ಒಟ್ಟು 9 ಕಡೆಗಳಲ್ಲಿ , 6 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬದೆ-ನಾ-ಕೆಟ್ಟೆ ಪ ಅಂಬುಜಾಕ್ಷನೆ ನಿನ್ನಾ ಅ.ಪ ಗಳಿಸಿತು ಬಹುಕಾಲಾ ವಿಷಯಕೆ ಆಯ್ತೆಲ್ಲಾ ಅತಿಶಯ ವಾಯ್ತಾಶೇಗತಿಯನು ನಾಕಾಣೆ ಮತಿವಂತ ವ್ರತತತಿ ಜಪಜಪ ಹೋಮಕೆ ಗತಿದಾಯಕ ನಂಬದೆ 1 ಬಂದೆನು ಬಹುಸಾರಿ ನೊಂದೆನು ಈ ಪರಿಯೇ ಕಂದಿಸೆ ಯಮರಾಯಾ ಬಂಧುವು ಯಾರೈಯ ಇಂದಿರೆ ಮನಶಶಿ ಸುಂದರಮೂರ್ತಿ ಮಹೇಂದ್ರ ಪರಾತ್ಪರ ಪೂರ್ಣಾನಂದನ 2 ಮಾಡಿಹೆನಪರಾಧ ಪಾಡದೆ ತವ ಮಹಿಮೆ ಬೇಡುವೆ ನಿಜಭಕ್ತಿ ಓಡಿಸು ಈ ಬುದ್ಧಿ ಓಡಿಸೆ ಜಗ ಕಾಪಾಡುತಜೀವರ ಈಡು ದಿಕ್ಕಿಲ್ಲದ ಗೂಢ ಸ್ವತಂತ್ರನೆ 3 ಜ್ಞಾನವ ನಾಬಿಟ್ಟೆ ಹೀನನು ಹೇ ಧೊರೆಯೆ ಜ್ಞಾನದ ಶರಣೆಂಬೆ ಏನನು ಕೊಡಲಾರೆ ಆನತ ಬಂಧುವನಂತ ಗುಣಾರ್ಣವ ಶ್ರೀನಿಧಿ ಸೃಷ್ಟಿವಿನೋದವ ಗೈವನ4 ಬಂದಿಯು ನಾನೈಯಾ ಬಂಧಕ ನೀನೈಯ ಎಂದಿಗುನಾದಾಸಾ-ತಂಡಿಡು ನೀಲೇಸಾ ನಂದ ಮುನೀಂದ್ರ ಸುಮಾನಸ ಮಂದಿರ ನಂದದ ಶ್ರೀವರ “ಶ್ರೀ ಕೃಷ್ಣವಿಠಲ”ನ5
--------------
ಕೃಷ್ಣವಿಠಲದಾಸರು
ಅ ಸಾಗಿ ಬಾರೋ ಗುರುರಾಘವೇಂದ್ರರಾಯ | ವರ ಸತ್ಕಲುಗೇಯ ಪ ಕೂಗುತ ಕರೆಯುವ ಭಾಗವತರ ಮೊರೆಯ ಲಾಲಿಸೋ ಮುನಿವರ್ಯ ಅ.ಪ ಪಾವನಘನ ವೃಂದಾವನ ಮಂದಿರನೆ ಸದ್ಗುಣ ಬಂಧುರನೇ ಪಾವಮಾನಿಮತಶರಧಿ ಚಂದಿರನೇ ಧರಸಮ ಕಂದರನೇ ಛಾವಣಿಪುರ ಸುಜನಾವಳಿ ಕೋರಿಕೆಯ ಗರೆಯಲು ಶುಭಕಾಯ 1 ಶರಣಜನರು ಮೈಮರೆದು ಕರೆಯಲಾಗಿ ನಿಲ್ಲದೆ ವರಯೋಗಿ | ಭರದಿ ಬಂದು ಕರಪಿಡಿಯುವ ಧೊರೆ ನೀನು ಎಂದರೀತೆವು ಸುರಧೇನು ಗತಿದಾಯಕ ನೀನೆಂದು ಭಜಿಪೆವು ದಯಾಸಿಂಧು 2 ಶಾಮಸುಂದರನ ಪ್ರೇಮವ ಪಡೆದಾತ ಜಗದೊಳು ಪ್ರಖ್ಯಾತ ನೇಮದಿ ಭಜಿಪರ ಕಾಮಿತ ಕೊಡುವಾತ ದೈಶಿಕ ಕುಲನಾಥ ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ 3
--------------
ಶಾಮಸುಂದರ ವಿಠಲ
ಅವರೆ ಕಾಯ್‍ಬೇಕು ಕಾಲದಿ ಅವರೇಕಾಯ್‍ಬೇಕು ಪ ಅವರಿಂದಲಿ ಮೋಕ್ಷಾದಿ ಸಾಧನವು ಅ.ಪ ಭಕ್ತರಿಗೆಲ್ಲಾ ಬಾಯ್ಸವಿಯಾದಾ- ಸಕ್ತಿಪುಟ್ಟಿಸುವ ಸರ್ವೋತ್ತಮವಾದ 1 ಇವರೆಲ್ಲ ಬೆಳೆದು ಬಿತ್ತಿ ವಿವರವಾಗಿ ಅಳದು ತವಕದಿ ಮೂಟೆಯ ಕಟ್ಟಿಟ್ಟಿದ್ದರೆ ಜವನವರೆಳೆಯುವ ಕಾಲಕ್ಕೊದಗುತ 2 ಹಿತರಾಗೀ ಅವರೆ ಮಾತಾ- ಗತಿದಾಯಕರಾಗಿ ಅವರೆ ಭೂ- ಸುತೆ ಗುರುರಾಮವಿಠಲರೀರ್ವರು 3
--------------
ಗುರುರಾಮವಿಠಲ
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು
ಲೌಕಿಕ ಏತಕ್ಕೆ ನಮಗೆ ಪ ಲೋಕೇಶ ಕೃಷ್ಣನ್ನ ಮರಿಸಿ ಕೆಡಿಸುವಂಥ ಅ.ಪ. ಸುಳ್ಳು ಹೇಳಲಿಬೇಕು ಕಳ್ಳನಾಗಲಿಬೇಕು ಮೆಲ್ಲನೆ ಸವಿಮಾತು ಆಡಿನಟಿಸಬೇಕು ಪುಲ್ಲನಾಭನ ಬಿಟ್ಟು ಹುಲ್ಲುಮಾನವನನ್ನು ಕಾಲ ಕಳಿಸುವಂಥ 1 ಗಡ್ಡ ಬೋಳಿಸಬೇಕು ದುಡ್ಡುಗಳಿಸಬೇಕು ಬಡ್ಡಿಗೆ ಕೊಡಬೇಕು ದೊಡ್ಡ ಮನೆಯ ಕಟ್ಟಿ ಅಡ್ಡಿಯಿಲ್ಲದೆ ಮೆರೆದು ದೊಡ್ಡವನಾಗಬೇಕು ಹೆಡ್ಡಮಂದಿಯಲಿರಿಸಿ ಗೊಡ್ಡು ದೇಹವ ಮಾಳ್ವ 2 ಸತಿಸುತ ಧನಗಳನೆ ಗತಿ ದೈವನೆನಬೇಕು ಹಿತದಿಂದ ದುಡಿಯುತ ಸತಿಯರಿಗಿಡಬೇಕು ಗತಿದಾಯಕ ನಮ್ಮ “ಶ್ರೀ ಕೃಷ್ಣವಿಠಲ”ನ್ನ ಶಾಸ್ತ್ರನೇತ್ರದಿ ನೋಡೆ ಪುರಸೊತ್ತು ಕೊಡದಂಥ 3
--------------
ಕೃಷ್ಣವಿಠಲದಾಸರು
ವಂದಿಸುವೆನನವರತ ಇಂದಿರೇಶಾ ಪ ನೊಂದು ಬಳಲಿದೆನಯ್ಯ ಸಲಹೋ ಶ್ರೀಶಾ ಅ.ಪ ಇಂದು ನರಜನುಮದೊಳು ನೊಂದೆನಯ್ಯ ಮುಂದಿನಾ ಜನುಮಗಳ ಸಂದಣಿಗಳೊಳು ನಿನ್ನ ಸುಂದರ ಪಾದಾಂಬುಜವನೆಂದೆಂದು ತೋರೆಂದು1 ನರಜನ್ಮ ಹಿರಿದೆಂದು ಅರಿತವರು ಪೇಳುವರು ನರನಾಗಿ ನಾ ಜನಿಸಿ ಗರುವದಿಂದಾ ಸಿರಿಯಾಸೆಯಿಂದ ಮದ ಪರವೈರ ಲೋಭಗಳ ದುರಿತಗಳನಾರ್ಜಿಸಿದೆ ಪೊರೆಯೊ ದೇವ 2 ಕಡುಪಾಪ ಕೂಪದೊಳಗಡಗಿರ್ಪೆನೈ ಹರಿಯೆ ಅಡಿಗಳಿಗೆ ಎಡೆಯಿಲ್ಲ ನುಡಿವರಿಲ್ಲಾ ಪಿಡಿವುದಕೆ ತೃಣವಿಲ್ಲ ದಡಕೆ ದಾರಿಯು ಇಲ್ಲ ತಡವೇಕೆ ಎನ್ನ ಕೈಪಿಡಿಯೊ ಗೋಪಾಲ 3 ಖಗರಾಜ ಪೊತ್ತಿಹನು ಸುಗತಿದಾಯಕನೆಂದು ಹೊಗುಳುವವು ಶೃತಿ ಶಾಸ್ತ್ರ ನಗಧರನೆ ನಿನ್ನತಾ ನಗಪುತ್ರಿ ನುತಿಸಿಹಳು ನಗಬೇಡವೈ ಪಾದಯುಗಗಳನು ತೋರೆಂದು4 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲಿ ಮುನ್ನಿಗಿಂತೆಂಟುಮಡಿ ಜನುಮ ಬರಲಿ ಮುನ್ನ ನಾವಾರ್ಜಿಸಿದ ಘನಪಾಪನಶಿಸಲಿ ಚೆನ್ನ ಮಾಂಗಿರಿವಾಸ ನನ್ನ ಹೃದಯದೊಳಿರಲಿ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶರಣನ್ನ ಮಾತು ಲಾಲಿಸೊ ಪ ಭವ ಕರವ ಪಿಡಿದು ಪೊರೆ ಎಂದು ನಿನ್ನ ನಾ ಕರೆವೆ ಬಾಯ್ದೆರೆವೆ ಆಲ್ವರಿವೆ ನತಜನ ಸುರತರುವೆ ಅ.ಪ ಮಧ್ವಮುನಿ ಸುಮತೋದ್ಧಾರಕ ಯತಿಕುಲ ತಿಲಕ ಪಾವಕ | ವಿದ್ವತ್ ಜನತತಿ ಪಾದ ಪದ್ಮಕೆ ನಮಿಸುವೆ ಶುದ್ಧ ಸುಜ್ಞಾನವ ನೀಡೊ ಅಘದೂಡೋ ಕೃಪೆ ಮಾಡೋ | ಸುತನೆಂದು ನೋಡೋ 1 ವಿರಚಿಸಿ ಗ್ರಂಧತ್ರಯವ | ಬೋಧಿಸಿ ಭೇದ ಪೊರೆದಿ ದ್ವಿಜ ಪರಿವಾರವ | ನೆರೆನಂಬಿದ ಭೂಪಗೆ ಧಾವಿಸುತ ಭರದಿ ಬರುವ ಕುಹಯೋಗ ಕಂಟಕವ ದಯದಿ ನೀತರಿದಿ | ಸುಖಗರೆದಿ ಧಾರುಣಿಯೊಳು ಮೆರಿದಿ 2 ವಂದಿಪೆ ಸುಸುಗತಿದಾಯಕ ಶ್ರೀವರ ಶಾಮ ಸುಂದರ ಕೃಷ್ಣೋಪಾಸಕ ತಂದೆ ಎಂದು ನಿನ್ನ ಪೊಂದಿ ಪ್ರಾರ್ಥಿಸುವೆ ಬಂದು ಜವದಿ ಪುರಂದರದಾಸರ ಪ್ರಿಯಾ 3
--------------
ಶಾಮಸುಂದರ ವಿಠಲ
ಸದಾಶಿವ ದೇವ ಪಾಹಿ ಶ್ರೀ ವಿಶ್ವನಾಥಸದಾಶಿವ ದೇವ ಪಾಹಿ ಪ ಆದಿ ನಿಷೇವಿತ ರಜತಧರಾಧರವೇದನಿಧೇಕಿಲ ಸುರಪ್ರವರ 1ಅಮಿತ ಗುಣಾಲಯ ಅಂಡ ವಿಭೂಷಣಬಹುಮುಖ ಬಹುಪದ ಬಹುನಯನ 2ವಿಧುಕರರಾಜಿತ ಮುಕುಟ ಮಹೇಶ್ವರಕುಧರಸುಖಾಕೃತಸುಖವಿಭವ 3ಪರ್ವತರಾಜ ಪ್ರಥಮ ಸುತಾವರಶರ್ವ ಸುರಾರಿ ವಿರೋಧಿ ಶರ 4ಅಜಿನದ್ವಯ ಶುಭವಸನ ಮನೋಹರಸುಜನ ಶುಭೋದಯ ಕೃತಿ ಚತುರ 5ಸಪ್ತದ್ವಯಸಾಹಸ್ರ ಮಹಾಋಸದ್ಗತಿದಾಯಕ ಸುಜಿತಖರ 6ಪಕ್ಷಿಧ್ವಜ ಶ್ರೀ ವೆಂಕಟಗಿರಿ ಗೃಹಪಕ್ಷ ಕಕುದ್ಗಿರಿಸಾಂಬಶಿವ 7ಓಂ ಸಂಸಾರವೈರಿಣೇ ನಮಃ
--------------
ತಿಮ್ಮಪ್ಪದಾಸರು
ವೃಂದಾವನದಲಿ ನಿಂತ ಸುಯತಿವರನ್ಯಾರೇ ಪೆÉೀಳಮ್ಮಯ್ಯ ಪವಂದಿಪ ಜನರಿಗೆ ನಂದ ಕೊಡುವೊ ರಾಘ -ವೇಂದ್ರ ಮುನಿವರನೀತ ನೋಡಮ್ಮ ಅ.ಪಇಂದಿರೆ ರಮಣನ ಛಂದದಿ ಭಜಿಸ್ಯಾ-ನಂದದಲಿಹನ್ಯಾರೇ ಪೇಳಮ್ಮಯ್ಯಾನಂದತೀರ್ಥಮತ ಸಿಂಧುವರಕೆ ಬಾಲ -ಚಂದಿರನೆನಿಸಿಹನ್ಯಾರೇ ಪೇಳಮ್ಮಯ್ಯಮಂದಜನವಹರಿ ಕಂದುಗೊರಳರವೃಂದದಿ ಶೋಬಿಪನ್ಯಾರೆ ಪೇಳಮ್ಮಯ್ಯಹಿಂದೆ ವ್ಯಾಸಮುನಿ ಎಂದು ಕರೆಸಿದ ರಾಘ -ವೇಂದ್ರ ಗುರುವರ - ನೀತ ನೋಡಮ್ಮ 1ನತಿಸುವ ಜನರಿಗೆ ಸತಿಸುತರನು ಬಲುಹಿತದಲಿ ನೀಡುವನ್ಯಾರೇ ಪೇಳಮ್ಮಯ್ಯಪ್ರತಿದಿನ ತನ್ನನು ಮತಿಪೂರ್ವಕ ಬಲುತುತಿಪರ ಪಾಲಿಪನ್ಯಾರೇ ಪೇಳಮ್ಮಯ್ಯಮತಿಯುತಪಂಡಿತ ತತಿಯಭಿಲಾಷವಸತತ ಪೂರ್ತಿಪನ್ಯಾರೇ ಪೇಳಮ್ಮಯ್ಯಕ್ಷಿತಿಸುರರಿಗೆ ಸದ್ಗತಿದಾಯಕ ಮಹಯತಿಕುಲವರ ಗುರುರಾಯ ಕಾಣಮ್ಮ 2ಮಾತೆಯು ಸುತರಲಿ ಪ್ರೀತಿಗೊಳಿಸುವತಾತನ - ತೆರದಿಹನ್ಯಾರೇ ಪೇಳಮ್ಮಯ್ಯಪ್ರೇತನಾಥ ಮಹ ಭೂತಗಣಗಳಭೀತಿಯ ಬಿಡಿಸುವನ್ಯಾರೆ ಪೇಳಮ್ಮಯ್ಯಭೂತಳ ಜನಕೃತಪಾತಕಕಾನನವೀತಿಹೋತ್ರತೆರನ್ಯಾರೇ ಪೇಳಮ್ಮಯ್ಯದಾತಗುರು ಜಗನ್ನಾಥವಿಠಲ ನಿಜದೂತ ಜನಕ ಮಹದಾತನೀತಮ್ಮ 3
--------------
ಗುರುಜಗನ್ನಾಥದಾಸರು