ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ರುದ್ರದೇವರಿಗೆ ಮೊರೆ) ನೀಗಿದೆನು ಸಂಸಾರ ಧನ್ಯಾಳಾದೆ ಮೂಗಣ್ಣ ತಾನೆ ಎನ್ನ ಕೈಯ ಪಿಡಿದಾ ಪ ರೋಗ ಪರಿದಿತು ಎನಗೆ ಈಗ್ಯಾಕೆ ಔಷಧವು ಜಾಗು ಮಾಡದೆ ಕಾವೋ ದೇವನಿರಲು ಭವ ಸಾಗರವ ದಾಟಿಸಿ ಈಗಲಿಯ ಭೂಮಿಗೆನ್ನಾಮ ಹಮನ [?] ತಪ್ಪಿಸಲಿ 1 ಬಳಲಿದೆನು ಸಂಸಾರದಳವು ಕಾಣದೆ ನಾನು ಭವ ದುಃಖ ಶರಧಿಯೊಳಗೆ ಉಳುಹುವರ ದಾರಿಗಣದೆ ಹರನ ಮೊರೆಯಾಗಲು ನೆಲಸಿದನು ಕರುಣಾಳು ಎನ್ನಯ ಮನದೀ 2 ನೀಲಕಂಠಗೆ ಜಯ ಫಾಲನೇತ್ರನೆ ಜಯ ಮಾಲತೀಧವ ಜಯ ವಂದಿಸುವೆ ಶಿರವಾ ಮೇಲು ನರಸಿಂಹವಿಠಲನಾಣೆ ಬೇಡುವೆ ವ್ಯಾಲ ಭೂಷಣ ಮನ್ಮನಾಲಯದಿ ನಿ ನೆಲಸು 3
--------------
ನರಸಿಂಹವಿಠಲರು
ಆವೂರು ಈ ಊರು ಯಾವೂರು ಆದರೇನು ಪ ಕಾವೋರು ಶ್ರೀಹರಿ ಲೇಸಾಗಿ ಇರಲೂ ಅ.ಪ ನೀರಜನಾಭನ ಕಾಳಿಂಗ ಮಥನನ ಪಾರಿಜಾತವ ತಂದ ರುಕ್ಮಿಣಿ ಪತಿಯ ಸಾರುತ್ತ ಪಾಡುತ್ತ ಪೊಗಳುತ್ತಬೇಡುತ್ತ ಚರಣಾವ ನೆರೆನಂಬಿ ತಿರುಗುವ ದಾಸರಿಗೆ1 ಆರು ಆಳಿದರೇನು ಆರು ಅಳಿದರೇನು ಮಾರುವ ಧಾರಣಿ ಏರಿದರೇನು ಇಳಿದರೇನು ಊರೆಲ್ಲ ಎದುರಾದರೇನು ಹಿತವಾದರೇನು ಕರಿರಾಜವರದನ ಕೊನೇರಿ ವಾಸನ ಕರುಣವ ಪಡೆದವಗೆ 2 ಕಾಸು ಎಂದರೆ ಪ್ರಾಣ ಸಾಮಾನ್ಯಜನರಿಗೆ ಈ ಶರೀರವ ಕಷ್ಟದಿ ಬಿಡುವಾಗ ಬಾಹುದೈ ಪಾದ ಸೋಮಶೇಖರ ವಂದ್ಯ ಶೇಷಗಿರೀಶನ ದಾಸಾನು ಎಂತೆಂದು ಕುಣಿವವಗೆ 3 ಮೂರುಲೋಕದ ಅರಸು ಸಾರಂಗ ಪಾಣಿಯು ನೀರಜಭವಾಂಡ ಉದಯಕೆ ಕಾರಣ ಅಷ್ಟಕರ್ತ ಸಿರಿಪದ್ಮಜಾಸನ ವಂದ್ಯ ದೇವಾದಿದೇವನ ಮೀರಿ ನಡೆವುದುಂಟೆ ಈ ಚರಾಚರ ಜಗದೊಳು ಮನವೇ4 ಊರೆಲ್ಲನೆಂಟರು ಉಣಬಡಿಸುವರಿಲ್ಲ ಸಿರಿಯಿದ್ದಕಾಲಕ್ಕೆ ಎಲ್ಲರು ನೆಂಟರಯ್ಯ ಸಿರಿತನ ತಾ ತಪ್ಪಿ ಬಡತನ ಬಂದರೆ ನಡಿನಡಿಯೆಂಬರು 5 ಹರಿ ಊರು ನಮ್ಮೂರು ಹರಿವೋರು ನಮ್ಮೋರು ಹರಿನಾಮ ಬಂಧುವು ಹರಿನಾಮ ಬಳಗ ಹರಿಹರಿ ಎಂದರೆ ದುರಿತವು ಪರಿಹಾರ ಹರಿಗುರು ಚರಣವೆ ಪರಗತಿ ಸಾಧನ ಮನವೇ 6 ಕೋರಿ ಕೋರಿದ ವರವ ನೀಡುವ ಪ್ರಭುವು ಸಿರಿಜಯಮುನಿ ಹೃಸ್ಥವಾಯುಗ “ ಶ್ರೀ ಕೃಷ್ಣವಿಠಲಾ” ಸಾರಿದ ಜನರನು ಪೊರೆಯುವ ಕರುಣದಿ ನೆರೆನಂಬುಮನವೆ ಭಯಬೇಡ ಮನವೇ7
--------------
ಕೃಷ್ಣವಿಠಲದಾಸರು
ನಿರುತದಿ ಭಜಿಪೆನಾ ಭರತನ ರಾಣಿಯೇ ಭಾರತಿಯೇ ಪ ಗುರುವರಂತರ್ಗತ ಹರಿಭಕ್ತಿ ಪಾಲಿಸೇ ಭಾರತಿಯೇ ಅ.ಪ ಕಾವೋದು ಬಾಲನ ಸೇವೆ ನೀಕರಿಸದೆ ಭಾರತಿಯೇ ಶಿವಮುಖ ಸುರ ಸಂಸ್ತವಕೆ ಸುಪ್ರೀತಳೆ ಭಾರತಿಯೇ 1 ಕಾಳೀದ್ರೌಪದಿ ಶಿವಕನ್ಯಳೆಂದೆನಿಸಿ ಭಾರತಿಯೇ ನಳನಂದಿನಿ ಮನ ಕೊಳೆಯ ತೊಳೆಯಬೇಕೇ ಭಾರತಿಯೇ 2 ವಂದಿಪೆ ನಿನಗಿಂದ್ರೇಶನಳೆಂದೆನಿಸಿದಿ ಭಾರತಿಯೇ ಕಂದನ ಕುಂದುಗಳೊಂದೆಣಿಸದೆ ಕಾಯೇ ಭಾರತಿಯೇ 3 ಕಾಲಾಭಿಮಾನಿಯೆ ಶೈಲಜೆ ಶ್ಯಾಮಲ ಭಾರತಿಯೇ ವಾಲಗ ಕೈಕೊಂಬೆ ಭಾರತಿಯೇ 4 ಹರಿಯ ಹಿರಿಯ ಸೊಸಿ ಪರಮ ಪದಕೆ ಬರುವಿ ಭಾರತಿಯೇ ಕರುಣಾದಿ ಭಾರತಾದ್ಯರ್ಥವರುಹೆ ನಿತ್ಯಾ ಭಾರತಿಯೇ 5 ಯೋಗಿ ವಿನುತ ಚರಣಳೆ ಎನ್ನ ಭಾರತಿಯೇ ಹೀನ ಬುದ್ಧಿಯ ಕಳಿ ಜ್ಞಾನಮಾರ್ಗವ ತೋರೆ ಭಾರತಿಯೇ6 ಮಾನಾಭಿಮಾನ ನಿನ್ನಾಧೀನ ಎನಗೆ ನೀ ಭಾರತಿಯೇ ಪಾದ ಮನದಿ ತೋರಿಸೇ ನಿತ್ಯಾ ಭಾರತಿಯೇ 7
--------------
ಪ್ರದ್ಯುಮ್ನತೀರ್ಥರು
ಶರಣು ಶಿರೀಶ ಹರೇ ಪ ಭುವನದಲಿ ಶೃತಿ-ಯಡಗೇ| ಯವಿಗಳಾಡಿಸದೇ| ಜವದಲಿ ಬಂದು ನೀ ತಮನನು ಕೊಂದೇ| ಕಾವೋದೋ ಎನ್ನಾ ಮತ್ಸ್ಯರೂಪಾ 1 ಸುರಸುರರು ಕೊಡಿ| ಶರಧಿಯ ಮಥಿಸುದಕಿ| ಕರುಣದಿ ಬೆನ್ನವನಿತ್ತೆ ನೀನಗತಿ| ಕಾವೋದು ಎನ್ನ ಕಮಠೆ ರೂಪಾ 2 ಹಿರಣ್ಯಾಕ್ಷನ ಕೊಂದು| ಧರೆಯನು ದಂತದಲೆ| ಧರಿಸಿದೆ ನೀ ಅನವರತಗಳಿಂದಲೇ| ಕಾವುದೋ ಎನ್ನ ವರಹಾ ರೂಪ 3 ಛಲದಿ ಪ್ರಹ್ಲಾದ ಕರಿಯೇ| ಕುಲಿಶ ಸಮುಗುರುದಲೆ| ಮೆಳೆತನ ಸೀಳಿದೆ ಕರಳ್ಳೊನಮಾಲೆ| ಕಾವುದೋ ಎನ್ನ|ನರಹರಿ ರೂಪ 4 ಚಂಡ ಬಲಿವವರದನೇ| ದಂಡ ಕಾಷ್ಟಕರನೇ| ಕುಂಡಲ ಸುಕಮಂಡಲ ಭೂಷಿತನೇ| ಕಾವುದೋ ಎನ್ನ ವಾಮನ ರೂಪ 5 ಸುಜನರ ಪ್ರತಿ-ಪಾಲಾ ರಾಜಾಕುಲಾಂತಕನೇ| ರಾಜಿಸುತಿಹ ವರ ಪರಶುಧರನೇ| ಕಾವುದೋ ಎನ್ನಾ ಭಾರ್ಗವರೂಪಾ6 ಋಷಿಯ ಮಖ ಕಾಯಿದು ಶಶಿಧರಧನು ಮುರಿದೇ| ದಶಮುಖ ಕುಂಭಕರ್ಣರ ಮರ್ದಿಸಿದೆ| ಕಾವುದೋ ಎನ್ನಾ ರಾಘವ ರೂಪ7 ಎಣೆಗಾಣದ ಮಡುವಿನಲಿ| ಫಣಿವರ ಫಣಿಮ್ಯಾಲ| ಕುಣಿದೆ ಆನಂದದಿ ಕೊಳಲನೂದುತ್ತಲೇ| ಕಾವುದೋ ಎನ್ನಾ ಯಾದವ ರೂಪ8 ಮೂರೆನಿಪ ಪುರದಲಿ| ನಾರೇಶ ದೃತವಳಿದೇ| ಭೂರಿ ಸಜ್ಜನ ಹೃದ್ವ ನಜ್ಜದೊಳಾಡಿದೇ| ಕಾವುದೋ ಎನ್ನಾ ಬೌದ್ದ ಸ್ವರೂಪಾ9 ಸಲಹಬೇಕೆಂದು ಜಗವಾ| ಇಳೆಯಾ ಭಾರರ ತರಿದೇ| ಸುಲಲಿತ ಕುದುರೆಯ ಏರಿ ಮೆರೆದೆ| ಕಾವಿದೋ ಎನ್ನ ಕಲ್ಕಿಸ್ವರೂಪ 10 ಸಹಕಾರಿ ಭಕ್ತರಿಗೇ| ಮಹಿಮೆ ದೋರಿದೆ ಹೀಗೆ| ಮಹಿಪತಿ ಸುತ ಪ್ರಭು ಸಲಹು ನೀಯೆನಗೆ| ಕಾವುದೋ ಎನ್ನಾ ಅನಂತರೂಪ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಾಸಾಗರನ ನೋಡಿರೈ ಪತರುಣಾಕರ್Àನಿಭ ಸುಪರಣವಾಹನಗುಣ-ವರಣನ ಮಾಡುವ ಕರ್ಣಹೀನಾಂಶನ ಅ.ಪನಾನಾವಿಧದ ಫಲ ದಾನಮಾಡುವ ಸುರ -ಧೇನುನಿನಗೆ ಸೋತು ಪೋಯಿತಯ್ಯಾಮಾನನಿಧಿಯೆ ಎನ್ನ ನೀನೆ ಕಾ -ನಾನಯ್ಯ ಇದಕೇನುಪಾಯಾದೀನ- ಜನ-ಮಂದಾರ- ಶಾಶ್ವತದಾನಿ ನಿನಪದಧ್ಯಾನ ಮಾಡಿಸೋ 1ಸೇವಕ - ಜನರನ್ನ ಕಾವೋನೀತನು ಎಂಬೊನೀನಿರಲುನಿತ್ಯಆವ ಭಯ ಎನಗೇನು ಇಲ್ಲಾಈ ವಿಧದಿ ಮಹಿಮವ ತೋರಿ ಮೆರೆವ 2ಪಾತಕವನಕುಲ - ವೀತಿಹೋತ್ರನು ಎನಿಸೀದಾತಗುರುಜಗನ್ನಾಥ ವಿಠಲಗತಿಜಾತರೂಪಸುಶಯ್ಯತನಯದೂತನಾದವಗೇನು ಭಯ ನಿ -ರ್ಭೀತನಾಗಿದ್ದೆಲ್ಲ ಕಾರ್ಯವ -ನೀತೆರದಿ ತಾ ಮಾಡುತಿರುವಾ 3
--------------
ಗುರುಜಗನ್ನಾಥದಾಸರು