ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರ ಕೇಳೊ ದೊರೆಯೆ ಥಟ್ಟನೆ ಬಾರೊ ಭಕ್ತ ಸಿರಿಯೆ ಗತಿ ಹರಿಯೆ ಪ. ಖುಲ್ಲ ವೈರಿಯು ಮೊದಲನೆಯ ಕಳ್ಳ ಸನ್ನಿಧಿಯಲಿ ಬಂಧಿಸಿ 1 ಕ್ರೋಧನನೆಂಬವನಿವನು ಮಾನಸ ಬೋಧವ ಕೆಡಿಸುವನು ಮಾಧವ ಮಧುವತ್ಕರಿದಿ ನಿವಾರಿಸಿ 2 ತುದಿ ನಡು ಮೊದಲಿಲ್ಲ ಲೋಭ ತಡೆಯುವವರ್ಯಾರಿಲ್ಲ ಶ್ರೀಮಡದಿಯ ನಲ್ಲ 3 ಬಾಹ ಬಾಧೆಗಳನು ತಿಳಿಸದೆ ಚೋಹದಿ ಕೆಡಹುವನು ಮಹಿಮೆಯ ಮಾರ್ಗವ ತಿಳಿಸುತ 4 ಅಷ್ಟವೇಷವುಳ್ಳ ಐದನೆ ದುಷ್ಟನು ಬಿಡಲೊಲ್ಲ ಮುರಿದಟ್ಟು ದಯಾಪರ 5 ಮತ್ಸ್ಯಘಾತಿಯಂತೆ ಕುತ್ಸಿತ ಮತ್ಸರನೆಂಬುವನು ಸತ್ಸಂಗಗತಿಗಳನುತ್ತರಿಪನು ಶ್ರೀವತ್ಸ ಬೆನ್ಹನೀ ತಾತ್ಸಾರಗೊಳದಲೆ 6 ಈ ಶತ್ರುಗಳಿರಲು ತತ್ವ ವಿಲಾಸಗಳೆಂತಹವು ಶೇಷಗಿರೀಶ ಕೃಪಾಂಬುಧಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಶೋಭಾನವೆನ್ನಿರೆ ಶುಭಕರ ಸಾವಿತ್ರೇರು | ಪ್ರಭುಗುರು ಆತ್ಮಾ ಶ್ರೀರಾಮಗ ಪ ರಾಮರಾವಣ ಕ್ರೋಧನಿಸ್ಸೀಮ ಕುಂಭಕರ್ಣಾದಿ | ತಾಮಸದವರಾ ಮದಮುರಿದು | ತಾಮಸದವರ ಮದಮುರಿದು ಹೃದಯಕ | ಪ್ರೇಮ ಜಯೋತ್ಸವದಿಂದೈ ತಂದಾ 1 ಒಡನೆ ಶಾಂತಿ ಸೀತೆಯಾ ಬಿಡಿಸಿ ತಂದನು ಸೆರೆಯಾ | ದೃಢವಿಭೀಷಣನ ಸ್ಥಾಪಿಸಿದನಾ | ದೃಢವಿಭೀಷಣನ ಸ್ಥಾಪಿಸಿ ಆಶಾಪಾಶ | ಕಡಲ ಮಧ್ಯ ಪೂರದೊಳು ಈಗ 2 ವಿವೇಕ ಹರಿವಾನದಿ ಭಾವದಾರತಿಯೋಳು | ತೀವಿದ ಸಮ್ಯಜ್ಞಾನ ಜ್ಯೋತಿ | ತೀವಿದ ಸಮ್ಯಜ್ಞಾನಜ್ಯೋತಿಯಿಂದ | ದೇವದೇವೇಶಗ ತಿಂದೀಗ 3 ಅರಿಗಳ ಶಿಕ್ಷಿಸು ಶರಣರ ರಕ್ಷಿಸು | ಧರೆಯೊಳುಯೆಂದು ಹರಸುತ | ಧರೆಯೊಳು ಎಂದು ಹರಸುತ ಮುತ್ತಿನ | ಪರಮಶಾಶಯ ನೊಸಲೊಳಿಟ್ಟು 4 ಇಹಪರಸುಖದಾತಾ ಬಾಹ್ಯಾಂತ್ರ ಸದೋದಿತಾ ಮಹಿಪತಿಸುತ ಪ್ರಭು ರಘುನಾಥ | ಮಹಿಪತಿಸುತ ಪ್ರಭು ರಘುನಾಥ ನೆನೆವರ ಸಹಕಾರಿ ನಮ್ಮ ಸದೋದಿತ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಕ್ರೋಧನ ನಾಮ ಸಂವತ್ಸರ ಸ್ತೋತ್ರ 157 ಕ್ರೋಧನ ಸಂವತ್ಸರ ನಿಯಾಮಕ ಸ್ವಾಮೀಶ್ರೀ ಪದುಮಾಲಯಪತಿ ನಾರಸಿಂಹನ ಪಾದ ಕೃತಿ ನಡೆಸಿ ಶರಣರ ಕಾಯ್ವ ಪ ಈ ಸಂವತ್ಸರ ರಾಜಾ ಶುಕ್ರ ಮಂತ್ರೀ ಶನಿಯು ಶನೈಶ್ಚರನೇ ಸೈನ್ಯಾರ್ಘ ಮೇಘ ಸಸ್ಯಪತಿ ರಸಪಗುರು ನಿರಸ ಸಸ್ಯಪ ಮಂಗಳ ಸುಸೌಖ್ಯ ಬಹುಕ್ಷೀರ ಧಾನ್ಯ ವೃಷ್ಟಿದ ಚಂದ್ರ 1 ಕಾಡು ಕಿಚ್ಚು ಮೊದಲಾದ ಅಗ್ನಿಭಯ ರೋಗ ಪೀಡೆ ಜನರಲ್ಲು ರಾಜರಲು ಪರಸ್ಪರ ಅಡಿಗಡಿಗೆ ಸ್ನೇಹಹಾನಿ ಸೈನ್ಯಕಲಹ ದುಷ್ಟಭಯ ಕಳೆದು ಭಕ್ತರ ಕಾಯ್ವ ಹರಿ 2 ತತ್ವದೇವರ್ಗಳು ಸಭಾರ್ಯಾ ರವಿಸೋಮರು ಶಿವಾಶಿವ ವರ ಸಮೀರ ಇವರುಗಳಿಂ ಸೇವ್ಯ ಶ್ರೀ ಶ್ರೀಯುಕ್ ಪ್ರಾಣಯಮ್ಮೊಳ್‍ಜ್ವಲಿಸಿಕಾಯ್ವ ಸರ್ವಗ ವೇಧಪಿತ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಪ ಪಂಕಜ ದಳ ಕೂಡಿತು ನೋಡು ಮುದರಿಕೊಂಡವು ಕುಮುದವೆಂಬೊ ಕಣ್ಣು ಪದುಮನಾಭನೆ ನಿನ್ನ ನಖವೆಂಬೊ ರವಿ ವದನವೆಂಬೊ ಚಂದ್ರÀಮಾ ಉದಿಸಲಿ 1 ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ ಕರ್ಣ ಮಂದಿರವೆ ತುಂಬಲಿ ಕಲಿ ಅಡಗಿ ಪೋಪಾ 2 ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು ಪೂಸಿದಾ ಗಂಧ ದಿವ್ಯವಾಸನೆ ಬರಲಿ ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು3 ನೀನಲ್ಲದೆ ತುಲಾ ಕಾವೇರಿಯೊಳಗೆ ಸ್ನಾನ ಜಪ ತಪಗಳು ಮಾಡುವದೇಕೆ ಸಿರಿ ಪ್ರಾಣರಿಗೆ ಪ್ರಾಣನಾದ ಬಲು ಮೋಹನಾ 4 ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ ಲೋಕ ಚರಿಸುವದೇನು ನಿನ್ನ ಪೋಗಾಡಿ 5 ಧವಳಗಂಗಿಯೊಳಂದು ಬಿದ್ದು ಬಂದಾಗ ಕವಿ ವಾದಿರಾಜಗೊಲಿದು ಬರಲಿಲ್ಲವೇ ಅವರ ದಾಸಾನುದಾಸನು ಸತತ ನಾನು ತವಕದಿಂದಲಿ ಬಾರೊ ಭಕ್ತವತ್ಸಲಾ6 ಅರ್ಚಿಸಬಲ್ಲನೆ ದೇವ ನಿನ್ನನುದಿನಾ ಗಚ್ಚರಿತವಂದಲ್ಲವೆ ಮತ್ತಾವದರಿಯೆ ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ 7
--------------
ವಿಜಯದಾಸ