ಒಟ್ಟು 12 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಪ್ರಾಣೇಶ ಹರಿ ವಿಠಲ | ಪೊರೆಯ ಬೇಕಿವಳಾ ಪ ನಿನಲ್ಲದಿನ್ನಿಲ್ಲ | ಪ್ರಾಣಾಂತರಾತ್ಮಾ ಅ.ಪ. ಸಾರ ಕೂಪದಿಂದ |ಕಾರುಣ್ಯ ಮೂರುತಿಯೆ | ಆರು ಅನ್ಯರ ಕಾಣೆನೀರ ಜಾಸನ ವಂದ್ಯ | ನಿರ್ಮಲಾತ್ಮಕನೇ 1 ಕನ್ಯೆಮಣಿ ಇವಳೀಗೆ | ನಿನ್ನ ನಾಮಾಮೃತದಬೆಣ್ಣೆಯನು ಉಣಿಸುತ್ತ | ಕಾಪಾಡೊ ಇವಳಾಚಿನ್ನುಮಯ ಶ್ರೀ ಹರಿಯೆ | ಸಮ್ಮೋದ ಪಾಲಿಸುತಚೆನ್ನಾಗಿ ಪೊರೆ ಇವಳ | ಅನ್ನಂತ ಮಹಿಮಾ 2 ಸಾಧು ಸತ್ಸಂಗವನು | ನೀ ದಯದಿ ಕೊಟ್ಟವಳಸಾಧನವ ಗೈಸುವುದೊ ಮಾಧವನೆ ದೇವಾ |ಆಧ್ಯಂತ ರಹಿತ ಹರಿ | ವೇದಾಂತ ವೇದ್ಯನೆಕಾದುಕೋ ಬಿಡದಿವಳ | ಮಧ್ವಮುನಿ ವಂದ್ಯಾ 3 ಕಾಮ ಜನಕನೆ ದೇವ | ಕಾಮಿತವ ಕರುಣಿಸುತನೇಮ ನಿಷ್ಠೆಯನಿತ್ತು | ನೀ ಮುದದಿ ದೇವಾ |ಪಾಮರಳ ಉದ್ಧರಿಸೋ | ಶ್ರೀ ಮನೋಹರ ಹರಿಯೆಸಾಮಜಾಸದ್ವಂದ | ಸಾಮ ಸನ್ನುತನೇ 4 ಕೇವಲಾನಂದವೆನೆ | ಶಾಶ್ವತದ ಸುಖಕಾಗಿಬಾಳ್ವ ಅಳವಡಿಸುತ್ತ | ಕಾವುದೋ ಇವಳಾ |ಗೋವಿಂದಂ ಪತಿಯೆ ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಶರಣು ಶಿರೀಶ ಹರೇ ಪ ಭುವನದಲಿ ಶೃತಿ-ಯಡಗೇ| ಯವಿಗಳಾಡಿಸದೇ| ಜವದಲಿ ಬಂದು ನೀ ತಮನನು ಕೊಂದೇ| ಕಾವೋದೋ ಎನ್ನಾ ಮತ್ಸ್ಯರೂಪಾ 1 ಸುರಸುರರು ಕೊಡಿ| ಶರಧಿಯ ಮಥಿಸುದಕಿ| ಕರುಣದಿ ಬೆನ್ನವನಿತ್ತೆ ನೀನಗತಿ| ಕಾವೋದು ಎನ್ನ ಕಮಠೆ ರೂಪಾ 2 ಹಿರಣ್ಯಾಕ್ಷನ ಕೊಂದು| ಧರೆಯನು ದಂತದಲೆ| ಧರಿಸಿದೆ ನೀ ಅನವರತಗಳಿಂದಲೇ| ಕಾವುದೋ ಎನ್ನ ವರಹಾ ರೂಪ 3 ಛಲದಿ ಪ್ರಹ್ಲಾದ ಕರಿಯೇ| ಕುಲಿಶ ಸಮುಗುರುದಲೆ| ಮೆಳೆತನ ಸೀಳಿದೆ ಕರಳ್ಳೊನಮಾಲೆ| ಕಾವುದೋ ಎನ್ನ|ನರಹರಿ ರೂಪ 4 ಚಂಡ ಬಲಿವವರದನೇ| ದಂಡ ಕಾಷ್ಟಕರನೇ| ಕುಂಡಲ ಸುಕಮಂಡಲ ಭೂಷಿತನೇ| ಕಾವುದೋ ಎನ್ನ ವಾಮನ ರೂಪ 5 ಸುಜನರ ಪ್ರತಿ-ಪಾಲಾ ರಾಜಾಕುಲಾಂತಕನೇ| ರಾಜಿಸುತಿಹ ವರ ಪರಶುಧರನೇ| ಕಾವುದೋ ಎನ್ನಾ ಭಾರ್ಗವರೂಪಾ6 ಋಷಿಯ ಮಖ ಕಾಯಿದು ಶಶಿಧರಧನು ಮುರಿದೇ| ದಶಮುಖ ಕುಂಭಕರ್ಣರ ಮರ್ದಿಸಿದೆ| ಕಾವುದೋ ಎನ್ನಾ ರಾಘವ ರೂಪ7 ಎಣೆಗಾಣದ ಮಡುವಿನಲಿ| ಫಣಿವರ ಫಣಿಮ್ಯಾಲ| ಕುಣಿದೆ ಆನಂದದಿ ಕೊಳಲನೂದುತ್ತಲೇ| ಕಾವುದೋ ಎನ್ನಾ ಯಾದವ ರೂಪ8 ಮೂರೆನಿಪ ಪುರದಲಿ| ನಾರೇಶ ದೃತವಳಿದೇ| ಭೂರಿ ಸಜ್ಜನ ಹೃದ್ವ ನಜ್ಜದೊಳಾಡಿದೇ| ಕಾವುದೋ ಎನ್ನಾ ಬೌದ್ದ ಸ್ವರೂಪಾ9 ಸಲಹಬೇಕೆಂದು ಜಗವಾ| ಇಳೆಯಾ ಭಾರರ ತರಿದೇ| ಸುಲಲಿತ ಕುದುರೆಯ ಏರಿ ಮೆರೆದೆ| ಕಾವಿದೋ ಎನ್ನ ಕಲ್ಕಿಸ್ವರೂಪ 10 ಸಹಕಾರಿ ಭಕ್ತರಿಗೇ| ಮಹಿಮೆ ದೋರಿದೆ ಹೀಗೆ| ಮಹಿಪತಿ ಸುತ ಪ್ರಭು ಸಲಹು ನೀಯೆನಗೆ| ಕಾವುದೋ ಎನ್ನಾ ಅನಂತರೂಪ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ ಪ ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ ಅ.ಪ. ನಿತ್ಯ ನೂತನ | ನಿರ್ವಿಕಾರನೆ | ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ | ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ | ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ | ಸ್ತುತ್ಯನೇ ಜಗ ವ್ಯಾಪ್ತನೇ 1 ಅಮಿತ ತೇಜನೆ | ಸರ್ವರನ ಸಲಹೂವನೇ ||ಸರ್ವ ಶಬ್ದ ಪ್ರವೃತಿ ಕಾರಣ | ಸರ್ವಗುಣ ಪರಿಪೂರ್ಣನೆಸರ್ವತೊಮುಖ ಬಾಹು ಚರಣನೆ | ಶರ್ವ ವಂದ್ಯ ಸುಮಹಿಮನೆ2 ವೀತಭಯ ವಿಶ್ವೇಶ ವಿಧಿಪಿತ | ಮಾತುಳಾಂತಕ ಪಾಲಕಾಭೂತ ಭಾವನನಂತ ಭಾಸ್ಕರ | ದ್ಯೋತಕ ಮಹಕೌತುಕ ||ಗೌತಮ ಪ್ರಿಯ ಮಡದಿ ಕಾಯ್ದಾ | ನಾಥ ರಕ್ಷಕ ಶಿಕ್ಷಕಾಖ್ಯಾತ ರಾವಣ ಕುಂಭಕರ್ಣನ | ಹಂತಕ ವಿಶ್ವಾಸಕ 3 ಮಣಿ ಭವ ಮೋಚಕಅಣು ಮಹದ್ಗತ ವ್ಯಾಪ್ಯವ್ಯಾಪಕ | ಸಾಧಕ ಖಲ ಬಾಧಕ |ತೃಣ ಮೊದಲು ಬ್ರಹ್ಮಾಂತ ಜೀವರ | ಪಾಲಕ ಪರಿಪೋಷಕ 4 ಮೀನ ಕಮಠನೆ ಕೋಲ ನರಹರಿ | ವಾಮನಾ ಸುಭಾಮನಾರೇಣುಕಾತ್ಮಜ ರಾವಣಾಂತಕ | ದಾಶರಥಿ ನರ ಸಾರಥೀ ||ಧೇನುಕಾಸುರ ಮಥನ ತ್ರಿಪುರವ | ಹಾನಿಗೈದನೆ ಬುದ್ಧನೆಮಾನುಷಾಕೃತಿಲ್ಹಯವನೇರಿದ | ಕಲ್ಕಿಯೇ ಕಲಹ ಪ್ರಿಯೆ 5 ಉದಿತ ಭಾಸ್ಕರನಂತ ತೇಜನೆ | ಉದರ ನಾಮಕ ಪಾಚಕಸುದತಿಯರು ಹದಿನಾರು ಸಾವಿರ | ವಾಳ್ದನೇ ಬ್ರಹ್ಮಚರ್ಯನೇ||ಮಧು ವಿರೋಧಿಯೆ ಮಧ್ವಮಾನಸ | ಮಂದಿರ ಬಹುಸುಂದರಹೃದಯದಲಿ ನೀ ಬದಿಗನೆನಿಸುತ | ಪೂಜಿತ ಸುರ ಪೂಜಿತ 6 ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ | ಕರ್ತೃಕ ಪ್ರಾವರ್ತಕಅಷ್ಟದಳ ಸತ್ಕಮಲಧಿಷ್ಠಿತ | ಪ್ರಾಜ್ಞಾನೇ ವಿಶ್ವಜ್ಞನೇಜಿಷ್ಣು ಸಖ ಶ್ರೀಕೃಷ್ಣ ಕೃಷ್ಣೆಯ | ಭೀಷ್ಟದಾ ಶಿಷ್ಟೇಷ್ಟದಾಪುಷ್ಟ ಮಹಿಮಾ ಪ್ರವಿಷ್ಟ ರೂಪನ | ವಿಷ್ಟನೇ ನಿವಿಷ್ಟನೇ 7 ಗೋವಿದಾಂಪತಿ ಗೋವಪಾಲಕ | ಮಾವ ಮಾರಕ ಕಾರಕ ||ಭೂವರಾಹ ಸುಭಾವಜಾರಿಜ | ಷಣ್ಮುಖ ಪರಿಪಾಲಕ ||ಗೋವಿಂದ ಗುರು ಗೋವಿಂದವಿಠಲ | ಗೋವ್ಗಳ್ವರ್ಧನ ಗಿರಿಧರಪಾವಮಾನಿಯ ಪ್ರೀಯ ಸಿರಿಧರ | ಕಾವ ಶರಣರ ಭವಹರಾ 8|
--------------
ಗುರುಗೋವಿಂದವಿಠಲರು