ವಾಸವ ಪ್ರಿಯಾ ಪ
ವ್ರಜ ನಾನಾ ಬಗೆಯಲಿ ||
ಭಜನೆ ಮಾಡುತ ಬಲು | ನಿಜಮನದಲಿ ನೋಡೇ 1
ಛತ್ರ ಚಾಮರ ಜನರು | ಸ್ತೋತ್ರ ಸಂಗೀತನಾದ
ಧಾತ್ರಿ ತುಂಬಿರಲು ಸ | ರ್ವತ್ರ ವ್ಯಾಪಕ ದೇವಾ 2
ಗಂಧರ್ವಗಣನಲು | ವಿಂದ ಪಡಲು ಭೇರಿ ||
ದುಂದುಭಿವಾದ್ಯ ಆ | ನಂದ ನುಡಿವುತಿರೆ 3
ಇಕ್ಕಿದ ವರಕಲ್ಪ | ದಿಕ್ಕು ಬೆಳಗುತಿರೆ |
ಬೊಕ್ಕ ದೈವವೆ ಶುದ್ಧ | ಭಕ್ತರ ಒಡಗೂಡಿ 4
ಇಷ್ಟ ಮೂರುತಿ ಮನೋ | ಭೀಷ್ಟ ಪಾಲಿಪ ವಿಜಯ ||
ವಿಠ್ಠಲ ವೆಂಕಟೇಶ | ಬೆಟ್ಟದೊಡೆಯೆಂದು 5