ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮೂಲ್ಕಿಯ ಮಹಾಲಿಂಗೇಶನನ್ನು ನೆನೆದು) ಪಿಡಿಯೆನ್ನ ಕೈಯ ಜಗನ್ಮಯ ಪಿಡಿಯೆನ್ನ ಕೈಯ ಪ. ಪಿಡಿಯೆನ್ನ ಕೈಯ ನಿನ್ನಡಿದಾವರೆಯಲ್ಲಿ ದೃಢವಾದ ಮನವ ಬೆಂಬಿಡದೆನಗೀಯಯ್ಯ ಅ.ಪ. ಪಾಮರಮತಿಯ ಪಾಪಾತ್ಮರ ಸೀಮಾಧಿಪತಿಯ ಕಾಮುಕಪರದಾರಭ್ರಾಮಕತಾಮಸ- ಧಾಮನ ಕಪಟವಿಶ್ರಾಮ ಕುಧೀಮನ ವ್ಯೋಮಕೇಶ ಭಗತ್ಪದಾಶ್ರಿತನ ಮಮಕಾರದಲಿ ಪಾಲಿಸು ಹೈಮವತಿಪತಿ ಕಾಮಹರ ಸುತ್ರಾಮವಂದಿತ ಸೋಮಶೇಖರ 1 ದುಷ್ಟದುರ್ಜನನ ದುರಾಚಾರ ಭ್ರಷ್ಟಜೀವನನ ಮೆಟ್ಟಿದ ನೆಲಮುನಿಯುವನ ಕೃತಘ್ನ ಕ- ನಿಷ್ಟಕಾಯುಷ್ಯದ ಘಟ್ಟಿಚೇತನನೆನ್ನ ತಟ್ಟನೆ ದಯವಿಟ್ಟು ಸರ್ವಾಭೀಷ್ಟದಾಯಕನಾಗಿ ಕರುಣಾ- ದೃಷ್ಟಿಯಿಂದಲಿ ನೋಡು ಸನ್ಮನವಿಷ್ಟರಸ್ಥ ಶಿವಾಷ್ಟಮೂರುತಿ2 ಸತ್ಯಬಾಹಿರನ ಪ್ರಪಂಚ ಪ್ರ-ವೃತ್ತಿಯೊಳಿಹನ ಅತ್ಯಂತ ಪಾಪಿ ಕುಚಿತ್ತ ಮದಾಂಧನು- ನ್ಮತ್ತ ಮಾತಂಗವಿರಕ್ತಿವಿಹೀನನ ಎತ್ತಿ ಎನ್ನತ್ತಿತ್ತ ನೋಡದೆ ಮತ್ತೆ ಕಾವ ಸಮರ್ಥರಾರೈ ಸತ್ತ್ವನಿಧಿಸುರಮೊತ್ತ ಪೂಜಿತ ಮೃತ್ಯುಹರ ಶ್ರೀಕೃತ್ತಿವಾಸನೆ 3 ಎಣಿಸಲು ಬೇಡ ಎನ್ನಪರಾಧ ಗಣಿತಕ್ಕೆ ಕೂಡ ಗುಣಗಣನಿಧಿ ಲಕ್ಷ್ಮೀನಾರಾಯಣಸಖ ದಣಿಯಲೊಲ್ಲೆ ದಯಮಾಡೆನಗೀಗಲೆ ಫಣಿಪಕುಂಡಲ ಪಾರ್ವತೀಪತಿ ಪ್ರಣತಜನಮಂದಾರ ನಿರ್ಮಲ ಪ್ರಣವರೂಪನೆ ಮೌಕ್ತಿಕಾಪುರ ಮಣಿಮಹಾಲಿಂಗೇಶ ಬೇಗನೆ 4
--------------
ತುಪಾಕಿ ವೆಂಕಟರಮಣಾಚಾರ್ಯ
ಚರಣದಾಸರ ಸದುಹೃದಯ ನಿವಾಸನೆ ಸಿರಿರಾಮ ಪರಮ ಪಾವನೆ ವರಜಾಹ್ನವೀ ಜನಕನೆ ಸಿರಿರಾಮ ಪ ಶರಣಜನರ ಮೇಲ್ನುಡಿಯೋಳ್ಸಂಚಾರನೆ ಸಿರಿರಾಮ ನೆರೆನಂಬಿ ಭಜಿಪರ ಭವಮಲಹರಣನೆ ಸಿರಿರಾಮ ಕರುಣದೊದೆದು ಯುವತಿಕುಲವನುದ್ಧರಿಸದನೆ ಸಿರಿರಾಮ ವರದ ವಾಸುಕಿಶಾಯಿ ಜಗದೇಕ ಬಂಧುವೇ ಸಿರಿರಾಮ 1 ಧುರಧೀರವಾಲಿಯ ಗರುವನಿವಾರನೆ ಸಿರಿರಾಮ ಮರೆಬಿದ್ದ ಸುಗ್ರೀವನ ದು:ಖಪರಿಹಾರನೆ ಸಿರಿರಾಮ ಪರಮಭಕ್ತ್ಹನುಮಗೆ ಕರವಶನಾದನೆ ಸಿರಿರಾಮ ಶರಣುಬಂದಸುರಗೆ ಸ್ಥಿರಪಟ್ಟವಿತ್ತನೆ ಸಿರಿರಾಮ 2 ಶರಧಿಮಥನಮಾಡಿ ಸುರರ ರಕ್ಷಸಿದನೆ ಸಿರಿರಾಮ ಹರನಕೊರಳ ಉರಿ ಕರುಣದ್ಹಾರಿಸಿದನೆ ಸಿರಿರಾಮ ವರಗಿರಿನಂದನೆಮನ ಸೂರೆಗೈದನೆ ಸಿರಿರಾಮ ಸರುವದೇವರದೇವ ಅದ್ಭುತಮಹಿಮನೆ ಸಿರಿರಾಮ 3 ಕರಿಯ ರಕ್ಷಣೆಗಾಗಿ ಕಾಸಾರಕ್ಕಿಳಿದನೆ ಸಿರಿರಾಮ ತರುಣಿಮೈಗಾವಗೆ ಚರನಾಗಿ ನಿಂತನೆ ಸಿರಿರಾಮ ಚರಣದಾಸರಮನೆ ತುರಗವ ಕಾಯ್ದನೆ ಸಿರಿರಾಮ ಪರಮಭಾಗವತರನರೆಲವ ಬಿಟ್ಟಿರನೆ ಸಿರಿರಾಮ 4 ಅನುಪಮ ವೇದಗಳಗಣಿತಕ್ಕೆ ಮೀರಿದನೆ ಸಿರಿರಾಮ ಸನಕಸನಂದಾದಿ ಮನುಮುನಿ ವಿನಮಿತನೆ ಸಿರಿರಾಮ ವನರುಹ ಬ್ರಹ್ಮಾಂಡ ಬಲುದರದಿಟ್ಟಾಳ್ವನೆ ಸಿರಿರಾಮ ಮನಮುಟ್ಟಿ ಭಜಿಪರ ಘನಮುಕ್ತಿ ಸಾಧ್ಯನೆ ಸಿರಿರಾಮ 5
--------------
ರಾಮದಾಸರು
ಪೊಗಳಲಳವಾರಿಗೆ ಎಲೆ ದೇವ ನಿನ್ನ ನಿಗಮ ಆಗಮಾತೀತ ಗರುವರಹಿತನ ಪ ನೆಲೆಬುಡತುದಿ ಮೊದಲಿಲ್ಲದವನು ನೀ ಪ್ರಳಯ ಪ್ರಳಯಕ್ಕಾದಿ ಆದಿಯಾದವನು ನೀ ನಲಿಯುವಿ ನಲಿಯದೆ ಚಲಿಸುವಿ ಚಲಿಸದೆ ತಿಳಿಯದೆ ತಿಳಿಯುವಿ ವಿಲಸಿತ ಮಹಿಮ 1 ಆರಾರರಿಯದ ಮಹದಾದಿ ಅನಾದಿ ನೀನು ಸಾರ ಚರಾಚರಕ್ಕಾಧಾರರಾದವ ನೀ ಕೋರುವಿ ಕೋರದೆ ತೋರುವಿ ತೋರದೆ ಬಾರದೆ ಬರುವಿಯೊ ಮೀರಿದ ಮಹಿಮ 2 ಗುಣಿಸಿ ನೋಡಲು ತುಸುಗುಣ ತೊರೆದವ ನೀನು ಗಣಿತಕ್ಕೆ ನಿಲುಕದಕಲಂಕ ಮಹಿಮ ನೀ ಜನಿಸುವಿ ಜನಿಸಿದೆ ಕುಣಿಸದೆ ಕುಣಿಸುವಿ ಮಣಿಸುವಿ ಮಣಿಸದೆ ಅನುಪಮಮಹಿಮ 3 ತೊಡರೆಡರಿಗಡರದೆ ಕಡೆಯಲಾಡುವಿ ನೀನು ತೊಡರಿನೊಳಗೆ ಬಿಡದೆ ತೋರುವಿ ನೀ ನುಡಿಯಿಲ್ಲದೆ ನುಡಿಸುವಿ ನಡೆಯಿಲ್ಲದೆ ನಡೆಸುವಿ ಮಡಿಯಿಲ್ಲದೆ ಮಡಿಯೆನಿಪ ಕಡುಚಿತ್ರ ಮಹಿಮ 4 ಮೀಸಲು ಮಡಿರಹಿತಪಾವನ ನೀನು ಸಾಸಿರನಾಮದಿ ಕರೆಸಿಕೊಂಬುವಿ ನೀ ವಾಸಿಸದೆ ವಾಸಿಸುವಿ ಪೋಷಿಸದೆ ಪೋಷಿಸುವಿ ಶ್ರೀಶ ಶ್ರೀರಾಮ ದಾಸಜನರ ಸುಲಭ ನಿನ್ನ 5
--------------
ರಾಮದಾಸರು
ಸಿರಿವರನ ಕರುಣಕ್ಕೆ ಪಾತ್ರ ನಾನಾದೆ ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ ಪರಮಪ್ರಹ್ಲಾದರಿಗೆ ನಿರುತ ಶರಣೆಂದು 1 ಪನ್ನಂಗಶಯನ ಉನ್ನತ ಮಹಿಮೆಗಳ ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ ಗನ್ನಗತಕನಾದ ಅಣ್ಣನಿಗೆ ಮಹ ನೀತಿ ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು 2 ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ ವನಜನಾಭನ ಸೇವೆ ಮನುಮುಟ್ಟಿ ಗೈದು ಜನನಮರಣವ ಗೆಲಿದು ಘನಪದವಿ ಗಳಿಸಿದ ಹನುಮರಾಯರ ಪದಕೆ ಮಣಿದು ಶರಣೆಂದು 3 ತರಳತನದಲಿ ನಿಖಿಲ ಧರೆಭೋಗಗಳ ತೊರೆದು ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ ಪರಮಕಂಟಕ ಗೆಲಿದವರಿಗರಿತು ಶರಣೆಂದು 4 ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ ಭಕ್ತರೆನಿಸಿದ ಮಹ ನಿತ್ಯಾತ್ಮರ ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು 5
--------------
ರಾಮದಾಸರು
(ಮೂಲ್ಕಿಯ ಮಹಾಲಿಂಗೇಶನನ್ನು ನೆನೆದು)ಪಿಡಿಯೆನ್ನ ಕೈಯ ಜಗನ್ಮಯಪಿಡಿಯೆನ್ನ ಕೈಯ ಪ .ಪಿಡಿಯೆನ್ನ ಕೈಯ ನಿನ್ನಡಿದಾವರೆಯಲ್ಲಿದೃಢವಾದ ಮನವ ಬೆಂಬಿಡದೆನಗೀಯಯ್ಯ ಅ.ಪ.ಪಾಮರಮತಿಯ ಪಾಪಾತ್ಮರ ಸೀಮಾಧಿಪತಿಯಕಾಮುಕಪರದಾರಭ್ರಾಮಕತಾಮಸ-ಧಾಮನ ಕಪಟವಿಶ್ರಾಮ ಕುಧೀಮನವ್ಯೋಮಕೇಶಭಗತ್ಪದಾಶ್ರಿತನ ಮಮಕಾರದಲಿ ಪಾಲಿಸುಹೈಮವತಿಪತಿ ಕಾಮಹರ ಸುತ್ರಾಮವಂದಿತ ಸೋಮಶೇಖರ 1ದುಷ್ಟದುರ್ಜನನ ದುರಾಚಾರ ಭ್ರಷ್ಟಜೀವನನಮೆಟ್ಟಿದ ನೆಲಮುನಿಯುವನ ಕೃತಘ್ನ ಕ-ನಿಷ್ಟಕಾಯುಷ್ಯದ ಘಟ್ಟಿಚೇತನನೆನ್ನತಟ್ಟನೆ ದಯವಿಟ್ಟು ಸರ್ವಾಭೀಷ್ಟದಾಯಕನಾಗಿ ಕರುಣಾ-ದೃಷ್ಟಿಯಿಂದಲಿನೋಡುಸನ್ಮನವಿಷ್ಟರಸ್ಥ ಶಿವಾಷ್ಟಮೂರುತಿ2ಸತ್ಯಬಾಹಿರನ ಪ್ರಪಂಚ ಪ್ರ-ವೃತ್ತಿಯೊಳಿಹನಅತ್ಯಂತ ಪಾಪಿ ಕುಚಿತ್ತ ಮದಾಂಧನು-ನ್ಮತ್ತ ಮಾತಂಗವಿರಕ್ತಿವಿಹೀನನಎತ್ತಿ ಎನ್ನತ್ತಿತ್ತ ನೋಡದೆ ಮತ್ತೆಕಾವಸಮರ್ಥರಾರೈಸತ್ತ್ವನಿಧಿಸುರಮೊತ್ತ ಪೂಜಿತ ಮೃತ್ಯುಹರ ಶ್ರೀಕೃತ್ತಿವಾಸನೆ 3ಎಣಿಸಲು ಬೇಡ ಎನ್ನಪರಾಧ ಗಣಿತಕ್ಕೆ ಕೂಡಗುಣಗಣನಿಧಿ ಲಕ್ಷ್ಮೀನಾರಾಯಣಸಖದಣಿಯಲೊಲ್ಲೆ ದಯಮಾಡೆನಗೀಗಲೆಫಣಿಪಕುಂಡಲ ಪಾರ್ವತೀಪತಿ ಪ್ರಣತಜನಮಂದಾರ ನಿರ್ಮಲಪ್ರಣವರೂಪನೆ ಮೌಕ್ತಿಕಾಪುರ ಮಣಿಮಹಾಲಿಂಗೇಶ ಬೇಗನೆ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ