ಒಟ್ಟು 11 ಕಡೆಗಳಲ್ಲಿ , 9 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಶ್ರೀಕೃಷ್ಣಸ್ತುತಿಗಳು ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ ವಿನುತ ವಾಣೀಶ ಜಯಣೀಶ ಜಯ ಜಯ ಪ ಕಮಲಭವನುತಿಪಾತ್ರ ಕಮಲಸಖನಿಭಗಾತ್ರ ಕಮಲರಿಪುಸಮವಕ್ತ್ರ ಕಮಲದಳನೇತ್ರ ಕಮಲಕರಧೃತಗೋತ್ರ ಕಮನೀಯ ಸುಚರಿತ್ರ ಕಮಲಾರಿಧರಮಿತ್ರ ಕಮಲಾಕಲತ್ರ 1 ನಂದಗೋಪಕುಮಾರ ನವನೀತದಧಿಚೋರ ಸುಂದರೀ ಕುಲಜಾರ ಸ್ಮರಸಮರ ಶೂರ ಕಂದರ್ಪಸಹಕಾರ ಕಾಮಿನೀವಾರ ಬೃಂದಾವನವಿಹಾರ ಭಕ್ತ ಮಂದಾರ 2 ಧರಣೀಧರಾಸ್ಫಾಲ ಮನಕರ ನಿಜಲೀಲ ನರಪೌತ್ರ ಪರಿಪಾಲ ನವ್ಯವನಮಾಲಾ ವರವ್ಯಾಘ್ರಗಿರಿಲೋಲ ವರದಾರ್ಯವಿಠಲ 3
--------------
ವೆಂಕಟವರದಾರ್ಯರು
ಏತಕೆ ಬಾರದೊ ಹರಿಯೆ ನೀತವೆ ಇದು ಸರಿಯೆ ಪ ನಿಗಮ ಸಂಗೀತನಾಮ ಜಲ ಜಾತನಯನ ಬಹುಪ್ರೀತಿ ಮಾಡಿದರು ಅ.ಪ ಕುಂದರದನ ಕುರುವಿಂದಾಧರ ಪೂ ರ್ಣೇಂದು ವದನ ಮುನಿವಂದ್ಯ ಎಂದಿಗೆ ಈ ಭವಬಂಧ ಬಿಡಿಸಿ ದಯ ದಿಂದ ತೋರುವಿಯಾನಂದ ಕುಂದುಗಳೆಣಿಸದೆ ಚಂದದಿ ಸಲಹಲು ಎಂದೆಂದಿಗು ನೀ ಗತಿಯೆಂತೆಂದರು 1 ಮಾರಜನಕ ಗಂಭೀರ ಹೃದಯ ಸಂ ಚಾರ ಭಜಕ ಮಂದಾರ ತೋರು ನಿನ್ನ ಪದ ಸಾರಸವನು ಮುನಿ ನಾರದಾದಿ ಪರಿವಾರ ಘೋರ ಶರಧಿಯೊಳು ಸೇರಿದವರಿಗಿ ನ್ನಾರು ಬಂದು ಉದ್ಧಾರ ಮಾಡುವರು 2 ಶ್ರೀಶ ಯದುಕುಲಾಧೀಶ ಮೇಘ ಸಂ ಕಾಶ ರೂಪ ಸರ್ವೇಶ ಘಾಸಿಪಡಿಪ ವಿಷಯಾಸೆಗಳೆಲ್ಲವ ನಾಶಗೈಸೊ ಶ್ರೀನಿವಾಸ ದಾಸ ಜನರಿಗುಲ್ಲಾಸವ ಕೊಡುತಿಹ ವಾಸುದೇವವಿಠಲಯ್ಯನೆ ಎನ್ನೊಳು 3
--------------
ವ್ಯಾಸತತ್ವಜ್ಞದಾಸರು
ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ ಪ ಕಾಯೊ ಕಾಯೊ ಜಿತಕಾಯಜಾತ ಶಿತ ಕಾಯೊ ನಿನ್ನ ಪದ ತೋಯಜಕೆರಗುವೆ ಅ.ಪ ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು ಶುಭ ಗುಣನಿಧಿ ಗುರು | ವಿಭುದೇಂದ್ರಕರ ಅಬುಜ ಸಂಭೂತ 1 ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ ದೀನಜ ನಾಮಕರ ಧೇನು ಪುರಾತನ ಗೋನದ ತರು ನಿಜ ತಾಣಗೈದ ಗುರು 2 ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ ಮಂಗಳ ಕೃಷ್ಣ ತರಂಗಿಣಿ ಭೀಮಾ ಸಂಗಮದಲಿ ಸಲೆ | ಕಂಗೊಳಿಸುವ ಗುರು 3 ಶರಧಿ ದುರಿತ ಕದಳಿದ್ವಿರದಿ ದಿವಿಜ ಪರಿವಾರ ನಮಿತ ನಿಜ ಕರುಣಿ ನಂಬಿದೆನು ಮರಿಯದೆ ನಿರುತ4 ವಿನುತ | ಶಾಮಸುಂದರಾಂಘ್ರಿ ದೂತ ಪೊಂದಿದ ಜನರಘ ವೃಂದ ಕಳಿವ ರಘು ನಂದನ ಮುನಿಮನ ಮಂದಿರವಾಸ 5
--------------
ಶಾಮಸುಂದರ ವಿಠಲ
ಕೋಲ ಕೋಲೆನ್ನ ಕೋಲ ಕೃಷ್ಣಯ್ಯನ ನೆನೆದೇವ ಕೋಲ ಪ. ಶಿರವ ದೂಗಿದನೆ ಬ್ರಹ್ಮ ದೂಗಿದನೆಮಂದಗಮನೆಯರ ಭಾಗ್ಯ ಚಂದ್ರ ಸೂರ್ಯರಿಗಿಲ್ಲಇಂದ್ರಗೆ ಇಲ್ಲವೆಂದು 1 ಲೋಕನಾಯಕಗೆ ಏಕಾರತಿಯನೆತ್ತಿ ಗೋಕುಲಾಧೀಶ ಸಲುಹೆಂದುಗೋಕುಲಾಧೀಶ ಸಲುಹೆಂದು ಕೈಮುಗಿದುಏಕೋಭಾವದಲಿ ಕೆಲದೆಯರು2 ಭೂಮಂಡಲಪತಿ ಮುಂದೆ ಮಂಡಲ ಮಾಡಿಅನ್ನಭಾಂಡವ ತಂದು ಇಟ್ಟಾರುಅನ್ನಭಾಂಡವ ತಂದಿಟ್ಟು ಕೈಮುಗಿದಾರುಪುಂಡರಿಕಾಕ್ಷ ಕೈಕೊಳ್ಳೊ 3 ತುಪ್ಪ ಸಕ್ಕರಿಯಲಿ ಪಕ್ವಾದ ಭಕ್ಷ್ಯಮಿತ್ರೆಯರು ತಂದು ಇಡುವೋರುಮಿತ್ರೆಯರು ತಂದಿಟ್ಟು ಕೈಮುಗಿದಾರುಭಕ್ತವತ್ಸಲನೆ ಕೈಕೊಳ್ಳೊ4 ಯಾಲಕ್ಕಿ ಕಸಕಸಿ ಮೇಲಾದ ಪಾಯಸ ಬಾಲೆಯರು ತಂದು ಇಡುವೋರುಬಾಲೆಯರು ತಂದಿಟ್ಟು ಕೈಮುಗಿದಿಹರುಬಾಲಗೋಪಾಲ ಕೈಕೊಳ್ಳೊ5 ಕರ ಮುಗಿದಿಹರುಸುಲಭ ಮೂರುತಿಯೆ ಕೈಕೊಳ್ಳೊ6 ಭೇರಿ ಮೊದಲಾದ ಭೋರೆಂಬೊ ತುತ್ತೊರಿವಾರುಜ ಗಂಟೆ ಮೊದಲಾಗಿವಾರುಜ ಗಂಟೆ ಮೊದಲಾಗಿ ರಂಗನಸಾರುತಲಿವೆ ಸಭೆಯೊಳು 7 ಪಟ್ಟಿದರಸಿಯರು ಇಟ್ಟ ಪದಾರ್ಥವದೃಷ್ಟಿಲಿನೋಡಿ ಸುಖಿಸುತದೃಷ್ಟಿಲಿನೋಡಿ ಸುಖಿಸುತ ಅವರಿಗೆಕೊಟ್ಟಾನು ಬ್ಯಾಗ ಕೈವಲ್ಯ8 ನಿತ್ಯ ಪ್ರಕಾಶಗೆ ಮುತ್ತಿನಾರುತಿಯಸತ್ಯಭಾಮೆಯರು ಮೊದಲಾಗಿಸತ್ಯಭಾಮೆಯರು ಮೊದಲಾಗಿ ಬೆಳಗಿದರುಮತ್ತ ರಾಮೇಶ ಸಲುಹೆಂದು9
--------------
ಗಲಗಲಿಅವ್ವನವರು
ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ ಜಯವಿನುತ ವಾಣೀಶ ಜಯ ರುಕ್ಮಿಣೀಶ |ಜಯಜಯ ಪ ಕಮಲಭವನುತಿಪಾತ್ರ ಕಮಲಸಖನಿಭಗಾತ್ರ ಕಮಲರಿಪು ಸಮವಸ್ತ್ರ ಕಮಲದಳ ನೇತ್ರ ಕಮಲ ಕರಧೃತಗೋತ್ರ ಕಮನೀಯ ಸುಚರಿತ್ರ ಕಮಲಾರಿ ಧರ ಮಿತ್ರ ಕಮಲಾಕಳತ್ರ 1 ನವನೀತ ದಧಿ ಚೋರ ಸುಂದರೀ ಕುಲಜಾರ ಸ್ಮರಸಮರ ಶೂರ ಕಂದರ್ಪಸಹಕಾರ ಕಾಮಿನೀ ಪರಿವಾರ ಬೃಂದಾವನ ವಿಹಾರ ಭಕ್ತ ಮಂದಾರ 2 ಧರಣೀ ಧರಾಸ್ಫಾಲ ದಮನಕರ ನಿಜಲೀಲ ನರಪೌತ್ರ ಪರಿಪಾಲ ನವ್ಯ ವನಮಾಲಾ ಮುರನರಕ ಶಿಶುಪಾಲ ಮುಖದನುಜ ಕುಲ ಕಾಲ ವರವ್ಯಾಘ್ರಗಿರಿಲೋಲ ವರದಾರ್ಯವಿಠಲಾ 3
--------------
ಸರಗೂರು ವೆಂಕಟವರದಾರ್ಯರು
ಜಯತೀರ್ಥ ಮುನಿವರ್ಯ ಪ ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು ರೇಶ ಯತಿಕುಲಾಧೀಶ ಪಾಲಿಸಯ್ಯ ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1 ಪಶುಪತಿಯ ಮತ ದಹಿಸಿ ಅಸುಪತಿಯ ಮತ ಮೆರೆದೆ ವಸುಮತಿಯ ಸುರನಾಗಿ ಬಂದು ನಿಂದೆ ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ ಬಿಸಜತವಪಾದ ಪಾಂಸವನಿತ್ತೆ 2 ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3 ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ ವಾಯುವಂತರ್ಗತ ಕೃಷ್ಣನ ತೋರೋ ಜಯತು ಶ್ರೀ ವೇಣುಗೋಪಾಲ ಮೂರ್ತೇ ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4 ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ ಪುಟ್ಟಿದೆನೋ ನಾನೀಗ ಈ ಜನ್ಮದಿ ಪುಟ್ಟಲಿಲ್ಲವೋ ಜ್ಞಾನ ಹರಿ ಗುರುಸ್ಮರಣೆಗೆ ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5 ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6 ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7 ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ ಅಳವಲ್ಲ ವರ್ಣಿಸಲು ನಿನ್ನ ಗುಣಗಳನು ಮಳಖೇಡವಾಸ ಯತಿಕುಲಾಧೀಶಾ 8 ಗುರುವೆ ನಿನ್ನಯ ಕರುಣಕವಚ ತೊಟ್ಟವರ ಚರಣಕಮಲದೊಳಿಹ ಮಧುಪನೆಂದೆನಿಸೋ ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟುಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
--------------
ಉರಗಾದ್ರಿವಾಸವಿಠಲದಾಸರು
ಶರಣು ಶರಣುಶರಣು ದಶರಥ ರಾಮದೂತಗೆ ಪ ಶರಣು ಕುರುಕುಲಾಧೀಶಗೆಶರಣು ವೈಷ್ಣವ ಮತ ವಿಲಾಸಗೆಶರಣು ಮುಖ್ಯಪ್ರಾಣಗೆ ಅ ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತಗೆಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ 1 ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆರಾಜ ಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ2 ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ 3
--------------
ಕನಕದಾಸ
ಶ್ರೀ ಗುರುವರದೇಂದ್ರರ ಸ್ತೋತ್ರಗಳು ಅಂದಣೇರಿದ ವರದೇಂದ್ರ ಮುನಿಪರ ನಿಂದು ಪಾಡುವರಫವೃಂದ ತರಿವರ ಪ ಅಂದದಿ ಭೂಸುರ ಸಂದಣಿ ಮಧ್ಯದಿ ಚಂದದಿ ಬಹು ಕರ್ಮಂದಿಗಳರಸ ಅ.ಪ ಶ್ರೀ ಮಧ್ವಮತಾಂಬುಧಿ ಸೋಮ ನಿಷ್ಕಾಮ ತಾಮಸಮತಕÀಂಜಸ್ತೋಮ ನಿಧೂಮ ಆ ಮಹಾಭಕ್ತ ಕುಮುದ ಪ್ರೇಮ ಸತ್ಕಾಮ ಕಾಮಿತ ಕಲ್ಪದ್ರುಮಗುರುಸಾರ್ವಭೌಮ ರಾಮ ಪದಾಂಬುಜ ಪ್ರೇಮದಿ ಭಜಿಸುವ ಭೂಮಿಸುರರ ಹೃತ್ತಾಮಸಹಾರಾ 1 ಉದಿತಾಕರ್À ಸಂಕಾಶ ವಿಧಿಕುಲಾಧೀಶ ಮುದದಿ ಭಜಿಸುವ ಭಕ್ತಹೃದಯನಿವಾಸ ಸದಮಲಭಕ್ತಙÁ್ಞನ ಉದಜವಿಕಾಸ ವಿಧಿಕುಲದ್ವೇಷಿ ಕುಮುದ ತತಿನಾಶ ವಿಧವಿಧದಲಿ ಹರಿಪದ ಭಜಿಸುವ ಮತಿ ವದಗಿ ಪಾಲಿಸು ಹೃದಜನಸದಯಾ 2 ಕರುಣಾನಿಧಿಯೆ ನಿನ್ನ ಚರಣ ಸೇವಕರ ಜರಮರಣಾದಿ ದೋಷತ್ವರಿತ ಪರಿಹಾರ ಶರಧಿ ವಿಹಾರ ನಿರುತದಿ ಹರಿಯನಾಮ ಸ್ಮರಿಸುವಧೀರ ವರದೇಶ ವಿಠಲನ ಕರುಣದಿ ಧರೆಯೊಳು ಮೆರೆಯುವ ಯತಿಕುಲವರಿಯ ಸುಚರಿಯಾ 3
--------------
ವರದೇಶವಿಠಲ
ಗುರುವರದೇಂದ್ರ ದಯಾಂಬುಧೇ ಶರಣಾಗತ ವತ್ಸಲ ಈಶ |ಚರಣಕಮಲಷಟ್ಪದ ಪಾಲಿಸು ಕಾಷಾಯವಸನಭೂಷಾ ಪದುರ್ಮತಭುಜಗಕುಘರ್ಮ ವಿನಾಯಕಕರ್ಮಬದ್ಧವ್ರತಾ |ಶರ್ಮತ್ರಿಧರ ಪ್ರಿಯ ಧರ್ಮಾಸಕ್ತನೆ ನಿರ್ಮಲ ಶುಭಚರಿತಾ ||ಭರ್ಮ ಸಮಾಂಗ ಅಧರ್ಮ ಶಿಕ್ಷಕರಿಚರ್ಮಾಂಬರ ಪ್ರೀತ |ಕಿರ್ಮೀರಾರಿ ಸುಶರ್ಮ ತೀರ್ಥಸಖಕರ್ಮಂದಿಪ ನಾಥ 1ಶ್ರೀ ಮನೋರಮ ಸು ತ್ರಿಧಾಮದೇವ ಶ್ರೀರಾಮ ಪದಾಸಕ್ತಾ |ಕಾಮಿತ ಫಲದಧರಾಮರವಂದಿತ ಸ್ವಾಮಿ ನಮಿಪ ಭಕ್ತ ||ಶ್ರೀಮಂದಾರಅನಾಮಯ ಸದ್ಗುಣಧಾಮನೆ ಸುವಿರಕ್ತಾ |ಪಾಮರದೂರ ಲಲಾಮ ವದಾನ್ಯ ಮಹಾಮಹಿಮನೆ ಶಕ್ತ 2ಮಾನಿ ಪೂಜ್ಯ ಸುಜ್ಞಾನಿ ಧೀರ ಸದ್ಭಾನುಚಂದ್ರ ಭಾಸ |ದೀನ ಪೋಷಕ ನಿಜಾನುಗ ಪಾಲಕ ಕ್ಷೋಣಿಪ ನಿರ್ದೋಷ ||ಸಾನುರಾಗದಲಿ ಪೋಣಿಸುಸನ್ಮತಿಮೌನಿ ಕುಲಾಧೀಶ |ನೀನಲ್ಲದೆ ಶ್ರೀ ಪ್ರಾಣೇಶ ವಿಠ್ಠಲ ತಾನೊಲಿಯನು ಲೇಶ 3
--------------
ಪ್ರಾಣೇಶದಾಸರು