ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೆ ನಾ ಇಂದಿರಾಪತಿ ತಂದೆ ತಾಯಿ ಗೋವಿಂದನ ಬಂಧು ಬಳಗೆನಗೆಂದು ನಾ ನಂದ ಕಂದ ಮುಕುಂದನ 1 ಕಾಮಪೂರಿತ ಕಂಜಲೋಚನ ಸ್ವಾಮಿ ಕಾವನೈಯನ ಸಾಮಗಾಯನ ಪ್ರಿಯನ ಸೋಮಶೇಖರ ಧ್ಯೇಯನ 2 ಸಾನುಕೂಲ ಸಕಲಕ ಸಾಧನ ಭಾನುಕೋಟಿ ಪ್ರಕಾಶನ ಜ್ಞಾನಗಮ್ಯ ವಿನಾಶನ ದೀನ ಮಹಿಪತಿ ಈಶನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೃಂಗ ಜಯ ಶರಣು ಶ್ರೀ ಸುಜ್ಞಾನ ಭಕುತಿ ವೈರಾಗ್ಯಪರನೆ ಜಯ ಶರಣು ದಾಸೋತ್ತಮರ ಮಣಿಯ ನಿನಗ್ಯಾರೆಣಿಯೆ ಗುರು ಪುರಂದರದಾಸರೆ ನಿಮಗೆ ಪ ಪಾಕಶಾಸನಪುರದ ಚಿನಿವಾರ ವರದಪ್ಪ ನಾ ಕುಮಾರನಾಗಿ ಜನಿಸಿ ಸಂಸಾರದೊಳು ಸಂಚರಿಸಿ ಲೌಕಿಕವನ್ನೆ ತೊರೆದು ಈ ಕಲಿಯುಗದಲ್ಲಿ ತುಂಗಾತೀರ ಪಂಪಾ ರಾಕಾಬ್ಜನಂತೆ ಪೊಳೆವ ನಿಧಿಗೆ ಬಂದು ನಿ ರಾಕರಿಸಿ ದುಸ್ಸಂಗ ವೈಷ್ಣವರಾಗಿ ಪತಿಕರಿಸಿ ಹರಿಭಕುತಿಯಾ 1 ಕಾಮಕ್ರೋಧ ಲೋಭ ಮದ ಮತ್ಸರ ಡಂಭ ಈ ಮರಿಯಾದಿಗಳ ಮರ್ಮವನೆ ಕಡಿದು ನಿ ಸಿರಿ ಕೈಕೊಂಡು ಆ ಮಹಾ ರಚನೆಯಲ್ಲಿ ಸೀಮೆಯೊಳು ಪ್ರಾಕೃತದ ಗೀತೆಯಲಿ ಕೊಂಡಾಡಿ ತಾಮರಸ ಸದೆ ಬಡಿದು ಮಧ್ವಸಿದ್ಧಾಂತ ಲ ಹುಯಿಸಿ ಕಾವನೈಯನ ಕುಣಿಸಿದ 2 ಸಿರಿ ವಿಠ್ಠಲನ್ನ ಮೃದು ಪದ್ಮಗಂಧವನು ಮಧುಪÀನಂತೆ ಸೇವಿಸುತ್ತ ಬುದ್ಧಿ ಪೂರ್ವಕದಿಂದಲಿ ಶುದ್ಧ ಮಂದರನೆಲ್ಲ ಎಂದೆಂದಿಗೂ ಬಿಡದೆ ಪೊದ್ದರ್ದ ಪಾಪಗಳು ತಿರುಗಗೊಡದಲೆ ಕಾಲಿ ಮಾರ್ಗದ ಪದ್ಧತಿಯ ಸ್ಥಿತಿ ಪೇಳಿದ 3 ವರದಪ್ಪನೇ ಸೋಮ ಗುರುರಾಯ ದಿನಕರನು ಗುರು ಮಧ್ವಪತಿಯೆ ಭೃಗು ಅಭಿನವನೆ ಜೀವ ಉಪದೇಶಿಸಿ ಪರಮ ಜ್ಞಾನಿಗಳ ಮಾಡಿ ಶರಧಿ ತೆರೆಯಂತೆ ಹರಿಗುಣಗಳನ್ನು ಪೊಗಳುತಿಹ ತರಳರನು ನೋಡಿ ಗುರು ವ್ಯಾಸಮುನಿರಾಯರಿಗೆ ಕರಣ ಚರಿತೆಯಲಿ ನಲಿದಾಡಿದ 4 ಫೃತದ ಬಿಂದಿಗೆ ತಂದ ಅತಿಥಿಯ ವೋಗರನುಂಡ ಸತಿಯಳೆಂದಾ ನುಡಿಗೆ ಚತುರ ಭಾಗ್ಯವನಿತ್ತ ಹಿತನಾಗಿ ದೃಢನೋಡಿದ ಯತಿಯ ಪಂಕ್ತಿಗೆ ಭಾಗೀರಥಿ ನದಿಯ ತರಸಿದ ಸುತನಾಗಿ ನೀರು ನಿಶಿತದಲಿ ತಂದ ಅ ಪ್ರತಿ ದೈವತಾ ಕಿಂಕರ 5 ವಜ್ರ ಪ್ರಹರವಿದು ಸಜ್ಜನರ ದಿವ್ಯ ಚರಣಾಬ್ಜಕ್ಕೆ ಭೃಂಗವಿದು ಹೆಚ್ಚು ಲಜ್ಜೆಯನು ತೊರೆದು ನಿತ್ಯ ಹೆಜ್ಚ್ಚಿ ಹೆಜ್ಚಿಗೆ ಬಿಡದೆ ದಾಸರ ಕರುಣವೆಂಬ ವಜ್ರ ಕವಚವ ತೊಟ್ಟು ನುಡಿದವನ ನುಡಿ ಸತ್ಯ ಅಬ್ಜಭವನೊಡನೆ ಗತಿಗೆ 6 ಎಂತು ವರ್ಣಿಸಲಿ ಎನಗಳವಲ್ಲ ಧರೆಯೊಳಗೆ ಸಂತತಿ ನೆಲಸಿದಂತೆ ಕಾವ್ಯವನೆ ಸ್ಥಾಪಿಸಿ ದಾಸರನ ಸಂತರಿಸಿ ಧರೆಗೆ ತೋರಿ ಸಿರಿ ವಿಠಲನ ಸ್ಮರಿಸುತ ಸು ಪಂಥವನು ಹಿಡಿದು ಸದ್ಗತಿಯಲ್ಲಿ ಸೇರಿದರು ಚಿಂತೆಯೊಳಗಿಟ್ಟ ಗುರುವೆ 7
--------------
ವಿಜಯದಾಸ
ಸತ್ಯಾದ ನಡಿ ಹಿಡಿರೋ ಮನಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಧ್ರುವ ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ 1 ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ 2 ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ ಘಾಸಿ ಮಾಡಲಬ್ಯಾಡಿ 3 ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ4 ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ 5 ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ 6 ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ 7 ಅನ್ನಬೇಡಿದವ ಗಿಲ್ಲೆನ ಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ 8 ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ 9 ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು