ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಟ್ಯಕಲಾವಿದ ಶಿವನೋ ಕೇಶವನೋ ನಾಟ್ಯಕೆ ನಲಿವನಾ ಭವನೋ ಮಾಧವನೋ ಪ ನಾಟ್ಯಾಪ್ಸರಗಣವೇಷ್ಟಿತನಿವನು ನ್ಯಾಟ್ಯದಿಸಕಲರಾಭೀಷ್ಟದನವನು ಅ.ಪ ಝಣ ಝಣ ಝಣರವ ರಣಿಪನಿವನು ಕಿಣಿ ಕಿಣಿ ಕಿಣಿರವ ಚೆಲ್ಲುವನವನು ಗಣ ಗಣ ನಾದದಿ ವರ್ತಿಪನಿವನು ಮಣಿಗಣನಾದದಿ ನರ್ತಿಪನವನು 1 ಮುರಳಿಯಗಾನವ ಪಾಡುವನಿವನು ನಿರುಪಮ ದಿವಿಜಾ ನರ್ತಕನವನು ಭರತನಾಟ್ಯ ಕಲಾ ಕೋವಿದನಿವನು [ವರ ನಾಟ್ಯ ನಟನಾ ನಿಪುಣನವನು] 2 ಭೇರಿನಗಾರೀ ತುತ್ತೂರಿ ಡಮರುಗ ಕರಿಮುಖ ಷಣ್ಮುಖಯುತ ಭಸಿತಾಂಗ ನಾರದ ತುಂಬುರ ವೀಣೆ ಮೃದಂಗ ಸಾರಗಾನಯುತ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 9 ಶಿವನೋ ಕೇಶವನೋ ನಾನರಿಯೆ ಜವನೊ ಮಾಧವನೋ ಪೇಳುವರಾರೋ ಪ ಶಿವಗೆ ಜಡೆಯು ಮಾಧವನವ ಕೇಶಿಯು ಶಿವನು ಮಂಗಳನು ಮಾಧವನು ಸುಂದರನು ಅ.ಪ ಮಾಧವ ನೀಲಾಂಗನು ಶಿವನುರಿಹಸ್ತ ಮಾಧವನುರೆ ಚಕ್ರಿಯು ಮಾಧವ ಮಾಲಿಂಗನು ಮಾಧವ ಮಾಂಗಿರಿವರನಹುದು 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾರಿಗೆ ಹೋಲುವೆ ನಿನ್ನ ಯಾರಲ್ಲಿ ಸಲ್ಲಾಪಿಸಲಿ ಮಾರನೋ ಮದನನ ಪಡೆದ ಕೇಶವನೋ ಪ ಸಾರಸವದನನು ವಾರಿಧಿಶಯನನು ಅ.ಪ ಆಹವ ಭೀಮನೋ | ಸಾಹಸ ಮಲ್ಲನೋ ಬಹು ಸುದೀರ್ಘನು ಮೋಹಮಂದಿರನು ಮಹಿಜೆಯರಸನೋ ಅಹಿಯ ಶಯನನೋ ಬಹುಗುಣಾನ್ವಿತ ವೆಂಕಟೇಶನೋ ಮಹಿತ ಮಹಿಮನು ಸಾಹಸ ಶೀಲನು ಪಾಹಿರಘು ಕುಲಪತಿ ಚೆನ್ನ ಚೆಲುವನು 1 ಉರಗ ಭೂಷಣನೋ | ಸರಸಿಜ ಭವನೋ ಧರಣಿಯ ಅಳೆದ ಪರಮಪುರುಷನೋ ಗರುಡಗಮನನೋ | ಕರುಣ ಭಜಿಪನೋ ನರಪಸುತ ಕೋದಂಡಧರನೋ ಮೆರೆವ ಕಾಂಚೀಪುರದ ವರದನೋ ನಿರುತ ವಂದಿತ ಮಾಂಗಿರೀಶನೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್