ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದೀಶ ವಿಠ್ಠಲನೆ | ಮಗುವ ಕಾಯೋ ಪ ಹಗಲಿರುಳು ಬೆಂಬಲಿಗ | ನಾಗಿ ನೀ ಕರುಣದಲಿಬಗೆಬಗೆಯ ಸುಖವಿತ್ತು | ಹಗರಣವ ಕಳೆಯೋ ಅ.ಪ. ಮರುತ ಮತ ತತ್ವಗಳ | ಅರಿವಿಕೆಯ ಕೊಡು ಇವಗೆಹರಿಗುರೂ ಸತ್ಸೇವೆ | ಪರಮ ಹರುಷದಲೀನಿರುತ ಗೈಯ್ಯು ಮನವ | ಕರುಣಿಸುವುದೆಂದೆನುತಪರಿಪರಿಯ ಪ್ರಾರ್ಥಿಸುವೆ ಶರಧಿಜೆಯ ರಮಣಾ 1 ಕಾಕು ಸಂಗವ ಕೊಡದೆ | ನೀ ಕೊಟ್ಟು ಸತ್ಸಂಗತೋಕನನು | ಪೊರೆಯೆಂದು | ನಾ ಕೇಳ್ವೆ ಹರಿಯೇಬೇಕಾದ ವರ ಇವಗೆ | ನೀ ಕೊಡುತ ಕಾಯುವುದುಶ್ರೀಕಾಂತ ಬೇಡುವೆನೊ ನೀ ಕರುಣಿ ಎನುತಾ 2 ಪಾವಪಾನಿಯ ಪ್ರೀಯ | ಝಾವ ಝಾವಕೆ ನಿನ್ನಪಾವನ ಸ್ಮøತಿಯಿತ್ತು | ಕಾವುದೈ ಹರಿಯೇಪಾವು ಮದ ಹರ ಗುರೂ | ಗೋವಿಂದ ವಿಠ್ಠಲನೆನೀವೊಲಿವುದಿವಗೆಂದು | ಭಾವದಲಿ ಬೇಡ್ವೆ 3
--------------
ಗುರುಗೋವಿಂದವಿಠಲರು
ದೇವ ದೇವನೆ ಪಾಲಿಸೈ ಹಿತ ಬಂಧು ನೀನೇ ರಕ್ಷಿಸೈ ಪ ಕಾವುದೈ ತವದಾಸನನು ಭವ ಬಂಧದಿಂದಂ ದಾಟಿಸೈ ಮಂದರಾಧರ ವಿಶ್ವರೂಪನೇ ಅಂದದಲಿ ಶ್ರೀಪತೇ ಬಂದು ನೀನೇ ಪಾಲಿಸೈ ನಿಜ ಬಂಧು ನ್ಯಾಯದಿ ದಾಸನ 1 ಎಲ್ಲಿ ಕೂತರೂ ನಿನ್ನ ಭಜಿಸೆನು ವಲ್ಲಭನ ಶ್ರೀ ಲಕ್ಷ್ಮಿದೇವಿಯ ಅಲ್ಲಗಳೆಯದೆ ರಕ್ಷಿಸೈ 2 ನೀನೆ ಭಕ್ತರ ತಂದೆ ತಾಯಿಯು ಚನ್ನಕೇಶವ ಸ್ವಾಮಿ ರಕ್ಷಿಸು ದೈನ್ಯದಿಂದಲಿ ಬೇಡುವೇ 3
--------------
ಕರ್ಕಿ ಕೇಶವದಾಸ
ನೀಂ ಕಟಾಕ್ಷಿಸೆನ್ನನೊಲವಿಂ ಲೋಕನಾಥ ಪಾಲಿಸೈ ಪ. ಸಂಕಟಂಗಳೆಲ್ಲಮಂ ನಿಷ್ಕಲಂಕ ನೀಂ ನಿವಾರಿಸೈ ಅ.ಪ ತಾತ ನೀನೇ ನಾಥನೇ ಆತ್ಮಜಾತಂ ನೀನೆಲೈ ದಾತ ನಿನ್ನ ನಂಬಿದೀಯನಾಥರಂ ಪ್ರೀತಿಯಿಂ1 ಭಾವಜಾತಜನಕ ಭೂ ದೇವದೇವ ಶ್ರೀಧವ ಭಾವಿಸುವೆನನನ್ಯಭಾವದೆ ಕಾವುದೈ ಶ್ರೀನಿಧೇ 2 ಪರಮಪುರಷ ಶೇಷಶೈಲವರದ ಶ್ರೀಕರ ಪರಿಭವಂಗಳೆಲ್ಲ ಪರಿದು ಪಾಲಿಸೈ ಪರಾತ್ಪರ 3
--------------
ನಂಜನಗೂಡು ತಿರುಮಲಾಂಬಾ
ಯೋಗಿ ಕುಲಪುಂಗವ ಕಾಯೋ ಕೋಲ ತನಯ ತಟಿ ಸದನಾ ವಿಬುಧವೃಂದ ನುತ ಪ್ರೇಮಸಾಗರ ಪ ಸುಜನ ಪಾಲಾ ವಿಜಿತಾನಂಗನ ಭಾಸುರ ಮಹಿಮ1 ಪಾವನಾತ್ಮಕ ಪಾಪ ವಿದೂರ ಕಾವುದೈ ಸದಾ ಕೋವಿದರೊಡೆಯ2 ಶಾಮಸುಂದರ ಪ್ರೇಮ ಸುಪಾತ್ರ ಸ್ವಾಮಿ ಶ್ರೀಗುರು ರಾಘವೇಂದ್ರಾರ್ಯ 3
--------------
ಶಾಮಸುಂದರ ವಿಠಲ
ಶ್ರೀ ವೇಣುಗೋಪಾಲ ಕೃಷ್ಣಾ ಕಾವುದೈ ಪರಿಹರಿಸಿ ನೀನೆನ್ನ ಕೃಷ್ಣಾ ಪ ಶ್ರೀ ವ್ಯಾಸರಾಯಾರ್ಜಿತ ಕರುಣಾ ದೇವಾದಿನುತಚರಣ ಗುಣಗಣಾಭರಣ ಅ.ಪ. ಭೂಮಿ ಆಕಾಶಾದಿ ಸಕಲವನು ವ್ಯಾಪಿಸಿದಪ್ರೇಮದಿಂ ನಿನ್ನಂಶವನು ಪೂರ್ಣಗೊಳಿಸಿದನೇಮದಿಂ ಜಾಂಬುವತಿ ಭಕುತಿಯಿಂ ಪೂಜಿಸಿದಭೀಮರಥಿಯಿಂ ಬಂದು ಶ್ರೀ ವ್ಯಾಸರಾಯಗೊಲಿದ 1 ಪುರಂದರ ಕಚ್ಚು ನೈವೇದ್ಯಕ್ಕೆಮೆಚ್ಚಿಯತಿ ವ್ಯಾಸರನು ಅಚ್ಚರಿಯಗೊಳಿಸಿದಹುಚ್ಚು ಕುರುಬಗೆ ಜಗನ್ನಾಥದಾಸರ ಜನುಮದಿಚ್ಛೆಯನು ವ್ಯಾಸರಿಂ ಪೂರೈಸಿ ಮೆರೆಯುತಿಹ 2 ಕನ್ನಡದ ರಾಜ್ಯವೆಂದೆನಿಸಿದ ವಿದ್ಯಾನಗರದುನ್ನತಿಯ ಗೈದ ಯತಿ ವ್ಯಾಸರನು ಪಟ್ಟದೊಳುಸನ್ನಹಿಸಿ ಘನ ಕೃಷ್ಣ ನರಪತಿಗೆ ಬಂದಿದ್ದಬನ್ನ ಕುಹುಯೋಗವ ಸಂಹರಿಸಿ ಪಾಲಿಸಿದ 3 ಪ್ರಾಣಯತಿ ಹರ ವ್ಯಾಸರಾಯಾದಿ ಹರಿದಾಸಜಾಣರನು ಕುಣಿಸಲಿಕೆ ನಾದವನು ಕೊಡಲೆಂದುವೇಣುವನು ಊದುತ್ತೆ ಮೋದಿಸುವನೆಂಬಂತೆಕಾಣಿಸುವ ರೀತಿಯಲಿ ನರ್ತಿಸುತ ನಿಂತಿರುವ 4 ವ್ಯಾಸರಂದದಿ ಧರ್ಮದುಪದೇಶ ಮಾಡುತ್ತೆದೇಶದೊಳು ಪಸರಿಸಲು ಲಕ್ಷ್ಮೀಶ ತೀರ್ಥರನುಶಾಸನವ ಗೈದುಪನ್ಯಾಸಕ್ಕೆ ನೇಮಿಸಿದಶ್ರೀಶ ಗದುಗಿನ ವೀರನಾರಾಯಣನು ಎಂಬ 5
--------------
ವೀರನಾರಾಯಣ