ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಚಿಂತಿಪೆ ನೀ ಎಲೆ ಕೋತಿಮನವೆ ಪಾದ ಗಟ್ಟ್ಯಾಗಿ ನಂಬದಲೆ ಪ ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1 ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2 ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ ಕರುಣದಕ್ಷಯವಿತ್ತು ಪೊರೆದ ಪರಮಾತ್ಮ ಕರುಣಾಳು ಶ್ರೀರಾಮ ಚರಣದಾಸರ ನೆರ ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3
--------------
ರಾಮದಾಸರು
ತಾಳು ತಾಳೆಲೊ ಕೋಪ ಜಾಲಮಾಡದೆ ಭೂಪ ಕೇಳಿಕೊಂಬೆನು ನಿನ್ನ ಕಾಲಪಿಡಿವೆನೊ ಪ. ಫಾಲಲೋಚನನುತ ಶ್ರೀಲೋಲ ನಿನ್ನನೇ ಕೇಳಿಕೊಂಬೆನು ಮಾತಕೇಳೋ ಕಾಳುಮಾಡದೆ ಮಾತ 1 ದುರುಳತನದಲಿ ನಿನ್ನ ತೆರೆದಕಣ್ಣಳನೆಂದು ಜರಿದು ಪೇಳಿದೆನೋ ತಿರುಗಿ ನಾ ನಿನ್ನ ಗಿರಿಯ ಬೆನ್ನೊಳು ಪೊತ್ತು ಮೆರೆಯುವ ದಡ್ಡನೆಂದೊರೆದ ಕಾರಣದಿಂದ 2 ಕೋರೆಯೊಳ್ ಕೊರೆದು ಕೊನ್ನಾರಿಗೆಡ್ಡೆಯ ತಿಂದು ಳೀರಡಿ ಮಾಡಿದೆ ಘೋರವಿಕ್ರಮನೆಂದು ದೂರಿದೆನದರಿಂದ3 ಹೆತ್ತತಾಯಿಯ ಕೊಂದು ಮತ್ತೆ ಕಪಿಗಳ ಕೂಡಿ ಚಿತ್ತವಸೆರೆಗೈದ ಮತ್ತನೆಂದೆನಲಾಗಿ 4 ಉತ್ತಮಸತಿಯರ ಚಿತ್ತವ ಕಲಕಿದ ಮತ್ತನೆಂದಾಡಿದೆನೋ ಮತ್ತೆ ಕುದುರೆಯನೇರಿ ಕತ್ತಿಯ ಪಿಡಿದೆತ್ತಿ ಸುತ್ತುವನಿವನುನ್ಮತ್ತನೆಂದುದರಿಂದ 5 ಪಿತ್ತವು ತಲೆಗೇರಿ ಮತ್ತೆ ಮತ್ತೆ ನಾನಿನ್ನ ಒತ್ತೊತ್ತಿಜರಿದೆನೊ ಚಿತ್ತಜಪಿತನೆ ಮತ್ತೊಮ್ಮೆ ಬೇಡುವೆ ಗತಿನೀನೆ ನಮಗೆಂದು ಪತಿಕರಿಸೆನ್ನಪರಾಧವ ಮನ್ನಿಸಿ 6 ಕಂದನಿವಗೈದ ಕುಂದುಗಳೆಣಿಸದೆ ತಂದೆ ಸಲಹಯ್ಯ ಶ್ರೀ ಶೇಷಗಿರಿವರ 7
--------------
ನಂಜನಗೂಡು ತಿರುಮಲಾಂಬಾ
ಪತಿತಪಾವನಾನಾಥ ಬಂಧು ಪ ಗತಿಶೂನ್ಯನಾಗಿ ಮನದಿ ಗತಿ ಏನೆಂದಳಲಿದೆನು ಗತಿನೀನೆ ಎಂಬಜನರ್ಯಾವತ್ತು ಭಾರವಹಿಸೀದಭವ 1 ಸತತ ನೀನೆ ಗತಿಯು ಎಂದು ನುತಿಪಭಕ್ತಿರ್ಹಿತದಬಂಧು ಬಟ್ಟೆ ವ್ಯರ್ಥ ದೇವ 2 ತಂದೆ ನೀನೆಗತಿಯೆನ್ನಲು ಬಂದಿ ಕಂಬ ಒಡೆದು ನೀನು ಮಂದರೋದ್ಧರ ಕರುಣಾಮಂದಿರನೆಂದು ನಂಬಿದೆ ಶ್ರೀರಾಮ3
--------------
ರಾಮದಾಸರು
ಯಾಕೋ ಶ್ರೀಹರಿಯೇ ನೀನೂ ಲೋಕನಾಯಕ ಭಕ್ತರೊಡೆಯನೆಂಬ ಬಿರುದು ಬೇಕಿಲ್ಲವೇನು ನಿನಗೆ ಪ ಹಿತವೇನೋ ನಿನಗೆ ಇನ್ನು ರಕ್ಷಿಸದ ಬಗೆ ಶಬ್ದಾವು ತೋರು ಇನ್ನು ಶ್ರೀಮಂದರಾದ್ರಿಧರ 1 ಸಾಧುಜನರ ಪೋಷಕಾ ಸಕಲರ ಪೊರೆಯದಿರೆ ಶುಕಮುನಿ ವಂದಿತ ಶ್ರೀ ರುಕ್ಮಿಣೀ ಪ್ರಿಯಹರೆ 2 ಗತಿನೀನೆಯಂದು ಇರಲು ಪಾದ ಅತಿ ಕಷ್ಟಕೊಡದಿರಲು ಹೀಗೆ ಕೆಡುವುದಿನ್ನು ಪತಿತಪಾವನ ಶ್ರೀಪತಿ `ಹೆನ್ನೆವಿಠ್ಠಲ' ಪಾಲಿಸದ ನೇಮ 3
--------------
ಹೆನ್ನೆರಂಗದಾಸರು
ನೀನೆಗತಿನೀನೆ ಮತಿ ನೀನೆ ಸ್ವಾಮಿನೀನಲ್ಲದನ್ಯತ್ರ ದೈವಗಳ ನಾನರಿಯೆ ಪನಿನ್ನ ಪಾದಾರವಿಂದದ ಸೇವೆಯನು ಮಾಡಿನಿನ್ನ ಧ್ಯಾನದಲಿರುವ ಹಾಗೆಮಾಡು||ನಿನ್ನ ದಾಸರ ಸಂಗದಿಂದ ದೂರಿಡದೆನಗೆಸನ್ಮಾರ್ಗವಿಡಿಸೊ ಜಗದೀಶ ಅಘನಾಶ 1ಕಮಲನಾಭಿಯೊಳು ಬೊಮ್ಮರ ಪುಟ್ಟಿಸಿದೆ ಹರಿಯೆಕಮಲಸಖಕೋಟಿ ಪ್ರಕಾಶ ಈಶಕಮಲಕರ ತಳದಿ ಅಭಯವನಿತ್ತು ಭಕುತರಿಗೆಕಮಲಾಕ್ಷನೆನಿಸಿದೆಯೊ ಕಮಲಾರಮಣನೆ 2ಶಿಶುಪಾಲ ದಂತವಕ್ತ್ರರ ಶಿರವ ಭೇದಿಸಿದೆಪಶುಪತಿಯ ಆಭರಣ ವೈರಿವಾಹನನೆ ||ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆವಸುಧೇಶಸಿರಿಪುರಂದರವಿಠಲರಾಯಾ3
--------------
ಪುರಂದರದಾಸರು
ನೀನೇ ಅನಾಥ ಬಂಧು, ಕಾರುಣ್ಯಸಿಂಧುನೀನೇ ಅನಾಥ ಬಂಧು ಪಪತಿಗಳೈವರಿದ್ದರೇನು ಸತಿಯ ಸಮಯಕ್ಕೊದಗಲಿಲ್ಲ ||ಗತಿನೀನೆಂದು ಮುಕುಂದನೆ ನೆನೆದರೆಅತಿ ಚಮತ್ಕಾರದಿಂದೊದಗಿದೆ ಕೃಷ್ಣ 1ಮದಗಜವೆಲ್ಲ ಇದ್ದರೇನುಅದರ ಸಮಯಕ್ಕೊದಗಲಿಲ್ಲ ||ಮದನನಯ್ಯ ಮಧುಸೂದನನೆಂದರೆಒದಗಿದೆಯೋ ತಡಮಾಡದೆ ಕೃಷ್ಣ 2ಶಿಲೆಯಕಾಯಕುಲಕ್ಕೆ ತಂದೆಬಲಿಯೆನ್ನದೆ ಸತ್ಪದವಿಯನಿತ್ತೆ ||ಇಳೆಯೊಳು ನಿನ್ನಯ ದಾಸರ ಸಲಹುವಚೆಲುವ ಮೂರುತಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ಬಂದಿದೆ ದುರಿತಘಸಂಗ ಶ್ರೀರಂಗಮಂದಮತಿಯೆಂದುಪೇಕ್ಷಿಸದುಳುಹೊ ಪ.ಒಲ್ಲೆನೆಂದರೆ ಬಿಡದೀ ಮನ ತಿಳಿದತ್ತೆಕ್ಷುಲ್ಲ ವೃತ್ತಿಯ ಸೇರಿ ಬಿಡಲೊಲ್ಲದುಕಲ್ಲುಗೊಂಡಿದೆ ಪುಣ್ಯಮಾರ್ಗಕ್ಕೆ ಇದರೊಳುಫುಲ್ಲನಾಭನೆ ಆವ ತೆರದಿಂದ ಸಲಹೊ 1ಕೆಂಡವ ಕೊಂಡು ಮಂಡೆಯ ಬಾಚುತಿದೆಪರಹೆಂಡಿರು ವಿತ್ತದಾಸೆಗೆ ತೊಡಕಿಕಂಡರೆ ಸೊಗಸದು ಭಕುತಿ ವೈರಾಗ್ಯವಪುಂಡರೀಕಾಕ್ಷನೆಗತಿನೀನೆ ಬಲ್ಲೆ2ಮೆಲ್ಲ ಮೆಲ್ಲನೆ ದುಷ್ಕರ್ಮವ ಸಾಧಿಸಿಬಲ್ಲಿದಜವನವರ ಬರಮಾಡಿದೆವಲ್ಲಭಪ್ರಸನ್ವೆಂಕಟ ಕೃಷ್ಣನಿಲ್ಲಿಸು ನಿನ್ನ ನಾಮವ ನಾಲಿಗೆಯಲಿ 3
--------------
ಪ್ರಸನ್ನವೆಂಕಟದಾಸರು