ಸಾಮಧಾನವು ಸಾಮಧಾನ ಪವಮಾನ
ಶ್ರೀಮನ್ಮಹಾಸುಗುಣಧಾಮ ಸುತ್ರಾಣ ಪ.
ಲೋಕ ಮುಳುಗುವದು ನೀನೀ ಕೆಲಸಮಂಗೈಯೆ
ಸಾಕುವವರ್ಯಾರು ಜಗದೇಕವೀರ
ಶ್ರೀಕಾಂತಸುಪ್ರೀತ ಶೋಕಮೋಹವಿಧೂತ
ಪರಾಕು ಮುಖ್ಯಪ್ರಾಣ 1
ಜಗಕೆ ನೀನಾಧರ ಜನ್ಮ ಮೃತಿಭಯದೂರ
ಚಾಗಮಾಗಮವಿಚಾರ ನಿತ್ಯಶೂರ
ಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆ
ಮಗುಚಬೇಡೈ ಧರೆಯ ಮುಗಿವೆ ನಾ ಕೈಯ2