ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯರಾಯ ಭವಹರಣ ಪಾಲಿಸೆಮ್ಮ ಪ ಜಯದೇವಿಪ್ರತಿ | ರೂಪ ಗುಣಕ್ರಿಯ ರತಯತಿಯೆ ಅ.ಪ. ಅಮರೇಶ ಸ್ವರ್ಗಪದ ತೃಣಮಾಡಿ ಕ್ಷಿತಿಯಲಿ ಪಾದ ಸೇವೆಗಾಗಿ ಅಮಿತ ಭಾಗ್ಯವಿದೆಂದು ಪಶುವಾಗಿ ನೀನಿಂದು ಕಮಲ ಮಧು ಸೇವಿಸಿದೆ 1 ತೃತಿ ಈಶರೆನಿಸುವ ಅಗ್ನಿ ಗರುಡ ಮಹರುದ್ರ ಪ್ರತಿ ಕ್ಷಣದಿ ಅತಿ ಭಕುತಿ ಭಾರದಿಂದ ನತಿಸಿ ಸೇವಿಪ ಪರಮ ಗುರುಚರಣವಾಶ್ರೈಸಿ ದತಿ ಸುಕೃತನಿಧಿ ನಮ್ಮ ಅತಿದಯದಿ ಈಕ್ಷಿಪುದು 2 ಶ್ರೀ ಭೂಮಿ ದುರ್ಗೇಶನ ಮತ ಮಂಗಳ ಮೂರ್ತಿ ಶೋಭನಾಂತ ಗುಣಕ್ರಿಯ ನಿವಹಗಳನು ಅದ್ಭುತದಿ ಧರಿಸಿಹಾ ಮಧ್ವಕೃತ ಗ್ರಂಥಗಳ ಸದ್ಭಕ್ತಿಯಲಿ ಪೊತ್ತೆ ಸೌಭಾಗ್ಯನಿಧಿ ಗುರುವೆ 3 ಪವಮಾನರಾಯನಾ ಕೃಪೆಯೆಷ್ಟೊ ನಿನ್ನಲ್ಲಿ ಅವನಿಯೊಳು ಸಿದ್ಧಾಂತ ಗ್ರಂಥಗಳ ಟೀಕೆ ಕವಿಶ್ರೇಷ್ಠನಿರಲಾಗಿ ನಿನ್ನಿಂದ ರಚಿಸಿದ ತ್ರಿ ಭುವನ ಮಾನ್ಯನೆ ಧನ್ಯ ಧನ್ಯತೆಲಿ ಪೊರೆ ಎಮ್ಮ 4 ಪಾರ್ಥನಾದಂದು ಶ್ರೀ ಯದುಪತಿಯ ಸಖ್ಯವನು ಪೂರ್ತಿಪೊಂದಿದೆ ಸರ್ವ ಪುರುಷಾರ್ಥವೆಂದು ಸ್ವಾರ್ಥಮತಿಯ ಹರಿಯ ಒಲಿಸಿದಾ ಮಹಾನಿಪುಣ ಪಾದ ಪಾಂಶು ರಕ್ಷಿಸಲೆನ್ನ 5 ದೇವಕೀಸುತ ನಿನ್ನ ಸಖನೆಂದು ಪವಮಾನ ದೇವ ನಿನ್ನಲ್ಲಿ ಮಾಡಿದ ಪರಮ ಪ್ರೀತಿ ಪತಿ ದಾಸ್ಯ ಪೂರ್ಣಪ್ರದ ಆರೂಢ ಕೇವಲಾ ಕೃಪೆ ಮಾಡು ಹರಿದಾಸ ಮಣಿಗುರುವೆ 6 ಭಾರತೀಪತಿಗೊಡೆಯ ಜಯೇಶವಿಠಲನ ವೈರಾಗ್ಯ ಸಿದ್ಧಿಯಲಿ ಏಕಾಂತ ಪೊಂದಿ ಭವ ತರಣ ಸತ್ಪಾತ್ರ ವೃಷ್ಟಿ ಹರಿಗುರುಗಳೊಲಿವಂತೆ 7
--------------
ಜಯೇಶವಿಠಲ
ಶ್ರೀ ರಾಜಸೂಯಾ ಅಗ್ರಪೂಜಾ ಸ್ತೋತ್ರ59ರಾಜನ ಭಾಗ್ಯವಿದು | ಧರ್ಮರಾಜನ ಭಾಗ್ಯವಿದು ಪರಾಜೀವಜಾಂಡದ ಏಕಸ್ವರಾಟ್ ಶ್ರೀಕೃಷ್ಣನರಾಜೀವಅಂಘ್ರಿಸುಯುಗ್ಮವರಾಜಸೂಯದಿ ತಾ ಪೂಜಿಸಿದ ಅ.ಪಚಿತ್ರವಿಚಿತ್ರವು ಸ್ತಂಭತೋರಣಗಳುರತ್ನ ಮಾಣಿಕ್ಯ ಮರುಗದದಿಚಂದ ಹೊಳೆವ ಸಭೆ ರಾಜರು ಸುತಪೋಧನರು ಕುಳಿತಿರೆ ಮಾಧವಗೆಮೊದಲು ಪೂಜೆಯ ಮಾಡಿ ಯಜÕವಾಚರಿಸಿದವಿಧಿಪೂರ್ವಕದಿ ಶ್ರಧ್ಧೆಯಲಿ1ಶಂತನುಸುತ ಗಾಂಗೇಯರು ನೆರೆದಿದ್ದಸಾಧು ಸನ್ಮುನಿಜನ ಮನದಂತೆಇಂದಿರೆಯರಸ ಶ್ರೀ ಕೃಷ್ಣಗೆ ಸಮರುಅಧಿಕರು ಇಲ್ಲದ ಜಗದೀಶವಿಧಿಈಶಾನದಿ ಸರ್ವನಿಯಾಮಕಕೃಷ್ಣನೇ ಪೂಜ್ಯನು ಎಂದರು ದೃಢದಿ 2ಗಂಗಾಜಲವ ಜಾಂಬೂನದ ಕಲಶದಿಮಾದ್ರೇಯನು ತಾ ತಂದೀಯೇಗಂಗಾಜನಕವರಾಂಗಿ ಸುವಕ್ಷ ಐಶಂಗವಾಸನ ಅರಿಶಂಖವ ಪಿಡಿದವನಅಂಘ್ರಿಸುಕಂಜದ್ವಯವ ಯುದಿಷ್ಠಿರಅವನೀಜನಗೈದ ಭಕ್ತಿಯಲಿ 3ಮನುಷ್ಯವತ್ ಲೀಲಾ ದ್ವಿಭುಜನು ಚಿನ್ಮಯಭಜಕಗೆ ಚತುರ್ಭುಜ ಕಾಣಿಸುವಜ್ಞಾನರೂಪದಿಹರಿವನಜಸಂಭವನಲಿಇಹ ಕ್ರಿಯಾರೂಪದಿ ವಾಯುನಲಿವಾಣೀ ಭಾರತಿಯಲಿ ಇಚ್ಚಾಶಕ್ತಿರೂಪದಿ ಪ್ರಚುರನು ಸರ್ವೇಶ 4ರಥನಾಭಿಯಲಿ ಅರಗಳ ತೆರದಿಸಮಸ್ತವು ಪ್ರತಿಷ್ಠಿತ ವಾಯುನಲಿಕ್ಷಿತಿಯಲಿ ಸ್ವಯಮೇವ ವಾಯುವೆಜನಿಸಿ ಜಗದಂತರಾತ್ಮ ಭೀಮನಾಗಿಯುಧಿಷ್ಠಿರನಲಿ ಸಮಾಭಿಷ್ಟನಾಗಿಹ ಸೌಮ್ಯರೂಪದಿ ಕೃಷ್ಣನ ಸೇವಿಸಲು 5ಸೌಮ್ಯರೂಪದಿ ಒಳಗಿದ್ದು ಶ್ರೀ ಕೃಷ್ಣಗೆಅಗ್ರ ಪೂಜಾದಿ ರಾಜಸೂಯತಾ ಮಾಡಿ ಸ್ವಯಂ ತನ್ನ ಅವತಾರಭೀಮಗೆ ಅಣ್ಣನೆಂದೆನಿಸುತಿಪ್ಪಧರ್ಮರಾಜನ ಕೈಯಿಂದ ಮಾಡಿಸಿದನುಭಕ್ತಾನುಕಂಪಿ ಶ್ರೀಹರಿಯ ಪ್ರೀತಿಸಿದ 6ಮನಶುಚಿಯಲಿ ಈ ನುಡಿಗಳ ಪಠಿಸುವಶ್ರವಣವ ಮಾಡುವ ಸುಜನರಿಗೆವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪಾಂಡವ ಪ್ರಿಯ ಶ್ರೀ ರುಕ್ಮಿಣೀಶಮನಶೋಕಾದಿ ತಾಪತ್ರಯ ನೀಗಿಸಿಯೋಗ್ಯವಾಂಛಿತವೀವ ಬಹುದಯದಿ 7
--------------
ಪ್ರಸನ್ನ ಶ್ರೀನಿವಾಸದಾಸರು