ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜನೆ ಶ್ರೀ ರಾಮ ಭಜನೆ ಆಮ್ನಾಯ ವಿಸ್ತರ | ಭೂಮಾ ಗುಣಾರ್ಣವಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಪ ಶ್ರೀಶನೇ ವಿಭುದೇಶನೇ ||ಅಸುರಿ ವೃಷಹರ | ಶೇಷಾದ್ರಿ ಮಂದಿರಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಅ.ಪ. ಪೃಥ್ವಿಧರಾಧರ | ಸತ್ಯ ಮನೋಹರಭಕ್ತಾರ್ತಿ ಪರಿಹರ | ರಾಮ್ ರಾಮ್ ರಾಮ್‍ನಿತ್ಯನೇ ನಿರ್ಲಿಪ್ತನೇ ||ಶಕ್ತ್ಯಾದಿ ರೂಪಧರ | ಆಪ್ತರೊಳಗೆ ವರಭೃತ್ಯರ್ಗ ಭೀಷ್ವದ | ರಾಮ್ ರಾಮ್ ರಾಮ್ 1 ದಾನವ ಧ್ವಂಸನೆ | ಆನಂದ ಪೂರ್ಣನೆಆನಂದ ಮುನಿನುತ | ರಾಮ್ ರಾಮ್ ರಾಮ್‍ಶ್ರೀ ನಿಧೇ ಕರುಣಾಂಬುಧೇ ||ಮಾನುನಿ ವರದನೆ | ಮೌನಿಯ ಕಾಯ್ದನೆಜ್ಞಾನ ಸುಗಮ್ಯನೆ | ರಾಮ್ ರಾಮ್ ರಾಮ್ 2 ಈಶಾಹಿ ವಂದ್ಯನೆ | ವಾಸಿಷ್ಠ ಕೃಷ್ಣನೆವಸುದೇವ ತನಯನೆ | ರಾಮ್ ರಾಮ್ ರಾಮ್‍ಈಶನೇ ವರದೇಶನೇ ||ದಶಾಸ್ಯ ಕುಲವನ | ಕೃಶಾನು ಎನಿಪನೆದಾಶರಥಿüಯೆ ಪಾಹಿ | ರಾಮ್ ರಾಮ್ ರಾಮ್ 3 ಕಾಯ ಸೂರ್ಯ ವೀರ್ಯದಾತಪ್ರೇರ್ಯ ಪ್ರೇರಕ ಪಾಹಿ | ರಾಮ್ ರಾಮ್ ರಾಮ್ 4 ನೀರದ ನಿಭಕಾಯ | ವಾರಿಜಾಕ್ಷಿಗೆ ಪ್ರಿಯನಾರಿ ಚೋರಾರಿಯೆ | ರಾಮ್ ರಾಮ್ ರಾಮ್‍ಧೀರನೆ ಗಂಭೀರನೇ ||ಮೂರು ಲೋಕಗಳಲ್ಲಿ | ಆರುಂಟು ನಿನ್ನ ಸರಿಕಾರುಣ್ಯ ಮೂರುತಿ | ರಾಮ್ ರಾಮ್ ರಾಮ್5 ಪತಿ | ನಂಬೀದ ಭಕ್ತರಬೆಂಬಿಡದಲೆ ಕಾವ | ರಾಮ್ ರಾಮ್ ರಾಮ್ 6 ಜಗ ಪ್ರಾಣನೊಳಗೆ ಇದ್ದು | ಜಗವನ್ನು ಸೃಜಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್‍ಪ್ರಾಣನೇ ಜಗತ್ತ್ರಾಣನೇ ||ಅಗಜೆ ಪತಿಯೊಳಿದ್ದು | ಜಗವೆಲ್ಲ ಲಯಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್ 7 ಪ್ರಾಣನೀತಾನುಜ | ಪ್ರಾಣದಾತೃ ಹರಿಪ್ರಾಣಂಗೆ ಪ್ರಾಣನೆ | ರಾಮ್ ರಾಮ್ ರಾಮ್‍ಪ್ರಾಣನಾ ಆಲಿಗಂನಾ ||ನೀನಾಗಿ ಮಾಡಿ ಅವಗೆ | ಸಾಷ್ರ್ಣಿ ಮುಕ್ತಿಯನಿತ್ತೆಕಾಣೆ ಕಾರುಣ್ಯ ಕೆಣೆ | ರಾಮ್ ರಾಮ್ ರಾಮ್ 8 ಅಂಜನಿ ಸುತನಾಗಿ | ಕಂಜಸಖನಿಗ್ಹಾರ್ದಸಂಜೀವ ಧರ ಧರ | ರಾಮ್ ರಾಮ್ ರಾಮ್‍ದೈತ್ಯನಾ ಪ್ರಭಂಜನಾ ||ಸಂಜೆಯ ಚರರನು | ಭಂಜಿಸಿ ಅರ್ಪಿಸಿದಸಂಜೀವರಾಯ ಪಿತ | ರಾಮ್ ರಾಮ್ ರಾಮ್ 9 ಪತಿ | ಪದ್ಮಾಸನನ ಪಿತಪದ್ಮನಾಭನೆ ಪಾಹಿ | ರಾಮ್ ರಾಮ್ ರಾಮ್‍ರುದ್ಧನೇ ಅನಿರುದ್ಧನೇ ||ಮುದ್ದಿನ ಮೊಗದವ | ಗೆದ್ದು ಕುಜನ ತತಿಸದ್ಮದೊಳಗೆ ತೋರೊ | ರಾಮ್ ರಾಮ್ ರಾಮ್ 9 ಇಂದಿರೆ ರಮಣನೆ | ಚಂದಿರ ವದನನೆಮಂದರೋದ್ಧಾರಿಯೆ | ರಾಮ್ ರಾಮ್ ರಾಮ್‍ಸುಂದರಾ ಬಹು ಸುಂದರಾ ||ಕಂದರ್ಪ ಕೋಟಿ ಬಹು | ಸುಂದರ ಗುರು ಗೋ-ವಿಂದ ವಿಠಲ ಪಾಹಿ | ರಾಮ್ ರಾಮ್ ರಾಮ್10
--------------
ಗುರುಗೋವಿಂದವಿಠಲರು
ಪಾಲಿಸೈ ಪರಮೇಶ್ವರ | ಕ-|ಪಾಲ ಲೋಚನ ಶಂಕರಾ ||ನೀಲಕಂಧರಶಶಿಧರಾ ತ್ರಿ-|ಶೂಲಪಾಣಿ ಮಹೇಶ್ವರ 1ದಂಡಧರ ಶಿರಖಂಡನಾ | ಬ್ರ -|ಹ್ಮಾಂಡಪತಿ ಪಂಚತುಂಡನಾ ||ಖಂಡ ಪರಶುಪ್ರಚಂಡನಾ | ಈಗ |ಕಂಡೆ ನಾ ರುಂಡಮಾಲನಾ 2ಉರಗಕುಂಡಲಧಾರನೇ |ಭವ|ದುರಿತಘೋರವಿಹಾರನೇ ||ಶರಧಿಸಮ ಗಂಭೀರನೇ | ನಿನ -|ಗೆರಗುವೆನು ಪರಮೇಶನೇ 3ದೂತನಾಥ ತ್ರಿಲೋಚನಾ | ಪುರು - |ಹೂತವಂದ್ಯಾ ಸುಖ್ಯಾತನಾ ||ಆರ್ತರಕ್ಷಕ ದೇವನಾ | ಬಲು |ಪ್ರೀತಿಯೊಳು ನಂಬಿರ್ದೆನಾ 4ಚಂದ್ರಕೋಟಿ ಪ್ರಕಾಶನೇ | ಪೂ -|ರ್ಣೇಂದು ಮುಖಿ ಗಿರಿಜೇಶನೆ ||ಅಂಧಕಾಸುರ ನಾಶನೇ | ಗೋ- |ವಿಂದ ದಾಸನಪೋಷನೇ ||ಪಾಲಿಸೈ| | 5
--------------
ಗೋವಿಂದದಾಸ
ಪೊರೆದಯದಿ ಮಾಧವಾ ಕರುಣದಿ ಶ್ರೀಕೇಶವಾ ಪಉರಗವಿಷ್ಟರ ಸುರಶ್ರೇಷ್ಠ ಸುಧಾಕರ ದುರಿತಹರಾ ಅ.ಪಕರುಣಾಕರ ಸರಸಿಜಾಕ್ಷದಾಮೋದರಸುರತಟಿನೀ ತಾತನೆ ಕರುಣದಿ ಶ್ರೀನಾಥನೇತರಳಪ್ರಹ್ಲಾದನ ಪೊರೆದ ನರಸಿಂಹನೇಸ್ಮರಿಸುವೆನೇ ನರವರನೆ ಗರುಡಗಮನ ಶಂಭುಪ್ರಿಯ 1ಮಂದರೋದ್ಧಾರನೆಸಿಂಧುಗಂಭೀರನೇನಂದನಂದನ ಮುಖಚಂದ್ರ ಪ್ರಕಾಶನೇವಂದಿಪೆನೇ ಸುಂದರನೇಸಿಂzsÀುಶಯನ ಗೋವಿಂದನೇ 2
--------------
ಗೋವಿಂದದಾಸ