ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತೊಲಿವನೋ ತನಗಿನ್ನೆಂತೊಲಿವನೋ ಕಂತುಪಿತ ಶ್ರೀಕಾಂತ ಹರಿ ಪ ಜಡಮನದ ಜಡರು ತೊಡೆದು ಪಿಡಿದು ಸತ್ಯ ನುಡಿಯ ಬಿಡದೆ ಅಡರಿಬರುವ ಎಡರಿಗೆದೆ ಒಡೆಯದೆ ಧೃಢಬಲಿಸುವನಕ 1 ದೋಷದೆಳಿಪ ಹೇಸಿ ಭವದ ವಾಸನಳಿದು ಕ್ಲೇಶನೀಗಿ ದಾಸಜನರ ವಾಸದಿರ್ದು ಈಶಭಜನೆ ಬಲಿಸುವನಕ 2 ಕಾಮಿತಾರ್ಥನೀಗಿ ನಿತ್ಯ ನೇಮಬಿಡದೆ ತಪವ ಮಾಡಿ ಸ್ವಾಮಿದಾಸನಾಗಿ ಶ್ರೀ ರಾಮಮಂತ್ರ ಪಡೆಯುವನಕ 3
--------------
ರಾಮದಾಸರು
ನೀಚಮನಸೆ ನೀ ಯೋಚಿಸಿ ಕೆಡಬೇಡ ಬರಿದೆ ಪ ಸಾರವಿಲ್ಲದ ನಿಸ್ಸಾರ ಸಂಸಾರವೆಂಬುದು ಮಾಯಾಬಜಾರ ತೋರಿ ಅಡಗುತಿಹ್ಯದು ನಿಮಿಷ ನೀರಮೇಲಿನ ಗುರುಳೆತೆರದಿ ಪರಿ ಸ್ಥಿರವಲ್ಲದನರಿದು ನೋಡೋ 1 ಕಾರಣಲ್ಲದ ಕಾಯವಿದು ಮೂರುದಿನದಸುಖವ ಬಯಸಿ ಮೀರಿಸಿ ಗುರುಹಿರಿಯರ್ವಚನ ಪಾರಮಾರ್ಥವಿಚಾರ ಮರೆಸಿ ಸೂರೆಗೈದು ಸ್ವರ್ಗಭೋಗ ಘೋರನರಕಕೆಳಸುತಿಹ್ಯದು 2 ಆಶಾಬದ್ಧನಾಗಿ ಭವಪಾಶದೊಳಗೆ ಸಿಲುಕಬೇಡೆಲೊ ವಾಸನಳಿದು ಐಹಿಕಸುಖದ ಕ್ಲೇಶನೀಗಿ ಸುಶೀಲನಾಗಿ ಬೇಸರಿಲ್ಲದೆ ಶ್ರೀಶಜಗದೀಶ ಶ್ರೀರಾಮನಂಘ್ರಿ ಭಜಿಸು 3
--------------
ರಾಮದಾಸರು