ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷಯ ಗುಣಪೂರ್ಣ ಲಕ್ಷ್ಮೀರಮಣ ಪ ಕುಕ್ಷಿಯೊಳಗೆ ಜಗವಿಟ್ಟು ರಕ್ಷಿಪ ಸ್ವಾಮಿ ಈಕ್ಷಿಸಿ ಕರುಣ ಕಟಾಕ್ಷದಿ ಸತತ ಅ.ಪ. ಏಸೇಸು ಕಲ್ಪದಲ್ಲೂ ಈಶ ನೀನಿಹುದಯ್ಯ ದಾಸರು ಜೀವರ್ಕಳು ಕೃಪಾಳು ಕ್ಲೇಶ ಸುಖಂಗಳಿಗೆ ನೀನೆ ಸ್ವತಂತ್ರನೆಂದು ಸೂಸಿ ಪೇಳುತ್ತಲಿಹರು ಸಜ್ಜನರು ವಾಸುದೇವನೆ ಸರ್ವಾಸುನಿಲಯನೆ ಏಸೇಸು ಬಂದರು ದಾಸರ ಬಿಡದಿರು ನೀ ಸಲಹದೆ ಉದಾಸೀನ ಮಾಡಲು ಆಸರೆ ಯಾರಿನ್ನು ಶಾಶ್ವತ ವಿಭುವೆ 1 ನಿನ್ನಧೀನನÀವನು ನಿನ್ನ ದಾಸರ ಸೂನು ಎನ್ನುವ ಸಥೆಯಿಂದ ಮುಕುಂದ ನಿನ್ನನೆ ಬೇಡುವೆ ನಿನ್ನನೆ ಕಾಡುವೆ ಅನ್ಯಥಾ ಗತಿಗಾಣೆ ನಿನ್ನಾಣೆ ನಿನ್ನ ದಾಸರ ಪದವನ್ನು ಪಿಡಿದು ನಾ ನಿನ್ನನು ಸ್ತುತಿಸಿದೆನೆನ್ನುತ ಕೃಪೆಗೈದು ಬಿನ್ನಪ ಲಾಲಿಸಿ ಬನ್ನವ ಕಳೆದು ಘನ್ನ ಭಕುತಿಯಿತ್ತು ಧನ್ಯನ ಮಾಡೊ 2 ಶರಣರ ಮಹದೇವ ಶರಣರ ಬಿಡದೆ ಕಾವ ಶರಣರ ಉದ್ಧಾರ ಗಂಭೀರ ಶರಣ ರಕ್ಷಾಮಣಿ ಶರಣ ತ್ರಿದಶ ತರು ಶರಣ ಸುರಧೇನು ಎನಿಸಿನ್ನು ನಿರುತದಿ ಪೊರೆಯುವ ಬಿರುದಗಳರಿತು ಶರಣೆಂದು ನಿನ್ನಯ ಚರಣ ಕಮಲವನು ಮರೆಹೊಕ್ಕೆನು ಕಾಯೊ ಪರಮ ದಯಾಕರ ಕರಿರಾಜವರದ ಶ್ರೀಕಾಂತ ನಿಶ್ಚಿಂತ 3
--------------
ಲಕ್ಷ್ಮೀನಾರಯಣರಾಯರು
ಬಂದು ನಿಮ್ಮಡಿಗಳ ನಾಶ್ರಯಿಸಿದೆ ಪ್ರಭುವೆ ಭವ ಬಂಧನಗಳ ಬಿಡಿಸಿ ನೀ ಕಾಯೊ ಸದ್ಗುರುವೇ ಪ ಎಲ್ಲೆಲ್ಲಿಯೂ ತಿರುಗಿ ಕಾಯುವರ ಕಾಣದೆಲೆ ತಡಮಾಡದೆಮ್ಮಯ ದುಗುಡಗಳ ಪರಿಹರಿಸಿ ಕರುಣದಿಂದಲಿ ಕಾಯೊ ಗುರುರಾಘವೇಂದ್ರಾ 1 ನಿಶೆ ಹಗಲು ನಿನ್ನನು ಸ್ತುತಿಸಿ ಬೇಡುವೆ ಪ್ರಭುವೆ ಗತಿಗಾಣೆ ನಿನ್ಹರತು ಈ ಪೃಥುವಿಯೊಳಗೆ ಅತಿವ್ಯಥೆಯಲೀ ನೊಂದು ಮತಿಯಿಲ್ಲದಂತಿಹೆನು ತ್ವರಿತದಿಂದಲಿ ಕಾಯೊ ಹೇ ಗುರುರಾಜ ಪ್ರಭುವೇ 2 ಜಗವೆಲ್ಲ ನಿಮ್ಮ ಮಹಿಮೆ ಸಾರುತಿರುವುದ ಕೇಳಿ ಭರದಿಂದ ಬಂದೆನೋ ಗುರುರಾಘವೇಂದ್ರಾ ಇಂದೆಮ್ಮ ಅಪರಾಧಗಳ ಎಣಿಸದೆಲೆ ಸಲಹೈಯ್ಯಾ ಕಾರುಣ್ಯಮೂರ್ತಿ ಶ್ರೀ ಗುರುರಾಘವೇಂದ್ರಾ 3
--------------
ರಾಧಾಬಾಯಿ
ಮನ್ನಿಸೆನ್ನ ವೆಂಕಟರನ್ನ ಅನ್ಯಥಾ ಗತಿಗಾಣೆ ನಾ ಪ ಹಲವು ಜನುಮದಿ ಬಂದೆ ಬಲು ಪರಿಯಲಿ ನೊಂದೆ ತೊಳಲಿ ಬಳಲಿ ನಿಂದೆ ಸಲಹೊ ತಂದೆ 1 ವಾಸವ ವಂದಿತ ಕೇಶವ ಅಚ್ಯುತ ದಾಸರ ಮನ ಹಿತ ಬಾ ಶಾಶ್ವತ 2 ಲಕುಮಿಕಾಂತನೆ ಎನ್ನ ಉಕುತಿ ಲಾಲಿಸಿ ಘನ್ನ ಭಕುತಿ ಪಾಲಿಸೊ ಮುನ್ನ ಮುಕುತೀಶನೆ3
--------------
ಲಕ್ಷ್ಮೀನಾರಯಣರಾಯರು