ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿಮಿಷ ರೂಪದಿಂದಾಗಮವನು ತಂದ ರಾಮಚಂದ್ರ ಘನಕೂರ್ಮರೂಪದಿಂ ಗಿರಿಯ ಬೆನ್ನೊಳಗಾಂತ ರಾಮಚಂದ್ರ ಕನಕಾಕ್ಷನನು ಕೊಂದ ಧರಿಣಿದೇವಿಯ ರಮಣ ರಾಮಚಂದ್ರ ಹಿರಣ್ಯಕನ ಕರುಳನು ಕೊರಳೊಳು ಧರಿಸಿದ ರಾಮಚಂದ್ರ ತರಳ ಪ್ರಹ್ಲಾದನ ಕರೆದಾದರಿಸಿದ ರಾಮಚಂದ್ರ ವಟುರೂಪದಿಂ ಬಂದು ವಸುಧೆಯ ಬೇಡಿದ ರಾಮಚಂದ್ರ ದಾನಕೊಟ್ಟವಗೆ ಪಾತಾಳ ಪಟ್ಟವ ಕಟ್ಟಿದ ರಾಮಚಂದ್ರ ಕ್ಷತ್ರಿಯರ ಕುಲಬೇರ ಕತ್ತರಿಸಿದ ದೇವ ರಾಮಚಂದ್ರ ಧರಿತ್ರಿಯ ಭಾರವ ಪರಿಹರಿಸಿದ ದೇವ ರಾಮಚಂದ್ರ ವಸುದೇವನಂದನನೆಂದೆನಿಸಿ ಮೆರೆದೆಯೋ ರಾಮಚಂದ್ರ ಮತ್ತೆಕಾಮಿನಿಯರ ಚಿತ್ತವ ಕಲಕಿದ ರಾಮಚಂದ್ರ ಉತ್ತಮಾಶ್ವವನೇರಿ ಕಲ್ಕಿಯೆನಿಸಿದ ರಾಮಚಂದ್ರ ಆದಿಮಧ್ಯಾಂತ ಸ್ವರೂಪ ಸುಂದರರೂಪ ರಾಮಚಂದ್ರ ವೇದವೇದ್ಯನೆ ನಿನ್ನ ಪಾದವೇ ಗತಿಯೆನಗೆ ರಾಮಚಂದ್ರ ರಘುಕುಲತಿಲಕನೆ ರಮ್ಯಚರಿತ್ರನೆ ರಾಮಚಂದ್ರ ಅಘಹರ ಪುರವೈರಿ ಸಂಸ್ತುತಿಪಾತ್ರನೆ ರಾಮಚಂದ್ರ ಮಾನಾಭಿಮಾನ ನಿನ್ನಾಧೀನಮೆಂಬೆನೈ ರಾಮಚಂದ್ರ ಏನೊಂದನರಿಯದ ಅಜ್ಞಾನಿ ನಾನಯ್ಯ ರಾಮಚಂದ್ರ ನೀನಲ್ಲದೆ ಮತ್ತನ್ಯರಾರಿಹರೈ ರಾಮಚಂದ್ರ ದೀನಪಾಲಕ ನಿನ್ನುಳಿದಾರ ನೆರೆಯೆ ರಾಮಚಂದ್ರ ವರಶೇಷಗಿರಿದೊರೆ ಮರೆಹೊಕ್ಕು ಬೇಡುವೆ ರಾಮಚಂದ್ರ ಕರುಣಾಳು ನೀನೆಂಬ ಬಿರುದುಳಿಸೆನ್ನುವೆ ರಾಮಚಂದ್ರ
--------------
ನಂಜನಗೂಡು ತಿರುಮಲಾಂಬಾ
ಕೋಲ ಕೋಲೆನ್ನಿ ಕೋಲ ಕೋಲೆನ್ನಿಲಕ್ಷ್ಮೀಲೋಲ ನಿಂತಾನೆÉಂದು ಕೋಲೆನ್ನಿ ಪ. ಅಚ್ಚ ಮುತ್ತಿನ ಸರಗಳನಿಟ್ಟುಕೃಷ್ಣ ಮಚ್ಛ ರೂಪದಿ ನಿಂತ ಕೋಲೆನ್ನಿ1 ಹೇಮ ರತ್ನದಾಭರಣಗಳನಿಟ್ಟು ಕೃಷ್ಣಕೂರ್ಮರೂಪದಿ ನಿಂತ ಕೋಲೆನ್ನಿ 2 ವರಾಹ ರೂಪದಿ ನಿಂತ ಕೋಲೆನ್ನಿ 3 ಪ್ರೇಮದಿ ರತ್ನದ ವಸ್ತಗಳಿಟ್ಟುಕೃಷ್ಣ ನರಸಿಂಹ ರೂಪದಿ ಬಂದ ಕೋಲೆನ್ನಿ4 ಶೀಘ್ರದಿ ರತ್ನದ ವಸ್ತಗಳಿಟ್ಟುಕೃಷ್ಣ ವಾಮನ ರೂಪದಿ ನಿಂತ ಕೋಲೆನ್ನಿ5 ಭರದಿ ಮುತ್ತಿನ ಸರಗಳಿಟ್ಟು ಕೃಷ್ಣಭಾರ್ಗವ ರೂಪದಿ ನಿಂತ ಕೋಲೆನ್ನಿ 6 ನೂತನ ಮುತ್ತಿನ ಸರಗಳಿಟ್ಟುಕೃಷ್ಣ ಸೀತಾರಾವiನು ನಿಂತ ಕೋಲೆನ್ನಿ 7 ತಿದ್ದಿದ ರತ್ನದ ವಸ್ತಗಳಿಟ್ಟುಕೃಷ್ಣ ಮುದ್ದು ರೂಪದಿ ನಿಂತ ಕೋಲೆನ್ನಿ 8 ಬದ್ಧವಾದ ಮಣಿಗಳನಿಟ್ಟುಕೃಷ್ಣಬುದ್ಧ ರೂಪದಿ ನಿಂತ ಕೋಲೆನ್ನಿ9 ಹಲವು ರತ್ನದ ವಸ್ತಗಳಿಟ್ಟುಕೃಷ್ಣ ಚಲ್ವಕಲ್ಕಿನಿಂತ ಕೋಲೆನ್ನಿ 10 ಚಲ್ವ ರಾಮೇಶ ವಸ್ತಗಳಿಟ್ಟುನಮ್ಮ ಸುಲಭ ಮೂರುತಿ ನಿಂತ ಕೋಲೆನ್ನಿ 11
--------------
ಗಲಗಲಿಅವ್ವನವರು
ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ನರಹರಿಯೆ ಪ. ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ ದಯವಾಗೊ ಅ.ಪ. ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು ಆಗಮವ ತಂದು ಅಜಗಿತ್ತೆ ಆಗಮವ ತಂದು ಅಜಗಿತ್ತೆ ಹಯವದನ ಆದಿಮೂರುತಿಯೆ ದಯವಾಗೊ 1 ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದ ಪ್ರೇಮದಿ ಸುರರಿಗಮೃತವ ಪ್ರೇಮದಿ ಅಮೃತವನಿಕ್ಕಿದ ಹಯವದನ ಸ್ವಾಮಿ ನೀ ಎನಗೆ ದಯವಾಗೊ 2 ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು ರÀೂಢಿಯ ನೆಗಹಿ ಜಗಕಿತ್ತೆ ರÀೂಢಿಯ ನೆಗಹಿ ಜಗಕಿತ್ತೆ ಹಯವದನ ಪ್ರೌಢ ನೀ ಎನಗೆ ದಯವಾಗೊ 3 ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ ಕುಶಲದಿಂ ಕರುಳ ಮಾಲೆಯ ಕುಶಲದಿಂ ಮಾಲೆ ಧರಿಸಿದ ಹಯವದನ ಬಿಸಜಾಕ್ಷ ಎನಗೆ ದಯವಾಗೊ 4 ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ ವ್ಯೋಮಕ್ಕೆ ಚರಣವ ನೀಡಿದೆ ವ್ಯೋಮಕ್ಕೆ ಚರಣವ ನೀಡಿದ ಹಯವದನ ವಾಮನ ಎನಗೆ ದಯವಾಗೊ 5 ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ ಹಡೆದ ತಂದೆಯ ಮಾತು ಸಲಿಸಿದೆ ಹಡೆದ ತಂದೆಯ ಮಾತು ಸಲಿಸಿದ ಹಯವದನ ಒಡೆಯ ನೀ ಎನಗೆ ದಯವಾಗೊ 6 ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ ಭೂತ ರಾವಣನ ಮಡುಹಿದೆ ಭೂತ ರಾವಣನ ಮಡುಹಿದೆ ಹಯವದನ ಖ್ಯಾತ ನೀ ಎನಗೆ ದಯವಾಗೊ 7 ಗೊಲ್ಲರ ಒಡನಾಡಿ ಬಲ್ಲಿದಸುರÀನ ಕೊಂದು ಮಲ್ಲರೊಡನಾಡಿ ಮಡುಹಿದೆ ಮಲ್ಲರೊಡನಾಡಿ ಮಡುಹಿದ ಹಯವದನ ಫುಲ್ಲಾಕ್ಷ ಎನಗೆ ದಯವಾಗೊ 8 ತ್ರಿಪುರರ ಸತಿಯರಿಗುಪದೇಶವನಿಕ್ಕಿ ತ್ರಿಪುರರನೆಲ್ಲ ಮಡುಹಿದೆ ತ್ರಿಪುರರನೆಲ್ಲ ಮಡುಹಿದ ಹಯವದನ ನಿಪುಣ ನೀ ಎನಗೆ ದಯವಾಗೊ 9 ತೇಜಿಯನೇರಿ ರಾಹುತನಾಗಿ ನೀ ಮೆರೆದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಹಯವದನ ಭೋಜ ನೀ ಎನಗೆ ದಯವಾಗೊ 10 ವಾದಿರಾಜರಿಗೊಲಿದು ಸ್ವಾದೆಪುರದಲಿ ನಿಂದು ವೇದದ ಕಥೆಯನರುಹಿದೆ ವೇದದ ಕಥೆಯನರುಹಿದ ಹಯವದನ ಮಾಧವ ನೀ ಎನಗೆ ದಯವಾಗೊ 11
--------------
ವಾದಿರಾಜ
ಮಂಗಳಂ ಶ್ರೀರಾಮಚಂದ್ರಗೆ ಜಯ ಮಂಗಳಂ ಸೀತಾಸಮೇತನಿಗೆ ಪ. ಮಚ್ಛಾವತಾರಗೆ ವೇದವ ತಂದಗೆ ಕೂರ್ಮರೂಪದಿ ಜಲದೊಳು ಪೊಕ್ಕವಗೆ ಹಿರಣ್ಯಾಕ್ಷಸುರನ ಗೆಲಿಯೆ ಬಂದು ಮೆಚ್ಚೆ ವರಹರೂಪ ತೋರಿದಗೆ 1 ಛತ್ರಿಯ ಪಿಡಿದು ಭರತ ನಿಂದಿರಲಾಗ ಶತ್ರುಘ್ನ ಚಾಮರವನು ಬೀಸಲು ಮತ್ತೆ ಲಕ್ಷ್ಮಣ ಮಡುದೆಲೆ ಕೊಡುತಿರಲಾಗಿ ವಿಸ್ತಾರ ವೈಭೋಗ ರಘುರಾಮಗೆ 2 ತಮ್ಮ ಲಕ್ಷ್ಮಣ ಸಹ ಒಲ್ಮೆಯಿಂದಲಿ ಬಂದ ನಮ್ಮ ಶ್ರೀರಘುರಾಮಚಂದ್ರನಿಗೆ ಸನ್ಮಾನದಲಿ ರಾಮ ಸಾಗರಶಯನಾಗೆ ಚೆನ್ನ ಚುಂಚನಕಟ್ಟೆಸ್ಥಿರವಾಸಿಗೆ 3 ಎಡದ ಕರದಿ ಬಿಲ್ಲು ಬಲದ ಕರದಿ ಬಾಣ ಕರದ ಕಮಲದೊಳಗಿಪ್ಪವನಿಗೆ ಸಿರಿ ಸೀತೆಯ ಧರಿಸಿದ ಚದುರ ಶ್ರೀ ಕಲ್ಯಾಣ ಚಂದ್ರನಿಗೆ 4 ಹರುಷದಿ ದೇವತೆಗಳಿಗೊರವಿತ್ತಗೆ ದುರುಳ ರಕ್ಕಸರ ಸಂಹರಿಸಿದಗೆ ಪರಮ ಭಕ್ತನಿಗೆ ಸ್ಥಿರರಾಜ್ಯವನೆ ಕೊಟ್ಟ ಹಯವದನಮೂರ್ತಿ ಎಂದೆನಿಸಿದಗೆ 5
--------------
ವಾದಿರಾಜ
ವ್ಯಾಸೋಕ್ತಿಯನುಸರಿಸಿ ಹತ್ತು ಅವತಾರವನುಶ್ರೀಶ ಮಾಡಿದ ದಿನದ ಕ್ಲಪ್ತಿಯಂ ಬರೆವೆ ಸಂ- |ತೋಷದಿಂ ಕೇಳ್ಪುದೆಲ್ಲರು ಪೊರೆವ ಹರಿಯು ಅಭಿ-ಲಾಷೆ ಪೂರೈಸಿ ಬಿಡದೇ ಪಕೃತಯುಗಪ್ರಭವಮಧು ಶುದ್ಧ ಪ್ರತಿಪದಜಲಧಿಸುತವಾರ ರೇವತೀ ವಿಷ್ಕಂಭ ಹಗಲು ಸಂ-ಯುತ ಹನ್ನೆರಡು ಘಳಿಗೆಗವತರಿಸಿಶ್ರೀ ಮತ್ಸ್ಯ ಹತಮಾಡಿ ತಮನೆಂಬನಾ ||ಚತುರಾಸ್ಯವೈವಸ್ವತರಿಗೊಲಿದು ಮೆರೆದ ನೀಕ್ಷಿತಿಯೊಳಗೆ ಮತ್ತಾಯುಗದಿಕೂರ್ಮರೂಪದಿಂಚ್ಯುತರಹಿತನವತಾರ ಮಾಡಿ ಮಾಡಿದ ಕಾರ್ಯ ಮತಿವಂತರಿಗೆ ಪೇಳೂವೆ 1ವಿಭವಾಬ್ದ ಜ್ಯೇಷ್ಠ ಶುಕ್ಲದ್ವಿತೀಯಬುಧವಾರಶುಭದ ರೋಹಿಣಿ ಋಕ್ಷ ಧೃತಿ ಯೋಗ ದಿವದಲ್ಲಿತ್ರಿಭುವನೇಶ್ವರ ನಾಲ್ಕು ಘಳಿಗೆಗುದಿಸಿಯಮೃತಕೃತುಭುಜರಿಗುಣಿಸಿ ಕರುಣದಿಂ ||ಅಭಯವಿತ್ತನ್ಯರನು ದಣಿಸಿ ಧರಿಸಿದನು ಜಲ-ಜಭವಾಂಡ ಮಂದರಾದ್ರಿಯ ಬೆನ್ನಮ್ಯಾಲಿಂದಸುಭುಜಾಹ್ವಯನ ಚರಿತೆ ಸ್ಮರಿಸೆ ಕ್ಲೇಶಹ ಮತ್ತೆ ನಭಗವಹನಾ ಯುಗದಲಿ 2ಶುಕ್ಲ ಸಂವತ್ಸರದಶುಭಮಾಘ ಮಾಸದಲಿಶುಕ್ಲ ಪಕ್ಷದ ಸಪ್ತಮೀ ಭಾನುವಾರದಲಿಅಕ್ಲೇಶಪ್ರದ ಅಶ್ವಿನೀ ಸಾಧ್ಯಯೋಗದಲಿ ಶುಕ್ಲಶೋಣಿತ ವಿದೂರ ||ಶುಕ್ಲಾಂಬರಧರ ಕಿಟಿರೂಪದಿಂದವತರಿಸಿಹಕ್ಲಾಸುರ ಹಿರಣ್ಯಶನ ತರಿದುತ್ವರತನ್ನಒಕ್ಲಾದವರ ಪೊರೆದ ಹಗಲೆಂಟು ಘಳಿಗೆಯೊಳು ಶುಕ್ಲಾಂಗಆ ಯುಗದಲಿ 3ಆಂಗಿರಸವೆಂಬ ಸಂವತ್ಸರದ ವೈಶಾಖತಿಂಗಳದಿಸಿತಪಕ್ಷಚತುರ್ದಶೀ ಶನಿವಾರತುಂಗಸ್ವಾತಿಪರಿಘದಿವಾಷ್ಟ ವಿಂಶತಿ ಘಳಿಗೆಗಾಂಗೇಯಗರ್ಭನೊರವು ||ಸಂಘಟನೆವಾಗಲಾ ಸಮಯದೊಳು ಸ್ತಂಭದಿಂಸಂಗರಹಿತಹರಿಘುಡಿಘುಡಿಸುತಲಿ ಉದಿಸಿನರಸಿಂಗಾಹ್ವಯದಿಹೇಮಕಶ್ಯಪನ ತರಿದು ತರಳಂಗೆ ಸನ್ಮುದವಿತ್ತನೂ4ತ್ರೇತಾಯುಗದಲದಿತಿ ದೇವಿ ಭಕುತಿಗೆ ಮೆಚ್ಚಿಧಾತಾಬ್ದ ಭಾದ್ರಪದಸಿತಪಕ್ಷದ್ವಾದಶೀಖ್ಯಾತಿ ವಿಷ್ಣುಭ ಶುಕ್ರ ಧೃತಿ ಹತ್ತೈದು ಘಟಗೆಪೋತಭಾವದಿ ದಿವವಲಿ ||ತಾಂ ತಾಳಿ ಅವತಾರವಂ ತ್ರಿವಿಕ್ರಮನಾಗಿಭೂತಲಾಗಸವಳೆದು ವೈರೋಚಿನಿಯ ತುಳಿದುಪ್ರೀತಿಪಡಿಸುತ ಶಕ್ರನಂ ಸ್ವರ್ನದಿಯ ಪಡೆದ ಈತಗೆಣೆಯಾರೊ ಜಗದಿ 5ಅದೆ ಯುಗದಲಿ ಪ್ರಮಾಥಿಯೆಂಬ ಸಂವತ್ಸ-ರದಲಿ ವೈಶಾಖ ಶುದ್ಧ ತೃತೀಯೆ ಸುಕರ್ಮ ಯೋ-ಗದಲಿ ರೋಹಿಣಿಮಂದಹನ್ನೊಂದು ಘಟರಾತ್ರಿಯೊದಗುತಿರೆಭೂಪತಿಗಳಾ ||ವಧೆಗೆ ವಿಪ್ರರ ವೃಂದವನು ಪೋಷಣೆಯ ಮಾಡು-ವದಕೆ, ಜಮದಗ್ನಿಯಿಂದವತರಿಸಿ ರಾಮ ನಾ-ಮದಲಿ ಪರಶುವ ಧರಿಸಿ ಈ ಧಾತ್ರಿಯೊಳು ಬಹು ಮೆರೆದಮತ್ತು ಆ ಯುಗದಲಿ 6ತಾರಣೆಂಬಬ್ಧ ಮಧುಮಾಸ ಶುಕ್ಲ ನವಮಿಯಆರನೇ ತಾಸು ದಿವದಲಿ ಪುನರ್ವಸು ಚಂದ್ರವಾರ ಶೂಲೆಂಬ ಯೋಗದಲಿ ದಶರಥನೃಪತಿಹಾರೈಸಿದುದಕೆ ಒಲಿದು ||ಶ್ರೀರಾಮನಾಮದಿಂದವತರಿಸಿ ದೈತ್ಯ ಪರಿವಾ-ರ ರಾವಣನ ಸಂಹರಿಸಿ ವಿಭೀಷಣಗೊಲಿದುವಾರಿಜೋದ್ಭವಮುಖ ದಿವೌಕಸರಿಗಾನಂದ ತೋರಿಸಿದ ಸೀತಾಪತಿ 7ಮೂರನೇ ಯುಗ ವಿರೋಧೀ ಶ್ರಾವಣವದಿ ಅ-ರ್ಧರಾತ್ರಿಯೊಳಷ್ಟಮೀ ರೋಹಿಣೀವಜ್ರಬುಧವಾರದಲಿ ಅಜನ ಬಿನ್ನಹಕೊಪ್ಪಿ ಕೃಷ್ಣಾವತಾರವನು ತಾಳಿ ಧರೆಗೆ ||ಭಾರವಾಗಿದ್ದ ಕಂಸಾದಿ ಖಲವೃಂದ ಸಂ-ಹಾರಮಂ ಗೈದು ಪಾಂಡವರ ಪೋಷಿಸಿವಿಪ್ರಗೋ ರಕ್ಷಣೆಯ ಮಾಡಿ ಧರ್ಮವಂ ಸ್ಥಾಪಿಸಿದ ಶ್ರೀರಮಣ ಮಧ್ವಸದನ 8ಕಲಿಖರಾಬ್ಧಾಷಾಢ ಶುದ್ಧ ದಶಮಿ ವಿಶಾಖನಳಿನಸಖವಾರ ಶುಕ್ಲಾಹ ಯೋಗ ದಿವಾಷ್ಟಘಳಿಗೆಯೊಳು ಜನನೆಂಬ ದೈತ್ಯನಲ್ಲವತರಿಸಿ ಬಲುದುರ್ಮತಿಯ ಪ್ರೇರಿಸಿ ||ಕಳೆಗೆಡಿಸಿ ಬುದ್ಧಾವತಾರವೆಂದೆನಿಸಿ ಶಿವ-ಗೊಲಿದು ತ್ರಿಪುರವ ಕೆಡಿಸಿ ಸಜ್ಜನರ ಸಂಶಯವಕಳದು, ಕರುಣಾಂಬುಧಿಯ ಮಹಿಮೆಯಂತಿಳಿಯಲಸದಳಮಾವಿಧಿಗೆ ಎಂದಿಗೂ 9ದನುಜಪತಿ ಯುಗ ದುರ್ಮುಖಾ ಮಾರ್ಗಶಿರ ಶುದ್ಧಶನಿವಾರ ದ್ವಿತೀಯೆ ಪೂರ್ವಾಷಾಢ ವೃದ್ಧಿ ಮೂ-ರನೆ ಘಳಿಗೆ ದಿವದ ಕಲ್ಕ್ಯವತಾರದಿಂಮ್ಲೇಂಛರನು ಸದೆದು ಭೂ ದಿವಿಜರಾ ||ಘನಮೋದ ಪಡಿಸಿ ವಾಜಿಯನೇರಿ ಮೆರೆದಾಡಿಅನಿಮಿಷರ ಕೈಯ್ಯ ಪೂ ಮಳೆಯಂಗರಿಸಿಕೊಂ-ಡನಘ ಬಲ್ಲವರಿಗಲ್ಲಲ್ಲೆ ಇರುತಿಹನುಪ್ರಣತಜನಕಾಮಧೇನೂ 10ಈ ಪರಿಯಲಚ್ಯುತನ ಅವತಾರ ಚರಿತೆ ಸಂ-ಕ್ಷೇಪದಿಂ ವಿರಚಿಸಿದೆ ಸದ್ಭಕ್ತಿಯಿಂದಿದನುಪಾಪಿಗಳಿಘೇಳದಲೆ ಕಾಲತ್ರಯದಿ ಪಠಸೆ ತಾಪತ್ರಗಳ ಕಳೆದು ||ಈ ಪೊಡವಿಯೊಳಗೆ ಬಹುಮಾನ ಮಾಡಿಸಿ, ತಂದೆ-ಯೋಪಾದಿ ಕ್ಷಣ ಬಿಡದೆ ಸಲಹಿ ಪ್ರಾಂತಕೆ ತನ್ನಆ ಪರಂಧಾಮ ವೈದಿಸುವನತಿ ಕರುಣಾಳು ಶ್ರೀಪ ಪ್ರಾಣೇಶ ವಿಠಲಾ 11
--------------
ಪ್ರಾಣೇಶದಾಸರು