ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆಗೆಣಿಕೆ ಇಲ್ಲದಂತಾಗಿ ಎನ್ನಂತರಂಗದ ಕ್ಲೇಶಕೆಂತೌಷಧ ರಂಗ ಪ.ಒಂದು ದೊರೆತರೆ ಇನ್ನೊಂದಾಗಲುಬೇಕುಮಂದಿರವಿರಲು ಮೇಲಟ್ಟ ಬೇಕುಮಂದಮತಿಸತಿಇನ್ನೊಬ್ಬ ಸುಗುಣಿ ಬೇಕುಎಂದೆಂದು ಬೇಕೆಂಬ ನುಡಿಗುಂದದು ರಂಗ 1ಅವಭೋಗಿ ಅವಗಿಂತ ಮೀರ್ವೆನೆಂಬುವ ಹವಣುಅವನ ವಿದ್ಯಕೆ ಹೆಚ್ಚಲೆಂಬ ಹವಣುತವಕದಿ ಸಂಪದ ಮೇಳವಿಸುವ ಹವಣುಅವಿರಳ ಹವಣಕೆ ಕಡೆಗಾಣೆ ರಂಗ 2ರೂಢಿಲಿ ಸಿರಿವಂತರ ಮುಂದೆಖೋಡಿಮಾತಾಡಿ ಗುದ್ದಿಸಿಕೊಂಡ ನರನಂತೆನೋಡ ಪ್ರಸನ್ವೆಂಕಟೇಶಅಲ್ಲದಕೃತ್ಯಮಾಡಿ ಕ್ಲೇಶವನುಂಡೆ ನಿನ್ನ ಬೇಡದೆ ರಂಗ 3
--------------
ಪ್ರಸನ್ನವೆಂಕಟದಾಸರು