ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಯ್ಯ ರಂಗಯ್ಯ ಪ ತಮ್ಮವರೆಂದು ತಾಳಿ | ಸುಮ್ಮನಿರುವವರಲ್ಲ ||ಹಮ್ಮಿಲಿ ಹರಿಸಿ ಬಂದು ನಮ್ಮನೆ ದೂರುವರೋ 1 ಮೊಸರನ್ನೆಲ್ಲ ಸುರಿದಾನೆಂದುಸುರು ಹಾಕಿದರೆ |ನಮ್ಮ ಹೆಸರಿಗೆ ಮರಗಿ ಮುಖವು ಹಸಿರಿಡುದಯ್ಯಾ 2 ಬಾಲಕರ ಹೆಗಲನೇರಿ | ಪಾಲನೆಲ್ಲವಕಿತ್ತೆಳೆದು |ಬಾಲೇರ ಬಳಲಿಸುವದು ಬಾಲ ಬೇಕೇನೋ 3 ಸರಿಯಿಲ್ಲದವರ ಕೂಡ | ಮರೆಯಿಲ್ಲದೆ ಮಾತಾಡಿ |ಸೆರಗ ಸೆಳೆದರೆ ನಮ್ಮ ಹಿರಿಯತನವೇನೋ 4 ಚಿಕ್ಕತರದವರು ನಮಗೆ | ಸೊಕ್ಕಿನವನೆಂಬುವರು |ರುಕ್ಮಭೂಷಗೆ ಈ ಮಾತು ತಕ್ಕದಹುದೇನೋ 5
--------------
ರುಕ್ಮಾಂಗದರು
ಕಾಯೋ ಶ್ರೀಹರಿ ಪ ಕೈ ಮುಗಿವೆ ಮುರಾರಿ ಕರುಣದಿ ಅ.ಪ. ನೊಂದೆನೋ ಈ ಭವ ಬಂಧನದೊಳಗೆ ಶಿಲುಕಿ ಮುಂದಿದಕೇನೋ ದಾರಿ 1 ತುಂಬಿದ ಭಕ್ತ ಕು- ಟುಂಬಿ ನಾಚಿಕೆಯ ಕೊಂಬುವದೇನಿದ ಕುಸುರೊ2 ಎಷ್ಟು ನಿನಗೆ ಮೊರೆ- ಯಿಟ್ಟರೂ ಶ್ರೀದ- ವಿಠ್ಠಲ ಮನಸಿಗೆ ತಾರಿ 3
--------------
ಶ್ರೀದವಿಠಲರು
ಪಾಲಿಸೋ ಕೃಷ್ಣ - ಇವಳ ಪಾಲಿಸೋ ಪ ಪಾಲಿಸೊ ಪಾಲಿಸೊ - ಭಕ್ತ ಪರಿಪಾಲಪೇಳಬೇಕೇನೋ - ಸರ್ವಜ್ಞ ಸುಶೀಲ ಅ.ಪ. ಸಂತಾನ ಕಾಂಕ್ಷಿತೆ - ಸಂತತ ನಿನ ಪಾದಚಿಂತಿಲಿಹಳ ಲಕ್ಷ್ಮೀ - ಕಾಂತನೆ ಪಾಲಿಸೊ 1 ಸಾಂದೀಪ ಗುರುವಿಗೆ - ಕಂದನ ತಂದಿತ್ತೆನಂದ ಗೋಪನ ಕಂದ - ಕಂದನ ಪಾಲಿಸೊ 2 ಕಂದಿ ಕುಂದಿಹಳು ಸು - ನಂದಳು ಚಿಂತೇಲಿಕಂದನ ಕೊಡು ಗುರು - ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಯಾಕ ಸ್ಮರಸದೀ ಮನಸಿಗೇ ಪ ಯಾಕ ಸ್ಮರಸದೀ ಮನಸಿಗೆ | ಲೋಕದೊಳು ತನ್ನ ಸುಖಗೆ | ಮಾಕಾಂತ ನಡಿಗಳ ಮರೆಹೊಕ್ಕು | ವಿ ವೇಕ ಸೌಖ್ಯ ಪಡಿಯದೀಗ 1 ಉತ್ತಮ ಸಂಗವ ನೆರೆಮಾಡಿ ತನ್ನ | ಚಿತ್ತದ ಚಂಚಲ ನೀಡ್ಯಾಡೀ | ನಿತ್ಯದಿ ಗುರು ಹಿರಿಯರ ಶೇವೆಯಲಿ| ಹೊತ್ತು ಸಾರ್ಥಕ ಕಳಿಯದು ನೋಡು 2 ಸಣ್ಣ ದೊಡ್ಡವರಿಂದ ಭಲರೇಯಾ ಯಂದು | ಮನ್ನಿಸಿಕೊಳ್ಳದೇ ಅವರ ಕೈಯ್ಯಾ | ಕುನ್ನಿಯ ಛೀ ಸುಡು ಸುಡು ಯಂದು | ನಿನ್ನ ಜನ್ಮಕೆನಿಸುವದು ಬಲು ಕುಂದು 3 ವಿಹಿತವೇ ಅಹಿತವೆಂದು ಬಗೆವದು ತನ್ನ | ಸ್ವಹಿತವೇ ಅಹಿತೆಂದಾಚರಿಸುವುದು | ಇಹಪರ ಲೋಕಕ ಸಲ್ಲದು ಆಗಿ | ಕುಹಕ ಬುದ್ಧಿಯಿಂದಲೇ ಬಾಳುದು 4 ಜನಲಜ್ಜಾ ಮನಲಜ್ಜಾ ವೆರಡಿಲ್ಲಾ ಇದ | ಕೇನೋ ಮುಂದಣಗತಿ ಶಿವಬಲ್ಲಾ | ಅನುಮಾನ ವಿಲ್ಲಿದರೊಳು ಕಂಡು ಕೇಳಿ | ಘನಗುರು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು