ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಮ್ಮ ತಾಯೆ ಮುದದಿಂದೆಮ್ಮನು ಕಾಯೆ ಕೋಳಿ ಕೂಗುತಲಿದೆ ಕೇಳಮ್ಮಯ್ಯಾ ಪ ಕಾಲನಾಮಕ ಸೂರ್ಯದೇವನ ರಥದ ಕೆಂ- ಧೂಳಿಯೇಳುವಂತೆ ಅರುಣೋದಯವಾಯ್ತು ಅ.ಪ. ಮರುತಸುತನೆದ್ದು ಪರಾಕ್ಹೇಳುತಿಹನು ಗರುಡನು ಹೊರಬಾಗಿಲೊಳು ಕಾದಿರುವನು ಪರಿವಾರದವರೆಲ್ಲ ಕರಕಟ್ಟಿ ನಿಂದಿಹರು ಹಿರಿಯ ಸೊಸೆ ವಾಣಿ ವಾರಿ ಕಲಶ ಪೊತ್ತಿಹಳು1 ಸಾರಭಕ್ತರು ಎಲ್ಲ ಸಾಲಾಗಿ ನಿಂದಿಹರು ಭೂರಿ ಕುತೂಹಲದಿ ನಿನ್ನ ದರುಶನಕಾಗಿ ವಾರಿಜಭವ ಮುಖ್ಯ ಸರುವ ದೇವತೆಗಳು ಸಾರಿ ಬರುತಿರುವರು ನೀನೇಳಮ್ಮಯ್ಯಾ 2 ನೀ ಪೋಗಿ ಆತನ ಕರಪಿಡಿದೆಬ್ಬಿಸಾದೊಡೆ ಶ್ರೀಪತಿಯು ಶೇಷತಲ್ಪದಿಂದೇಳನು ಅಪಾರಮಹಿಮ ಶ್ರೀ ರಂಗೇಶವಿಠಲನ ವ್ಯಾಪಾರಂಗಳನರಿತವರಿನ್ನ್ಯಾರಮ್ಮ 3
--------------
ರಂಗೇಶವಿಠಲದಾಸರು
ಒಂದೇ ಕರದೊಳು ಅಮ್ಮಯ್ಯಾ ನಿನಗುಣ್ಣಿಸುವೆನು ಕೇಳಮ್ಮಯ್ಯಾ ಪ ಜಲಧಿಯೊಳಮ್ಮಯ್ಯಾ ಉದುರಲು ಅಮ್ಮಯ್ಯಾ ಉದಭಿಜಡರುಹುಗೊಂಡಮ್ಮಯ್ಯಾ 1 ಶಿರಿಕೃಷ್ಣ ಮೆಚ್ಚಿದನಮ್ಮಯ್ಯಾ ಶಿರದೆಡೆಯೊಳಾಂತನು ಅಮ್ಮಯ್ಯ ವರಗಳನಿತ್ತನು ಅಮ್ಮಯ್ಯ ಹರಿಯರ್ಚನೆಗಧಿಕಳು ಅಮ್ಮಯ್ಯ 2 ಮಿಸುಪ ವ್ಯಕ್ತಿಯು ಅಮ್ಮಯ್ಯ ನೊಸಲೆಡೆವ ಭೂಷಣವಮ್ಮಯ್ಯ ಅಸುಬಿಕ್ಷÀಣಾಳ್ಗಳು ಅಮ್ಮಯ್ಯ ಮಿಸುಕದೆಲೆ ಪೋಪರು ಅಮ್ಮಯ್ಯ 3 ಮಂಗಳಬಲೆಯರು ಅಮ್ಮಯ್ಯ ಗಂಗಾಜಲವೆರೆಯಲು ಅಮ್ಮಯ್ಯ ಲಿಂಗಪೂಜಿಸಲು ಅಮ್ಮಯ್ಯ ಇಂಗಿತದ ವರಗಳೀವೆಮ್ಮಯ್ಯ 4 ನರಸಿಂಹವಿಠ್ಠಲ ನಮ್ಮಯ ಸರಿ ನೀನೆ ಬತ್ತಳೆಂದಮ್ಮಯ್ಯಾ ಪರಾಕು ನೀನಮ್ಮಯ್ಯ 5
--------------
ನರಸಿಂಹವಿಠಲರು