ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದವಾಹನ ವಿಠಲ ನೀನಿವಳ ಕಾಯಬೇಕೋ |ಜ್ಞಾನಪೂರ್ಣನೆ ನಿನ್ನ ಸುಜ್ಞಾನ ಪಾಲಿಸುತ ಹರಿಯೆ ಪ ನಿಗಮವೇದ್ಯನೆ ದೇವ ಜಗದಂತರಾತ್ಮನೆಬಗೆಬಗೆಯ ಲೀಲೆಗಳ ನಗುನಗುತ ತೋರೀ ಬಗೆಹರಿಸು ಭವರೊಗ ಭಿನ್ನೈಪೆ ನಾನಿದನನಗಚಾಪ ಪರಿಪಾಲ ಖಗವಹನೆ ದೇವಾ1 ಪಂಚರೂಪಾತ್ಮಕನೆ ಪಂಚ ಬಾಣನ ಪಿತನೆಪಂಚ ಭೇದ ಜ್ಞಾನ ಸಂಚಿಂತನೆಯನಿತ್ತು |ವಾಂಚಿತಾರ್ಥದ ಹರಿಯೆ ವೈರಾಗ್ಯ ಸದ್ಭಕುತಿವಾಂಚಿಪಳಿಗೀಯೊ | ನಿಷ್ಕಿಂಚನರ ಪ್ರೀಯಾ 2 ಪತಿಸುತರು ಹಿತದಲ್ಲಿ ಮತಿ ಮತಾಂವರರಲ್ಲಿಕೃತಿಪತಿಯೆ ನಿನವ್ಯಾಪ್ತಿ ಅತಿಶಯದಿ ತೋರುತಲಿಹಿತದಿಂದ ಸೇವಿಸುವ ಮತಿಯಿತ್ತು ನೀನಿವಳ ಗತಿಗೆ ಸಾಧನನೆನಿಸು ಪ್ರತಿರಹಿತ ದೇವಾ 3 ನಾಮ ಮಹಿಮೆಯ ತಿಳಿಸಿ ಪ್ರೇಮದಿಂದಲಿ ನಿನ್ನನಾಮದುಚ್ಛಾರಣೆಯ ನೇಮವನೆ ಪಾಲಿಸುತ |ಕಾಮಿತವ ಸಲಿಸುವುದು ಭೂಮ ಗುಣ ನಿಸ್ಸೀಮರಾಮಚಂದ್ರನೆ ಸರ್ವ ಸ್ವಾಮಿ ಎನಿಸುವನೇ 4 ಶ್ರೀವರನೆ ಭವವನಧಿ ನಾವೆ ಎಂದೆನಿಸಿಹನೆಕಾವುದಿವಳನು ಸತತ ಸರ್ವಾಂತರಾತ್ಮ |ನೀವೊಲಿಯದಿನ್ನಾರು ಕಾವವರ ನಾಕಾಣೆದೇವವರ ವಂದ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕಾಯೊ ಕಾಯೊ ಕಾಮಿತ ಫಲದ ಕಾಯೊ ಕಾಯೊ ಪ ಕಾಯೊ ಕಾಯೊ ಎನ್ನ ಕಾಯಜನಯ್ಯನೆ ಕಾಯದಿದ್ದರೆನ್ನ ಕಾವವರಾರೊ ಅ.ಪ ಎಂದೆಂದಿನ ಕರ್ಮಗಳನೆಣಿಸುತಲಿ ಕಂದಿಸಿ ಕುಂದಿಸಿ ಬಂಧಿಪರೇನೋ 1 ತಾಳಲಾರೆ ಈ ಕಾಲನ ಬಾಧೆಯು ಬೇಳುವೆ ನಿನ್ನಯ ಕಾಲಿಗೆ ಸ್ವಾಮಿ 2 ಆಲಸ ಮಾಡದೆ ಆರ್ತಿಗಳೋಡಿಸಿ ಪಾಲಿಪುದೆನ್ನನು ಪಾವನ ಮೂರ್ತೆ3 ಮಾಡಿದ ಪಾಪಗಳೋಡಿಸಿ ಸುಖದಿಂ ದಾಡಿಸು ಕಣ್ಣಿಗೆ ಕಾಣಿಸಿಕೊಂಡು 4 ವಾಸುದೇವವಿಟ್ಠಲ ನೀ ಎನಗಿನ್ನು ವಾಸಿ ಮಾಡಿಸಿ ಕೀರ್ತಿಯ ಪಡೆಯೊ 5
--------------
ವ್ಯಾಸತತ್ವಜ್ಞದಾಸರು
ನಾರಾಯಣ ಹರಿ ನಾಮವ ಭಜಿಪಗೆ ನರಕದ ಭಯವುಂಟೆ ನಾರದ ಸನಕ ಸನಂದನ ಸುರನರ ಪಾಲಿತ ಕರುಣಾಕರನರಹರಿ ಎಂದು ಪ ಖಗರಾಜಗಳುಕದ ಉರಗನುಂಟೆ ದೊಡ್ಡ ಮೃಗರಾಜ ಗಳುಕದ ಆನೆಯುಂಟೆ ನಿತ್ಯ ಜಗದುದರನೆ ಜಗದೊಡೆಯ ಜಾಹ್ನವಿಪಿತ ತ್ರಿಗುಣ ನಿರ್ಗುಣನೆಂದು1 ತ್ರಯಂಬಕ ನುರಿಗಣ್ಣ ಲುಳಿದವರುಂಟೆ ಬಲಿಬಂಧನ ನರಹರಿ ಎಂದು 2 ಕುಳಿಶಕಳುಕದ ಪರ್ವತವುಂಟೆ ಚಲುವ ನಳಿನ ಮಿತ್ರನ ಮುಂದೆ ತಮವುಂಟೆ ಕಾಮ ಚೆಲುವ ಜಲಜಮಿತ್ರ ಕುಲಲಲಾಮನೆ ಎಂದು 3 ಹರಿಯೆ ರಕ್ಷಿಸಲು ಕೊಂದವರುಂಟೆ ಮನ ಮುರಿದು ಕೊಂದರೆ ಕಾವವರುಂಟೆ ಮುರಹರ ನಾರಾಯಣ ನರಹರಿ ಕರಿವರದ ಪಾಲಿತ ಸುರನರರ ಸೇವಿತನೆಂದು 4 ಹುತಾಶನನಿಗಳುಕದ ಕಾನನವುಂಟೆ ವನರುಹಾಂಬಕ ವಾಯುತನಯ ಕೋಣೆಯ ಲಕ್ಷ್ಮಿರಮಣ ಸನಕ ಸುತ ಚಿನುಮಯಾತ್ಮಕನೆಂದು 5
--------------
ಕವಿ ಪರಮದೇವದಾಸರು
ಯಾಕೆ ನಿರ್ದಯವೋ ದೇವ ದೇವ ಸ್ವಭಾವ ಯಾಕೆ ಮರೆತೆ ದೇವಾ [ಎನ್ನನು] ಪ ಯಾಕೆಂಬುದರಿಯೆನಾ ಶ್ರೀಕರಾಂಬುಜನೇತ್ರ ಕಾಕುಮನುಜನೆಂದು ನೀಕರಿಸಿದೆಯೋ ಅ.ಪ ಉದರ ಪೋಷಣೆಗಾಗಿ ವಿಧ ವಿಧ ದೇಶದಿ ಬಧಿರ ಹೆಳವ ಮೂಗ ಅಧಿಕರೋಗಿಯು ಅಂಧಾ ವಿದಿತ ವೇಷಗಳಿಂದ ಅಧಿಕ ಬಳಲಿದೆನಯ್ಯ ಪದುಮಾಕ್ಷ ಪರಂಧಾಮ ಮುದದೆ ಪೋಷಿಸಲು1 ಪರರ ನಿಂದನೆ ಗೈದೆ ನೆರೆಯವರನು ಕೊಂದೆ ಪರರ ಸ್ವತ್ತನು ತಂದೆ ಪರರನ್ನವನು ತಿಂದೆ ದುರಿತಕಾರ್ಯವಗೈದೆ ನರಹರಿ ನಿನ್ನ ಮರೆದೆ ಪರರು ಕಾವವರಿಲ್ಲ ನೆರೆನಂಬಿದೇ ನಿನ್ನ 2 ಸಾವು ಜನ್ಮಂಗಳಿಂದ ನೋವು ಬಂಧನವಡೆದು ಬೇವಿನಂದದೆ ದುರ್ಗುಣಭಾವವ ತಳೆದೆನೋ ಕಾವರಿಲ್ಲವೋಯೆನ್ನ ಶ್ರೀವನಿತಾರನ್ನ ಸಾವುನೋವನು ಬಿಡಿಸೊ ಮಾವಿನಕೆರೆರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್