ಒಟ್ಟು 13 ಕಡೆಗಳಲ್ಲಿ , 4 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೈ ತಿಮ್ಮಪ್ಪ ಪರಮ ಪಾವನನಪ್ಪ ಪ್ರಾಣದಾಸೆಗಳಿಂದ ಕಾಣ ಬರುವೆವೆಂದ ಆಣೆ ಭಾಷೆಯನೊಂದ ಮಾಣೆನೊ ಗೋವಿಂದ ಕಾಣಿಕೆಯ ಕರದಿಂದ ತ್ರಾಣ ಮೀರಿಯೆ ಬಂದ ಜಾಣರಾಯನೆ ಚಂದಗಾಣಿಸೊ ಶುಭದಿಂದ 1 ಸ್ವಾಮಿ ನೀನೇ ಹೊಣೆ ಭೂಮಿಯೊಳು ರಕ್ಷಣೆ ಕಾಮಿತ ಸೈರಣೆ ನಾಮಕಲ್ಪನೆಯು ಪ್ರೇಮವಾಗಿಹ (ಹಣೆ)1 ನಾಮದ ಮನ್ನಣೆ ಸೌಮನಸ್ಯದ ಮಾಣೆ ತಾಮಸಕ್ಕಿಡಿಗಾಣೆ 2 ಸೇವಕ ಸಂಕಲ್ಪ ಕಾವನಾಯಕನಿಪ್ಪ ಠಾವಿಗಾಗಿಯೇ ಪೋಪ ಭಾವದಿಯಿರುತಿಪ್ಪ ಜೀವನ ತಾನಪ್ಪ ದೇವ ಕಾಣು ಈ ಕಪ್ಪ ಈವೆನೆನುತ ಬಪ್ಪ ಭೂವರಾಹತಿಮ್ಮಪ್ಪ 3
--------------
ವರಹತಿಮ್ಮಪ್ಪ
ಇಂದು ಕಂಡೆ ಚರಣಾ ಶ್ರೀಕೃಷ್ಣನಾ ಪ ಕೊಳಲ ದ್ವನಿಗೈದನಾ ಚಲುವಿಗೆ ಗೆದ್ದ ಕಾವನಾ 1 ಹೆಡೆಯಲಿ ಕಾಳಿಂಗನಾ ಒಡನೆ ಕುಣಿದ ರಂಗನಾ 2 ಗೋವರ್ಧ ನೆತ್ತಿದನಾ ಗೋವಳಕ ಕಾಯದನಾ 3 ಬಾಲಕ ಲೀಲಾ ಲೋಲನಾ ಮೂರುಲೋಕ ಜೀವನ ಪಾಲನಾ 4 ಮಹಿಪತಿ ನಂದನ ಜೀವನಾ ಸಹಕಾರಿ ಪಾವನ್ನನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನ್ಯಾಕೊ ನಿನ್ನ ಗೊಡಿವ್ಯಾಕೊ ಹನುಮೇಶ ಪ ಅನ್ಯಮತಿ ಪೊಂದಿ ಮಿಥ್ಯಾಜ್ಞಾನಿಯಾಗದೆ ಪಾದ ಪೊಂದಿದ್ದರೆ ಸಾಕೊ ಅ.ಪ ಜೀವೋತ್ತಮರ ಭಾವವನನುಸರಿಸಿ ನೋವಾಗುವ ಮಾರ್ಗವ ಜರಿದು ಭಾವಜನಯ್ಯ ನಿನ್ನ ಭಾವವ ಕಂಡು ಆವಾಗಲು ಸುಖಿಪರ ಗೃಹ ಕಾವನಾದರೆ ಸಾಕು 1 ದೇಹಸ್ಥಿರವಲ್ಲ ದಹನಶೀಲಭವ ಇಹಸುಖ ಹೇಯವೆಂದು ಮೋಹಪಾಶಕೆ ಸಿಗಿಸದೆ ನಿನ್ನನುಪಮ ಮಹಿಮೆಗಳ ಕೇಳುತ ಆನಂದವಾದರೆ ಸಾಕು 2 ಮೋದತೀರ್ಥರೆ ಸದ್ಗುರು ಭೇದ ಜ್ಞಾನವೆ ಗತಿಪ್ರದ ವೇದ ಸಚ್ಛಾಸ್ತ್ರಂಗಳೆ ಸತ್ಯ ತಿಳಿದು ಆದಿ ವಿಜಯ ರಾಮಚಂದ್ರವಿಠಲನೆ ಅಗಾಧಮಹಿಮ ಮಮ ಪ್ರೀಯನೆಂಬ ಭಕ್ತಿ ಇತ್ತರೆ ಸಾಕೊ3
--------------
ವಿಜಯ ರಾಮಚಂದ್ರವಿಠಲ
ನೆನೆವೆನಾ ನೆನೆವರಿಗೊಲಿವನಾ ಅನುದಿನಾ ನೆನೆವನಾ| ಕಾವನಾ ಪಾವನಾ ದೇವನಾ ಪ ಗಜರಾಜ ಧ್ರವ ಪ್ರಲ್ಹಾದಂಬರೀಷನ| ಅಜಮಿಳ ವಿಭೀಷಣ ರುಕ್ಮಾಂಗದರ್ಜುನ| ಸುಜನ ಭೀಷ್ಮ ವಿದುರನ| ನಿಜವ ದೋರಿಧನ್ಯ ಗೈಸಿದವನಾ1 ಮುರಾರಿ ವಾರಿಜಾರಿ ವಂಶ ವೀರಧೀರನಾ ಪಾರ ವಾರನಾ ಸುರ ಸಹಕಾರನಾ ಕರುಣಾಳು ಮೂರುತಿ ಪರಮೋದಾರನ ಗುರು ಮಹಿಪತಿಜ ಮನೋಹರನಾ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭದ್ರ ಮೂಜಗದಂತರ್ಯಾಮಿ ಪ ಸಾರ ಸಾಕ್ಷಿಯರೆಲ್ಲಾ ಮುದ್ದು ಸೀತೆ ಸಹಿತ ಹುವ್ವಿನ ಮಂಚದಿ ಮಲಗಿ ಅ.ಪ ಪೋಗಿ ನಿಮ್ಮಯ ಸದನಗಳಿಗೇ | ಉದಯ ವಾಗೋದು ಬನ್ನಿ ಸನ್ನಿಧಿಗೇ ಯೋಗೀ ಜಾಣರು ಪರಮ ಭಾಗವತೋತ್ತಮರು ಸಾಗಿ ಪೋದರು ನಿಜಾಶ್ರಮಗಳಿಗೆಲ್ಲರು 1 ತುಂಬುರಾ ನಾರದಾದಿಗಳು | ವೀಣೆ ತಂಬೂರಿ ದಿವ್ಯನಾದದೊಳು ಗಂಭೀರಾ ಸ್ವರದಿಂದಾಗಾಯನಗಳ ಮಾಡೆ ಸಂಭ್ರಮದಲಿ ಇತರ ಹಂಬಲ ಮರೆತೀಗ 2 ಹದಿನಾಲ್ಕು ಲೋಕಾವನಾಳಿ | ತಾದ- ಣಿದೆನೆಂದು ಜನರಿಗೆ ಪೇಳಿ ಸದಮಲಾತ್ಮಕ ಶ್ರೀ ಗುರುರಾಮ ವಿಠಲ ನಂ-ಬಿದವರಿಗಭಯವ ಕೊಡುವ ಇಚ್ಛೆಯಿಂದ 3
--------------
ಗುರುರಾಮವಿಠಲ
ರಘುಪತಿಯಾ ತೋರಮ್ಮಾ | ರಾಜೀವಾಂಬರೆ ಬಾರಮ್ಮಾ ಪ ಭಕುತರಾ - ಭೀಷ್ಟೇಯನು | ಪೂರಿಸುವನಾ ಅನುದಿನ ಕಾವನಾ | ನಿನ್ನಯ ಜೀವನಾ ಅ.ಪ ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ || ಸದ್ಗುಣ ಧಾಮನಾ | ದಶರಥ ರಾಮನಾ 1 ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ || ಅಸಮಧನು ವನೆತ್ತ್ಯಭಯವಿತ್ತನಾ | ನಿನಗೊಲಿದಾತನಾ | ರಘುಕುಲಜಾತನಾ 2 ಶರಣೆಂಬೆ ಮಹಾಮಾಯೆ ಸಲಹಬೇಕೆನ್ನತಾಯೆ ಗುರು ಮಹಿಪತಿಸ್ವಾಮಿ | ಜಗದಯ್ಯನಾಪವನಜ ಪ್ರಿಯನಾ ಸುರಮುನಿಧೇಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀವಧು ನಯನಾಬ್ಜ ವಿಲೋಚನಾ ದಾವನಾಗಿಹ ಪಂಕಜಲೋಚನಾ ದೇವನಂಘ್ರಿಯ ಚರಿತದ ಸೂಚನಾ ಪಾತಕ ಮೋಚನಾ 1 ಮತಿ ಮಂತಾಂಭುನಿಧಿ ದ್ವಿಜರಾಜ ದಿತಿ ಸುತಾಹಿ ಕುಲದ್ವಿಜರಾಜಾ ಸುತ ಮುನಿಹೃದಯಾಬ್ಜದಿನೇಶಾ ಸತತ ದುಷ್ಕøತ ತರುರದನೇಶಾ2 ಆವನೀಭುವ ನತ್ರಯವ ಪಾಲಕಾ ದೇವಕೀತಪದಲಾದನು ಬಾಲಕಾ ದೇವನಾಡಿದ ಮನಿಲಿಯ ಶೋದಾ ಭಾವಿಸಲ್ಕವಗ ಗತಿ ಶ್ರೀಯಶೋದಾ3 ಪರಮ ಸುಂದರ ನಂದ ಕುಮಾರಾ ಅರಿತು ಬಂದನುಗರ್ಭದಿ ಮಾರಾ ಧರಿಯೊಳಾವನ ಮನಿ ಕಾಪುರದ್ವಾಶಕಾ ಸ್ಮರಸಲೀ ಜಗದ ಪಾವಿದಾರಕಾ4 ಮಾನವ ತಂದಿಯಾ ಸುಗಮದಿಂದರಿದ ಬಂಧನ ತಂದಿಯಾ ಮಗನ ಕಾಯಿದಾ ಶಿಕ್ಷಿಸಿ ತಂದಿಯಾ ಮಗನ ಶಿಕ್ಷಿಸಿ ಕಾಯಿದಾತಂದಿಯಾ5 ವನಧಿ ವಂಧಿಸಿ ತೇಲಿಸಿ ಪರ್ವತಾ ಜನಪದಾಟಿಸಿ ವಾನರ ಪರ್ವತಾ ಘನಮಹಿಮನು ಜಾನಕಿ ಕಾಂತಾ ನೆನಹುತಿಹನು ಸಹಶಿವಕಾಂತಾ 6 ಸೇವಿಗಂಡೊಲಿದು ರಾಘವ ತಮ್ಮನಾ ರೇವತೀರಮಣಗೆಂಬನುತಮ್ಮನಾ ಜೀವಗಾಯಿದಾ ಭೀಮನತಮ್ಮನಾ ಪಾವನಂಘ್ರಿಯ ನೆನಿಸತತಂಮನಾ7 ಕುದಿಪುತಿರ್ಪುದು ಮಡು ಪವನಾಶನಾ ವಿದಿತೆ ಘಾಳಿಗೆ ಜೀವನ ನಾಶನಾ ಅದರೊಳಗಡಲು ತಾಜಗ ಜೀವನಾ ಸುಧಿಯ ರೂಪವ ಆಯಿತು ಜೀವನಾ8 ಜಲದಲೀ ನೆನಿಯಲು ಮದವಾರಣಾ ವಲಿದು ಮಾಡಿದ ಬಂಧ ನಿವಾರಣಾ ಸತಿಸ್ವರೂಪದ ನೀಡಿದ ಮುಕ್ತಿಯಾ ನಲಿದು ಮಾಡಲಿ ಶ್ರೀ ಹರಿ ಭಕ್ತಿಯಾ9 ದಾವ ತೇಲಿಸಿದ ನಚ್ಚಿಲಿ ಗೋಕುಲಾ ದೇವ ಕಾವನು ನೋಡಿರಿ ಗೋಕುಲಾ ಜೀವಜಾಲದ ಬೇಡಿ ಪ ಗೋಕುಲಾ ತಾವಿಹರಿಸುತಿಹನು ಗೋಕುಲಾ 10 ಸ್ಮರಿಸಿ ಗೋಕುಲಲ್ಯಾಕಳ ಕಾವನಾ ಧರೆಯೊಳೊಪ್ಪುವ ಕಾಟಿಯ ಕಾವಳಾ ಚರಣ ಗೋಚರ ಮುನಿಮನ ಕಾವನಾ ಶರಣ ಹೋಗದು ಸಕಲಿ ಕಾವನಾ11 ಅವನಂಘಿಯ ಸೇರೆ ವನೌಕಸಾ ಜೀವರಾದರು ಸಾಮದಿವೌಕಸಾ ಭಾವಿಸಲ್ಕಾರಿಯದಾದಳು ಶ್ರೀರಮಾ ದೇವನಾಸ್ತುತಿಸಿ ಬಣ್ಣಿಪ ರಾರಮಾ12 ಮುನಿ ಬಂದನೆಂದು ಸ್ಮರಿಸಲು ಕೃಷ್ಣಾ ಮನಸ್ನೇ ಹದಿಂದೋಡಿ ಬಂದನು ಕೃಷ್ಣ ಅನೇಕ ಪದಾರ್ಥದಿಂ ದುಣಿಸುತಾ ಘನಾನಂದ ನೀಡಿದ ಪಾರ್ಥನ ಸೂತಾ13 ಸುರಗಂಗಿಯ ಪಡದ ದಾವನ ಚರಣ ಅರಿಮರ್ದನಾಗಿಹ ದಾಪಾಣಿ ಚರಣಾ ಸರಿಜಾರ ನಖದಾ ತೇಜಕ್ಕ ತರಣೀ ಇಂದಿರೆ ತರುಣಿ14 ಚರಣಧ್ಯಾಯಿಪದಾವನು ಮಾಧವಾ ಸುರನರೋರಗ ಪೂಜಿ ಮಾಧವಾ ಧರಿಯೊಳಾದನು ಬಾಲಕ ನಂದನಾ ಚರಿತ ಪಾಡಿದ ಮಹಿಪತಿ ನಂದನಾ15
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸದ್ಭಾವದಿಂದ ಗುರುವೇ ಗುರುವೆಂದು ಬಾಗಿ ಸದ್ಭಕ್ತನಾಗಿ ಮರಿಯಾ ಮರಿಯಾದೆ ಹೋಗಿ ಸದ್ಭೋಧಸಾರ ಗರವಾ ಗರವಾಮೃತಾದಾ ಚಿದ್ಭಾನುದೋರಿ ಹೊರೆವಾ ಹರಿವಾಭವಾಂಧಾ 1 ಗುರುಪಾದ ಕಾಣದನಕಾದನ ಕಾವನಾಗೀ ಮರದೆನ್ನ ತನ್ನದೆನುತಾದೆನುತಾಂನರಾಗಿ ಅರಿತೀಗ ಮಾಡಿ ಗುರುತಾಗುರು ತಾತನಂಘ್ರಿ ಪರಮಾರ್ಥವಸ್ತು ವರ ದೇವರ ದೇಶಸಾರಿ 2 ಗುರುಮಾರ್ಗ ಬಿಟ್ಟು ಬರುದೇ ಬರುದೇನೊ ಪ್ರಾಣಿ ಅರತೇನುಶಾಸ್ತ್ರ ಪರಮಾಪರಮಾರ್ಥಗಣೀ ಇಂದು 3 ಗುರುಹಸ್ತಮಸ್ತಕದಲೀ ಕದಲೀತೆ ಕ್ಲೇಶಾ ದೊರವನು ಹೃತ್ಕಮಲದಾಮಲದಾತ್ಮ ಈಶಾ ಗುರುಮಿತ್ರ ಮಾತೃ ಜಕನಕಾಜನಕಾರ್ತಬಂಧು ಶರಣ್ಹೋಕ್ಕು ನೋಡಿ ಸುಖವಾ ಸುಖವಾಗದೆಂದು4 ಇರುತಿಪ್ಪನೆಲ್ಲಿ ಗುರುತಾ ಗುರುತಾದ ಕಾಶೀ ನೆರೆಗಂಗಿ ಪಾದತೀರ್ಥತೀರಥಾಧರಾಶಿ ಗುರು ವಿಶ್ವನಾಥನೆನುವಾನೆನುವಾವನೆಲ್ಲಿ ನರರೋಳು ಧನ್ಯ ತಮನುತ್ತ ಮನೊರ್ವಿಯಲ್ಲಿ5 ಕಾಣದೆ ಕಂಗಳಲಿತಾ ಲಲಿತಾದ ನೋಟಾ ಜಾಣೀಸಿ ಕೋಟಿ ತರಣೀ ತರುಣೀಯ ಕೂಟಾ ಕಾಣೀಸಿ ಉನ್ನಮನೆಯಾ ಮನಿಯಾವೆ ನೋಡಿ ಪ್ರಾಣವಕಾವ ಗುರುವೀ ಗುರುವೀನ ಪಾಡಿ 6 ಮನಮುಟ್ಟಿಮುದ್ರಿ ಸಲಿತಾಸತಿತಾಳಭೇರಿ ಅನುಹಾತ ಘೋಷಶ್ರವಣಾಶ್ರವಣಕ್ಕೆ ಬೀರಿ ತನುಭಾವವನ್ನು ಮರಸೀ ಮೆರಸೀದನೆಂದು ನೆನಿಬೇಕು ಸದ್ಗುರುವಿನಾರೂವ್ಹಿನಾಗತಂದು 7 ಗುರುಮೂರ್ತಿಗೆಂದನರನೇ ನರನೇವನವನು ಗುರುಭಕ್ತಿ ಗಳ್ಳಕುಶಲಾಕುಶಲಾದವನು ಗುರುನಾಮ ಕೂಗದವನೈದುವನೇ ಗತಿಯಾ ಗುರುಪಾದಪೂಜಿಮರತಾ ಮರತಾವನೀಯಾ 8 ಗುರುಅಷ್ಟಕದ ಮಹಿಮಾ ಮಹಿಮಗೇಬಲಾ ಸ್ಮರಿಸೀದನ್ನು ಭಕುತೀಭಕುತೀವದೆಲ್ಲಾ ಗುರು ಮಹೀಪತಿ ಕರುಣಾ ಕರುಣ ನುಪಾಡೀ ಕರಕೊಂಡುಜ್ಞಾನಸುಧೆಯಾ ಸುಧಿಯಾದೆ ನೋಡಿ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ| ವಿನುತ ಪದಪಾವನಾ| ನೆಲಿಗೆ ಪಡೆದಿಹೆ ಕಾವನಾ| ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ 1 ಕರವ ದರಿತು ಶರಣವ ಬಂದೆನಾ| ಕೊರತೆ ನೋಡದೆ ಹಿಂದಿನಾ| ಅರಹು ಮತಿಯಲಿ ಮಂದನಾ| ಹರಿಯ ಸಾರ್ಥಕ ನರಜನುಮವನು | ಭರದಿ ಮಾಡು ನೀ ಇಂದಿನಾ 2 ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ| ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ| ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ| ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಬದುಕಿರ್ಯೋ ಪ ಹೊಂದಿ ಬದುಕಿರ್ಯೋ ಒಂದು ಮನದಲಿ | ಮಂದ ಹಾಸ ಮುಕುಂದನಾ | ಕುಂದರ ದನಾ ನಂದನಾ | ವಂದ್ಯನಾದ ಮುಕುಂದನಾ 1 ಕುರುಳ ಗೂದಲು ಸರಳ ಗೊರಳವ | ಗರಳಧರನುತ ಚರಣನಾ | ಸಾರ ಸಂಹರಣನಾ | ತರಳ ಗೊಲಿದ ಕರುಣನಾ 2 ಮರುಳು ಸುಯೋಧನ ಇರಲು ಏಳದೇ | ಉರುಳು ಗೆಡಹಿದ ವೀರನಾ | ಅರಳ ಪೂವಿನ ಹಾರನಾ | ಗರಳಧರ ಮದ ಹಾರನಾ 3 ಹಲ್ಲಿದರಿಗಳ ದಲ್ಲಣಾಗಿಹ | ಪುಲ್ಲಲೋಚನ ರಂಗನಾ | ಮಲ್ಲ ಚಾಣೂರ ಭಂಗನಾ | ಸಲ್ಲಲಿತ ಚಲ್ವಾಂಗನಾ 4 ಸಥಿಯ ನಡೆಸುವ ಇಂಗಿತರ ಮಹಿ | ಪತಿಯ ನಂದನ ಜೀವನಾ | ಸತತ ಭಕ್ತರ ಕಾವನಾ | ಪತಿತ ಪಾವನ ದೇವನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು