ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ ಬದಲು ನಾನೊಲ್ಲೆನೊ ವಿದಿತ ವೇದ್ಯ ಪ ಕ್ಷಣ ನಿನ್ನ ಬಿಡಲಾರೆ ನಿನ್ನವರನು ಬಿಡೆ ಕುಣಿ ಕುಣಿವೆನು ನಿನ್ನ ಜನರೆಂದರೆ ಗುಣತ್ರಯ ವಾರಣ ನಿನ್ನ ವಾರುತಿಯಿರೆ ಒಣ ಹರಟೆಗಳ ನಾ ಕೇಳಲೊಲ್ಲೆ 1 ನೀಚ ಜನರಂಗಳ ಸಂಗವ ಕೊಡದಿರು ವಾಚದಿಗನ್ಯರಿಗಾಲ್ಪರಿಸಬೇಡ ಸೂಚಿಸು ನಿನ್ನಯ ಗುಣಗಣಂಗಳೆನೆ ನಾ ಯಾಚಿಪೆ ಇದನೆ ಇದನೆ ಮುರಾರೆ 2 ಶ್ರೀಶ ನಿನ್ನಯ ಕಥೆ ಕೇಳದೆ ಬಹಳಾಯು ಕಾಸು ಬಾಳದು ಕೇಳು ಕರುಣಾಬ್ಧಿಯೆ ತಾಸು ಒಂದಾದರು ಅವನೆ ಸುಜೀವಿಯೊ ವಾಸುದೇವವಿಠಲ ನಿನ್ನವರವನೊ 3
--------------
ವ್ಯಾಸತತ್ವಜ್ಞದಾಸರು
ಉದೋ ಉದೋ ಉದೋ ಉದೋ ಉದೋ ಯನ್ನಲು ಉದ ಮುದೋ ಪ ತಮ್ಮನು ಪೊಗಳಿ ಪಾಲೆನೆ ಅಮ್ಮೊಮ್ಮಾ | ಮೊಮ್ಮನ ಪಡೆದಿಹ ಜಗದಯ್ಯಾ | ಸುಮ್ಮನ ಹೊಂದಿಹ ಬಾಲಕ ನಿಮ್ಮಾ | ಝಮ್ಮನೆ ಸ್ಮರಣೆಗೆ ಬಾನಮ್ಮಾ 1 ಛಂದ ವಿವೇಕದ ಚೌಡಕಿ ಹಿಡಿದು | ಒಂದೇ ನಿಷ್ಠೆಯ ತಂತಿಯ ಬಿಗಿದು | ಸುಂದರ ಭಕ್ತಿಯ ರಂಗಕ ಬಂದು | ಗೊಂದಳ ಹಾಕುವೆ ನಾನಿಂದು 2 ನಾಮಾವಳಿ ಕವಡೆಯ ಸರಥರಿಸಿ | ಪ್ರೇಮದ ಬಂಡಾರವ ಸುರಿಸಿ | ಆಮಹಾಜ್ಞಾನದ ಹೊತ್ತ ಪ್ರಜ್ವಲಿಸಿ | ನಾಮಗೆಜ್ಜಿಲಿ ಕುಣಿವೆನು ಘಲಿಸಿ 3 ಆವನಿಯ ಸುಜನರ ಮೊರೆಯನು ಕೇಳಿ | ಪರಿ ತಾಳಿ | ಭವ ಮಹಿಷಾಸುರ ನಸುವನು ಹೋಳಿ | ಜವದಲಿ ಮಾಡಿದೆ ತುನುಶೀಳಿ 4 ಮುನಿ ಮಾನಸ ತುಳಜಾಪೂರ ಗೇಹಿ | ಖೂನದೊರಿಸೀ ನಿಜ ಸೋಹೀ | ಏನೇ ನರಿಯದವನೆಂದರಿತು ಕಾಯೀ | ಘನಗುರು ಮಹಿಪತಿ ವರದಾಯಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ನೋಡಿದರೆ ಏನಾÀಗಲೊಲ್ಲದೊ ಪ ಶ್ರೀ ನಿಕೇತನ ನಾನೇ ನಿದರ್ಶನ ಅ.ಪ ಪೂಜೆಯ ಮಾಡಿದ ಪುಣ್ಯದ ರಾಶಿಯು ರಾಜಿಸುತಿರುವುದೊ ಎನ್ನಯ ಶಿರದಲಿ1 ಸಾಕಲು ಹೆದರಿದ ಪರಿವಾರವನು ವ್ಯಾಕುಲವಿಲ್ಲದ ಗೋಕುಲ ಮಾಡಿದಿ 2 ಈ ಮಹಾಭಾಗ್ಯವು ನಿನ್ನದೋ ಶಿಷ್ಯರ ಪ್ರೇಮದ ಕವಚವ ಧಾರಣೆ ಮಾಡಿದೆ 3 ಪಾತ್ರನು ನಿನ್ನಯ ಕರುಣಕೆ ನಾನಿರೆ ಶತ್ರುಗಳೆಲ್ಲರು ಮಿತ್ರರಾಗಿರುವರೋ 4 ನಗುವೆನು ಕುಣಿವೆನು ನಗಿಸುವೆ ಕುಣಿಸುವೆ ಸೊಗಸನು ನೋಡಿ ನೀ ನಗೆಲೋ ಪ್ರಸನ್ನನೆ 5
--------------
ವಿದ್ಯಾಪ್ರಸನ್ನತೀರ್ಥರು