ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾ ಹರಿ ಭಕುತರ ಭಯ ಪರಿಹರಿಸುತ ಸರಸಿಜ ಸದನೆಯರೊಡಗೂಡಿ ನಲಿಯುತ ಪ ನೀರೊಳು ಮುಳುಗಿ ಮೀನನೆಂದೆನಿಸಿ ಭಾರವ ಪೊತ್ತಿಹ ಕೂರ್ಮನೆ ಜವದಿ 1 ಕೋರೆಗಳಿಂದ ಧಾರುಣಿತಂದ ಕ್ರೂರನುದರ ಕರುಳ್ಹಾರವೆ ಚಂದ 2 ಮೂರಡಿ ಭೂಮಿಯ ಬೇಡುತ ಬಂದೆ ನಾಡೊಳು ಕೊಡಲಿಯ ಪಿಡಿಯುತ ನಿಂದೆ3 ಸೇತುವೆ ಕಟ್ಟುತ ಸೀತೆಯ ತಂದೆ ಪಾತಕಿ ಕಂಸನ ನಾಶವ ಗೈದೆ4 ಬುದ್ಧನೆಂದೆನಿಸಿದೆ ಶುದ್ಧಮೂರುತಿಯ ಮುದ್ದು ತೇಜಿಯ ನೇರುತ ಮೆರೆದವನೆ 5 ಬಾ ಮುರವೈರಿ ಬಾ ಬಾರೊ ಶೌರಿ ಭಾಸುರ ವಂದ್ಯ ಬಾ ಮುದದಿಂದ6 ಪಾದ ದೃಢದಿ ಭಜಿಪೆನೈ ಕಡಲ ಶಯನ ಕಮಲನಾಭ ವಿಠ್ಠಲನೆ 7
--------------
ನಿಡಗುರುಕಿ ಜೀವೂಬಾಯಿ