ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾವನಿಹನೈಯ್ಯಾ ಕೃಷ್ಣಾ ಎನ್ನ ಕಾವವನು ನೀನಲ್ಲದೆ ಪ ನಾರಿ ದ್ರೌಪದಿ ನೆನೆಯಲು ಸಭೆಯಲ್ಲಿ ಶೀರಿ ದಾನವ ಮಾಡಿದೀ ಕೃಷ್ಣಾ ಘೋರ ದೂರ್ವಾಸ ಮುನಿಯು ನಡುವಿರುಳೆ ಹಾರೈಸಿ ಬರೆಯನ್ನವಾ ದೇವಾ ನಾರಿ ದ್ರೌಪದಿಯ ಮೊರೆಯ ದೊರೆಯು ಆಲಿಸೇ ಆ ರಾತ್ರಿ ಕಾಯ್ದ್ಯೋಬಲೆಯಾ 1 ಪರಿವಾರದಿಂದ ಕೂಡಿ ಕರಿರಾಜನಂಗ ನಾಟಕಂದೈದಲು ಭರದಿನೆಗಳಿಯು ಪಿಡಿಯಲು ಕಾಲನು ಇರದೆ ನಿನ್ನನು ಸ್ಮರಿಸಲು ದೇವಾ ಗರುಡವಾಹನನಾಗಿ ನೀನೈತಂದು ಕರುಣಿಸಿದ್ಯೋ ಕೊನೆಯ ಗತಿಯ 2 ದುರುಳ ಹಿರಣ್ಯಕನ ಶೀಳಿ ನರಹರಿಯೆ ತರಳ ಪ್ರಲ್ಹಾದನ ಪೊರೆದ್ಯೋ ದೇವಾ ಮರೆಯದಜಮಿಳ ನೆನೆಯಲು ಕೇಳ್ದು ನೀ ಪರಿಹರಿಸಿದೆ ಯಮಬಾಧೆಯ ದೇವಾ ನರಸಿಂಹವಿಠಲ ಸ್ವಾಮಿ ಧ್ರುವನನ್ನು ಪೊರೆದಂತೆ ರಕ್ಷಿಸೆನ್ನಾ 3
--------------
ನರಸಿಂಹವಿಠಲರು
ಮಾವಿನಕೆರೆ 6 ಮಾಧವನಿವನೋ ಉಮಾಧವನಿವನೋ ಮಧುಸೂದನನೋ ಗಂಗಾಧರನೋ ಪ ವೇದವನುಲಿದನೋ ನಾದಕೆ ಒಲಿದನೋ ಮೇದಿನಿಗೈದಿ ಮಾಂಗಿರಿಯ ಸೇರಿದನು ಅ.ಪ ಹಿರಿಯ ಕಲ್ಲ ಗುಡಾರದೊಳಿರುವ ಒರಳಲಿ ನಲಿವ ಹರನವೊಲೆಸೆವ ಕರಗಳಿಂದೆಳೆದರೂ ಬಾರನೆಂದೆನುವ ಸ್ಮರಿಸುವ ಮಾನವನೆದುರಲಿ ನಿಲುವ 1 ಎರೆದ ಹಾಲಾದರೂ ಸುರಿದ ನೀರಾದರೂ ದೊರಕದು ಕರಕೆ ತೊಟ್ಟೊಂದಾದರೂ ಹರಕೆ ಹೊತ್ತವರು ನೆರೆನಮಿಸುವರು ಹರುಷದಿ ಕುಣಿದು ಕೊಂಡಾಡುತಿಹರು 2 ಸಾವಿರ ನಾಮನು ದೇವನೀನೊಬ್ಬನು ಭಾವದೊಳಿರುವನು ಕಾವವನು ನೋವ ಬಿಡಿಸುವನು ಪಾವನಚರಣನು ಭಾವುಕಗೊಲಿವನು ಗಿರಿಯ ಮೇಲಿಹನು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್