ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನಗಳ ಕಳೆವುದೆ ಸಾಧನವು ಶ್ರವಣ ಮನನ ನಿಧಿಧ್ಯಾಸನಗಳಲಿ ಪ ಉದಯದಿ ಸ್ನಾನ ನದಿನದಗಳಲಿ ಸದಮಲ ಹರಿಯ ಪಾದೋದಕ ಪಾನ ಹೃದಯದಿ ಕೃಷ್ಣನ ಮೂರ್ತಿಯ ಧ್ಯಾನ ವಿಧಿಯಲಿ ಜಪತಪ ಪ್ರವಚನಗಳಲಿ 1 ಪ್ರೇಷ್ಟತಮರ ತಂತ್ರಸಾರದ ಕ್ರಮದಲಿ ಅಷ್ಟಮಹಾ ಮಂತ್ರಗಳನು ಜಪಿಸಿ ವೃಷ್ಣಿವರೇಣ್ಯನ ವೈಭವದಿಂದಲಿ ತುಷ್ಟಿಗೊಳಿಸಿ ಬಲು ಶಿಷ್ಟರ ಸಂಘದಿ 2 ತ್ರಿಭುವನ ಗುರುಗಳ ಶುಭಕರ ಶಾಸ್ತ್ರವ ಪ್ರವಚನಗೈಯುತ ಪ್ರತಿಕ್ಷಣಗಳಲಿ ವಿಬುಧ ಪ್ರಸನ್ನನ ಗುಣಗಳ ಸಜ್ಜನ ಸಭೆಯಲಿ ಪಾಡುತ ನಿರ್ಭಯರಾಗಿ 3
--------------
ವಿದ್ಯಾಪ್ರಸನ್ನತೀರ್ಥರು
ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ ನರಲೋಕವೇ ನರಕವಣ್ಣ ಪ ಪರಲೋಕವಿಹುದೆಂದು ಗುರುಕರುಣವನು ಪಡೆದ ಕುರುಬನದ ಅರಿತನಣ್ಣ ಅ.ಪ ಈಶ ಜಡ ಜೀವರೆಂಬುವ ಭಿನ್ನ ತತ್ವಗಳು ಈಶನೊಬ್ಬನೆ ಕರ್ತನಣ್ಣ ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು ಮೀಸೆಯನೇತಕೆ ತಿರುವಬೇಕಣ್ಣ 1 ಹರಿಯು ಪರನಲ್ಲದಿದ್ದರೆ ಸರ್ವಭುವನಗಳು ಹರಿಯಧೀನದಲಿರುವುದೇಕೆ ಹರಿಯಧೀನಲಿಲ್ಲದಿದ್ದರೀ ಜಗದೊಳಗೆ ಕೊರತೆಯೇತಕೆ ಮಂದಿಗಳಿಗೆ 2 ದೇವದತ್ತನು ಧನಿಕ ಪ್ರೇತದತ್ತನು ಬಡವ ಯಾವ ಕಾರಣ ವಿಷಮಗತಿಗೆ ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ ಭಾವವಿರುವುದು ನ್ಯಾಯವೇ 3 ಈಶನಿಲ್ಲೆಂಬುವರು ಹೇಸಲಾರರು ಪಾಪ ರಾಶಿ ರಾಶಿಯ ಗಳಿಸಲು ಆಶೆಬಡುಕರ ಜಗವ ನಾಶಮಾಡಲು ರಾಜ ಶಾಸನಕೆ ಬುಡವೆಲ್ಲಿಯಣ್ಣ 4 ಇಂದು ಇದನು ಪಡೆಯುವೆ ಮುಂದೆ ಅಧಿಕ ಧನವನು ಗಳಿಸುವೆ ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ ಬೆದೆಯಲಿರುವನು ನುಡಿವನು 5 ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು ಬಲ್ಲವಗೆ ಮುಕುತಿ ಇಲ್ಲೇ ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ ದೆಲ್ಲವನು ತಿಳಿಯಲಳವಣ್ಣ 6 ಕಾಯವಾಚಾಮನಸದಿ ತಪವಗೈಯುತ ಶುದ್ಧ ಭಾವವನು ಗಳಿಸಿರಣ್ಣ ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ ಭಾವಕೆ ಪ್ರಸನ್ನರಿವರು 7
--------------
ವಿದ್ಯಾಪ್ರಸನ್ನತೀರ್ಥರು
ವಾಯುದೇವರು - ಹನುಮಂತ ಎಂಥ ವೈರಾಗ್ಯ ಹನುಮಂತ ಎಂಥ ಸೌಭಾಗ್ಯ ಗುಣವಂತ ಪ ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ ಭಕುತಿಯ ಬೇಡಿದೆಯೊ ಅ.ಪ ಆವರಿಹರು ನಿನ್ಹೊರತು ರಾಘವರ ಭಾವವರಿತು ಪ್ರತಿ ಕ್ಷಣಗಳಲಿ ಸೇವೆ ಸಲಿಸಿ ದಯ ಪಡೆಯಲು ಭೋಗವ ದಾವದನುಭವಿಸೆ ದುರ್ಲಭವು ಜೀವೋತ್ತಮನದ ಬಯಸದೆ ಏಕೋ ಭಾವದಿ ಪದಸೇವೆಯ ಕೇಳಿದ ವೀರ 1 ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ ಷ್ಠಾನ ಪವನಸುತ ಜಗತ್ರಾಣ ನೀನಲ್ಲದೆ ಖಗಮೃಗ ಸುರನರರುಗ ಳೇನು ಚಲಿಸಬಲ್ಲರೊ ಹನುಮ ಪ್ರಾಣಭಾವಿ ಚತುರಾನನ ಭುವಿಯೊಳ ಗೇನು ರುಚಿಯೊ ಕಲ್ಯಾಣಚರಿತ ನಿನಗೆ 2 ಕಪಿ ರೂಪದಿ ದಶಕಂಧರನ ಮಹಾ ಅಪರಾಧಕ್ಕೆ ಶಿಕ್ಷೆಯನಿತ್ತೆ ನೃಪರೂಪದಿ ದುರ್ಯೋಧನನಸುವನು ಅಪಹರಿಸಿದೆಯೋ ಬಲ ಭೀಮ ವಿಪುಲ ಪ್ರಮತಿ ವರವೈಷ್ಣವ ತತ್ವಗ ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ3
--------------
ವಿದ್ಯಾಪ್ರಸನ್ನತೀರ್ಥರು