ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಹೋ ಸುಮ್ಮನೆ ಮರುಳಾದೆ ಮಹಿಮೆಯನರಿಯದೆ ಪ. ದೇವಾಧಿ ದೇವ ಬಂದು ಮನೆಯಲಿಂದು ಕಾವಲಾಗಿರುವನೆಂದು ತಾ ತಿಳಿದಿರಲಿಂದು ನಾ ವನಿತೆಯ ಒಡಗೂಡುತ ಪೊರಟರೆ ಕಾವರಿದಾರೆಂಬುದ ಭ್ರಮೆಗೊಂಡು 1 ನೀರಿನ ಮೇಲೆ ಧರೆಯ ನಿಲ್ಲಿಸಿದಂಥ ಈರೇಳು ಲೋಕದ ದೊರೆಯ ವಕ್ಷಸ್ಥಿತ ಸಿರಿಯ ಸೇರಿದ ದಾಸರಿಗಾರಿಂದಲು ಭಯ ಬಾರದೆಂಬ ಶ್ರುತಿಸಾರವ ಗ್ರಹಿಸದೆ 2 ಎಲ್ಲಿ ನೋಡಿದರಲ್ಲಿಪ್ಪ ಶ್ರೀವನಿತೆಯ ನಲ್ಲ ಭೂಪತಿ ನಮ್ಮಪ್ಪ ನೆನೆದಲ್ಲಿಗೆ ಬಪ್ಪ ಅಲ್ಲಿ ಇಲ್ಲಿ ಭಯವೆಲ್ಲವು ಬಿಡಿಸಲು ಬಲ್ಲ ಶೇಷಗಿರಿವಲ್ಲಭನಿರುತಿರೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೃಹಸಮರ್ಪಣೆ ಪುರುಷಾರ್ಥದಾಯಿ ಶ್ರೀವರ ನೀ ನಿಲಯದಿ ಸ್ಥಿರವಾಗು ಕರುಣಾನಿಧೆ ವರದೇಶ ನಿಜಪಾದ ಸರಸೀಜ ಮಕರಂದ ನಿತ್ಯ ಪ. ಆವ ಕಾಲಕು ಸಿರಿದೇವಿಯರಸ ನೀನೆ ಕಾವಲಾಗಿರುವಿ ಎಂದು ಭಾವಶುದ್ಧದಿ ನಿನ್ನ ಸೇವಾರತಿಯನಿತ್ತು ಪಾವನಗೊಳಿಪ ಬಂಧು ಕಾರುಣ್ಯಸಿಂಧು ವಿರಿಂಚಿ ಭವಾಹಿ ವಿಪತಿ ಸು- ರಾವಳೀಶಯವೆಂದು ರವಿಮುಖ ದೇವ ಋಷಿಗಣ ದೇವ್ಯ ನಿನ್ನ ಕ- ನಿತ್ಯ ಬಯಸುವೆ 1 ನಿನ್ನ ಕಟಾಕ್ಷ ಸಂಪೂರ್ಣವಾಗಿರಲೆನ- ಗನ್ಯರ ಭಯವಿಲ್ಲವು ಪರಮ ಸುಗು- ಣಾರ್ಣವ ನಿನಗೆಲ್ಲವು ತಾ ಸೇರಿರುವವು ಪನ್ನಗಾರಿ ಧ್ವಜ ಪರೇಶ ಮ- ಹೋನ್ನತಿ ಪ್ರದ ಮೂಜಗದ್ಭವ ನಿನ್ನ ದಾಸರದಾಸನೆಂದರಿ- ದೆನ್ನ ಮೇಲ್ಕಡೆಗಂಣನಿರಿಸುತ 2 ಪಂಕಜಾಲಯ ಭೂವರ ಕಿಂಕರಾಧಾರನಿ:- ಶಂಕ ಕೃಪಾಕರ ಅಂಕಿತ ಕೊಡು ಸಾದರ ಬಲಭದ್ರ ಸೋದರ ಶಂಕರನೆ ಶುಭಕರ ಕಮಲವನು ಶಂಕಿಸಿದೆ ಶಿರದಲ್ಲಿ ಕಲ್ಪಿಸಿ ಅಂಕುರಿತ ಭಯ ಬಿಡಿಸು ಸಕಲಾ- ಶಂಕವಾರಣ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೇವ ಕರುಣಾಳು ನೀ ಕಾವಲಾಗಿರುವುದಕೆ ಆವ ವೇತನ ಕೊಡುವೆ ಶ್ರೀ ವರನೆ ನಿನಗೆ ಪ. ರೂಢ ಕೈಪಿಡಿದು ಕಾಪಾಡುತಿಹ ಬಿರುದ ಪಾಡಿ ಪೊಗಳುತ ನಮಿಸಿ ಬೇಡಿಕೊಂಬುವೆನು ನಾ ಮಾಡಿದಪರಾಧಗಳು ನೋಡಲದ್ಭುತವು 1 ನಡೆ ತಪ್ಪು ನುಡಿ ತಪ್ಪು ನಿಂತಲ್ಲಿ ಬಹು ತಪ್ಪು ಖಡುಮೋಹ ಕೃತ ತಪ್ಪು ಕಾಮಕೃತ ತಪ್ಪು ಮಾಡದಿ ಮನೆ ಮಿತ್ರ ಧನ ಒಡವೆಯಾಶೆಯು ತಪ್ಪು ಒಡೆಯನೀ ಕ್ಷಮಿಸೆಂದು ವಂದಿಸುವೆ ನಿಂದು 2 ಯುಕ್ತಾಯುಕ್ತವನರಿಯೆ ಎನ್ನಹಂಕೃತಿ ಮರೆಯೆ ಭಕ್ತಿ ಮುಕ್ತಿದ ಸರ್ವ ಶಕ್ತಿ ಶ್ರೀ ಹರಿಯೆ ಭಕ್ತವತ್ಸಲ ವೆಂಕಟಾದ್ರಿ ಶೇಖರ ಸಿರಿಯೆ ಯುಕ್ತಿಯಿಂದಲಿ ಎನ್ನ ಪಾಲಿಸುವ ದೊರೆಯೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ರಾಮ ರಕ್ಷಿಸೋ ಸೀತಾರಾಮ ಪಾಲಿಸೋ ಪ ಕಾಮನ ಪಿತನಿಸ್ಸೀಮ ಸಾಹಸಗುಣಧಾಮ ಮ- ಹಾತ್ಮ ಸುಧಾಮ ರಮಣನೆ ಅ.ಪ ದಶರಥ ಪ್ರಥಮ ಪುತ್ರ ತ್ರ್ರಿದಶ ಸ್ತುತಿಗೆ ಪಾತ್ರ ಕುಶÀಲವರು ನಿನ್ನ ಹಸು ಮಕ್ಕಳು ಪೂರ್ಣ ಶಶಿಮುಖಿ ಸೀತೆ ನಿನ್ನ ವಶವಾದವಳು 1 ಕೋಸಲಾಧಿಪನೊ ಹೇ ದೇವ ನೀ ಕೌಸಲ್ಯ ಜಠರಜನೊ ಶೇಷನ ಪೂರ್ವಜ ನಾಶರಹಿತ ಅಶೇಷ ಮುನಿಗಣಕೆ ತೋಷಪೂರಿತನಾದಿ 2 ದುಷ್ಟರ ಸಂಹಾರ ಮಾಡಿದಿ ನೀ ಶಿಷ್ಟರ ಉದ್ಧಾರ ಸೃಷ್ಟಿಯೊಳಗೆ ಲೇಶ ಕಷ್ಟವಿಲ್ಲದೆ ನೀನು ಸುಷ್ಟು ಮಾಡಿ ಅಖಿಳೇಷ್ಟ ಪ್ರದನಾದಿ 3 ದೀನರಕ್ಷಕ ನೀನು ಮಹಾತ್ರಾಣಿ ಇಂದ್ರನ ಸೂನು ವಾನರಾಧಿಪಹನು ಮನಮಾತನು ಮಾನಿಸಿದಿಯೊ ನೀನು 4 ದೇವಶ್ರೇಷ್ಠ ನೀನು ಉದ್ಧರಿಸಿದಿ ಮಾವ ಜನಕನನ್ನು ಕಾವಲಾಗಿರು ಯನಗಾವಾಗ್ಯನು ಶ್ರೀವತ್ಸಾಂಕಿತ ವೆಂಕಟಪತಿಯೆ 5
--------------
ಸಿರಿವತ್ಸಾಂಕಿತರು