ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ ಪ ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೊಗಳುತ ಮನದೊಳುಅ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆಶ್ರೀಶನ ಭಕುತರ ದೂಷಿಸಿದಾ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶಗೊಳಿಸದೆ ಇದ್ದೀತೆಭೂಸುರಸ್ವವ ಹ್ರಾಸ ಮಾಡಿದ ಫಲಏಸೇಸು ಜನುಮಕು ಬಿಟ್ಟೀತೆ 1 ಜೀನನ ವಶದೊಳು ನಾನಾ ದ್ರವ್ಯವಿರೆದಾನಧರ್ಮಕೆ ಮನಸಾದೀತೆಹೀನ ಮನುಜನಿಗೆ ಜ್ಞಾನವ ಬೋಧಿಸೆಹೀನ ವಿಷಯ ಅಳಿದ್ಹೋದೀತೆಮಾನಿನಿ ಮನಸದು ನಿಧಾನವಿರದಿರೆಮಾನಾಭಿಮಾನಗಳುಳಿದೀತೆಭಾನುಪ್ರಕಾಶನ ಭಜನೆಯ ಮಾಡದಹೀನಗೆ ಮುಕುತಿಯು ದೊರಕೀತೆ2 ಸತ್ಯಧರ್ಮಗಳ ನಿತ್ಯವು ಬೋಧಿಸೆತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥವ ವಿಚಿತ್ರದಿ ಪೇಳೆಕತ್ತೆಯ ಚಿತ್ತಕೆ ಹತ್ತೀತೆಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿಮುತ್ತು ಕೊಟ್ಟರೆ ಮಾತನಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆಅರ್ತಿಯ ತೋರದೆ ಇದ್ದೀತೆ 3 ನ್ಯಾಯವ ಬಿಟ್ಟನ್ಯಾಯವ ಪೇಳುವನಾಯಿಗೆ ನರಕವು ತಪ್ಪೀತೆಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆಘಾಯವಾಗದೆ ಬಿಟ್ಟೀತೆತಾಯಿತಂದೆಗಳ ನೋಯಿಸಿದವನಿಗೆಮಾಯದ ಮರಣವು ತಪ್ಪೀತೆಮಾಯಾಜಾಲವ ಕಲಿತ ಮನುಜನಿಗೆಕಾಯ ಕಷ್ಟವು ಬಿಟ್ಟೀತೆ 4 ಸಾಧು ಸಜ್ಜನರ ನೋಯಿಸಿದ ಮಾಯಾವಾದಿಗೆ ನರಕವು ತಪ್ಪೀತೆಬಾಧಿಸಿ ಪರರರ್ಥವ ದೋಚುವವಗೆವ್ಯಾಧಿಯು ಕಾಡದೆ ಬಿಟ್ಟೀತೆಭೇದವೆಣಿಸಿ ಬಲು ಕ್ಷುದ್ರವ ಕಲಿತರೆಮೋದವೆಂದಿಗು ಆದೀತೆಕದ್ದು ಒಡಲ ಪೊರೆವವನ ಮನೆಯೊಳುಇದ್ದದ್ದು ಹೋಗದೆ ಉಳಿದೀತೆ5 ಅಂಗಜ ವಿಷಯಗಳನು ತೊರೆದಾತಗೆಅಂಗನೆಯರ ಸುಖ ಸೊಗಸೀತೆಸಂಗ ದುಃಖಗಳು ಹಿಂಗಿದ ಮನುಜಗೆಶೃಂಗಾರದ ಬಗೆ ರುಚಿಸೀತೆಇಂಗಿತವರಿತ ನಿಸ್ಸಂಗಿ ಶರೀರ ವ-ಜ್ರಾಂಗಿಯಾಗದೆ ತಾನಿದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದಮಂಗಗೆ ಮುಕುತಿಯು ದೊರಕೀತೆ 6 ಕರುಣಾಮೃತದಾಭರಣವ ಧರಿಸಿದಶರಣಗೆ ಸಿರಿಯು ತಪ್ಪೀತೆಕರುಣ ಪಾಶದುರವಣೆ ಹರಿದಾತಗೆಶರಣರ ಕರುಣವು ತಪ್ಪೀತೆಅರಿತು ಶಾಸ್ತ್ರವನಾಚರಿಪ ಯೋಗ್ಯಗೆಗುರು ಉಪದೇಶವು ತಪ್ಪೀತೆವರ ವೇಲಾಪುರದಾದಿಕೇಶವನಸ್ಮರಿಸುವನಿಗೆ ಮೋಕ್ಷ ತಪ್ಪೀತೆ 7
--------------
ಕನಕದಾಸ
ಜಯರಾಮಾ ಜಯರಾಮ ರಘುವಂಶಾಬ್ಧಿ ಸೋಮ ಪ. ವೈದೇಹಿ ಮನೋಹರ ವೇದವೇದ್ಯ ಶ್ರೀಕರ ಮಾಧವ ಮುರಹರ ಜಯಶೌರೇ ದಿತಿಜಾರೇ ಪರಿಪಾಹಿ ನೃಹರೇ 1 ಸದನ ವಾರಾಶಿಬಂಧನ ಅಕ್ಷಯಸುವಚನ ಸ್ಮರತಾತಾ ವರದಾತಾ ರಮಾಸಮೇತ 2 ಕ್ಲೇಶಪಾಶವಿಮೋಚನ ವಾಸವಾರ್ಚಿತಚರಣ ಶ್ರೀಸತ್ಯಭಾಮಾಧವ ಜಯದೇವಾದ್ಭುತಪ್ರಭಾವ 3
--------------
ನಂಜನಗೂಡು ತಿರುಮಲಾಂಬಾ
ನಾಮರಸಾಯನಂ ಪಿಬ ಹೇ ಮಾನಸ ಶ್ರೀಹರಿನಾಮ ಪ. ರಾಮನಾಮ ರಸಾಯನಂ ಸಂಸಾರರೋಗ ನಿವಾರಣಂ ಸಂಚಿತಪಾಪ ವಿಧ್ವಂಸನಂ ನಾಮಸಂಕೀರ್ತನಂ 1 ಭಕ್ತಾರ್ತಿವಾರಣಂ ಭವಭಯಾಬ್ಧಿತಾರಣಂ ಭಕ್ತಿ ಮುಕ್ತಿ ಸಾಧನಂ ನಾಮಸಂಕೀರ್ತನಂ2 ಕ್ಲೇಶಪಾಶ ವಿಮೋಚನಂ ಕಲಿಕಲ್ಮಷ ಭಂಜನಂ ಶೇಷಾದ್ರೀಶ ಸ್ಮರಣಂ ಸರ್ವೋಪದ್ರವಾರಣಂ 3
--------------
ನಂಜನಗೂಡು ತಿರುಮಲಾಂಬಾ
ಪನ್ನಗಾಶಯನ ಹರಿ ವೆಂಕಟರಮಣ ಪ ವರ ಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ ಕರಿಯ ಸಲಹಿದಂತೆ ಕರುಣವಿರಲಂತೆ 1 ತರಳೆ ದ್ರೌಪದಿಯ ಅಭಿಮಾನ ಕಾಯ್ದಂತೆ ಧುರದೊಳು ನರನ ಶಿರವ ಉಳುಹಿದಂತೆ 2 ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ 3 ಪರಮ ಮಂಗಳಮೂರ್ತಿ ಪಾವನ ಕೀರ್ತಿ ಧರೆಯ ರಕ್ಷಿಪ ಅರ್ತಿ ದಯವಾಗು ಪೂರ್ತಿ 4 ಮಕರ ಕುಂಡಲಧರ ಮಕುಟ ಕೇಯೂರ ಸಕಲಾಭರಣ ಹಾರ ಸ್ವಾಮಿ ಉದಾರ 5 ತಾಳಲಾರೆನು ನಾನು ಬಹಳ ದಾರಿದ್ರ್ಯ ಕೇಳುವರಿಲ್ಲ ಬಹು ಭವಭಯ ಕ್ಷುದ್ರ 6 ನೋಡಬೇಡೆನ್ನವಗುಣವ ದಮ್ಮಯ್ಯ ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ 7 ಭಕ್ತಜನ ಸಂಸಾರಿ ಬಹುದುರಿತ ಹಾರಿ ಮುಕ್ತಿದಾಯಕ ದಾರಿ ಮುಂದೆ ನೀ ತೋರಿ8 ವರಾಹತಿಮ್ಮಪ್ಪ ಒಲವಾಗೆನ್ನಪ್ಪ ಸಾರಿದವರ ತಪ್ಪ ಸಲಹೊ ನೀನಪ್ಪ 9
--------------
ವರಹತಿಮ್ಮಪ್ಪ
ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ಧ್ರುವ ಕ್ಲೇಶಪಾಶವು ಕತ್ತರಿಸಿ ದೋಷನಾಶವನು ಗೈಸಿ ಪೋಷಿಸುವ ಕೇಶವ ನಿಮ್ಮ ನಾಮ 1 ನರಕ ಘೋರದ ಘಟವೆಂಬ ನರಜನ್ಮದುರ್ಘಟ ತಾರಿಸುವ ನಾರಾಯಣ ನಿಮ್ಮ ನಾಮ 2 ಮದಮತ್ಸರವ ಜರಿಸಿ ಭೇದಾಭೇದವು ಹರಿಸಿ ಮಾಧವ ನಿಮ್ಮ ನಾಮ 3 ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ 4 ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ 5 ಮೊದಲು ಮೂವಿಧಿಯಗಳು ಜರಿಸಿ ಸದಮಲ ಪುಣ್ಯ ಪದವೀವ ಮಧುಸೂದನ ನಿಮ್ಮ ನಾಮ 6 ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ ಭಾವಭಕ್ತೀವ ತ್ರಿವಿಕ್ರಮ ನಿಮ್ಮ ನಾಮ 7 ವರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ ಜನ್ಮ ತಾರಿಸುವ ವಾಮನ ನಿಮ್ಮ ನಾಮ 8 ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ 9 ಹರಿಸಿ ಸಂದೇಹ ಸಂಕಲ್ಪ ಬಾಧೆಯಗಳು ಹರುಷ ಗತಿನೀವ ಹೃಷೀಕೇಶ ನಿಮ್ಮ ನಾಮ 10 ಪಾತಕ ಹರಿಸಿ ಪದ್ಮನಾಭ ನಿಮ್ಮ ನಾಮ 11 ದುರಿತ ವಿಧ್ವಂಸನಿಯ ಮಾಡಿ ಧರೆಯೊಳು ದ್ಧರಿಸುವ ದಾಮೋದರ ನಿಮ್ಮ ನಾಮ 12 ಸಕಲ ಪದವಿತ್ತ ಸುಖಸಾಧನವ ತೋರುತಿಹ್ಯ ಅಖಿಳದೊಳು ಸಂಕುರುಷಣ ನಿಮ್ಮ ನಾಮ 13 ವಾಸನೆಯು ಪೂರಿಸುತ ಭಾಷೆ ಪಾಲಿಸುತಿಹ ಲೇಸಾಗಿ ಶ್ರೀವಾಸುದೇವ ನಿಮ್ಮ ನಾಮ 14 ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ 15 ಅನುಮಾನ ಪರಿಹರಿಸಿ ಅನುಭವಾಮೃತ ಸುರಿಸಿ ಅನಿರುದ್ಧ ನಿಮ್ಮ ನಾಮ 16 ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ 17 ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ 18 ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ ಅರುವು ಕುರ್ಹುವ್ಹಿಡಿದ ನರಸಿಂಹ ನಿಮ್ಮ ನಾಮ 19 ಅರ್ಚನೆಯು ಪ್ರಾರ್ಥನೆಯು ಪರಮಪೂಜೆಯನರಿಸಿ ಅಚ್ಯುತ ನಿಮ್ಮ ನಾಮ 20 ಜನನ ಮರಣವನಳಿಸಿ ತನುಮದೊಳು ಬೆರಿಸಿ ಜನುಮ ಹರಿಸುವ ಜನಾರ್ದನ ನಿಮ್ಮ ನಾಮ21 ಉಪಮೆಯ ರಹಿತ ವಸ್ತುವುಪಾಯದಲಿ ತೋರಿ ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ22 ಹರಿಸಿ ಅಹಂಭಾವ ಅರಿಸಿ ಅನುಭವ ಪೂರ್ಣ ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ 23 ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ 24 ಸಾರ ಸಂಧ್ಯಾಯನದಿ ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು