ಒಟ್ಟು 13 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೇನು ಭಯವಿಲ್ಲ ನಮಗೆ ಪವಮಾನ ಸೇವಕ ಗುರು ರಘುಪತಿಯ ದಯವಿರೆ ಪ ಜೋಡು ಕರ್ಮದಿ ಬಿದ್ದುಕೇಡು ಲಾಭಕೆ ಸಿಲ್ಕಿ ಮಾಡಿದ್ದೆ ಮಾಡುತ ಮೂಢನಾಗಿ ರೂಢಿವಳಗೆ ತಿರಿಗ್ಯಾಡುವ ಅಜ್ಞಾನಿ ಕೋಡಗನ್ನ ಸಿಂಹ ಮಾಡಿದ ಗುರುವಿರೆ 1 ಆವಾನು ದಯಮಾಡೆ ದೇವನು ವಲಿವನು ಆವನ ನಂಬಲು ದೇವಗಣಾ ಕಾವಲಿಗಳಾಗಿ ಕಾವದು ಅಂತ ಕೋವಿದಾಗ್ರಣಿ ಗುರು ರಘುಪತಿ ದಯವಿರೆ 2 ಕರವೆಂಬೊ ಲೇಖನದ್ವಾರದಿಂದ ನಮ್ಮ ಶಿರಿಗೋವಿಂದ ವಿಠಲ ರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದು ತಿರುಗುವ ಗುರುಕೃಪೆ ನೆರಳಿರೆ 3
--------------
ಅಸ್ಕಿಹಾಳ ಗೋವಿಂದ
ಕಾವದು ಎನ್ನನುದಿನಾ ರಂಗಾ| ಕಾವದು ಕಾವದು ಎನ್ನನುದಿನಾ | ಭಾವಿಕ ಜನರ ನಿಧಾನಾ ಪ ಜಲದಲಿ ಕರಿಯಾ ಪಿಡಿದ ಮಕರಿಯಾ | ಸೀಳಿದ ಯಾದವರಾಯಾ | ಇಳೆಯೊಳು ಗಿರಿಯಾ ಧರಿಸಿದೆ ಗರಿಯಾ | ಕುಲ ಅರಿನಂದನ ಪ್ರೀಯಾ 1 ರಮಣನೆ ಸಿರಿಯಾ ಲಲನೆಗೆ ಸೀರಿಯಾ | ಸಮಯಕ ನಿತ್ತ ಅನೇಕ | ಕಮನೀಯ ಕಾಯಾ ದೇವ ನೀ ಕಾಯಾ | ಜನಕನೇ ವ್ಯಾಪ್ತ ತ್ರಿಲೋಕಾ 2 ಸರಸಿಜನಯನಾ ಸಾಸಿರ ನಯನಾ | ಸೋದರ ದೇವ ದೇವೇಶಾ | ವರಸದ್ವದನಾ ಈ ರೆರಡೊದ ನಾ | ವಂದಿತ ಚರಣಾ ಶ್ರೀಯೀಶಾ3 ಭಕುತರಬಂಧು ಕೈರವ ಬಂಧು ಶೇಖರಧೇಯ ಮುಕುಂದಾ | ಸಕಲಾಧಾರಾ ದಿನೊದ್ಧಾರಾ | ದೇವಕಿ ದೇವಿಯ ಕಂದಾ4 ಸುಜನರ ಪಕ್ಷಾ ಕುಜನ ವಿಪಕ್ಷಾ | ಶ್ರೀ ವತ್ಸಾಂಕಿತ ದೇವಾ | ಗಜವರ ವರದಾ ಯದುಕುಲ ವರದಾ | ನವಮರ್ಧನ ಜಗಜೀವಾ5 ಕಾಳಿಯ ಸರ್ಪಾ ಮದಹರ ಸರ್ಪಾ| ಶನವಾಹನ ಗೋವಿಂದಾ | ಶ್ರೀ ಲಲನೀಯಾ ಸದ್ಭಾವನೀಯಾ | ಪೂರಿತ ಪರಮಾನಂದಾ6 ಸಿಂಧು ಸಿಂಧು | ವಿಗಾಗಿಹೆ ಕುಂಭಜ ನೀನು | ಹರಣ ರಂಗಾ | ಧೀರನೇ ಭಜಕರ ಧೇನು7 ನವನೀತ ಚೋರಾ ನಿಗಮದ ಚೋರಾಂ | ತಕ ಗೋಕುಲ ವಿಹಾರಾ | ಭವ ಪರಿಹಾರಾ ಕೌಸ್ತುಭಧಾರಾ | ಮಹಿಪತಿಸುತ ಮನೋಹಾರಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೋಪಿಸದಿರು ಸ್ವಾಮಿ ಶ್ರೀ ನರಸಿಂಹ ಪ. ಕೋಪಿಸದಿರು ಕರುಣಾಪಯೋನಿಧಿಯೆ ಮ- ಹಾಪರಾಧಗಳನು ಲೇಪಗೊಳಿಸದಿರು ಅ.ಪ. ಮಧ್ವ ವಲ್ಲಭ ನಿನ್ನ ಸೇವೆಯ ನಡಸುವ ಮಧ್ಯ ಮಧ್ಯದೊಳೆದ್ದು ಹೋದ ತಪ್ಪು ಶುದ್ಧಿಯಿಲ್ಲದ ತಪ್ಪು ಸೂಕ್ತಿ ಪಾಠಗಳೊಳಾ- ಬದ್ಧ ಬರುವ ತಪ್ಪೆನಿದ್ದರು ಕ್ಷಮಿಸಿನ್ನು 1 ಸಂಸಾರ ಲಂಪಟನಾಗಿ ಬಳಲುವೆನು ಕಂಸಾರಿ ನಿನಗಿನ್ನು ಪೇಳ್ವದೇನು ಹಂಸವಾಹನ ಪೀಠ ಹಲಧರನನುಜನೆ ಸಂಶಯಿಸದೆ ಎನ್ನ ಕಾಯೊ ಕಮಲನಾಭ 2 ಪತಿತಜನರಿಗಧಿಪತಿಯಾಗಿರುವೆ ನಾನು ಮತಿಹೀನನೆಂಬುದ ಬಲ್ಲಿ ನೀನು ಪಾದ ಪದ್ಮವೆ ಇನ್ನು ಗತಿ ಎಂದು ನಂಬಿದನ ಮೇಲೆ ಮುನಿಸಿನ್ನೇನು 3 ಪಾತಕ ಕಡಲೊಳು ಪೊರಳುತ ನೆರಳುತ ಯಾತರಿಂದಲು ಏಳಲಾರದಿನ್ನು ಶ್ರೀ ತರುಣಿಯವರ ನಿನ್ನ ಸೇರಿದ ಜಗ ನ್ನಾಥ ದಾಸರ ಪಾದದವಲಂಬಗೊಂಡೆನು 4 ಶ್ರೀಶ ಶೇಷಗಿರೀಂದ್ರ ವಾಸ ನಿನ್ನನೆ ನಂಬಿ ದಾಸ ಕೂಟದಿ ಸೇರಿಕೊಂಡಿಹೆನು ಣಾ ಸಮುದ್ರನೆ ಎನ್ನ ಕಾವದುಚಿತವಿನ್ನು 5
--------------
ತುಪಾಕಿ ವೆಂಕಟರಮಣಾಚಾರ್ಯ
ತ್ರಾಹಿ ತ್ರಾಹಿ ಶ್ರೀಗುರು ಅವಧೂತ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಸದ್ಗುರು ದೀನನಾಥ ಧ್ರುವ ತಪ್ಪು ಕ್ಷಮೆಯ ಮಾಡೊನೀ ಸ್ವಾಮಿ ನಮ್ಮ ಕೃಪಾಸಿಂಧು ಸದ್ಗುರು ಪರಬ್ರಹ್ಮ ಪಾಪಿ ದುರಾಚಾರಿಯು ನಾಪರಮ ಕೃಪೆಯಿಂದ ಕಾವದು ದಯನಿಮ್ಮ 1 ಗುಣದೋಷ ನೋಡದಿರೊ ಶ್ರೀಹರಿ ದುರಿತ ಕೋಟಿಗಳ ಸಂಹಾರಿ ನೀನಹುದೊ ಬಡವನಾಧಾರಿ ಅನುದಿನ ಕಾಯೊ ನೀ ಪರೋಪರಿ 2 ಒಮ್ಮೆ ಬಂಧನವ ಬಿಡಿಸೊ ಸಮ್ಯಕ ಙÁ್ಞನ ಸಾರದೊಳು ಕೂಡಿಸೊ ನಿಮ್ಮದಾಸ ಮಹಿಪತಿಯೆಂದೆನಿಸೊಬ್ರಹ್ಮಾನಂದದೊಳು ನಲಿದಾಡಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಾಜೀಸುವದು ನಾಭಿಯಾ ಸುರಗಂಗೆಯಂ ಶೇಧೀಭಿಯಾ ಪ ನೇತ್ರನ್ನದಯ ಪೂರ್ಣದಾ ಕಮಲಂ ಹಾರಿಸಿ ನೀಡುವ ಬುದ್ದಿ ವಿಮಲಂ ನೇ ಶ್ರೀ ವೆಂಕಟೇಶಂ ಸದಾ1 ಪೊಗಳಲಿಲ್ಲ ಮತಿ ಸಲ್ಲದೇ ಆಶ್ರಯಸಿ ನೆಲೆಗೊಳ್ಳದೇ ಭವಕಾದೆ ಪರಿಹಾರ ದಾ ಪರಿಯಂ ಕಾಣದೆ ಬೇಡಿ ಕೊಂಬೆ ಧೋರಿಯಂ ಶ್ರೀ ವೆಂಕಟೇಶಂ ಸದಾ 2 ಪಟನಾದೆ ನೆರೆ ಭಾಗ್ಯದೀ ನಡಲಂ ದೀಗಳಿ ಪಶ್ಚಾತ್ತಾಪ ಒಡಲಂ ಮನವಿಲ್ಲ ವೈರಾಗ್ಯ ದೀ ಮುಸುಕಿಷ್ಟು ದನಿವಾರ ದಾ ಕಡಲಂ ಮನಿಯೆ ಕಾಯೋ ಸಾಖರದಿಡಲಂ ಶ್ರೀ ವೆಂಕಟೇಶಂ ಸದಾ3 ಬಿದಿರೀಸಿ ವಢ ಮಾಡಿದೇ ಕೊನಿಯಿಂದ ಕಲಕ್ಯಾಡಿದೆ ಮುದವಿತ್ತೆ ಭಕ್ತಂಗದಾ ಮರಳಂ ಕಾವದು ಭಕ್ತಿಗಿಲ್ಲ ಹುರಳಂ ಶ್ರೀ ವೆಂಕಟೇಶಂ ಸದಾ 4 ಕಾಂತಿಚರಣಾಂಬುಜಭಾವ ಭಕ್ತಿಂದಲಿ ಶರಣಂ ಪೊಕ್ಕವರಿಂಗೆ ಜನ್ಮಮರಣಂ ಹರಿಸೂವದಯದಿಂದಲಿ ಸ್ಮರಣಂ ಮಾಡಲು ಪಾಪಹರಣಂ ಸಲೆ ಸಾಧ್ಯಸುರ ಸಂಪದಾ ಕರುಣ ಬೀರುತ ಕಾಯೋಯನ್ನಹರಣಂ ಶ್ರೀವೆಂಕಟೇಶಂ ಸದಾ 5 ಮಾನವ ತನುಂಪಡದೀಗ ಸದ್ಗತಿಯಾ ಗಡ ಹೊಂದಿ ವಿಷಯೇಚ್ಛೆಯಾ ಅಪರಾಧವನು ಗಣಿ ಸದಾ ಪಿತನಂ ತನ್ನಯ ಕಾಯೋ ಜ್ಞಾನ ಚ್ಯುತ ನಂ ಶ್ರೀ ವೆಂಕಟೇಶಂ ಸದಾ 6 ಮೆಚ್ಚಿ ಸುಮನ ನರಿಯೆನು ಯಂತ್ರಿಪ್ಪ ದಾಂನರಿಯೆನು ಗಜವಂ ತಾರಿಸಿದಂತೆಯನ್ನ ವೃಜಿನಂ ದಾಟೀ ಸುವಾ ಬಿರದಾ ಕುಜನಂ ಸೇರಿದಂತೆ ಯನ್ನಂ ಕಾಯೋದ್ವಿಜನಂ ಶ್ರೀ ವೆಂಕಟೇಶಂ ಸದಾ 7 ಸದನಂ ಸುದ್ಗುಣ ಗಾಣದಬ್ಜವದನಂ ಸ್ಪರ್ಧಿಸುತಿದನುಜರಾ ಕದನಂ ಕರ್ಕಶವಾಗಿ ಸೌಖ್ಯ ಪ್ರದನಂ ಭಾವಿಸುತಿಹ ಮನುಜರಾ ಸುಕುಮಾರ ಘನ ಶಾಮದಾ ಇದನಂ ಬಣ್ಣಿಪರಾರು ವೇದವಿದಿನಂ ಶ್ರೀ ವೆಂಕಟೇಶಂ ಸದಾ8 ಶಿಖಿ ಕೇತನಾ ಕಾಯ ಭಂಡಿಯವಾಧನು ಪ್ರಾರ್ಥನಾ ಪರಬ್ರಹ್ಮ ತುರುಗಾಯ್ವನೆಂದು ಪೊಗಳ್ವಾರಿಂತರಿವರೈ ಚರಿತದಾ ಗುರು ಮಹಿಪತಿ ಕಂದಸಲಹೋ ಸ್ಮರಿಸಲು ಅಷ್ಟಕವಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ ಕಾಮಿತಪ್ರದ ಸುರಸ್ತೋಮಾಗ್ರಗಣ್ಯಪ. ಜನ್ಮ ಜನ್ಮಾಂತರದ ಕರ್ಮಾನುಸಾರದಿಂ ದುರ್ಮತಿಗೆಳಸಿಯಹಮ್ಮಮತೆಯಲಿ ದುರಿತ ದೂರವಿರಿಸು ನಿರ್ಮಲಜ್ಞಾನೋಪದೇಶವನಿತ್ತೆನ್ನ1 ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ ಭಕ್ತಿಸೌಭಾಗ್ಯವಿರಕ್ತಿಯ ನೀಡು ಭೃತ್ಯವತ್ಸಲ ಭವಭಯಹರ ಗಿರಿಜಾ- ಪುತ್ರನೆ ಪರಮಪವಿತ್ರ ಸುಚರಿತ್ರನೆ2 ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ ನರಲೋಕವನು ಕಾವದುರು ಕಷ್ಟವೇನು ಪರಿಶುದ್ಧ ಸ್ಥಾನಿಕಧರಣೀಸುರಕುಲ- ಗುರುವೆಂದು ಚರಣಕ್ಕೆ ಶರಣಾಗತನಾದೆ3 ಸಾಕುವಾತನು ನೀನೆ ಸಲಹುವಾತನು ನೀನೆ ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ ಲೋಕೇಶ ಸುಕುಮಾರ ಶೋಕಮೋಹವಿದೂರ ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ4 ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ ಸುತ್ರಾಮಾದಿ ಸುರಮೊತ್ತ ಪೂಜಿತನೆ ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಯೇ ಕಾವುದು ಕಾವದು ನೀ ಪ ಕಾವುದು ಕಾವದು ಸಾದರದಿಂದಲಿ ದೇವನೆ ಯನ್ನ ಸದಾ | ಪಾದ ಯುಗ್ಮ ಪದಾ ಅ.ಪ ಸ್ವರ್ಗದ ಸಾಸಿರ ಮಡಿಸುಖ ಭಕ್ತಿಯ ಮಾರ್ಗವ ನರಿಯದೇ | ದುರ್ಗುಣದಲಿ ತನು ಧನ ಸಿರಿಮದದಿಂ ಆರ್ಗೆಯ ಮನ್ನಿಸದೇ ಮಾರ್ಗಣವೆಸನುದರವ ಪೊರೆವುತ ಷಡ್ವರ್ಗರ ಬಲಿವಿಡಿದೇ| ಅರ್ಗಳಿಗೆಯು ನೆನಿಯದೆ ಬಹ ಜನ್ಮದಿ ದುರ್ಗತಿ ಭೋಗಿಸಿದೇ 1 ನಾ ಪೂರ್ವದಿ ಮಾಡಿದ ಬಹು ದುಷ್ಕøತ ಆ ಫಲದಿಂದ ಲೀಗ | ಮಹಾಪಯ ನಿಧಿಯೊಳಗೆ | ಧಡಿಗೆ | ಶ್ರೀಪತಿನಾವಿಕನಾಗಿ ನೀ ದಾಟಿಸಲೀಪಸುಗಳೆಂದನಗೆ | 2 ಕಂದನ ಗುಣದೋಷಂಗಳ ಆರಿಸೆ ತಂದೆಗಿದು ಚಿತವೆ | ನೀ ಬಂದು ಜಗದ್ಧರುವೆ | ಪತಿತರ ವೃಂದ ಉದ್ದರಿಸುವೆ | ಮಂದರ ಗಿರಿಧರ ತಂದೆ ಮಹಿಪತಿ ನಂದನವರ ಪ್ರಭುವೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಗುರುರಘುಪತಿಏನೇನು ಭಯವಿಲ್ಲ ನಮಗೆಪವಮಾನ ಸೇವಕಗುರುರಘುಪತಿಯ ದಯವಿರೆ ಪಜೋಡು ಕರ್ಮದಿ ಬಿದ್ದು ಕೇಡು ಲಾಭಕೆ ಸಿಲ್ಕಿಮಾಡಿದ್ದೆ ಮಾಡುತ ಮೂಢನಾಗಿರೂಢಿವಳಗೆ ತಿರಿಗ್ಯಾಡುವ ಅಜ್ಞಾನಿಕೋಡಗನ್ನ ಸಿಂಹ ಮಾಡಿದ ಗುರುವಿರೆ1ಆವಾನು ದಯಮಾಡೆ ದೇವನು ವಲಿವನುಅವನ ನಂಬಲು ದೇವಗಣಾಕಾವಲಿಗಳಾಗಿ ಕಾವದು ಅಂತಕೋವಿಂದಾಗ್ರಣಿಗುರುರಘುಪತಿ ದಯವಿರೆ 2ಕರವೆಂಬೊ ಲೇಖನ ದ್ವಾರದಿಂದ ನಮ್ಮಶಿರಿ ಗೋವಿಂದ ವಿಠಲರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದುತಿರುಗುವಗುರುಕೃಪೆ ನೆರಳಿರೆ 3
--------------
ಸಿರಿಗೋವಿಂದವಿಠಲ
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.ಜನ್ಮ ಜನ್ಮಾಂತರದ ಕರ್ಮಾನುಸಾರದಿಂದುರ್ಮತಿಗೆಳಸಿಯಹಮ್ಮಮತೆಯಲಿದುರ್ಮದಾಂಧನಾದೆದುರಿತದೂರವಿರಿಸುನಿರ್ಮಲಜ್ಞಾನೋಪದೇಶವನಿತ್ತೆನ್ನ 1ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತಭಕ್ತಿಸೌಭಾಗ್ಯವಿರಕ್ತಿಯ ನೀಡುಭೃತ್ಯವತ್ಸಲ ಭವಭಯಹರ ಗಿರಿಜಾ-ಪುತ್ರನೆ ಪರಮಪವಿತ್ರ ಸುಚರಿತ್ರನೆ 2ಸುರಲೋಕವನುಕಾವಧುರಧೀರ ಪ್ರಭು ನಿನಗೀನರಲೋಕವನು ಕಾವದುರು ಕಷ್ಟವೇನುಪರಿಶುದ್ಧ ಸ್ಥಾನಿಕಧರಣೀಸುರಕುಲ-ಗುರುವೆಂದು ಚರಣಕ್ಕೆ ಶರಣಾಗತನಾದೆ 3ಸಾಕುವಾತನು ನೀನೆ ಸಲಹುವಾತನು ನೀನೆಬೇಕು ಬೇಡೆಂಬುವರ ನಾ ಕಾಣೆ ದೊರೆಯೆಲೋಕೇಶ ಸುಕುಮಾರ ಶೋಕಮೋಹವಿದೂರನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ 4ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆಸುತ್ರಾಮಾದಿ ಸುರಮೊತ್ತ ಪೂಜಿತನೆಕರ್ತಲಕ್ಷ್ಮೀನಾರಾಯಣನ ಸಾರೂಪ್ಯನೇದೈತ್ಯದಲ್ಲಣ ವಲ್ಲೀದೇವಿ ಮನೋಹರನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ