಪೂಜೆಗೊಂಬ 1 ಸಂಜೀವವನು ತಂದ ಅಂಜನಸುತನಯ್ಯ ನಂಜನಗೂಡೊಳಿಪ್ಪ ಕಂಜಾಕ್ಷಕರುಣಿಯ 2 ವಾರಿಜ ಭವಪಿತ ಮಾರುತ ಗತಿಪ್ರಿಯ ವಾರಿಧಿಬಂಧಕ ಶ್ರೀರಮಾಧವನನ್ನು ಮಂಗಳ ಪುರದೊಳು ಮಂಗಳವಾರದಿ ಮಂಗಳದಿ ಮೆರೆದನಂಗನಪಿತನನ್ನು 3 ವರ ರಾಘವೇಂದ್ರರ ಕರುಣಾಗ್ರೇಸರ ಶ್ರೀವತ್ಸಾಂಕಿತನಾದ ಅರವಿದೂರನನ್ನು 4
--------------
ಸಿರಿವತ್ಸಾಂಕಿತರು
ಬಾರೊ ಮಹೇಶತನಯ ಗಣೇಶ ವರ ವಿಷ್ಣುಪದಕÀಭಿಮಾನಿ ವಿಘ್ನೇಶ ಪ ನಿನ್ನ ಪೂಜಿಸಿ ಧರ್ಮರಾಜನು ಗೆದ್ದ ನಿನ್ನ ಪೂಜಿಸದೆ ದುರ್ಯೋಧನ ಬಿದ್ದ ನಿನ್ನ ಪೂಜಿಸಿ ರಾಮ ಸತಿಯನೆ ಪಡೆದ ನಿನ್ನನರ್ಚಿಸದ ದಶಕಂಠನು ಕೆಟ್ಟ 1 ಸುರಮುಖ್ಯರೆಲ್ಲರು ನಿನ್ನ ಪೂಜಿಪರು ಪರಮಾತ್ಮನಿಗೆ ನೀನು ಮರಿಮಗನಿರುವಿ ಸುರಮುನಿ ದಿತಿಜಾದಿಗಳಿಗತಿಪ್ರಿಯನೆ ಸರುವರಿಂದಲು ಮೊದಲು ಪೂಜೆಗೊಂಬನೆ 2 ರಾಜೀವಾಕ್ಷಗೆ ಸತ್ಯಾದೇವಿಯೊಳ್ಜನಿಸಿ ಮೂಜಗದಲಿ ನೀನು ಪೂಜ್ಯನೆಂದೆನಿಸಿ ಕಂಜಜತನಯನ ಹೆಮ್ಮಗ ಕಂಡ್ಯಾ 3
--------------
ವಿಶ್ವೇಂದ್ರತೀರ್ಥ
ಯಾತಕೆ ಮರೆತೆನ್ನ ಯತಿಕುಲ ತಿಲಕನೆ ಪ್ರೀತಿಯ ಬಯಸುತ ಬಂದೆ ಪ ವಾತಸುತಗತಿಪ್ರಿಯ ದೂತನೆ ನಾಥನೀನೆಂತೆಂದು ನಂಬಿದೆ ಖ್ಯಾತಗುರು ಶ್ರೀ ರಾಘವೇಂದ್ರನೆ ಅ.ಪ. ದೇಶದೇಶದಿ ಬರುವ ದಾಸಜನರÀಘ ನಾಶಗೈಸಿ ಪೊರೆವೊ ದಾಶರಥಿ ಕಿಂಕರಾ ಶೇಷಶಯನನ ದೋಷ ಜ್ಞಾನ ವಿಶೇಷದಿಂದಲಿ ನ್ಯಾಸಮಾಡಿದೆ ಭೂಸುರೋತ್ತಮ 1 ಛಲದಿ ಭಕ್ತಿಯ ಮಾಡಿ ಒಲಿಸಿ ಹರಿಯ ಪಾದ ಲಲಿತಕೀರ್ತಿಲಿ ಮೆರೆದೆ ಭಳಿರೆ ಭಳಿರೆ ಗುರುವೇ ಗೊಲ್ಲಕೃಷ್ಣನ ಚೆಲ್ವ ನಾಟ್ಯದಿ ನಿಲ್ಲಿಸಿದ ನಿನಗೆಲ್ಲಿ ಸರಿಯೈ ನಲ್ಲ ಯತಿವರ ಕಾಲಿಗೆರಗುವೆ ಶೀಲಭಕುತಿಯ ಪಾಲಿಸೀಗಲೆ 2 ವ್ಯಾಸಮುನಿಯು ಎನಿಸಿ ಶ್ವಾಸಮತವ ಮೆರೆಸಿ ದೋಷ ಹರಿಸಿ ಧೊರೆಗೆ ದಾಸ ದೀಕ್ಷೆಯ ತೋರ್ದೆ ಈಶದಾಸರ ಭೇದ ವಾದವ ಆಶುಕವಿತದಿ ವಿಶದಪಡಿಸಿದೆ ಶ್ರೀಶಶಯನನಾವೇಶ ಸಂಯುತ ಭೇಶಕಾಂತಿ ವಿಶಾಲಕರುಣಿಯೆ 3 ದಾತ ಈತನೆಂಬ ಖ್ಯಾತಿ ಬಿರುದು ನಿನಗೆ ಪ್ರೀತಿಯಿಲ್ಲವೇ ಗುರುವೇ ಜೋತು ಬಂದೆ ಅಡಿಗೇ ಬೋಧೆಯ ನೀತಿ ಪೇಳಿದೆ ಏತಕೀತಡ ಮಾತಲಾಲಿಸು ದೂತನಿನ್ನವ ಪೂತಕಾಯನೆ4 ಪರಮ ಭಕ್ತರ ವೃಂದ ನಿರುತ ನಮಿಪ ಚೆಂದ ಅರಿಯೆ ವರ್ಣನೆ ಎಂದ ಸುರಿಸು ಭಕ್ತಿಯ ಗಂಧ ಸೂರಿ ಬೀರಿಕರುಣವ ಭಾರತೀಶನ ಸಾರಶಾಸ್ತ್ರದಿ ತೋರು ತತ್ವಾರ್ಥ 5 ಲೋಕ ಹರಕೆ ನೀಡಿ ಸಾಕಿ ಸಲಹೆ ಹೆಜ್ಜೆ ನೂಕಿ ದುರಿತರಾಶಿ ಸಾಕುಹರಿಯ ತೋರಿ ಶ್ರೀಕರಾರ್ಚಿತ ಪಾದಪಲ್ಲವ ಪಾಕನಾಶನ ಏಕ ವೀರನ ನಾಕ ಋಷಿಗತಿಪ್ರಿಯ ಶಿಷ್ಯನೆ 6 ಪಾಹಿ ಜ್ಞಾನದ ಖಣಿಯೆ ಪಾಹಿ ಭಕ್ತರ ನಿಧಿಯೆ ಪಾಹಿ ಮತಿಮತಸ್ಥಂಭ ಪಾಹಿ ಶ್ರೀ ಹರಿಯ ದೂತ ಪಾಹಿಸುಗುಣೋದಾರ ಮಹಿಮನೆ ಪಾಹಿನತಜನ ಭಾರವಹಿಪನೆ ಪಾಹಿಜಯಮುನಿ ವಾಯುವಂತರ ಗೇಹ ಸಿರಿಕೃಷ್ಣವಿಠಲ ಭಜಕ 7
--------------
ಕೃಷ್ಣವಿಠಲದಾಸರು
ನೆನೆಯಿರೊ ಭಕುತ ಜನರು-ಅನುದಿನವೂನೆನೆಯಿರೊ ಭಕುತ ಜನರುಗಳು ಪಘನಮಹಿಮನ ಸೇವೆಯ ಮಾಡಿದರಾಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪಒಂದು ಯುಗದಿ ಹನುಮಂತಾವತಾರನಾಗಿಬಂದು ನೆರೆದಯೋಧ್ಯಾಪುರಕಾ ||ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ 1ವಾಯು ಕುಮಾರಕ ದ್ವಾಪರದಲಿ ಭೀಮ-ರಾಯನೆಂದೆನಿಸಿದ ಕೌರವ ಬಲದಿ ||ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ 2ಕಾಯಜಪಿತನ ಮುಂದೆ ಕೌರವರ ತಂದು ರಾಜ-ಸೂಯಯಾಗವ ಮಾಡಿದ ಬಲವಂತ ||ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ 3ಗುರುಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-ಕರುಣಾಕರನಾಗಿ ಶರಣರ ಪೊರೆವ ||ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ 4ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿಪಂಕಜನಾಭಶ್ರೀ ಪುರಂದರವಿಠಲನಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ 5
--------------
ಪುರಂದರದಾಸರು
ಶ್ರೀ ಕಂಚಿ ಕಾಮಾಕ್ಷಿ82ಶರಣು ಶರಣು ಶರಣು ಶರಣು ಕಾಮಾಕ್ಷಿಶರಣು ಮೋಹಿನಿಮಾವಾಣಿಶರ್ವಾಣಿಪಹರಿಸಿರಿಸರಸ್ವತಿ ಸಹ ಪ್ರಜ್ವಲಿಸುವೆಗಿರಿಜೆ ಶರಣು ಕಂಚಿನಿಲಯೆ ಸತತಕಾಯೆ ಅ ಪಏಕಾತ್ಮಾನಂದಮಯನಿಖಿಳಗುಣಾರ್ಣವಜಗಜ್ಜನ್ಮಾದಿಗಳಿಗೆ ಮುಖ್ಯ ಕಾರಣೆ ವ್ಯಾಪ್ತೆಅಕಳಂಕ ಪುಂಸ್ತ್ರೀಗಾತ್ರೆ ಚಿನ್ಮಯೆ ವೃಂದಾರಕರಿಗೆಪೀಯೂಷಕರುಣಿಸಿ ಉಣಿಸಿದೆ1ಭಾಮಾ ರುಕ್ಮಿಣಿ ಸೀತಾ ಸೋಮಸೋದರಿ ರಮೆಕಮಲಾಸನಾದಿ ಸುಮನಸವಂದಿತೆ ತ್ರಾತೆಕಮಲನಾಭನ ಸೇವೆ ವನಮಾಲೆ ಚಾಮರಾದ್ಯಮಿತ ರೂಪದಿ ಮಾಳ್ಪ ಮಹಾಲಕ್ಷ್ಮೀ ನಮೋ ನಮೋ 2ಪಕ್ಷಿವಾಹನ ಸಾಕ್ಷಿ ಚೇತಾನಿರ್ಗುಣ ಅಧೋಕ್ಷಜ ಸರ್ವಾಂತರಾತ್ಮನ ತೀವ್ರಪ್ರೇಕ್ಷಿಸೊ ಜ್ಞಾನ ಭಕುತಿ ಮತಿ ಎನಗಿತ್ತುರಕ್ಷಿಸೆ ಸರಸ್ವತಿ ಫಣಿರ ಪಕ್ಷಿಪ ನುತೆ 3ಹೇಮಅಂಕುಶಪಾಶಇಕ್ಷುದಂಡವು ಪುಷ್ಪಕೋಮಲಹಸ್ತ 2 ನಾಲ್ಕಲ್ಲಿ ಶೋಭಿತವುಕಾಮಿತವರಪ್ರದೆ ಕಾತ್ಯಾಯನಿ ಉಮಾಹೈಮವತಿಯೆ ಶಿವೆ ದಯಮಾಡಿ ಪೊರೆಯೆನ್ನ 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ ತತ್ ಶಕ್ತಿ ಪ್ರದರ್ಶಯನ್ಸೂತ್ರವು ಮಣಿಗಳೊಳಂತೆ ಧಾರಕಹರಿವೃತತಿಜಪಿತ ವಿಷ್ಣು ಪ್ರಸನ್ನ ಶ್ರೀನಿವಾಸಗತಿಪ್ರಿಯತರೆ ಶಿವೆ ಸತತ ಪಾಲಿಸೆ ಎನ್ನ5
--------------
ಪ್ರಸನ್ನ ಶ್ರೀನಿವಾಸದಾಸರು