ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ನೋಡಿರೇ ನೋಡಿರಮ್ಮಾ ಚೆಲುವನಾ ನೋಡಿರೇ || ಇವ|| ರೂಢಿಗೆ ಆವನಿಜೆಯಾ ತಕ್ಕುವರನೇ ಮುದ್ದುಸ್ಮರನೇ ಪ ಪಾದ ಜಂಘಯಿಂದ ಜಾನೂರುಮಾರಾ ತ್ರಿವಳವೇ| ಹಾರ ದಿಯ ಕರ ಸರಳವೇ 1 ಮಂಡಿತದ ಕುಂಡಲವಾ| ಮೃಗಮದ ಕಿರೀಟ 2 ಆವರಾಯನಮಗನೋತಾನರಿಯೇ|ಭೂಸು| ರಾವಳಿಯೊಳಿಂದ್ಧಾರೇನು |ಅಂಗ| ದಾವ ತೇಜಮುಸುಕಿತು ಧರಿಯೇ|ತ್ರ್ಯೆಭುವನವರಕ್ಷಿಸ ಬಂದಾಹರಿಯೇ | ಮುಜ್ಜಿಮರಿಯೇ 3 ಮುಟ್ಟಿಲೀ ತಗಧನುಏಳಲಿ ಝಮ್ಮೆನೇ ನಾವು ನೆಟ್ಟನೆಪೂಜಿಪೆವು ಗೌರಮ್ಮನೇ ಎಂದು ಬಿಟ್ಟ ಮಗಳು ಬೇಡಿಕೊಂಡರು ಸುಮ್ಮನೇ ಆಡಿಯಿಟ್ಟುನಲಿದು ಬರುವ ರಾಮೊ ಘಮ್ಮನೇ ಪರಬೊಮ್ಮನೆ 4 ಬಂದು ನೋಡಿಬಿಲ್ಲನೆತ್ತಿದ್ದಾಚಕ್ಕನೇ ಅರುವಿಂದ ಲೋಚನೆ ಮಾಲಿ ಹಾಕಲು ಘಕ್ಕನೇ ವೃಂದ ಕಾಣುತ ಹೆದರಿತುಧಕ್ಕನೇ ನಮ್ಮ ತಂದೆ ಮಹಿಪತಿ ನಂದನ ಪ್ರಭು ಠಕ್ಕನೇ ಪಾಲಕ್ಕುನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪ್ರಸನ್ನ ಶ್ರೀ ನವಗ್ರಹ ಸ್ತುತಿಗಳು ಶ್ರೀ ಸೂರ್ಯದೇವ ಸ್ತೋತ್ರ 88 ಆ ನಮಿಸುವೆ ಘೃಣಿ ಆದಿತ್ಯ ಸೂರ್ಯ ಸೂರಿ ಪ್ರಾಪ್ಯ ಪ ಅಮಿತ ಸ್ವತೇಜದಿ ಝಗಿ ಝಗಿಸುತಿ ಜಗತ್ ಜನ್ಮಾದಿಕರ್ತ ಚೇಷ್ಟಕ ಸ್ಫೂರ್ತಿದಾತ ಅಮಯ ದೂರ ಸುಗುಣ ಗಣಾರ್ಣವ ದೇವ ಶ್ರೀಮನ್ನಾರಾಯಣ ಧ್ಯೇಯ ಧ್ಯಾನಿಪೆ ನಿನ್ನ 1 ಮಕರ ಕುಂಡಲವಾನ್ ಕಿರೀಟಿಯೆ ಅರಿದರ ಧಾರಿ ಅವ್ಯಯಾನಂದ ಚಿತ್ ಚಾಮೀಕರ ವಪು ಶ್ರೀಯುಕ್ ಪದ್ಮದಿ ಇರುತಿಹಿಯೋ ಅರ್ಕಸ್ಥ 2 ಹಿಂಕಾರ ಪ್ರಸ್ತಾವ ಆದಿ ನಮೋ ನಮೋ ಉದ್ಗೀಥ ಪ್ರತಿಹಾರೋಪದ್ರವ ನಿಧನ ಉತ್ಕøಷ್ಟ ಸಾಮ ಪ್ರತಿಪಾದ್ಯ ನಾರಾಯಣ ಋಕ್ ಸಾಮ ವೇದದಿಂ ಸ್ತುತ್ಯ ವಾಗ್ವಾಯ್ವಿಂದ 3 ಭೂತೇಂದ್ರಿಯ ಕರ್ಣಾದಿಗಳಿಗೆ ದೂರ ದ್ಯುಸ್ಥದಿವಃಪರ ತ್ರಿಪಾದ ಜ್ಯೋತಿರ್ಮಯನು ಹಿತಕರನಿವ ಅರ್ಕನೋಳ್ ಜ್ವಲಿಸಿ ಅರ್ಕಗೆ ಒದಗಿಸಿಹ ತನ್ನ ಸೂರ್ಯನೆಂಬೋ ನಾಮ 4 ಸೂರ್ಯದೇವನೆ ದಯಾವಂತನೆ ನಮೋ ನಮೋ ಕಶ್ಯಪಾತ್ಮಜ ನೀ ಎನ್ ಪಾಪ ಪರಿಹರಿಸೋ ಮಹಾದ್ಯುತಿ ತಮೋಘ್ನನೇ ಜ್ಞಾನಾಯುರ್ದಾತ ನೀ ಶ್ರೀಯಃಪತಿ ನಾರಾಯಣನ್ನೊಲಿಸೋ ಎನಗೆ 5 ಸೂರ್ಯ ನೀ ಅಹರಹ ಎನ್ನಸರ್ವಪೀಡೆಗಳ್ ಕಳೆದು ಬೃಹತಿಸಾಸಿರ ಸ್ವರ ವ್ಯಂಜನಾಕ್ಷರ ವಾಚ್ಯ ಶ್ರೀಹರಿಯ ಭಜಿಸಲು ಶತಾಯುಸ್ ಬಲವೀಯೋ 6 ಶರಣು ಪದ್ಮಜಪಿತ ಪ್ರಸನ್ನ ಶ್ರೀನಿವಾಸ ಸೂರ್ಯ ನಿನ್ನ ಪ್ರೀತಿಪಾತ್ರ ಸೂರ್ಯನೊಳಿದ್ದು ನೀ ಜಗತ್ಸರ್ವ ಕಾಯುತ್ತಿ ಕರುಣದಿ ಎನ್ನನು ಎನ್ನವರನು ಕಾಯೋ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು