ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರಪುಣ್ಯಬೇಡುವೆನಾಂ ಗುರುವರ್ಯನ ಚರಣ ಪಿಡಿದು ಮುಕ್ತಿಯಪಥದೊಳ್ ಪರಿಕಿಸಿ ಶೀಘ್ರದಿಘನತರ ಪರತತ್ವಪಡೆದು ಮರಣ ಜನನವ ತೊರೆವೇಂ ಕಂದ ಸನ್ನುತಗುರುವರತತ್ವ ಬೋಧಿಸಿ- ಮಂಗಳಾಶಾಸನಗೈಯುತಲೀ ಪ ಎನ್ನನೆ ಯಜಿಸುತ ಸುಮ್ಮನೆಯಿದ್ದರೆ- ಬೇಡಿದವರಗಳ ಕೊಡುವೆನುತ ಅ.ಪ ಕೊಟ್ಟರು ದ್ರವ್ಯವ ನಿನ್ನಪರಾಧವ ಕೊಡದಿದ್ದರು ನಾ ಮನ್ನಿಸುವೆ ನಿಷ್ಠೆಯೊಳ್ಪರಮನ ಸನಿಯದೊಳಿದ್ದರೆ ಬಿಟ್ಟೆನೆಯೆಂದಿಗು ನಂಬೆನುತ 1 ಸಾಧಿಸಿ ವಿರತಿಯ ಸಂಶಯಗೈಯದೆ- ಭೇದವ ಛೇದಿಸಿ ನಿರ್ಮಲದಿ ನಾದವ ಕೇಳುತ ಚಿತ್ಕಳೆ ನೋಡುತ ಮೋದದಿ ಶ್ರೀಹರಿ ನೀನೆನುತ 2 ಮೌನವ ಧರಿಸಿರಲು ಕರೆದು ಲೋಕಸಾರಂಗಮುನಿಗಳಂ- ಕಳುಹಿಸಿಕರುಣದಿ ಪೊರೆದಂತ 3 ಬೇಡಿಕೊ ಎನ್ನಲು ನಿನ್ನಂತ ಕುಕ್ಷಿಯೊಳ್ಪುಟ್ಟಿದೆ ಮನ್ನಿಸುತ 4 ಅಂತರಂಗದಿಂ ಧ್ಯಾನಿಸಲು ಇಷ್ಟದಿ ಸೀರೆಯ ಕೊಟ್ಟಂತ 5 ನಿತ್ಯವು ಕೃಪೆಯನು ತೋರುತಲಿ ಅರ್ಥಿಲಿ ರಂಗನ ಪಿಡಿದಂತ 6
--------------
ರಂಗದಾಸರು
ಗಂಗಾಜನಕಗೆ ಮಂಗಳಾರುತಿಯನೆತ್ತಿ ಮಂಗಳಾಂಗಿಯರು ಸಂಗೀತ ಪಾಡುತ ಪ ಅನಿಮಿಷೇಶನು ಆನಂದಾತ್ಮಾ ಪ್ರಾಕೃತನು ಅನಿಲವಾಸಾನಂತಾನಂತಾನಂತನಂತರೂಪನು 1 ಲಕ್ಷ್ಮೀವಾಸನು ಕುಕ್ಷಿಯೊಳ್ ಬ್ರಹ್ಮಾಂಡಧರನು ಲಕ್ಷಣಗ್ರಜನು ಸುಕ್ಷೇಮದಿಂದಿಡುವ ನಾಮ 2 ಕರುಣಪೂರ್ಣನು ಸ್ಮರಿಪರ ಭವವಿದೂರ ಸರಿಮಿಗಿಲಿಲ್ಲದ ಸಿರಿವಿಠಲ ನಾಮಧೇಯ 3
--------------
ಸಿರಿವತ್ಸಾಂಕಿತರು
ಗೌತಮ ಗೊಲಿದನೆ ರಂಗನಾಥದಾತನೆ ನಮಿಸುವೆ ರಂಗನಾಥ ಪ ಕಾವೇರಿ ತೀರಗ ರಂಗನಾಥ ಮಾವಾರಿ ಸಲಹೆನ್ನ ರಂಗನಾಥ 1 ಭಕುತಾಭೀಷ್ಟ ಪ್ರದ ರಂಗನಾಥಮುಕುತರೊಡೆಯ ಶ್ರೀರಂಗನಾಥ 2 ವಕ್ಷದಿ ಲಕ್ಷ್ಮಿಯು ರಂಗನಾಥಕುಕ್ಷಿಯೊಳ್ಬ್ರಹ್ಮಾಂಡ ರಂಗನಾಥ 3 ರಂಗಧಾಮನೆ ಶಿರಿ ರಂಗನಾಥಮಂಗಳ ಮಹಿಮಾನೆ ರಂಗನಾಥ 4 ಅಜಭವ ಸುರವಂದ್ಯ ರಂಗನಾಥನಿಜ ಗುರು ಗೋವಿಂದ ರಂಗನಾಥ 5
--------------
ಗುರುಗೋವಿಂದವಿಠಲರು
ಮಂದಗಮನೆ, ಇವನಾರೆ ಪೇಳಮ್ಮ |ಮಂದರಧರಗೋವಿಂದ ಕಾಣಮ್ಮಪಕೆಂದಳಿದನಖಶಶಿಬಿಂಬ ಪಾದಪದ್ಮ |ಅಂದುಗೆಯಿಟ್ಟವನಾರು ಪೇಳಮ್ಮ ||ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |ನಂದನ ಕಂದ ಮುಕುಂದ ಕಾಣಮ್ಮ 1ಉಡುಗೆ ಪೀತಾಂಬರ ನಡುವೀಣೆ ಉಡುದಾರ |ಕಡಗ-ಕಂಕಣವಿಟ್ಟವನಾರಮ್ಮ ||ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |ಒಡನೆ ತೋರಿದ ಜಗದೊಡೆಯ ಕಾಣಮ್ಮ 2ನೀರದನೀಲದಂತೆಸೆವ ವಕ್ಷದಿ ಕೇ-|ಯೂರ-ಹಾರಗಳನಿಟ್ಟವನಾರಮ್ಮ ||ನೀರೆ ಕೇಳು ನಿರ್ಜರರಾದವರಿಗೆ |ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ 3ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|ಲಂಕೃತನಹನೀತನಾರಮ್ಮ ||ಪಂಕಜಮುಖಿಶ್ರೀಭೂದೇವಿಯರರಸನು |ಶಂಕೆಇಲ್ಲದೆ ಗೋಪೀತನಯ ಕಾಣಮ್ಮ4ಕಂಬುಕಂಧರಕರ್ಣಾಲಂಬಿತಕುಂಡಲ|ಅಂಬುಜಮುಖದವನಾರೆ ಪೇಳಮ್ಮ ||ರಂಭೆ ಕೇಳೀತ ಪುರಂದರವಿಠಲ |ನಂಬಿದ ಭಕ್ತಕುಟುಂಬಿ ಕೇಳಮ್ಮ 5
--------------
ಪುರಂದರದಾಸರು