ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ದೊರೆವುದೋ ಇಂತು ನರದೇಹ ಮುಂದೆ ಬಾಹ ದಿನ್ನೆಂದಿಗೆ ಇಚಿದು ಕರುಣಿಸಿ ಸಲಹುಯನ್ನ ಮು| ಕುಂದ ನಿನ್ನಂಘ್ರಿಗಳ ತೋರಿಸಿ 1 ಮೊದಲೇ ದುರ್ಲಭ ಮನುಷ್ಯಾಂಗವು ಅದರೊಳುತ್ತಮ ವರ್ಣದಿ ಉದಿಸಿ ಭಗವಂತಾಂಘ್ರಿ ದರುಶನ ವದಗಿ ಗತಿಗೈದಿಸುವ ಜನುಮವು 2 ಗುರುಹಿರಿಯರೆಂದೆರಿಸಿ ಅವರನು ಸ್ಮರಿಸಿ ಭಕ್ತಿಗೆ ಸೇರಿಸಿ ಮರೆಸಿ ಅನ್ಯವ ಬೆರೆಸಿ ನಿಜದೊಳು ತರಿಸಿ ತಾರಿಸುತಿಹ ಜನುಮವು 3 ಹರಿಯ ಲಾಂಛನ ಪೌಂಡ್ರವು ಕೊರಳು ತುಳಸಿಯ ಮಾಲೆಯಾ ಧರಿಸಿದಂಡಿಗೆ ವಿಡಿದು ಮಾಧವ ಚರಿತ ಪಾಡುತ ನಲಿವ ಜನುಮವು 4 ತನ್ನವರ ಪರಿಚಾರಕೆನಿಸುವ ಘನ್ನ ಬಿರದಿಗೆ ಪಾಲಿಸೀ ಸನ್ನುತನೆ ಗುರುಮಹಿಪತಿ ಪ್ರಭು ನಿನ್ನ ವಲುಮಿಂದಾದರಾಗಲಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಯವಿರಲಿ ದಯವಿರಲಿ ದಾಮೋದರ ಪ. ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣಅ.ಪ. ಹೋಗಿ ಬರುವೆನಯ್ಯ ಹೋದಹಾಂಗೆಲ್ಲಸಾಗುವವನಲ್ಲ ನಾ ನಿನ್ನ ಬಿಟ್ಟುತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದುಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ 1 ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-ಸಾಧ್ಯ ನಿನಗೆಂದು ನಾ ಬಂದವನಲ್ಲನದ್ಯಾದಿ ಕ್ಷೇತ್ರಮೂರ್ತಿಗಳಲ್ಲಿ ನಿಜ ಜ್ಞಾನ-ವೃದ್ಧಜನರ ಹುಡುಕಿ ನಿನ್ನ ತಿಳಿಯಲು ಬಂದೆ 2 ಸತತ ಇದ್ದಲ್ಲೆ ಎನ್ನ ಸಲಹೊ ಅದರೊಳಗಾಗಿಅತಿಶಯವು ಉಂಟು ವಿಭೂತಿಯಲ್ಲಿಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿಸ್ಮøತಿಗೆ ವಿಶೇಷ ಮಾರುತಿರಮಣ ನಿನ್ನ 3 ನೋಡಿದೆನೆ ನಾ ನಿನ್ನ ನೋಡದೆ ಎಂದೆಂದುಪಾಡಿದೆನೆ ಆರಾರು ಪಾಡದೊಂದುಮಾಡಿದೆನೆ ಅರ್ಚನೆಯ ಮೀಸಲಾದುದು ಒಂದುಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು 4 ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-ದಿಂದ ನಿನ್ನ ಬಳಿಗೆ ಇಂದಿರೇಶಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆಬಂಧನ ಕಡಿವ ಭಕುತಿಯು ಜ್ಞಾನ ನೀಡುವುದು 5 ಬಿನ್ನಪವ ಕೇಳು ಸ್ವಾಮಿ ಎನ್ನನ್ನೊಬ್ಬನ್ನೆ ಅಲ್ಲಎನ್ನ ಹೊಂದಿ ನಡೆವ ವೈಷ್ಣವರನಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿಘನಗತಿಗೈದಿಸುವ ಭಕುತಿ ಕೊಡು ಕರುಣದಿ 6 ರಾಜರಾಜೇಶ್ವರ ರಾಜೀವದಳನಯನಮೂಜಗದೊಡೆಯ ಮುಕುಂದಾನಂದಈ ಜೀವಕೀದೇಹ ಬಂದದ್ದಕ್ಕು ಎನಗತಿ ನಿ-ವ್ರ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ 7 ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರುಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊಚಿನುಮಯಮೂರುತಿ ಗೋಪಾಲವಿಠಲಘನಕರುಣಿ ಮಧ್ವಮುನಿಮನಮಂದಿರನಿವಾಸ8
--------------
ಗೋಪಾಲದಾಸರು
ಹೊಯ್ಯಂದ ಡಂಗುರವ ಪರಂಜ್ಯೋತಿ ಪ್ರಭೆಯ ಭಾಸಿಸುವದು ನೋಡಿ ಹೊ ಅರವ್ಹೆ ಅಂಜನವಾಗಿ ದೋರುತಲದಕೊ ಹೊ ಪರಮ ಪ್ರಕಾಶವು ಪರಿಣಾಮಿಸಿ ನೋಡಿ ಹೊ 1 ಅನಿಮಿಷನೇತ್ರವು ಬಾಗಿಸುವದು ನೋಡಿ ಹೊ ಮನವಿಗೆ ಆರುವಾಗಿ ದೋರುತಲದಕೊಹೊ ನೆನವ ಘನವಾಗಿ ಸೂಸೂತಲಿದಕೊ ಹೊ ಕನಸು ಕಥೆ ಅಲ್ಲ ಕಣ್ಣಾರ ಕಾಂಬೋದು ಹೊ 2 ನಿದ್ರಸ್ಯಕರ್ಣದ ಸಾದ್ಯಶ್ಯ ನೋಡೆಂದು ಹೊ ದ್ವಾದಶ ನಾದವು ಸಾಧಿಸಿ ಕೇಳುದು ಹೊ ಗಾದೆಯ ಮಾತಲ್ಲ ಭೇದಿಸಿ ತಿಳಿಯುದು ಹೊ ಓದುವ ಒಂಕಾರ ನಾದವು ತಿಳಿವದು ಹೊ 3 ಪ್ರಣಮ್ಯ ಮಂತ್ರದ ಪ್ರಚೀದಿನೋಡೆಂದು ಹೊ ಹನ್ನೊಂದು ಹತ್ತುಸಾವಿರದ ನೂರೆಂದು ಹೊ ಕಣ್ಣು ಮುಚ್ಚು ಕುಳಿತು ಮಣಿಯೆಣಿಸುವದಲ್ಲ ಹೊ ಪುಣ್ಯಗತಿಗೈದಿಸುವ ಜಪವಿದು ಹೊ 4 ವಿಶ್ವಹೊಳಗಲ್ಲ ಭಾಸ್ಕರ ಗುರುತಾನೆ ಹೊ ಆಶಿಗೈವವಗಿನ್ನು ಭಾಸಿಸಲರಿಯನು ಹೊ ಮೋಸ ಮುಕುರವಲ್ಲ ಭಾಸಿವ ಪಲ್ಲಟವಲ್ಲ ಹೊ ಹೊಯ್ಯೆಂದ ಡಂಗುರವ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು