ಬಿನ್ನೈಪೆ ನಿನಗಾನು ಭಕ್ತ ಬಂಧೋ ಪ
ಘೋರ ದುರಿತಗಳು ಬಂದು ಬಹು ಬಾಧಿಸುವುದುಚಿತವೇ ಅ.ಪ.
ಏಸು ಕಾಲಾದವು ಬಾಧೆ ಬಿಡುತಿಹಳು ಬಲ್ಯಲ್ಲಾಶ್ವಾಸ ಮಂತ್ರದಿ ದಾಶಿಯಳ ಕ್ಲೇಶವಳಿಯೊ ಪ್ರಭುವೆ 1
ಭುವನ ಭಿಕ್ಷುಕಧಾರಿ ಪ್ರತ್ಯಕ್ಷನೀನಿರಲಾಗಿ ಮಾತೃಭಿಕ್ಷವ ನೀಡೋ ಸುಖದ ಕ್ಷಾರಿ ತಲೆಬಾಗಿ2
ಸೊಲ್ಲು ಲಾಲಿಸಬೇಕು ತಂದೆವರದಗೋಪಾಲವಿಠ್ಠಲನ ಪ್ರೀಯಾ 3