ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೊ ರಂಗ ಎಲೋ ರಂಗನೇ ಸಲಹೊ ಶುಭಾಂಗನೆ ಪ ಜಯಕರ ಶ್ರೀಹರಿಯೆ ದಯವಂತನಾಗಯ್ಯ ಭಯ ಭಕ್ತಿಯಲಿ ನಿಮ್ಮ ದಯವ ಬೇಡುವೆನಯ್ಯ 1 ನಿನ್ನ ಭಕ್ತನು ನಾನು ಬನ್ನಬಡಿಸುವಿ ಯಾಕೋ ಮುನ್ನಿನ ಭಕ್ತರಂತೆನ್ನನು ಸ್ಮರಿಸಯ್ಯ 2 ಶರಣೆಂದು ವಿಭೀಷಣಗೆ ಕರುಣಿಸಿ ಲಂಕೆಯ ಸ್ಥಿರಪಟ್ಟ ಕೊಟ್ಟಂಥ ಕರುಣಾಳು ಮೊರೆ ಕೇಳೊ 3 ಯತಿವರನ ಯಾಗವ ಹಿತದಿ ರಕ್ಷಿಸಿದಂಥ ಪತಿತಪಾವನ ಎನ್ನ ಹಿತದಿಂದ ಕಾಯೆಲೊ 4 ಸತತ ನಿಮ್ಮಯ ಪಾದಸ್ತುತಿಯೊಳಿರಿಸಿ ಎನ್ನ ಮೃತ್ಯುಬಾಧ್ಹರಿಸಯ್ಯ ಕ್ಷಿತಿವರ ಶ್ರೀರಾಮ 5
--------------
ರಾಮದಾಸರು
ಹರಿಯೆ ನಿನಗನ್ಯ ದೈವರು ಸರಿಯೆ ಮೂರ್ಲೋಕ ದೊರೆಯೆ ಪ. ಭೂತಿದೇವತಿಯು ನಿನ್ನರಸಿಯು ಮೂರ್ಲೋಕದೊಳು ಖ್ಯಾತೆಯಾಗಿರುವ ಭಾರತಿ ಸೊಸೆಯು ಸುತೆ ಭಾಗೀರಥಿಯು ಭೂತೇಶನ ಪಡೆದವನಣುಗನು ಪುರು ಹೂತ ಮುಖ್ಯರು ಸಕಲೋತ್ತಮನೆಂಬರು 1 ನಿನ್ನ ಪೋಲುವ ಕರುಣಾಳುಗಳನ ಕಾಣೆನು ಮೋಹವ ಅನ್ಯಾಯ ಘಟಿತ ಕರ್ಮಗಳನ್ನ ಮಾಡುವ ಎನ್ನನ್ನ ಮನ್ನಿಸಿ ಪಾವನ ಮಾಡುವದನ್ನ ಅನ್ಯರು ತಿಳಿವರೆ ಸುರಗಣ ಮಾನ್ಯ 2 ಪಾತಕ ಬಂಧ ನಿರ್ಮೋಕಗೈವ ವಿತತಾಚಿದಾನಂದ ಮುಕುಂದ ಪಾಲಿಸು ಕೃಪೆಯಿಂದ ಕ್ಷಿತಿವರಗತ ಬಹು ಮತಿಯನು ಕರುಣಿಪ ಹಿತ ಶೇಷಾಚಲಪತಿ ಗೋವಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ