ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷಯವಾಗುವುದು ನಿಮಗೆ ಪ ಕುಕ್ಷಿಯೊಳೆಲ್ಲವ ಪೊಂದಿರುವಾತನ ಕುಕ್ಷಿಗೆ ಹಿತಕರ ಭಿಕ್ಷೆಯೆಂದೆನ್ನುತ ಅ.ಪ ಹೊಟ್ಟಿಗೆ ಇಲ್ಲದೆ ಬಂದಿಲ್ಲ ಕೊಟ್ಟರೆ ಪುಟ್ಟದ ಕಟ್ಟನು ತರುವೆವು ಅಷ್ಟು ಪಾಪಗಳ ಮಾಡಲು ಕೃಷ್ಣ ದಯೆಯ ತಂಬಿಟ್ಟನು ಕೊಡುವೆವು 1 ಶ್ರಾವಣ ಮಾಸದ ಶನಿವಾರ ಯಾವನು ಕೊಡುವನೊ ಮನಸಾರ ಜೀವನ ಕ್ಲೇಶದ ಪರಿಹಾರ ಭಾವದಿ ಪೊಂದುವ ಸುಖಸಾರ 2 ಮೋಸವಿಲ್ಲದವು ದಾಸ ಪ್ರಸನ್ನ ತೋಷಣ ವೈಭವ ಶ್ರೀಶನೆ ಬಲ್ಲನು ಸಾಸಿರ ಸಾಸಿರ ನಾಣ್ಯದ ಕಾರ್ಯವ ವೀಸಕೆ ಮಾಡುವ ದಾಸರ ಗುಂಪಿದು3
--------------
ವಿದ್ಯಾಪ್ರಸನ್ನತೀರ್ಥರು
ಕಾವ ಜನಕ ನೀನಿರುತಿರಲೆನಗಿ ನ್ನಾವ ಬಂಧುವು ಬೇಕೊ ಮಾಂಗಿರಿಯ ರಂಗ ಪ ದೇವ ನೀನಲ್ಲದೆ ಲಕ್ಷಜೀವಿಗಳಿದ್ದು ಈವ ಸೌಖ್ಯವು ಬೇಡ ಮಾಂಗಿರಿಯ ರಂಗ ಅ.ಪ ನಾರಿಯ ಮಾನಾಪಹಾರವ ಗೈದಾಗ ವೀರರೈವರು ತಮ್ಮ ಮೋರೆಯ ತೋರ್ದರೆ ನೂರುಮಂದಿ ವೇದಪಾರಂಗತರಿದ್ದು ಕ್ರೂರ ಕಾರ್ಯಂಗಳ ನಿಲಿಸಿದರೆ ರಂಗ 1 ಮೂವತ್ತುಮೂರುಕೋಟಿ ನಿರ್ಜರರಿದ್ದು ರಾವಣನೊಬ್ಬನ ಜೈಸಿದರೆ ಪಾವಕ ಹಸ್ತವನಿತ್ತ ಗಿರೀಶನ ದೇವಗಣೇಶ್ವರರುಳಿಸಿದರೇ 2 ಅರಕ್ಷಿತವಾದುದ ಸುರಕ್ಷಿತ ಗೈವೆ ಸುರಕ್ಷಿತವಾದುದಕ್ಷಯ ಗೈವೆ ನಿರಕ್ಷರಕುಕ್ಷಿಗೆ ಮೋಕ್ಷವ ನೀನೀವೆ ದುರಿತಕ್ಷಯ ಗೈದು ಪಾಲಿಸುವೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಾಗರ ಮಾಡಿದೆನೇ ಪ ಜಾಗರ ಮಾಡಿದೆ ಸಾಗರನಿಲಯನ ನೀಗದಮಹಿಮೆ ಶಿವ ಯೋಗದಿ ತಿಳಿಸೆಂದು ಅ.ಪ ಲಕ್ಷಪತ್ರರ್ಪಿಸಿ ತ್ರಿಜಗದ್ರಕ್ಷ ನಿನಗೆ ನಮಿಸಿ ಲಕ್ಷದಿಂದ ಸತಿಗಕ್ಷಯವಿತ್ತ ಭಕ್ತ ಪಕ್ಷನ ನಾಮ ಎನ್ನ ಕುಕ್ಷಿಗೆ ನೀಡೆಂದು 1 ಮನವನು ಮಡಿಮಾಡಿ ಹರಹರ ನಿನಗೆ ನಾ ಎಡೆಮಾಡಿ ಮನಸಿಜಜನಕನ ಘನಸಚ್ಚರಿತೆಯನ್ನು ಕೊನೆಯ ನಾಲಗೆ ಮೇಲೆ ನೆನವು ಸ್ಥಾಪಿಸೆಂದು 2 ಪ್ರೇಮ ದೃಷ್ಟಿ ತೆರೆದು ಶಂಭು ಎನ್ನ ಕಾಮಿತಗಳ ಕಡಿದು ಭೂಮಿಗಧಿಕ ಮಮಸ್ವಾಮಿ ಶ್ರೀರಾಮನ ಕೋಮಲ ಪಾದವೆನ್ನ ಮಂಡೆಮೇಲ್ಹೊರಿಸೆಂದು 3
--------------
ರಾಮದಾಸರು
ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟೆಬುದ್ಧಿಯ ನಾನು ಹೇಳುವೆಬುದ್ಧಿಯ ನಾನು ಹೇಳುವೆ ಶುದ್ಧ ಬ್ರಹ್ಮನು ನೀನು ಎಲೆ ಎಂಗರವಟ್ಟೆ ಪ ಸತಿ ಎಲ್ಲಿ ಹಿಂದಣ ಸುತರೆಲ್ಲಿಹಿಂದಾದುದನು ಬಿಟ್ಟು ಇಂದಿದು ನನ್ನದೆಂಬೆ ಎಲೆ ಎಂಗರವಟ್ಟಿ 1 ಮುಂದಾವ ಜನ್ಮ ಭೋಗಿಪೆಯೋ ಎಲೆ ಎಂಗರವಟ್ಟೆಮುಂದಾರ ಮದುವೆಯಹೆ ಎಲೆ ಎಂಗರವಟ್ಟೆಮುಂದಣ ತಾಯಿ ಯಾರು ಮುಂದಣ ತಂದೆ ಯಾರುಮುಂದಣ ಹಿಂದಣದರಿಯೆ ಇಂದಿನದು ಎನ್ನದೆಂಬೆ ಎಲೆ ಎಂಗರವಟ್ಟಿ2 ಭಿಕ್ಷವ ಹಾಕಲಾರಿ ಎಲೆ ಎಂಗರವಟ್ಟೆ ಕುಕ್ಷಿಗೆ ತಿನ್ನಲಾರಿಲಕ್ಷ ಹೊನ್ನುಗಳನ್ನು ನೆತ್ತಿಗೆ ಇಟ್ಟುಕೊಂಬೆಯಾ ಎಲೆ ಎಂಗರವಟ್ಟೆ 3 ತನುವಿದು ತನ್ನದೆಂಬೆ ಎಲೆ ಎಂಗರವಟ್ಟೆ ತನುವನು ನೋಡಿಕೊಂಬೆನಿನ್ನ ಮುಂದೆಯೇ ತನು ತಾನು ಹೋಗುವುದುತನುವದು ನಿನಗಿಲ್ಲ ತನು ಸಂಬಂಧವೆಂತೋ ಎಲೆ ಎಂಗರವಟ್ಟೆ4 ಹಿಡಿಯೋ ಗುರುಪಾದವನು ಎಲೆ ಎಂಗರವಟ್ಟೆ ಪಡೆಯೋ ಕಟಾಕ್ಷವನುಸಡಿಲದೇ ದೃಷ್ಟಿಯನು ತಿರುಹಿ ನಿನ್ನೊಳಗಿಟ್ಟುಒಡೆಯ ಚಿದಾನಂದನು ನೀನಾಗಿ ನೀನಿರು 5
--------------
ಚಿದಾನಂದ ಅವಧೂತರು
ಮಂಗಳ ಮಾರಮಣಗೆ ಮಂಗಳ ಜಯಮಂಗಳ ಭೂರಮಣಗೆ ಮಂಗಳ ಪ.ಮುಕುಟಕೆ ಮಂಗಳ ಮತ್ಸ್ಯಾವಾತಾರಗೆಮುಖಕೆ ಮಂಗಳ ಮುದ್ದು ಕೂರ್ಮನಿಗೆ ||ಸುಕಂಠಕೆ ಮಂಗಳ ಸೂಕರರೂಪಗೆನಖಕೆ ಮಂಗಳ ಮುದ್ದು ನರಸಿಂಹಗೆ 1ವಕ್ಷಕೆ ಮಂಗಳ ವಟವಾಮನನಿಗೆಪಕ್ಷಕೆ ಮಂಗಳ ಭಾರ್ಗವಗೆ ||ಕಕ್ಷಕೆ ಮಂಗಳ ಕಾಕುತ್ಸ್ಥರಾಮನಿಗೆಕುಕ್ಷಿಗೆ ಮಂಗಳ ಶ್ರೀ ಕೃಷ್ಣಗೆ 2ಉರುಗಳಿಗೆ ಮಂಗಳ ಉತ್ತಮ ಬುದ್ಧಗೆಚರಣಕ್ಕೆ ಮಂಗಳ ಚೆಲ್ವ ಕಲ್ಕಿಗೆ ||ಪರಿಪರಿ ರೂಪಗೆಪರಮ ಮಂಗಳಪುರಂದರವಿಠಲಗೆ ಶುಭಮಂಗಳ 3
--------------
ಪುರಂದರದಾಸರು