ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(5) ಶ್ರೀನಿವಾಸ ವಿಪ್ರವಂದಿತ ಪಾಪಕೋಟಿ ಕುಲನಾಶಾ ಶ್ರೀವೆಂಕಟೇಶಾ ಪ ನಿಜನುಡಿಯ ಭೃಗುನುಡಿಯೆ ಮುನಿಮಂಡಲಿಯ ನಡೆಯೆ ತ್ರಿಜಗಾಗ್ರಪೂಜಿತ ಪರಬ್ರಹ್ಮ ನೀನೇ 1 ಪಶುವತ್ಸಗೋಪಾಲ ಸರ್ವವೂ ನೀನಾಗೆ ಬಿಸಜಭವ ಬೆದರುತ್ತ ಪದಕೆರಗಿದ 2 ಮೋಹಿನಿಯವೇಶದಿಂ ರಕ್ಕಸನ ಭಸ್ಮಿಸಿ ಪಾಹಿಮೆನಲಾ ದಕ್ಷ ವೈರಿಯ ರಕ್ಷಿಸಿದೆ 3 ಗಿರಯನೇ ಕೊಡೆವಿಡಿದು ಗೋಕುಲವನೆ ಕಾಯ್ದೆ ಸುರರಾಜ ಗರಿಮುದುರಿ ಶರಣೆಂದು ಬಂದ 4 ವಿಧವರದಿ ಬೆರೆದ ಹಿರಣ್ಯಕಶಿಪುವ ಬಗೆದು ಸದೆದೆ ಶಿವಕಾವಲಿನ ಬಾಣನಂ ಬಿಡವೇ 5 ಸಾಸಿರಗಳರವತ್ತು ಸಗರಸುತರನು ಸುಟ್ಟು ಘಾಸಿಹರಿಸಿದೆ ಜಗದೆ ಜೀವ ಜಂತುಳಿಗೆ 6 ಪಾತಕಿಯ ರಾವಣನು ಕಾರವರ ಕೊಂದೇ 7 ಬಲಿದ ಶಾಪವ ಕಳೆದು ಕಾಯ್ವ ಬಂಧೂ 8 ಸಾವುಂಡ ಶಿಶುವನು ಗುರುವಿಗೆ ನೀ ತಂದಿತ್ತೆ ನೋವುಂಡ ಇಂದ್ರಂಗೆ ಲೋಕಗಳನಳೆದೆ 9 ಅಜಕಪಾಲವ ಬಿಡಿಸಿ ಮೃತ್ಯುಂಜಯನ ಹರಸಿ ಅಜಮಿಳನ ನೀ ಮುಕ್ತಿಸ್ಥಾನಕ್ಕೆ ತಂದೆ 10 ಸರ್ವಕಾಲಗಳಲ್ಲು ಅಪರಾಧಿ ನಾನಯ್ಯ ಗರ್ವಿಯೆನಿಸದೆ ತಪ್ಪು ಕ್ಷಮಿಸಯ್ಯ ತಂದೆ 11 ಆನೆ ಅಳುವುದು ಕೇಳಿ ಮೊಸಳೆಬಾಯನು ಸೀಳ್ದೆ ನೀನೆ ಆಪದ್ಭಂದು ಕಾರುಣ್ಯಸಿಂಧು12 ಅರಗಿನ ಮನೆಯಲ್ಲಿ ಭರದಿಂದ ಬಾಂಧವರಿಗೆ ಉರಿಭಯವ ತಪ್ಪಿಸಿ ಪೊರೆದ ಪ್ರಭುವೇ13 ದ್ರುಪದ ಪುತ್ರಿಗೆ ಮಾನ ಸಂರಕ್ಷಣೆಯನು ಮಾಡಿ ಕೃಪೆತೋರಿಪಾರ್ಥಂಗೆ ಸಾರಥಿಯು ಆದೆ 14 ಕಾಲ ವಾಲಿಪ್ರಾಣಕೆ ಶೂಲ ಲೀಲೆಯಿಂ ಭಕ್ತರಂ ಪಾಲಿಸುವೆ 15 ಪಾವನದ ಪಾದಗಳನಿಂತು ಮುಡಿಯಮೇಲೆ ಭಾವಿಸುವೆ ಭವಕಳೆಯೆ ನಾತಾಳೆ ನಾಳೆ 16 ತಾಪಗಳು ಮೂರನುಂ ಹರಿಪ ಸಂಕಟದೂರ ಕಾಪಾಡು ಶ್ರೀಹರಿ ಬಂಧುಬೇರಿಲ್ಲ ಭಕ್ತಸತ್ರಾ 17 ಶರಣಸಂರಕ್ಷಣ ಬಿರುದು ಧರಸಿಹೆ ನಿತ್ಯ ಭರದಿ ಶಾಂತಿನೀಡೋ ಚರಣಕ್ಕೆ ಶರಣು 18 ಕ್ಷಾಮಡಾಮರ ಕಳೆಯೆ ಸುವೃಷ್ಟಿಯ ಕರೆವೆ ಕಾಮಿತಾರ್ಥದ ಕಾಮಧೇನು ಸ್ವಾಮಿ ತಾಯಿತಂದೆ 19 ಚಕ್ರಧರ ಚಕ್ರಧರ ಭಜಿಪ ಭಕ್ತರ ಪಾಲ ನರಸಿಂಹ ನರಸಿಂಹ 20 ಕ್ಷೇಮಕರಗರುಡನೇ ಧ್ವಜನು ವಾಹನನು ಭೀಮ ಹನುಮ ಪ್ರೇಮ ಹೆಜ್ಜಾಜಿಶ್ಯಾಮ ಸ್ವಾಮಿ21
--------------
ಶಾಮಶರ್ಮರು
(ಈ) ತಾತ್ವಿಕ ಕೃತಿಗಳು ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಪ ರಾಮಾನುಜ ಬೆಳೆದ ಧರೆಯೊಳಗೆ ಅ.ಪ ನಾರದ ಬಿತ್ತಿದ ನಾರಾಯಣ ಬೀಜಕೆ ಧೀರಾಂಬರೀಷನು ಗೊಬ್ಬರವಾದ ಕು- ಮಾರ ಪ್ರಹ್ಲಾದನು ನೀರಾಗೆರೆದ ಆ ರುಕುಮಾಂಗದ ಗಾಳಿಯಾದ1 ನಾರಾಯಣನೆಂಬ ಬೀಜಮಂತ್ರವು ಕು- ವರ ಧ್ರುವನ ಕಾವಲಿನಲ್ಲಿ ಸರಸರ ಬೆಳೆಯಿತು ಆಳುವಾರರು ಭೂ ಸುರ ಭಾಗವತರುಗಳಲಿ 2 ರಮಾನುಜನಿದರ ಒಕ್ಕಣೆಮಾಡಿ ಸಮಾನತೆಯಿಂದ ಹಂಚಿದನು ಶ್ರಿಮಣಿಯಲ್ಲಿ ತುಂಬಿದನು ಸಮಾನ ವೇದವೆನಿಸಿದನು 3 ಹಬ್ಬಿತು ಹರಡಿತು ಧರೆಯೆಲ್ಲ ಉಬ್ಬಿತು ಉಲಿಯಿತು ಗಿರಿಯೆಲ್ಲ ಅಬ್ಬಬ್ಬ ಜಾಜಿಪುರೀಶ ಕೇಶವನಾಮವು ಹಬ್ಬವಾಯಿತು ನಮಗೆಲ್ಲ 4
--------------
ನಾರಾಯಣಶರ್ಮರು
ಆವ ಬಲವಿದ್ದರೇನು - ವಾಸುದೇವನಾ ಬಲವು ನಿಜವಾಗಿ ಇರದನಕ ಪ ನೊಸಲಗಣ್ಣನ ಬಲ ನಾಲ್ಕು ತೆರದ ಬಲತ್ರಿಶುಲ ಡಮರು ಅಗ್ನಿ ಫಣಿಯ ಬಲವುಪಶುಪತಿಯ ರೂಪಿನ ಬಲದ ಶಿಶುಪಾಲನಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ 1 ಹರನ ಕರುಣದ ಬಲವು ಸುರರ ಗೆಲಿದಾ ಬಲವುಪರಮ ಶಕ್ತಿಯು ತನ್ನ ಭುಜದ ಬಲವುಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನಶಿರವ ಹರಿ ವರಾಹನಾಗಿ ತರಿವಾಗ2 ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲಘನ್ನ ಲಂಕಿಣಿಯ ಕಾವಲಿನ ಬಲವುತನ್ನ ವಂಶದ ಬಲವುಳ್ಳ ರಾವಣನ ಶಿರವಸನ್ನುತ ರಾಘವ ಪಟ್ಟನೆ ಪಾರಿಸುವಾಗ 3 ಲಿಂಗಪೂಜೆಯ ಬಲ ನಿಶ್ಚಿಂತನಾಗಿಹ ಬಲಹಿಂಗದೆ ಹರನು ಬಾಗಿಲ ಕಾಯ್ದ ಬಲವುಮುಂಗೈಯ ಶಕ್ತಿ ಸಾವಿರ ತೋಳ ಬಾಣನತುಂಗ ವಿಕ್ರಮ ಕೃಷ್ಣ ತೋಳ ಖಂಡಿಸುವಾಗ 4 ಈಸು ದೇವರ ಬಲಗಳಿದ್ದರೆ ಫಲವೇನುವಾಸುದೇವನ ಬಲವಿಲ್ಲದವಗೆದೇಶಕಧಿಕ ಕಾಗಿನೆಲೆಯಾದಿಕೇಶವನಲೇಸಾದ ಚರಣ ಕಮಲದ ಬಲವಿರದನಕ 5
--------------
ಕನಕದಾಸ
ಪರಿ ಏನೋ ಬಾಲ ಹನುಮ ಪ. ಬಂಧಿಸಿದರಾರಿಲ್ಲಿ ನಿನ್ನ ಹನುಮ ಅ.ಪ. ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದು ಒಂದು ಸಲ ನೋಡುವೆನೆ ಅಜಗರವಿದಲ್ಲ ಒಂದು ಸಲ ನೋಡುವೆನೆ ಕಳ್ಳ ಗುಂಪಲ್ಲವಿದು ಒಂದೆರಡು ಕೋಣವೆರಡರ ಮಧ್ಯೆ ಇರುವ 1 ಕ್ಷಣಕೆ ಪರಿಹರವಾಯ್ತು ಹಿಂದೆ ಆ ಬಂಧಗಳು ಕ್ಷಣಕ್ಷಣಕು ಇದ್ದಂತೆ ಇರುವುದೀ ತೊಡಕು ಗುಣದಂತೆ ಆವರಣ ವರ್ತುಳಾಕಾರದಲಿ ತೆನೆಗಳಲಿ ಕೋತಿಗಳ ಕಾವಲಿನ ಕಟ್ಟು 2 ಬೀಸಿದೀ ಬಲೆ ತೆಗೆಯೆ ಶ್ರೀ ಶನಿಗು ಅಳವಲ್ಲ ವಾಸುದೇವನೆÀ ಬಲ್ಲ ಈ ಮರ್ಮವ ದಾಸಜನ ಪ್ರಿಯ ಶ್ರೀಗೋಪಾಲಕೃಷ್ಣವಿಠ್ಠಲ ವ್ಯಾಸರಿಂದಲಿ ನಿನಗೆ ಮೋಸಗೈಸಿದನೋ 3
--------------
ಅಂಬಾಬಾಯಿ
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ ಪ ಅಭಯ ಹಸ್ತದಿ ಉಭಯಕುಶಲ ಕಾಯುವ ಹರಿಗೆ ಅ.ಪ ಆಲದೆಲೆಯ ಮೇಲೆ ಪವಡಿಸಿ ಬಂದ ಹಾಲುತನದ ಬದುಕ ಭೂಮಿಗೆ ತಂದ ಹಾಲುಗಲ್ಲದ ಮುದ್ದÀು ಕೃಷ್ಣನು ಬರುತಿಹ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 1 ನಟ್ಟನಡುರಾತ್ರಿಯಲಿ ದಿಟ್ಟ ಕಾವಲಿನಲ್ಲಿ ದಟ್ಟ ಕತ್ತಲನೆಲ್ಲ ಜಗದಿಂದ ಜಾಡಿಸುತ ಬಟ್ಟ ಬೆಳಕನು ಬೀರಿ ಮೂಡುತಿಹ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ2 ಅಷ್ಟಮಿಯ ದಿನದಂದು ರಂಗವಲ್ಲಿಯ ಮೇಲೆ ಇಷ್ಟತಿಂಡಿಗಳನಿಷ್ಟಿಷ್ಟೆ ಮೆಲ್ಲಲು ಪುಟ್ಟ ಹೆಜ್ಜೆಯನಿಟ್ಟು ಬರುತಿರುವ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 3 ರುಕುಮಾಂಗದನ ತಂತ್ರ ಫಲಿಸದಂತಳಿಸಿ ರುಕುಮಿಣಿಯ ಮನಗೆದ್ದು ರಥದ ಮೇಲಿರಿಸಿ ಅಕ! ಅಲ್ಲಿ ಬರುತಿಹ ಮದುವಣಿಗ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 4 ಚೆಲುವ ಚೆನ್ನಿಗ ನಮ್ಮ ಜಾಜೀಪುರೀಶಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 5
--------------
ನಾರಾಯಣಶರ್ಮರು