ಅಂಬಾ ಸರಸ್ವತೀ ದೇವಿ ಜಗ-
ದಂಬಾ ಸರಸ್ವತೀ ದೇವಿ ಪ.
ಅಂಭೋಜನಯನೆ ರೋ-
ಲಂಬಕುಂತಳೆ ಜಗ . . . . ಅ.ಪ.
ರುದ್ರಾದಿ ಸುರಕುಲ ಸಿದ್ಧಿಪ್ರದಾಯಕಿ
ಶುದ್ಧ ಸತ್ವಕಲಾಪೆ ಶ್ರದ್ಧಾಭಕ್ತಿಸ್ವರೂಪೆ 1
ಮಾತ್ರಾಸ್ವರವರ್ಣಮಾನಿ ವಾಣಿ ಕಲ್ಯಾಣಿ
ಸೂತ್ರಾರ್ಥಬೋಧಿನಿ ವಿಧಾತನ ರಾಣಿ 2
ಕ್ಷೀರಾಬ್ಧಿಶಾಯಿ ಲಕ್ಷ್ಮೀನಾರಾಯಣನ ಕರು-
ಣಾರಸಪೂರೆ ಸುವಿಚಾರೆ ಗಂಭೀರೆ3